ವಾಲ್ಕೇಶ್ವರದ ಕವಳೆ ಮಠ ಶ್ರೀ ಶಾಂತಾದುರ್ಗಾ ದೇವಸ್ಥಾನ: ನವರಾತ್ರಿ ಉತ್ಸವ
Team Udayavani, Oct 13, 2019, 4:21 PM IST
ಮುಂಬಯಿ, ಅ. 12 : ದಕ್ಷಿಣ ಮುಂಬಯಿಯ ಬಾಣಗಂಗಾ ಪರಿಸರದ ವಾಲ್ಕೇಶ್ವರದ ಕವಳೆ ಮಠ ಶ್ರೀ ಶಾಂತಾದುರ್ಗಾ ದೇವಸ್ಥಾನದಲ್ಲಿ ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ನವರಾತ್ರಿ ಸುಸಂದರ್ಭದಲ್ಲಿ ಅ. 2ರಂದು ಲಲಿತಾ ಮಹಾಪಂಚಮಿಯು ವಿವಿಧ ಧಾರ್ಮಿಕ ಕಾರ್ಯಕ್ರ ಮಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮುಂಜಾನೆಯಿಂದ ನವಚಂಡಿಕಾ ಹವನ, ಮಧ್ಯಾಹ್ನ ಗುರುಹಿರಿಯರ ಸಮಕ್ಷಮದಲ್ಲಿ ಪೂರ್ಣಾಹುತಿ, ಪರಮಪೂಜ್ಯರಿಂದ ಮಠದ ಆರಾಧ್ಯ ದೇವರಾದ ಭವಾನಿ ಶಂಕರ ದೇವರಿಗೆ ಪೂಜೆ, ಆರಾಧನೆ, ಮಹಾಮಂಗಳಾರತಿಗೈದರು. ಬಳಿಕ ಪ್ರಸಾದ ವಿತರಣೆ, ಶಾಂತಾ ದುರ್ಗಾದೇವಿಯ ಪೂಜೆ ನೆರವೇರಿತು.
ಸಮಾರಾಧನೆಯ ಬಳಿಕ ಸಂಜೆ ಅಂತಾರಾಷ್ಟ್ರೀಯ ಖ್ಯಾತಿಯ ಡಾ| ಪ್ರೇಮಾನಂದ ರಮಾನಿ ಅವರ ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವಕ್ಕೆ ಶ್ರೀಗಳು ಆರತಿಗೈದು ಚಾಲನೆ ನೀಡಿದರು. ಬಾಣಗಂಗಾ ಪರಿಸರದಲ್ಲಿ ಭವ್ಯ ಮೆರವಣಿಗೆಯ ಮೂಲಕ ಪಲ್ಲಕ್ಕಿ ಉತ್ಸವ ಜರಗಿತು. ಬಳಿಕ ಪ್ರಸಾದ ವಿತರಣೆ ನಡೆಯಿತು.
ದಿನವಿಡೀ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ದರ್ಶನಗೈದು ಪ್ರಸಾದ ಸ್ವೀಕರಿಸಿದರು. ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ವತಿಯಿಂದ ಡಹಾಣೂ, ಪಾಲ್ಘರ್, ಪೂಣೆಯಿಂದ ಶಿಷ್ಯವರ್ಗದವರು ಭೇಟಿ ನೀಡಿ ಗುರುಗಳಿಗೆ ಆರತಿಗೈದು ಗುರುಗಳಿಂದ ಫಲಪುಷ್ಪ ಮಂತ್ರಾಕ್ಷತೆಯನ್ನು ಪಡೆದರು. ಕಾರ್ಯಕ್ರಮದಲ್ಲಿ ಮಠದ ಕಾರ್ಯಾಧ್ಯಕ್ಷ ಭೂಷಣ್ ಜಾಕ್, ಕಾರ್ಯದರ್ಶಿ ಪ್ರಮೋದ್ ಗಾಯೊಡೆ, ರಾಜೀವ್ ದಾರ್, ಚಿಂತಾಮಣಿ ನಾಡಕರ್ಣಿ, ಸಮಿತಿಯ ಸದಸ್ಯ ಕಮಲಾಕ್ಷ ಸರಾಫ್, ಸುಧೀರ್ ಫಡ್ನವೀಸ್, ಜಯಂತ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.