![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 25, 2021, 3:23 PM IST
ನವಿಮುಂಬಯಿ: ಬಹು ನಿರೀಕ್ಷಿತ ನವಿಮುಂಬಯಿ ಮೆಟ್ರೋ ಪ್ರಾಯೋಗಿಕ ಪರೀಕ್ಷೆಯನ್ನು ಆ. 2 8ರಿಂದ ಬೇಲಾಪುರ – ಪೆಂಡಾರ್ ಮಾರ್ಗದ ಸೆಂಟ್ರಲ್ ಪಾರ್ಕ್- ಪೆಂಡಾರ್‌ವರೆಗಿನ 5.14 ಕಿ. ಮೀ. ದೂರದಲ್ಲಿ ನಡೆಸಲು ಮುಂದಾಗಿದ್ದು, ಇದನ್ನು ವರ್ಷಾಂತ್ಯ ವೇಳೆ ನವಿ ಮುಂಬಯಿಗರಿಗೆ ಈ ಸೇವೆ ಆರಂಭಿಸಲು ಸಿಡ್ಕೋ ಕೈಗೊಂಡ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ಪರೀಕ್ಷೆಯನ್ನು ಸಂಶೋಧನ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಎಸ್‌ಡಿಒ) ನಡೆಸಲಿದೆ. ನವಿ ಮುಂಬಯಿಯಲ್ಲಿ ಸಾರ್ವ ಜನಿಕ ವ್ಯವಸ್ಥೆ ಯನ್ನು ಹೆಚ್ಚು ಪರಿಣಾಮಕಾರಿಗೊಳಿಸಲು ಸಿಡ್ಕೋ 2011ರಲ್ಲಿ ಉತ್ತರ ನವಿಮುಂಬಯಿಯ ಪೆಂಡಾ ರ್‌ನಿಂದ ಬೇಲಾಪುರ ಮಾರ್ಗದ 11 ಕಿ.ಮೀ. ಕೆಲಸವನ್ನು ಆರಂಭಿಸಿದೆ.
ಇದನ್ನೂ ಓದಿ:ಅಂದು ಅಫ್ಘಾನ್ ಸರ್ಕಾರದಲ್ಲಿ ಸಚಿವ, ಇಂದು ಜರ್ಮನಿ ಬೀದಿಯಲ್ಲಿ ಪಿಜ್ಜಾ ಮಾರುತ್ತಿದ್ದಾರೆ!
5.14 ಕಿ. ಮೀ. ಉದ್ದದ ಮಾರ್ಗ ಆಯ್ಕೆ
ಭಾರತೀಯ ರೈಲ್ವೇಯ ಆರ್‌ಎಸ್‌ಡಿಒ ದೇಶದ ಎಲ್ಲ ರೈಲ್ವೇ ಮಾರ್ಗಗಳು ಮತ್ತು ಇತರ ವ್ಯವಸ್ಥೆಗಳ ಪ್ರಮಾಣೀಕರಣದ ಜವಾಬ್ದಾರಿ ಹೊಂದಿರು ವುದರಿಂದ ಈ ಸೇವೆಯಲ್ಲಿ ಪ್ರಮಾಣೀಕರಣದ ಪರೀಕ್ಷೆಯನ್ನು ಆರ್‌ಎಸ್‌ಡಿಒ ಅಧಿಕಾರಿಯ ಮುಂದೆ ನಡೆಸಲಾಗುತ್ತದೆ. ಇದಕ್ಕಾಗಿ ಪೆಂಡಾರ್ ನಿಂದ ಸೆಂಟ್ರಲ್ ಪಾರ್ಕ್‌ಗೆ 5.14 ಕಿ. ಮೀ. ಉದ್ದದ ಮಾರ್ಗವನ್ನು ಆಯ್ಕೆ ಮಾಡಲಾಗಿದ್ದು, ಇದರ ಪರೀಕ್ಷೆ ಹಾಗೂ ತುರ್ತು ಬ್ರೇಕ್ ದೂರ ಪರೀಕ್ಷೆ ಯನ್ನು ಆ. 28ರಿಂದ ನಡೆಸಲಾಗುತ್ತದೆ. ಈ ಎರಡೂ ಪರೀಕ್ಷೆಗಳು ಪ್ರಯಾಣಿಕರ ದಟ್ಟನೆ ದೃಷ್ಟಿಯಿಂದ ಬಹಳ ಮುಖ್ಯವಾಗಿದ್ದು, ಪರೀಕ್ಷೆಯ ಬಳಿಕ ಎರಡನೇ ಹಂತದ ಪರೀಕ್ಷೆಯನ್ನು ಬೇಲಾಪುರದಿಂದ ಸೆಂಟ್ರಲ್ ಪಾರ್ಕ್ ವರೆಗೆ ನಡೆಸಲಾಗುತ್ತದೆ.
ಕನಸು ನನಸಾಗಲಿದೆ
ಮೆಟ್ರೋ ಮಾರ್ಗದಲ್ಲಿನ ಪರೀಕ್ಷೆಯು ಪ್ರಯಾಣಿಕರ ಸಾಗಾಟ ಆರಂಭಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಆದ್ದರಿಂದ ಈ ಪರೀಕ್ಷೆಯ ಯಶಸ್ಸಿನ ಬಳಿಕ ನಿಲ್ದಾಣದ ಏಳು ಮತ್ತು ಹನ್ನೊಂದರ ನಡುವೆ ಈ ಮಾರ್ಗದಲ್ಲಿ ಸಂಚಾರ ಆರಂಭಿಸಲು ಸಾಧ್ಯವಾಗುತ್ತದೆ. ಇದರಿಂದ ನವಿ ಮುಂಬಯಿಗರ ಕನಸು ನನಸಾಗಲಿದೆ.
-ಡಾ| ಸಂಜಯ್ ಮುಖರ್ಜಿ
ವ್ಯವಸ್ಥಾಪಕ ನಿರ್ದೇಶಕರು,ಸಿಡ್ಕೋ
You seem to have an Ad Blocker on.
To continue reading, please turn it off or whitelist Udayavani.