ಮೈಸೂರು ಅಸೋಸಿಯೇಶನ್‌: ಕನಕದಾಸರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ


Team Udayavani, Dec 18, 2018, 4:59 PM IST

1712mum10.jpg

ಮುಂಬಯಿ: ಕನಕ ದಾಸರು ಐದು ಶತಮಾನಗಳ ಹಿಂದೆಯೇ ಸಮಾನ ಸಮಾಜ ನಿರ್ಮಾಣದ ಆಶಯವನ್ನು ಇರಿಸಿದ ಮಹಾನ್‌ ಸಂತರು. ಸಮಾಜವನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದಿ ಸಮಾನತೆಗೆ ಒತ್ತು ನೀಡಿದವರು. ಅಂತಹ ಆಶಯವನ್ನು ನಮ್ಮ ಪೊಲೀಸ್‌ ಇಲಾಖೆಯೂ ಇರಿಸಿ ಆ ಆಶಯವನ್ನು ನನಸಾಗಿಸಲು ನಿರಂತರವಾಗಿ ಪ್ರಯತ್ನಿಸುತ್ತಾ ಬರುತ್ತಿದೆ ಎಂದು ಮುಂಬಯಿಯ ಹಿರಿಯ ಪೊಲೀಸ್‌ ಅಧಿಕಾರಿ, ಶಿಕ್ಷಣ ಪ್ರೇಮಿ ಕನ್ನಡಿಗ ದಯಾನಾಯಕ್‌ ಅವರು ನುಡಿದರು.

ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಬೆಂಗಳೂರು, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಹಾಗೂ ಮೈಸೂರು ಅಸೋಸಿಯೇಶನ್‌ ಮುಂಬಯಿ ಇವರ ಸಂಯುಕ್ತ ಅಶ್ರಯದಲ್ಲಿ ಹಮ್ಮಿಕೊಂಡ ಕನಕದಾಸರ ಸಾಂಸ್ಕೃತಿಕ  ಅನುಸಂಧಾನ-ರಾಷ್ಟ್ರೀಯ ವಿಚಾರ ಸಂಕಿರಣವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ  ನಮ್ಮ ಕೆಲಸ ಯಾವಾಗ ಮುಗಿಯುವುದೋ ಎಂದು ಹೊರಗಡೆ ಕಾಯುವುದಿರು ತ್ತದೆ. ಆದರೆ ಇಂದು ತಾವೆಲ್ಲರೂ ನನ್ನನ್ನು ಆಮಂತ್ರಿಸಿ ವೇದಿಕೆಯಲ್ಲಿ ಕೂರಿಸಿ ಗೌರವಿಸಿದ್ದೀರಿ.  ತಾನು ಕಾರ್ಕಳದಲ್ಲಿ ತಾಯಿಯ ಹೆಸರಿನ ಪ್ರೌಢಶಾಲೆಯನ್ನು ಕಟ್ಟಿಸಿ ಸರಕಾರಕ್ಕೆ ಒಪ್ಪಿಸಿರುವುದರ ಹಿಂದೆ ಕರ್ತವ್ಯಪ್ರಜ್ಞೆ ಇತ್ತು. ಪ್ರತಿ ಶಾಲೆಯ ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಅವೃದ್ಧಿಯ ಬಗ್ಗೆ ಕಾಳಜಿ ವಹಿಸಬೇಕು ಎನ್ನುವುದು ನನ್ನ ಆಶಯ. ಕನಕದಾಸರ ಸಮಾನ ಸಮಾಜದ ಆಶಯವಾಗಿದೆ ಎಂದು ನುಡಿದು. ಇದಕ್ಕೆ ತಮ್ಮದೇ ಪೊಲೀಸ್‌ ಇಲಾಖೆ ಒಂದು ನಿದರ್ಶನವಾಗಿದೆ. ಮುಂಬಯಿಯಂತಹ ನಗರದಲ್ಲಿ ಒಂದೇ ಕಟ್ಟಡದ ಒಂದೇ ಫ್ಲೊÉàರ್‌ನಲ್ಲಿರುವ ನಾಲ್ಕು ಪ್ಲಾಟ್‌ಗಳಲ್ಲಿ ನಾಲ್ಕು ರಾಜ್ಯದವರು ನಾಲ್ಕು ಜಾತಿಯವರು ಇರಬಹುದು. ಆದರೆ ಅವರೆಲ್ಲರ ರಕ್ಷಣೆ ಪೊಲೀಸರು ಮಾಡುತ್ತಾರೆ. ಇದರಲ್ಲಿ ಕನಕದಾಸರ ಸಮಾನ ಸಮಾಜದ ಆಶಯ ಕಾಣಿಸುತ್ತದೆ ಎಂದು ನುಡಿದು ತಾನು ಬಾಲ್ಯದಿಂದಲೂ ಕಾಡುತ್ತಿದ್ದ ಕನಕನ ಕಿಂಡಿಯನ್ನು ನೆನಪಿಸಿಕೊಂಡರು.

ಈ ರಾಷ್ಟ್ರೀಯ ವಿಚಾರ ಸಂಕಿರಣದ ಸರ್ವಾಧ್ಯಕ್ಷರಾದ ರಾ. ಸಂತ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಬೆಂಗಳೂರು ಇದರ ಸಮನ್ವಯಾಧಿಕಾರಿ  ಕಾ.ತ. ಚಿಕ್ಕಣ್ಣ ಅವರು ಮಾತನಾಡಿ, ಕನಕದಾಸರು ದಾರ್ಶನಿಕ ಕವಿ. 16 ನೇ ಶತಮಾನದವರಾದರೂ, ಅವರ ಬಗ್ಗೆ ಈ 21ನೇ ಶತಮಾನದಲ್ಲೂ ನಾವು ಮಾತನಾಡುತ್ತೇವೆ ಅಂದರೆ ಇಂದಿಗೂ ಅವರ ರಚನೆಗಳು ಪ್ರಸ್ತುತವಾಗಿವೆ. ಅವರು ತಳ ಸಮುದಾಯದಲ್ಲೂ ನಾವು ಮಾತನಾಡುತ್ತೇವೆ ಅಂದರೆ ಇಂದಿಗೂ ಅವರ ರಚನೆಗಳು ಪ್ರಸ್ತುತವಾಗಿದೆ. ಅವರು ತಳ ಸಮುದಾಯದಲ್ಲಿ ಹುಟ್ಟಿ ನೋವು ಅಪಮಾನಗಳನ್ನು ಅನುಭವಿಸಿದರೂ ಕತ್ತಿ ಹಿಡಿದು ಹೋರಾಡಿಲ್ಲ. ಲೇಖನ ವನ್ನು ಕೈಗೆತ್ತಿಕೊಂಡು ಹೋರಾಟ ನಡೆಸಿದವರು. ಮಾನವೀಯ ಮೌಲ್ಯದ ತಲ್ಲಣಗಳನ್ನು ಇಟ್ಟು ಕೊಂಡು ಬರೆದವರು ಕನಕದಾಸರು ಎಂದರು.

ಇದೇ ಸಂದರ್ಭದಲ್ಲಿ ಮನೋಹರ ಕುಲಕರ್ಣಿ ಅವರ ಸಂತಕವಿ ಕನಕದಾಸ ಜೀವನ್‌ ಅಣಿ ಸಾಹಿತ್ಯ’ ಎನ್ನುವ ಮರಾಠಿ ಕೃತಿಯನ್ನು ದಯಾನಾಯಕ್‌ ಅವರು ಲೋಕಾರ್ಪಣೆಗೊಳಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರು, ಕನಕ ದಾಸರ ಶ್ರೇಷ್ಠತೆಯನ್ನು ತಿಳಿಸಿದರು. ದಾಸರೆಂದರೆ ಪುರಂದರ ದಾಸರಯ್ನಾ ಎಂದರೂ ಸಾಹಿತ್ಯ ಕ್ಷೇತ್ರದಲ್ಲಿ ಕನಕದಾಸರೇ ಮುಖ್ಯರಾಗುತ್ತಾರೆ ಎಂದರು.

ಅನಂತರ ನಡೆದ ಗೋಷ್ಠಿಗಳಲ್ಲಿ ಡಾ| ಎಚ್‌. ಪಿ. ಗೀತಾ, ಮೈಸೂರು ಅವರು ಕನಕದಾಸರ ಜೀವನ ವಿಚಾರ, ಡಾ| ನಾಗಣ್ಣ ಕಿಲಾರಿ ಹೊಸಪೇಟೆ ಅವರು ಕನಕದಾಸರ ಧಾರ್ಮಿಕ ದರ್ಶನ, ಡಾ| ತ್ರಿವೇಣಿ ಹುಣಸೂರು ಅವರು ಕನಕದಾಸರ ಸಾಮಾಜಿಕ ಸಂವೇದನೆ, ಡಾ| ರವಿ ಕುಮಾರ್‌ ಬಾಗಿ ಬೆಂಗಳೂರು ಅವರು ಕನಕದಾಸರ ಕಾವ್ಯಗಳಲ್ಲಿ ದೇಶೀಯತೆ ವಿಷಯಗಳ  ಕುರಿತು ಮಾತನಾಡಿದರು.

ಮೈಸೂರು ಅಸೋಸಿಯೇಶನ್ನಿನ ಅಧ್ಯಕ್ಷರಾದ ಕೆ. ಕಮಲಾ  ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅತಿಥಿಗಳನ್ನು ಗೌರವಿಸಿದರು.  ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ಡಾ| ಬಿ.ಆರ್‌. ಮಂಜುನಾಥ್‌, ಕೆ. ಮಂಜು ನಾಥಯ್ಯ, ನಾರಾಯಣ ನವಿಲೇಕರ್‌, ಡಾ| ಜೀವಿ ಕುಲಕರ್ಣಿ, ಡಾ| ಮೇಧಾ ಕುಲಕರ್ಣಿ, ಡಾ| ಪೂರ್ಣಿಮಾ ಎಸ್‌. ಶೆಟ್ಟಿ, ಶ್ರೀನಿವಾಸ ಜೋಕಟ್ಟೆ, ಅಶೋಕ ಸುವರ್ಣ, ರತ್ನಾಕರ ಶೆಟ್ಟಿ,  ವಸಂತ ಕಲಕೋಟಿ, ಸುಶೀಲಾ ದೇವಾಡಿಗ, ನೀಲಕಂಠ ಮೇದಾರ್‌, ರಮಾ ವಸಂತ್‌, ಪ್ರಭಾಕರ ಬೆಳವಾಯಿ, ಬಾಲಚಂದ್ರ ರಾವ್‌, ಡಾ|  ಜ್ಯೋತಿ ಸತೀಶ್‌, ಸುಗಂಥಾ ಸತ್ಯಮೂರ್ತಿ, ಸಾ. ದಯಾ, ಡಾ| ರಘುನಾಥ್‌ ಮೊದಲಾದವರು ಭಾಗವಹಿಸಿದ್ದರು. ವಿದುಷಿ ವೀಣಾ ಶಾಸ್ತ್ರಿ, ಡಾ| ಶ್ಯಾಮಲಾ ಪ್ರಕಾಶ್‌, ವಿದುಷಿ ಶ್ಯಾಮಲಾ ರಾಧೇಶ್‌ ಅವರಿಂದ ಕನಕ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.

ಕುಮಾರಿ ಜೀವಿಕಾ ಶೆಟ್ಟಿ ಪೇತ್ರಿ ಕನಕದಾಸರ ರಚನೆಯ ಕಾವ್ಯ ವಾಚನ ಮಾಡಿದರು. ಕು|  ನಿಕಿತಾ ಸದಾನಂದ ಅಮೀನ್‌ ಹಾಗೂ  ರಾಗಿಣಿ ರೆಡ್ಡಿ ಅವರಿಂದ ನೃತ್ಯ ಪ್ರದರ್ಶನ ನಡೆಯಿತು. 

ಕಾರ್ಯಕ್ರಮವನ್ನು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ನಿರೂಪಿಸಿ ವಂದಿಸಿದರು.

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.