ನವಿಮುಂಬಯಿ ರಂಗಭೂಮಿ ಫೈನ್‌ಆರ್ಟ್ಸ್: 27ನೇ ವಾರ್ಷಿಕೋತ್ಸವ ಸಂಭ್ರಮ


Team Udayavani, Nov 21, 2018, 12:08 PM IST

1911mum03.jpg

ನವಿಮುಂಬಯಿ: ಸೃಜನಶೀಲತೆ, ಸಂಶೋಧನಾ ಮನೋಭಾವ, ಕಾಲ್ಪನಿಕವಾಗಿ ಯೋಚಿಸುವ ಶಕ್ತಿಯನ್ನು ನೀಡುವ ರಂಗಭೂಮಿ ಸಮಾಜದ ಕನ್ನಡಿ ಯಾಗಿದೆ. ಸಮಾಜದ ಪರಿ ವರ್ತನೆಗೆ ನಟಿಸುವ ಕಲಾವಿದರು ಸಮಾಜಮುಖೀ ಚಿಂತನೆಗಳ ಪ್ರತಿಬಿಂಬಗಳು. ಸಾಮಾಜಿಕ ಪರಿಸರ ಕಲುಷಿತವಾಗುತ್ತಿರುವ ಬದಲಾವಣೆಯ ಈ ಕಾಲಘಟ್ಟದಲ್ಲಿ ಸ್ವಾಸ್ಥ ಸಮಾಜವನ್ನು ಕಟ್ಟುವಲ್ಲಿ ರಂಗಭೂಮಿ ತಂಡಗಳ ಜವಾಬ್ದಾರಿ ಮಹತ್ತರವಾಗಿದೆ ಎಂದು ನೆರೂಲ್‌ ಶ್ರೀ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್‌ ಡಿ. ಶೆಟ್ಟಿ ನುಡಿದರು.

ನ. 18 ರಂದು ಸಂಜೆ ನೆರೂಲ್‌ ಶ್ರೀ ಶನೀಶ್ವರ ಮಂದಿರದ ಸಭಾಂಗಣದಲ್ಲಿ ನಡೆದ ರಂಗಭೂಮಿ ಫೈನ್‌ಆರ್ಟ್ಸ್ ನವಿಮುಂಬಯಿ ಇದರ 27 ನೇ ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಶ್ರೀ ಶನೀಶ್ವರ ಮಂದಿರದ ಅಂಗಸಂಸ್ಥೆಯಾದ ರಂಗಭೂಮಿ ಫೈನ್‌ ಆರ್ಟ್ಸ್ ಕಳೆದ 27 ವರ್ಷ ಗಳಿಂದ ಅನೇಕ ಕಲಾವಿದರನ್ನು ಸೃಷ್ಟಿಸಿದೆ. ತಾಳಮದ್ದಳೆ, ಯಕ್ಷಗಾನ, ನಾಟಕೋತ್ಸವಗಳ ಮೂಲಕ ಸಾಂಸ್ಕೃತಿಕ ವೈಭವಗಳನ್ನು ಅನಾವರ ಣಗೊಳಿಸಿದೆ. ಜಾತ್ರೆ ಗಳಿಗಿಂತಲೂ ಅಪಾರ ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು ಕಲಾವಿದರನ್ನು ಪ್ರೋತ್ಸಾಹಿಸಿ ಗೌರವಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನುಡಿದು ಶುಭಹಾರೈಸಿದರು.

ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಕಾರ್ಯಾಧ್ಯಕ್ಷ ಸಂಜೀವ ಹೆಗ್ಡೆ ಅವರು ಮಾತನಾಡಿ, ಉತ್ತಮ ಮನಸ್ಸು, ಹೃದಯವಂತಿಕೆ ಬೆಳೆಸುವ ಮನೋವೃತ್ತಿ ಕಲಾವಿದರಲ್ಲಿರಬೇಕು. ಭಾರತೀಯ ಸಂಸ್ಕೃತಿ ತಿಳಿಸಲು ರಂಗ  ಭೂಮಿಗೆ ಉತ್ತೇಜನ ನೀಡ ಬೇಕು ಎಂದು ನುಡಿದರು.

ಬಿಲ್ಲವರ ಅಸೋಸಿಯೇಶನ್‌ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ಕೆ. ಪೂಜಾರಿ, ಬಂಟ್ಸ್‌ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್‌ ಶೆಟ್ಟಿ ನಂದಿಕೂರು, ನವಿಮುಂಬಯಿ ಮಾಜಿ ನಗರ ಸೇವಕ ಸುರೇಶ್‌ ಶೆಟ್ಟಿ ಅವರು ಮಾತನಾಡಿ ಶುಭಹಾರೈಸಿದರು. ಸಮಾರಂಭದಲ್ಲಿ ರಂಗನಟ ಚಂದ್ರಹಾಸ ಶೆಟ್ಟಿ ದೆಪ್ಪುಣಿಗುತ್ತು, ಸಮಾಜ ಸೇವಕ ಉದ್ಯಮಿ ಗೋಪಾಲ ವೈ. ಶೆಟ್ಟಿ, ಸಂಘಟಕ, ಉದ್ಯಮಿ ಶ್ಯಾಮ್‌ ಎನ್‌. ಶೆಟ್ಟಿ ಅವರನ್ನು ವೇದಿಕೆಯ ಗಣ್ಯರು ಸಮ್ಮಾನಿಸಿದರು.

ರಂಗಭೂಮಿ ಫೈನ್‌ಆರ್ಟ್ಸ್ ನವಿಮುಂಬಯಿ ಇದರ ಅಧ್ಯಕ್ಷ ತಾರನಾಥ ಶೆಟ್ಟಿ ಪುತ್ತೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಆದ್ಯಪಾಡಿ ಅವರು ಗಣ್ಯರನ್ನು ಪರಿಚಯಿಸಿ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಜತೆ ಕಾರ್ಯದರ್ಶಿ ತಾರಾ ಆರ್‌. ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಸಮ್ಮಾನ ಪತ್ರವನ್ನು ಪದಾಧಿಕಾರಿಗಳಾದ ಸತೀಶ್‌ ಎರ್ಮಾಳ್‌, ವಿ. ಕೆ. ಸುವರ್ಣ ಪಡುಬಿದ್ರೆ, ಅನಿಲ್‌ ಕುಮಾರ್‌ ಹೆಗ್ಡೆ ಅವರು ವಾಚಿಸಿದರು. ಜಗದೀಶ್‌ ಶೆಟ್ಟಿ ವಂದಿಸಿದರು.

ವೇದಿಕೆಯಲ್ಲಿ ತಲೋಜಾ ಭಾರತ್‌ ಕೋಚ್‌ ಬಿಲ್ಡರ್ನ ನಿರ್ದೇಶಕ ಸದಾಶಿವ ಶೆಟ್ಟಿ, ನೆರೂಲ್‌ ಶ್ರೀ ಮಣಿಕಂಠ ಸೇವಾ ಸಂಘದ ಅಧ್ಯಕ್ಷ ಸಂಜೀವ ಎನ್‌. ಶೆಟ್ಟಿ, ಕುಲಾಲ ಸಂಘ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಾಸು ಬಂಗೇರ, ತುಳುಕೂಟ ಐರೋಲಿಯ ಉಪಾಧ್ಯಕ್ಷ ನಾಗೇಶ್‌ ಶೆಟ್ಟಿ ಬೈಕಾಡಿ ಹೆದ್ದಾರಿಮನೆ, ಉದ್ಯಮಿ ಮೋಹನ್‌ ಶೆಟ್ಟಿ ಮಜ್ಜಾರ್‌, ರಾಜೇಶ್‌ ಗೌಡ, ಮೀರಾ ಪಾಟೀಲ್‌ ಮತ್ತಿತರರು  ಉಪಸ್ಥಿತರಿದ್ದರು.

ಸದಸ್ಯರುಗಳಾದ ರೂಪಾ ಡಿ. ಶೆಟ್ಟಿ, ಅನಿಲ್‌ ಕುಮಾರ್‌ ಹೆಗ್ಡೆ, ರಘು ಮೂಲ್ಯ, ಉಷಾ ಶೆಟ್ಟಿ, ಆದ್ಯಪಾಡಿಗುತ್ತು ಕರುಣಾಕರ ಎಸ್‌. ಆಳ್ವ, ಜಗದೀಶ್‌ ಶೆಟ್ಟಿ ಬೆಳ್ಕಲೆ, ಕೃಷ್ಣ ಕೋಟ್ಯಾನ್‌, ನಿತೇಶ್‌ ಶೆಟ್ಟಿ, ಗೀತಾ ಎಸ್‌. ಶೆಟ್ಟಿ ತಾರಾ ಕೆ. ಶೆಟ್ಟಿ ಮೊದಲಾದವರು ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಸದಸ್ಯರಿಂದ, ಪರಿಸರದ ವಿವಿಧ ಸಂಘ-ಸಂಸ್ಥೆಗಳಿಂದ ನೃತ್ಯ ವೈವಿಧ್ಯ ನಡೆಯಿತು. ಪ್ರಕಾಶ್‌ ಶೆಟ್ಟಿ ಧರ್ಮ ನಗರ ರಚಿಸಿ, ಸತೀಶ್‌ ಎರ್ಮಾಳ ಸಹಕಾರದೊಂದಿಗೆ, ಅನಿಲ್‌ ಕೆ. ಹೆಗ್ಡೆ ಅವರ ನಿರ್ದೇಶನದಲ್ಲಿ ರಂಗಭೂಮಿ ಕಲಾವಿದರಿಂದ ಏರೆಗ್ಲಾ ಪನೊಡಿc ತುಳು ನಾಟಕ ಪ್ರದರ್ಶನಗೊಂಡಿತು.

ಶ್ರೀ ಶನೀಶ್ವರ ಮಂದಿರ ನೆರೂಲ್‌, ಶ್ರೀ ಮೂಕಾಂಬಿಕಾ ಮಂದಿರದ ಘನ್ಸೋಲಿ, ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್‌ ಟ್ರಸ್ಟ್‌ ಹಾಗೂ ನವಿಮುಂಬಯಿ ಪರಿಸರದ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ನೂರಾರು ಸಂಖ್ಯೆಯಲ್ಲಿ ಕಲಾಭಿಮಾನಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

ಚಿತ್ರ-ವರದಿ: ರಮೇಶ್‌ ಅಮೀನ್‌

ಟಾಪ್ ನ್ಯೂಸ್

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ

1-sdasad

Shivamogga: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಇಂದಿನಿಂದಲೇ ನೀರು

1-atul-subhash

Atul Subhash ಆತ್ಮಹ*ತ್ಯೆ ಪ್ರಕರಣ: ಪತ್ನಿ, ಕುಟುಂಬದವರಿಗೆ ಜಾಮೀನು ಮಂಜೂರು

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

12

ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಮಾಲೋಚನಾ ಸಭೆ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.