ಎನ್‌ಕೆಜಿಎಸ್‌ಬಿ ಕೋ ಆಪರೇಟಿವ್ ಬ್ಯಾಂಕ್ ಶತಮಾನೋತ್ಸವ
Team Udayavani, Oct 4, 2017, 2:55 PM IST
ಮುಂಬಯಿ: ಎನ್‌ಕೆಜಿಎಸ್‌ಬಿ ಕೋ ಆಪರೇಟಿವ್ ಬ್ಯಾಂಕ್ ಇದರ ಶತಮಾನೋತ್ಸವದ ಸಮಾರೋಪ ಸಮಾರಂಭವು ಸೆ. 26ರಂದು ಪ್ರಭಾದೇವಿಯ ರವೀಂದ್ರನಾಟ್ಯ ಮಂದಿರದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. ಆರುಣಾಚಲ ಪ್ರದೇಶ, ನಾಗಲ್ಯಾಂಡ್‌ನ ರಾಜ್ಯಪಾಲ ಪಿ. ಬಿ. ಆಚಾರ್ಯ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಗೌರವ ಅತಿಥಿಯಾಗಿ ಕೋ ಆಪರೇಟಿವ್ ಎಂಪ್ಲಾಯೀಸ್ ಯೂನಿಯನ್ ಇದರ ಅಧ್ಯಕ್ಷ, ಸಂಸದ ಆನಂದ್‌ರಾವ್ ಅಡೂÕಲ್, ಎಸ್‌ಆರ್‌ಎಲ್ ಡಯಾಗ್ನೆಸ್ಟಿಕ್ ಸೆಂಟರ್‌ನ ಅಧ್ಯಕ್ಷ ಡಾ| ಅನಿತಾ ಬೋರ್ಗಸ್, ಸಿನಿಸ್ಟಾರ್ ಅಶೋಕ್ ಸರಾಫ್ ಅವರು ಉಪಸ್ಥಿತರಿದ್ದರು.
ಬ್ಯಾಂಕಿನ ನಿರ್ದೇಶಕ ಮಂಡಳಿ, ಎಕ್ಸಿಕ್ಯೂಟಿವ್ ಆಫೀಸರ್‌ಗಳು, ಬ್ಯಾಂಕಿನ ಸಿಬಂದಿಗಳು, ಶೇರುದಾರರು, ಗ್ರಾಹಕರು, ಹಿತೈಷಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬ್ಯಾಂಕಿನ ಕಾರ್ಯಾಧ್ಯಕ್ಷ ಕಿಶೋರ್ ಕುಲಕರ್ಣಿ ಅವರು ಮಾತನಾಡಿ, ಎನ್‌ಕೆಜಿಎಸ್‌ಬಿ ಬ್ಯಾಂಕ್ ದೇಶದ 10 ಪ್ರತಿಷ್ಠಿತ ಕೋ ಆಪರೇಟಿವ್ ಬ್ಯಾಂಕ್‌ಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟು ವ್ಯವಹಾರ 12,500 ಕೋ. ರೂ. ಗಳನ್ನು ಸಾಧಿಸಿದ ಹೆಗ್ಗಳಿಗೆ ಬ್ಯಾಂಕಿಗಿದೆ. ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದ ಎಲ್ಲ ಗ್ರಾಹಕರಿಗೂ, ಶೇರುದಾರರಿಗೂ ಕೃತಜ್ಞತೆಗಳು. ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಬ್ಯಾಂಕ್ ಆಚರಿಸಿದೆ. ಭವಿಷ್ಯದ ಐದು ವರ್ಷಗಳಲ್ಲಿ 25 ಸಾವಿರ ಕೊ. ರೂ. ಗಳ ಒಟ್ಟು ವ್ಯವಹಾರದತ್ತ ಬ್ಯಾಂಕ್ ಚಿತ್ತ ಹರಿಸಿದೆ. ಅದಕ್ಕಾಗಿ ಎಲ್ಲರ ಸಹಕಾರ, ಪ್ರೋತ್ಸಾಹವಿರಲಿ ಎಂದು ಹಾರೈಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.