ಡಿ.15ರಿಂದ ನೆರೂಲ್ ಕ್ಷೇತ್ರದ ಪ್ರಥಮ ವಾರ್ಷಿಕ ಉತ್ಸವ
Team Udayavani, Dec 13, 2017, 3:58 PM IST
ಮುಂಬಯಿ: ನೆರೂಲ್ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ ಪ್ರಥಮ ವಾರ್ಷಿಕ ಉತ್ಸವ ಹಾಗೂ 28ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾ ಪೂಜೆ, ಮಂಡಲ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆಯು ಡಿ. 15ರಂದು ಪ್ರಾರಂಭಗೊಂಡು ಡಿ. 17ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಲಿದೆ.
ಧಾರ್ಮಿಕ ಕಾರ್ಯಕ್ರಮವಾಗಿ ಡಿ. 15ರಂದು ಬೆಳಗ್ಗೆ 9ರಿಂದ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಮಹಾ ಸಂಕಲ್ಪ, ಪುಣ್ಯಾಹ ವಾಚನ, ತೋರಣಸ್ಥಾಪನ, ಉಗ್ರಾಣ ಮುಹೂರ್ತ, ಶ್ರೀ ಸೂಕ್ತ ಹೋಮ, ಮಹಾ ಪೂಜೆ. ಮಧ್ಯಾಹ್ನ 1ರಿಂದ ಅನ್ನ ಪ್ರಸಾದ ವಿತರಣೆ, ಸಂಜೆ 5.30ರಿಂದ ಭೂಶುದ್ಧಿ, ಪ್ರಾಸಾದಶುದ್ದಿ, ರಾಕ್ಷೊàಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ದಿಕಾ³ಲಕ ಬಲಿ, ವಾಸ್ತುರಕ್ಷೆ, ರಾತ್ರಿ ಪೂಜೆ, ರಾತ್ರಿ 9ರಿಂದ ಅನ್ನ ಪ್ರಸಾದ ವಿತರಣೆ ನಡೆಯಲಿದೆ.
ಡಿ. 16ರಂದು ಬೆಳಗ್ಗೆ 5ರಿಂದ ಉಷಾಕಾಲಪೂಜೆ, ಪಂಚಗವ್ಯ, ಪಂಚಾಮೃತಾಭಿಷೇಕ, ಅಯ್ಯಪ್ಪ ದೇವರ 49 ಕಲಾಶಾಧಿವಾಸ, ದುರ್ಗಾ-ಗಣಪತಿ ದೇವರ ಪಂಚ ವಿಂಶತಿ ಕಲಾಶಾಧಿವಾಸ, ಪ್ರಧಾನ ಹೋಮ, ಬ್ರಹ್ಮ ಕುಂಭಾಭಿಷೇಕ, ನ್ಯಾಸ ಪೂಜೆ, ಲಕ್ಷ ಸುಗಂಧ ಪುಷ್ಪಾರ್ಚನೆ, ಮಹಾ ಪೂಜೆ, ಉತ್ಸವ ಬಲಿ, ಪಲ್ಲ ಪೂಜೆ, ಮಹಾ ಅನ್ನ ಸಂತರ್ಪಣೆ ಜರಗಲಿದೆ.
ಅಪರಾಹ್ನ 2ರಿಂದ ಶ್ರೀ ಶನೀಶ್ವರ ಭಜನಾ ಮಂಡಳಿ ನೆರೂಲ್, ಶ್ರೀ ಮೂಕಾಂಬಿಕಾ ಭಜನಾ ಮಂಡಳಿ ಘನ್ಸೋಲಿ, ಸಂಜೆ 4ರಿಂದ ಶ್ರೀ ಗಣಪತಿ ಅಯ್ಯಪ್ಪದುರ್ಗಾದೇವಿ ಭಜನಾ ಮಂಡಳಿಯವರಿಂದ ಭಜನ ಕಾರ್ಯಕ್ರಮ ಜರಗಲಿದೆ. ಸಂಜೆ 5.30ರಿಂದ ಆರಾಧನಾ ಪೂಜೆ, ರಾತ್ರಿ ಪೂಜೆ, ಮಹಾ ರಂಗ ಪೂಜೆ, ಶ್ರೀಭೂತಬಲಿ, ಅಷ್ಟಾವಧಾನ ಸೇವೆ, ಓಕುಳಿ, ಕಟ್ಟೆ ಪೂಜೆ, ಜಳಕದ ಬಲಿ, ಶಯನೋತ್ಸವ, ಕವಾಟ ಬಂಧನ, ರಾತ್ರಿ 9.30ರಿಂದ ಅನ್ನಪ್ರಸಾದ ವಿತರಣೆ ಜರಗಲಿದೆ.
ಡಿ. 17ರಂದು ಮುಂಜಾನೆ 7ರಿಂದ ಕವಾಟೋದ್ಘಾಟನೆ, ವಿಶೇಷ ಅಭಿಷೇಕಗಳು, ಪ್ರಾತಃಕಾಲ ಪೂಜೆ, ಪ್ರಧಾನ ಹೋಮ, ಸಂಪ್ರೋಕ್ಷಣೆ ಕಲಶಾಭಿಷೇಕ, ತುಲಾಭಾರ ಸೇವೆಗಳು,ಮಧ್ಯಾಹ್ನ ಮಹಾಪೂಜೆ, ಮಹಾ ಮಂತ್ರಾಕ್ಷತೆ, ಮಧ್ಯಾಹ್ನ 1ರಿಂದ ಅನ್ನಪ್ರಸಾದ ವಿತರಣೆ, ಸಂಜೆ 4.30ರಿಂದ ಮಹಿಳಾ ಬಳಗದವರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಲಿದೆ.
ವಾರ್ಷಿಕ ಧಾರ್ಮಿಕ ಸಭೆ
ಡಿ. 17ರಂದು ಸಂಜೆ 6ರಿಂದ ಧಾರ್ಮಿಕ ಸಭೆಯನ್ನು ಆಯೋಜಿಸಲಾಗಿದ್ದು, ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂಜೀವ ಎನ್. ಶೆಟ್ಟಿ ಅವರು ವಹಿಸಲಿದ್ದು, ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರು ಆಶೀರ್ವಚನ ನೀಡಲಿ¨ªಾರೆ. ಮುಖ್ಯ ಅತಿಥಿಗಳಾಗಿ ನವಿ ಮುಂಬಯಿ ಮೇಯರ್ ಜಯವಂತ್ ಡಿ. ಸುತಾರ್ ಆಗಮಿಸಲಿದ್ದು, ಅತಿಥಿಗಳಾಗಿ ನವಿ ಮುಂಬಯಿ ಉಪ ಮೇಯರ್ ಮಂದಾಕಿನಿ ಮ್ಹಾತ್ರೆ, ಬಂಟ್ಸ್ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಚಂದ್ರಹಾಸ್ ಕೆ. ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ, ಚಿಣ್ಣರ ಬಿಂಬ ಮುಂಬಯಿ ಇದರ ರೂವಾರಿ ಪ್ರಕಾಶ್ ಪಿ. ಭಂಡಾರಿ, ಶನೀಶ್ವರ ಮಂದಿರ ನೆರೂಲ್ ಇದರ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ಘನ್ಸೋಲಿ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಅಣ್ಣಿ ಸಿ. ಶೆಟ್ಟಿ, ಶನೀಶ್ವರ ಮಂದಿರ ನೆರೂಲ್ ಇದರ ಅಧ್ಯಕ್ಷ ರಮೇಶ್ ಎಂ. ಪೂಜಾರಿ ಮೊದಲಾದವರು ಪಾಲ್ಗೊಳ್ಳಲಿ¨ªಾರೆ. ರಾತ್ರಿ 8ರಿಂದ ಚಲನಚಿತ್ರ ನಟಿ ಕುಮಾರಿ ಕಾಜಲ್ ಕುಂದರ್ ಅವರ ಸಂಯೋಜನೆಯಲ್ಲಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸ್ವರ ಸಿಂಚನ ಬಳಗ ಮುಂಬಯಿ ಚಂದ್ರಹಾಸ್ ರೈ, ಪುತ್ತೂರು ಮತ್ತು ಬಳಗದವರಿಂದ ಹಾಗೂ ಊರಿನ ಖ್ಯಾತ ಗಾಯಕ ಬಾಲಕೃಷ್ಣ ನೆಟ್ಟಾರು ಅವರಿಂದ ಭಕ್ತಿ ರಸಮಂಜರಿ ನಡೆಯಲಿದೆ.
ಮಂದಿರದ ಇತಿಹಾಸ
ಶ್ರೀ ಅಯ್ಯಪ್ಪ ದೇವರ ಅದೆಷ್ಟೋ ಮಂದಿರಗಳು ದೇಶದ ಮೂಲೆ ಮೂಲೆಗಳಲ್ಲಿ ನೆಲೆನಿಂತಿವೆ. ಅಂತಹ ಕ್ಷೇತ್ರಗಲ್ಲಿ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರ ನೆರೂಲ್ ಒಂದಾಗಿದೆ. ನೆರೂಲ್‌ನ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರವು ಬಾಕಿ ಮಂದಿರಗಳಂತೆ ಭಜನೆ ಮೂಲಕ ಆರಂಭಗೊಂಡಿರುವುದಲ್ಲ. ಈ ಮಂದಿರವು ಅಯ್ಯಪ್ಪ ಮಾಲಾಧಾರಿಗಳ ಶಿಬಿರದ ಮೂಲಕ ಆರಂಭಗೊಂಡು ಆ ಮೂಲಕವೇ ಬೆಳೆದು ನಿಂತ ಕ್ಷೇತ್ರವಾಗಿದೆ.
ಧರ್ಮಶಾಸ್ತ ಚಾರಿಟೆಬಲ್ ಟ್ರಸ್ಟ್ ಮೂಲ 28 ವರ್ಷಗಳ ಮೊದಲು ಧರ್ಮ ಶಾಸ್ತ ಭಕ್ತ ವೃಂದ ಚಾರಿಟೆಬಲ್ ಟ್ರಸ್ಟ್
ನವಿ ಮುಂಬಯಿ ಎನ್ನುವ ಸಂಸ್ಥೆಯು ದಿವಂಗತ ಭುಜಂಗ ಪಿ. ಭಂಡಾರಿ
ಯವರ ನೇತೃತ್ವದಲ್ಲಿ ಕರುಣಾಕರ ಎಸ್. ಆಳ್ವ ಅವರ ಮನೆಯಿಂದ ಆರಂಭಗೊಳಿಸಲಾಯಿತು. ಅಯ್ಯಪ್ಪ ಮಹಾ ಪೂಜೆ ಹಾಗೂ ವಾರ್ಷಿಕ ಅನ್ನದಾನವನ್ನು ಆಚರಿಸಿಕೊಂಡು 17 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸಂಸ್ಥೆಗೆ ಹಲವಾರು ಹೊಸ ಸ್ವಾಮಿಗಳ ಸೇರ್ಪಡೆಯಾಯಿತು. ಅಂತಹ ಸ್ವಾಮಿಗಳಲ್ಲಿ ಓರ್ವರಾದ ಸುಂದರ ಪೂಜಾರಿ ಅವರ ಮುತುವರ್ಜಿಯಿಂದಾಗಿ 2004ರಲ್ಲಿ ಸಂಸ್ಥೆಯು ನೋಂದಣಿಗೊಂಡಿತು.
ವಿಶ್ವಸ್ತರ ಹಗಲಿರುಳು ಸೇವೆಯಿಂದ ಮಂದಿರ ನಿರ್ಮಾಣ
ಕ್ರಮೇಣ ಸಂಸ್ಥೆಯ ಕಾರ್ಯಚಟುವಟಿಕೆಗಳು ಹೆಚ್ಚಿದವು. ತದನಂತರ ದಿವಂಗತ ಭುಜಂಗ ಭಂಡಾರಿಯವರ ಸಂಸ್ಥೆಯ ಹೆಸರಲ್ಲಿ ಸ್ವಂತದಾದ ಒಂದು ಜಾಗ ಮಾಡಬೇಕೆಂಬ ಕನಸನ್ನು ಹೊಂದಿದ್ದರು. ಅದಕ್ಕಾಗಿ ಪ್ರಯತ್ನಪಟ್ಟರು. ಆದರೆ 2009ರಲ್ಲಿ ಭುಜಂಗ ಪಿ. ಭಂಡಾರಿಯವರು ತೀರಿಕೊಂಡರು. ಅವರ ಅಸೆ ಈಡೇರಿಸಬೇಕೆಂಬ ಛಲದೊಂದಿಗೆ ಉಳಿದ ವಿಶ್ವಸ್ತರು ಪ್ರಯತ್ನಪಟ್ಟರು. ಆ ಪ್ರಯತ್ನದ ಫಲವಾಗಿ 2012ರಲ್ಲಿ ನೆರೂಲ್ ಶ್ರೀ ಮಣಿಕಂದ ಸೇವಾ ಸಂಘಮ್ ಎಂಬ ಇನ್ನೊಂದು ಸಂಸ್ಥೆಯೊಂದಿಗೆ ಜೊತೆ ಸೇರಿಕೊಂಡು ಸಿಡ್ಕೊದಿಂದ ದೊರೆತಜಾಗದಲ್ಲಿ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿಯರ ಮಂದಿರ ಹಾಗೂ ಮಂದಿರದ ಭವ್ಯ ಕಟ್ಟಡದ ನಿರ್ಮಾಣಗೊಂಡು ಕಳೆದ ವರ್ಷ ಜನವರಿ 15 ರಿಂದ ಮೊದಲ್ಗೊಂಡು ಜನವರಿ 22, 2017ರ ತನಕ ನಡೆದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಲೋಕಾರ್ಪಣೆಯಾಯಿತು.
ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆಗಳು
ಆಗಮ ಶಾಸ್ತ್ರೋತ್ಸವಾಗಿ ಸ್ಥಾಪನೆಗೊಂಡಿರುವ ಮಂದಿರದಲ್ಲಿ ತಂತ್ರಿಗಳಾದ ಶ್ರೀ ರಾಮಚಂದ್ರ ಬಾಯರಿಯವರ ಮಾರ್ಗದರ್ಶನ ಹಾಗೂ ಮಂದಿರದ ಪ್ರಧಾನ ಅರ್ಚಕರಾದ ಶ್ರೀಕೃಷ್ಣ ಭಟ್ ಅವರ ಮುಂದಾಳತ್ವದಲ್ಲಿ ನಿತ್ಯವು ಪೂಜೆ ಪುರಸ್ಕಾರಗಳು ನಡೆಯುದಲ್ಲದೆ, ಪ್ರತಿ ತಿಂಗಳು ಮಂದಿರದ ವತಿಯಿಂದ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ಶ್ರೀರಂಗ ಪೂಜೆ ನಡೆಯುತ್ತಿದೆ. ವಿಶೇಷವಾಗಿ ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಶನಿವಾರ ಭಜನಾ ಕಾರ್ಯಕ್ರಮಗಳು ನಡೆಯುತಿವೆ. ಸನಾತನ ಪಂಚಾಂಗಗಳಲ್ಲಿ ಗೊತ್ತು ಪಡಿಸಿದ ಎÇÉಾ ವಿಶೇಷ ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತಿದೆ.
ಭಕ್ತರನ್ನು ಆಕರ್ಷಿಸುತ್ತಿರುವ ಮಂದಿರ
ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ವೃದ್ಧಿಯಾಗುತಿದೆ. ಕ್ಷೇತ್ರದಲ್ಲಿ ಕೇವಲ ಧಾರ್ಮಿಕವಲ್ಲದೆ ಸಾಂಸ್ಕೃತಿಕ ಚಟುವಟಿಗಳು ನಿತ್ಯ ನಿರಂತರವಾಗಿ ನಡೆಯುತ್ತಿದೆ. ಯಕ್ಷಗಾನ, ತಾಳಮದ್ದಳೆ, ಹರಿಕಥೆ, ಸಂಗೀತ ಕಾರ್ಯಕ್ರಮಗಳು ಸದಾ ನಡೆಯುತ್ತಿವೆ. ಸಂಸ್ಥೆಯ ಧ್ಯೇಯದಂತೆ ಸಮಾಜಮುಖೀ ಸೇವೆಯನ್ನು ಕ್ಷೇತ್ರದಲ್ಲಿ ಮಾಡಲಾಗುತ್ತಿದೆ.ಧರ್ಮ ಶಾಸ್ತಾ ಸ್ವಾಮಿಗೆ ಪ್ರಿಯವಾದಂತಹ ಅನ್ನದಾನವು ಹೆಚ್ಚಿನ ಪುಣ್ಯದಿನದಂದು ನಡೆಯುತ್ತದೆ.
ಸ್ವಾಮಿಗಳ ಶಿಬಿರ ಮಾಲಾಧಾರಿ ಸ್ವಾಮಿಗಳ ಒಟ್ಟುಗೂಡುವಿಕೆಯಿಂದ ಆರಂಭವಾದ ಸಂಸ್ಥೆ ಬೆಳೆದು ಸ್ವಂತದಾದ ಮಂದಿರ ಅಂತೆಯೇ ಶಿಬಿರಕ್ಕೆ ಬೇಕಾದ ಸ್ಥಳ ಎಲ್ಲವೂ ಇಂದು ಒದಗಿ ಬಂದಿದೆ. ಸುಮಾರು 40 ರಿಂದ 50 ಸ್ವಾಮಿಗಳು ಮಾಲಾಧಾರಿಗಳಾಗಿ ಶ್ರೀ ಕ್ಷೇತ್ರದಿಂದ ಶಬರಿಮಲೆ ಯಾತ್ರೆಯನ್ನು ಗುರುಸ್ವಾಮಿಗಳಾದ ಹರೀಶ್ ಎನ್. ಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಾಡುತ್ತಾರೆ. ಸ್ವಾಮಿಗಳ ಶಿಬಿರ ಹಾಗೂ ಊಟ-ಫಲಾಹಾರದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿದೆ. ಶಿಬಿರ ನಡೆಯುವ ಸಂದರ್ಭ ಪ್ರತಿ ಶನಿವಾರ ಪಡಿಪೂಜೆ ಹಾಗೂ ಅನ್ನದಾನ ಕ್ಷೇತ್ರದಲ್ಲಿ ನಡೆಯುತ್ತಿದೆ.
ಮಂದಿರದ ಕಟ್ಟಡ
ಮಂದಿರದ ಕಟ್ಟಡವು ಬಹಳ ಸುಂದರವಾಗಿ ನಿರ್ಮಾಣಗೊಂಡಿದೆ. ಕಟ್ಟಡದಲ್ಲಿ 2 ಅಂತಸ್ತುಗಳಿದ್ದು ಪ್ರವಚನ, ಯೋಗ ಶಿಬಿರ, ಭರತ ನಾಟ್ಯ ತರಬೇತಿ ಇತ್ಯಾದಿ ಗಳು ನಿರಂತರ ನಡೆಯುತ್ತಿವೆ. ಮಂದಿರದ ಸಭಾಗೃಹವು ಹೆಚ್ಚಾಗಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಉಪಯೋಗವಾಗುತ್ತಿದೆ. ಮಂದಿರದ ವಾರ್ಷಿಕೋತ್ಸವ ಹಾಗೂ ಮಂಡಲ ಪೂಜೆಯಲ್ಲಿ ತುಳು-ಕನ್ನಡಿಗರು ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಸಹಕರಿಸುವಂತೆ ನೆರೂಲ್ ಶ್ರೀ ಮಣಿಕಂಠ ಸೇವಾ ಸಂಘಮ್ ಹಾಗೂ ಧರ್ಮ ಶಾಸ್ತಾ ಭಕ್ತ ವೃಂದ ಚಾರಿಟೇಬಲ್ ಟ್ರಸ್‌ನ ಅಧ್ಯಕ್ಷರು, ಪದಾಧಿಕಾರಿ
ಗಳು, ವಿಶ್ವಸ್ತರು, ಸಮಿತಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.