ನ್ಯೂ ಜೆರ್ಸಿ:ಕ್ರೈಸ್ತ ದೇವಾಲಯವೀಗ ಕಡಗೋಲು ಕೃಷ್ಣನ ಮಂದಿರ!

Team Udayavani, Jun 9, 2017, 1:48 PM IST

7.jpg

ನ್ಯೂ ಜೆರ್ಸಿ: ಇಲ್ಲಿನ ಚರ್ಚ್‌ ಪರಿವರ್ತಿತ ದೇವಾಲಯದಲ್ಲಿ ಸಾಲಿಗ್ರಾಮ ಶಿಲೆಯ ಶ್ರೀ ಕೃಷ್ಣನ ವಿಗ್ರಹವನ್ನು ಪುತ್ತಿಗೆ ಮಠದ ಸ್ವಾಮಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ದಿವ್ಯ ಸಾನಿಧ್ಯದಲ್ಲಿ  ಸುಂದರವಾಗಿ ನಿರ್ಮಿಸಲಾದ ಗರ್ಭಗುಡಿಯಲ್ಲಿ  ಪ್ರತಿಷ್ಠಾಪನೆ ಮಾಡಲಾಗಿದೆ.  

ಮೇ 28 ರಿಂದ ವಿವಿಧ ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮಗಳು ಆರಂಭಗೊಂಡಿದ್ದು ಜೂನ್‌ 7 ರಂದು ಬ್ರಹ್ಮಕಲಶೋತ್ಸವ ನಡೆಯಿತು. ಆಕರ್ಷಕ ಕೃಷ್ಣ ವಿಗ್ರಹ  ಅಮೆರಿಕದ  ಅನೇಕ ಭಕ್ತರ ಮನೆಗಳಲ್ಲಿ  ಸ್ವಾಗತಗೊಂಡು, ಭಕ್ತಿಯಿಂದ ಪೂಜಿಸಲ್ಪಟ್ಟು ಈಗ ಸ್ವಾಮೀಜಿ ಯವರು ಪ್ರತಿಷ್ಠಾಪಿಸಿದ್ದಾರೆ. ಜೂನ್‌ 15 ರ ವರೆಗೆ ಸ್ವಾಮೀಜಿಯವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 

ಕರ್ನಾಟಕದ ಕಾರ್ಕಳದಿಂದ ತರಲಾದ ಕಪ್ಪು ಶಿಲೆಯಿಂದ ಪೀಠ ತಯಾರಿಸಲಾಗಿದ್ದು  ಅದರ ಮೇಲೆ ಬರ್ಮಾತೇಗದ ಮರದಲ್ಲಿ ಶ್ರೀ ಕೃಷ್ಣನ ಅವತಾರಲೀಲೆಯನ್ನು ಬಹು ಸುಂದರವಾಗಿ, ಸೂಕ್ಷ್ಮವಾಗಿ ಬೇಲೂರು ಹಳೆಬೀಡಿನ ಶಿಲ್ಪಕಲೆಯ ಮಾದರಿಯಲ್ಲಿ ಕೆತ್ತಲಾಗಿದೆ. ಮುಂದೆ ವಿಶಾಲವಾದ ಹೆಬ್ಬಾಗಿಲು, 40 ಅಡಿ ಎತ್ತರವಿರುವ ಈ ಗರ್ಭಗುಡಿ ಸಂಪೂರ್ಣ ಮರದಿಂದ  ನಿರ್ಮಾಣವಾಗಿರುವುದು ಒಂದು ವಿಶೇಷ. ಭಾರತದಲ್ಲಿ ಹಾಗು ವಿದೇಶದಲ್ಲಿ ಇಂತಹ ಕೆತ್ತನೆಯ ಗರ್ಭಗುಡಿ ಕಾಣಸಿಗುವುದು ಅಪರೂಪವೆನ್ನಬಹುದು.

 ಮಧ್ಯದಲ್ಲಿ ಕಂಡುಬರುವ ತಾಮ್ರದ ಹೊದಿಕೆ ಮತ್ತಷ್ಟು ಆಕರ್ಷಕವಾಗಿದ್ದು ಸ್ವಲ್ಪ ಮಟ್ಟಿಗೆ ಉಡುಪಿಯ ಬ್ರಹ್ಮರಥವನ್ನು ಹೋಲುವಂತೆ ಕಾಣುತ್ತದೆ. ಸ್ವಾಮೀಜಿಯವರ ಸಂಕಲ್ಪದಂತೆಯೇ ಈ ಗರ್ಭಗುಡಿಯ ವಿನ್ಯಾಸವನ್ನು ಮಾಡಲಾಗಿದೆ.
      
ಇನ್ನು  ಈ ಜಾಗದ ಬಗ್ಗೆ ಹೇಳುವುದಾದರೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಧರ್ಮೀಯರೇ ನೆಲೆಸಿರುವ  ಈ ದೇಶದಲ್ಲಿ ಹಿಂದೂ ದೇವಾಲಯಗಳ ಸಂಖ್ಯೆ ಕಡಿಮೆ. ಸೂಕ್ತವಾದ ಜಾಗ ಸಿಗುವುದು ಬಹಳ ಕಷ್ಟ. ಆದರೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಕ್ರೈಸ್ತ ದೇವಾಲಯವನ್ನು ಖರೀದಿಸಿ ಶ್ರೀ ಕೃಷ್ಣನ ದೇವಾಲಯವಾಗಿ ಪರಿವರ್ತನೆ ಮಾಡಿರುವುದು ಒಂದು ಸಾಹಸವೇ ಸರಿ. ಚರ್ಚಿನ ಕಟ್ಟಡಕ್ಕೆ ಯಾವುದೇ ತೊಂದರೆಯಾಗದಂತೆ, ಇರುವ ಸೌಕರ್ಯಗಳನ್ನು ಬಳಸಿ ಬಹಳ ಜಾಣ್ಮೆಯಿಂದ ಶ್ರೀ ಕೃಷ್ಣನ ದೇವಾಲಯವಾಗಿ ಪರಿವರ್ತನೆ ಮಾಡಿರುವುದು ಇಲ್ಲಿನ ಜನಕ್ಕೇ ಆಶ್ಚರ್ಯ ತರುವ ಸಂಗತಿ ಎನ್ನಬಹುದು. ದೇವಾಲಯದ ನೆಲಕ್ಕೆ ಹಾಕಿರುವ ಬಿಳಿ ಬಣ್ಣದ ಹಾಸುಗಲ್ಲುಗಳು, ಗೋಡೆಯ ಬಿಳಿಯ ಬಣ್ಣ ಮತ್ತು ಅಲ್ಲಿ ಅಳವಡಿಸಿಲಾದ ದೊಡ್ಡ, ದೊಡ್ಡ ತೂಗುದೀಪಗಳು ಒಳಾಂಗಣವನ್ನು ಆಕರ್ಷಣೀಯವಾಗಿ ಮಾಡಿವೆ.

 ಕ್ರೈಸ್ತ ದೇವಾಲಯವೊಂದು ಸುಂದರವಾದ ಶ್ರೀ ಕೃಷ್ಣನ ದೇವಾಲಯವಾಗಿ ಪರಿವರ್ತನೆಯಾಗಿರುವ ವಿಸ್ಮಯ ಕಾರ್ಯ ನಡೆದಿರುವುದು ವಿಶ್ವದಲ್ಲೇ ಮೊದಲು ಎನ್ನಬಹುದು. 

ದೇವಾಲಯದ ಪ್ರದೇಶ 4.5 ಎಕರೆಯಾಗಿದ್ದು, 600 ಕಾರು ನಿಲ್ಲಲು ಅವಕಾಶವಿದ್ದು , ದೇವಾಲಯದ ಒಳಗೆ ಏಕಕಾಲದಲ್ಲಿ 1000 ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. 

ಇಲ್ಲಿನ ಹಿಂದೂಗಳಿಗೆ ಇದು ಬಹಳ ಸಂತೋಷದ ಸಂಗತಿಯಾಗಿದ್ದು, 30- 40 ವರ್ಷಗಳಿಂದ ಇಲ್ಲೇ ನೆಲೆಸಿರುವ ಭಾರತೀಯರಲ್ಲಿ ಹೆಚ್ಚಿನ ಸಂತಸವನ್ನು ಮೂಡಿಸಿದೆ. ಉಡುಪಿಯ ಕೃಷ್ಣ ತಮ್ಮ ಊರಿಗೆ ಬಂದಿದ್ದಾನೆ ಎಂಬ ಉತ್ಸಾಹದಲ್ಲಿ ದೇವಸ್ಥಾನದ ಉದ್ಘಾಟನೆಗೆ ಓಡಾಡಿದರು. 

 ಶ್ರೀ ಕೃಷ್ಣನಿಗೆ 2 ಕೆ.ಜಿ ಗೂ ಹೆಚ್ಚು ತೂಕದ ಬೆಳ್ಳಿಯ ಕವಚವನ್ನು ರೂಪ ಐಯರ್ ಸಮರ್ಪಿಸಿದ್ದಾರೆ. 35 ವರ್ಷಗಳಿಂದ ಇಲ್ಲಿ ನೆಲೆಸಿರುವ ಜನಾರ್ಧನ್ ರಾವ್ ಅವರು ಶ್ರೀ ಕೃಷ್ಣನಿಗೆ ಚಿನ್ನದ ಕಣ್ಣು, ನಾಮದ ಆಭರಣಗಳನ್ನು ಅರ್ಪಿಸಿದ್ದಾರಲ್ಲದೇ ತಮ್ಮ ಭಕ್ತಿಯ ಸಂತಸಕ್ಕೆ ಪಾರವೇ ಇಲ್ಲ ಎನ್ನುತ್ತಾರೆ. 

ಅನೇಕ ಸ್ವಯಂ ಸೇವಕರು ದೇವಸ್ಥಾನವನ್ನು ಸುಂದರವಾಗಿ ಸಿಂಗರಿಸುವಲ್ಲಿ ತೊಡಗಿಕೊಂಡ ದೃಶ್ಯ  ಇಲ್ಲಿ ಎಲ್ಲ ಕಡೆ ಕಂಡುಬಂದಿತು.  ದೇವಸ್ಥಾನದ ಉದ್ಘಾಟನೆಗೆ 1000 ಕ್ಕೂ ಹೆಚ್ಚು ಭಕ್ತಾದಿಗಳು  ಸಾಕ್ಷಿಯಾದರು. 

ಟಾಪ್ ನ್ಯೂಸ್

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

1-sham

Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್‌ ಮೂಲದವರು

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.