ಪಿಂಪ್ರಿ ನೆಹರೂ ನಗರ ಅಯ್ಯಪ್ಪ ಮಂದಿರ:ಮಹಾ ಶಿವರಾತ್ರಿ,ಯಕ್ಷಗಾನ
Team Udayavani, Feb 21, 2017, 2:03 PM IST
ಪುಣೆ: ಶ್ರೀಅಯ್ಯಪ್ಪ ಸ್ವಾಮೀ ಮಂದಿರ ನೆಹರೂ ನಗರ ಪಿಂಪ್ರಿ ಇಲ್ಲಿ ಫೆ. 24ರಂದು ಶಿವರಾತ್ರಿ ಆಚರಣೆಯು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಜರಗಲಿದೆ.
ಶಿವರಾತ್ರಿ ಮಹೋತ್ಸವವು ಪ್ರಾತಃಕಾಲ ಆರಂಭಗೊಂಡು ವಿಶೇಷ ಪೂಜೆ, ಸಂಜೆ 4ರಿಂದ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಜೆ 6ರಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಇವರ ನುರಿತ ಕಲಾವಿದರು, ಅತಿಥಿ ಕಲಾವಿದರ ಕೂಡುವಿಕೆಯಿಂದ ಹೆಸರಾಂತ ಭಾಗವತರಾದ ರವಿಂದ್ರ ಹೊಸಂಗಡಿ ಅವರ ಭಾಗವತಿಕೆಯಲ್ಲಿ ಭಕ್ತ ಸುಧನ್ವ ಎಂಬ ಪೌರಾಣಿಕ ಯಕ್ಷಧಿಗಾನ ಪ್ರದರ್ಶನಗೊಳ್ಳಲಿದೆ.
ಮುಖ್ಯ ಹಿಮ್ಮೇಳದಲ್ಲಿ ಜಗದೀಶ ಶೆಟ್ಟಿ ಏಳಿಂಜೆ ಮತ್ತು ಆನಂದ ಶೆಟ್ಟಿ ಇನ್ನ ಅವರು ಸಹಕರಿಸಲಿದ್ದು, ಮುಮ್ಮೇಳದಲ್ಲಿ ಸ್ತ್ರೀ ಪಾತ್ರದಲ್ಲಿ ಶ್ರೀನಿವಾಸ್ ರೈ ಕಡಬ, ಹಾಸ್ಯದಲ್ಲಿ ರಾಜ ತುಂಬೆ ಮತ್ತು ಮುಖ್ಯ ಭೂಮಿಕೆಯಲ್ಲಿ ಗೋವಿಂದ ಭಟ್ ನಿಡ್ಲೆ, ಉದಯ್ ಕುಮಾರ್ ಅಡ್ಯನಡ್ಕ, ವಿಟಲ್ ಪ್ರಭು, ರಾಮಣ್ಣ ರೈ ಪುತ್ತೂರು, ರಘುನಾಥ್ ನಲ್ಲೂರು, ಮನೋಜ್ ಹೆಜಮಾಡಿ ಹಾಗೂ ಇತರರು ಸಹಕರಿಸಲಿದ್ದಾರೆ. ಕೊನೆಯಲ್ಲಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿದೆ.
ಪ್ರತಿ ವರ್ಷ ಅಯ್ಯಪ್ಪ ಮಂಡಲದ ವತಿಯಿಂದ ಯಕ್ಷಗಾನ ಕಾರ್ಯಕ್ರಮವು ನಡೆದುಕೊಂಡು ಬರುತ್ತಿದ್ದು ಈ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಾಭಿಮಾನಿಗಳು, ಕಲಾಭಿಮಾನಿಗಳು ಪಾಲ್ಗೊಂಡು ಸಹಕರಿಸುವಂತೆ ನೆಹರೂ ನಗರ ಅಯ್ಯಪ್ಪ ಮಂಡಲಿಯ ಅಧ್ಯಕ್ಷ ಜಯಾನಂದ ಶೆಟ್ಟಿ ಮತ್ತು ಮಂದಿರದ ಪದಾಧಿಕಾರಿಗಳು ಮತ್ತು ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪರವಾಗಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.