ಗಂಧದ ಕುಡಿ ಚಿತ್ರದಲ್ಲಿ ಮಿಂಚಲಿರುವ ನಿಧಿ ಶೆಟ್ಟಿ
Team Udayavani, Jan 16, 2018, 2:28 PM IST
ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಹಿಂದಿಯಲ್ಲಿ ಚಂದನ್ ವನ್ ಕನ್ನಡದಲ್ಲಿ ಗಂಧದ ಕುಡಿ ಚಲನಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ಮುಂಬಯಿ ಮೀರಾ ಭಾಯಂದರ್‌ನ ಬಾಲ ಕಲಾ ವಿದೆ ನಿಧಿ ಎಸ್. ಶೆಟ್ಟಿ ಕಾಣಿಸಿಕೊಳ್ಳಲಿ ದ್ದಾರೆ. ಮೂಲತಃ ಮೂಡುಕೊಣಾಜೆ ಕಾಪು ಹೌಸ್ ಸಂಜೀವ ಶೆಟ್ಟಿ ಮತ್ತು ಬಜಗೋಳಿ ಮುಡಾರು ಮನೆ ಸುನೀತಾ ಎಸ್. ಶೆಟ್ಟಿ ದಂಪತಿಯ ಪುತ್ರಿಯಾಗಿರುವ ನಿಧಿಯದ್ದು ಬಹುಮುಖ ಪ್ರತಿಭೆ.
ಮುಂಬಯಿ ಮೀರಾ ಭಾಯಂದರ್‌ನ ಪ್ರಸಿದ್ಧ ರಾಧಾಕೃಷ್ಣ ಆಕಾಡೆಮಿಯ ಸುಕನ್ಯಾ ಭಟ್ ಇವರ ಶಿಷ್ಯೆಯಾಗಿರುವ ಇವರು ಹಿಂದುಸ್ತಾನಿ ಸಂಗೀತವನ್ನು, ಅಂಚನ್ ಅಧಾವ್ ಅವರಿಂದ ಮತ್ತು ಪಾಶ್ಚಾತ್ಯ, ಜಾನಪದ ನೃತ್ಯವನ್ನು ಸಚಿನ್ ಜಾಧವ್ ಅವರಿಂದ, ಭಕ್ತೀತೆಗಳನ್ನು ಶ್ರೀಧರ ಶೆಟ್ಟಿ ಅವರಿಂದ ಕಲಿಯುತ್ತಿದ್ದಾಳೆ. ಮೀರಾ-ಭಾಯಂದರ್‌ನ ಸೈಂಟ್ ಫ್ರಾನ್ಸಿಸ್ ಹೈಸ್ಕೂಲ್‌ನ ಆರನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಇವರು ಅರಳು ಮಲ್ಲಿಗೆ ಮತ್ತು ನಾಟ್ಯಮಯೂರಿ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿದ್ದಾರೆ. ಹಲವಾರು ಕಡೆ ನೃತ್ಯ ಪ್ರದರ್ಶನವನ್ನು ನೀಡಿ ಎಲ್ಲರ ಮನರಂಜಿಸಿ¨ªಾಳೆ.
ಕೆ. ಸತ್ಯೇಂದ್ರ ಪೈ ಮತ್ತು ಕೃಷ್ಣಮೋಹನ್ ಪೈ ಇವರ ಜತೆಯಲ್ಲಿ ಸಂತೋಷ್ ಕುಮಾರ್ ಕಟೀಲು ನಿರ್ದೇಶನದಲ್ಲಿ ಅದ್ದೂರಿ ಖರ್ಚು ವೆಚ್ಚ ದ ಮಕ್ಕಳ ಚಲನಚಿತ್ರವು ಇದಾಗಿದ್ದು. ಪ್ರಾಯಶಃ ಚಿನ್ನಾರಿಮುತ್ತ ಚಲನಚಿತ್ರದ ಅನಂತರ ಅದ್ದೂರಿ ಖರ್ಚಿನ ಚಿತ್ರ ಇದುವೇ ಎಂದೆನ್ನಬಹುದು. ಮಕ್ಕಳ ಮೇಲೆ ಪಾಲಕರ ಹಾರೈಕೆಯ ಬಗ್ಗೆ ಕಥೆ ಉತ್ತಮ ಸಾರಾಂಶದೊಂದಿಗೆ ಮೂಡಿಬಂದಿದೆ.
ದೇಶಪ್ರೇಮದ ಚಿತ್ರದಲ್ಲಿ ಹಾಡುಗಳಿದ್ದು, ಪ್ರಕೃತಿಯ ಮೈಮರೆಯುವ ರಮ್ಯ ಮನ ಮೋಹಕ ದೃಶ್ಯಗಳು ಚಿತ್ರದಲ್ಲಿ ನಿರ್ದೇಶಕನ ಕಠಿನ ಪರಿಶ್ರಮದಿಂದ ಸೆರೆಹಿಡಿಯಲ್ಪಟ್ಟಿವೆ. ಪ್ರಕೃತಿಯ ಬಗ್ಗೆ ರಹಸ್ಯವಾದ ಕೆಲವು ವಿಷಯಗಳನ್ನು ಕಥೆಯಲ್ಲಿ ತೆರೆದಿಡಲಾಗಿದೆ. ಈಗಾಗಲೇ ಕನಸು ಕಣ್ಣು ತೆರೆದಾಗ ಚಿತ್ರವನ್ನು ಚಿತ್ರ ಪ್ರೇಮಿಗಳಿಗೆ ನೀಡಿರುವ ಸಂತೋಷ್ ಕುಮಾರ್ ಕಟೀಲು ಇವರ ಈ ಬಹು ಭಾಷಾ ಚಿತ್ರ ಹಿಂದಿಯಲ್ಲಿ ಚಂದನ್‌ವನ್ ಕನ್ನಡದಲ್ಲಿ ಗಂಧದ ಕುಡಿ ಬಹಳ ಯಶಸ್ವಿಯ ಚಿತ್ರವಾಗಲಿದೆ. ರಮೇಶ್ ಭಟ್. ಶಿವಧ್ವಜ್, ಜ್ಯೋತಿ ರೈ ಬಹುಮುಖ್ಯ ಪಾತ್ರದಲ್ಲಿದ್ದರೆ. ಮುಂಬಯಿಯ ಯಕ್ಷಗಾನ ಕಲಾವಿದ ಸದಾ ನಂದ ಕಟೀಲು, ಕೃಷ್ಣ ರಾಜ್ ಶೆಟ್ಟಿ ಮುಂಡ್ಕೂರು, ಅರವಿಂದ ಕೊಜಕ್ಕೊಳಿ, ಚಂದ್ರಿಕಾ ರಾವ್ ಮುಂತಾದ ಪ್ರಸಿದ್ಧ ಕಲಾವಿದರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.