ಒಮಿಕ್ರಾನ್‌ಗೆ ಭಯಪಡುವ ಅಗತ್ಯವಿಲ್ಲ: ಡಾ| ಸುಧಾಕರ್ ಶೆಟ್ಟಿ ಪುಣೆ
Team Udayavani, Feb 6, 2022, 11:34 AM IST
ಪುಣೆ: ಕೊರೊನಾ ರೂಪಾಂತರಿ ಒಮಿಕ್ರಾನ್ ಬಗ್ಗೆ ಭಯಪಡುವ ಅಗತ್ಯ ವಿಲ್ಲ. ಆದರೆ ಮುಂಜಾಗೃತೆ ವಹಿಸುವುದು ಬಹಳ ಮುಖ್ಯವಾಗಿದೆ ಎಂದು ಪುಣೆಯ ಕಂಟೋನ್ಮೆಂಟ್ ಹಾಸ್ಪಿಟಲ್‌ನ ಪ್ರಮುಖ ವೈದ್ಯ ಡಾ| ಸುಧಾಕರ್ ಶೆಟ್ಟಿ ಮನವಿ ಮಾಡಿದ್ದಾರೆ.
ಕೊರೊನಾ ಮತ್ತು ಒಮಿಕ್ರಾನ್ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಿ ಕೋವಿಡ್ ಚಿಕಿತ್ಸೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನರ ಸೇವೆಗೈಯುತ್ತಿರುವ ತುಳು-ಕನ್ನಡಿಗ, ಪುಣೆಯ ಪ್ರಸಿದ್ಧ ಮಕ್ಕಳ ತಜ್ಞ ಡಾ| ಸುಧಾಕರ್ ಶೆಟ್ಟಿ ಅವರು ತಮ್ಮ ಬೇಬಿ ಫ್ರೆಂಡ್ ಚಿಕಿತ್ಸಾಲಯದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಕೊರೊನಾ ರೂಪಾಂತರಿ ಒಮಿಕ್ರಾನ್ ಬಗ್ಗೆ ಮಾಹಿತಿ ನೀಡಿ, ಕೊರೊನಾ ನಿಯಂತ್ರಣದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡು ವಂತೆ ಮನವಿ ಮಾಡಿದ್ದಾರೆ.
ವ್ಯಾಕ್ಸಿನ್ ಅಗತ್ಯ:
ಈಗಾಗಲೇ ಕೊರೊನಾದಿಂದ ಸಾಕಷ್ಟು ಸಾವು-ನೋವು ಸಂಭವಿಸಿದೆ. 2ನೇ ಅಲೆ ವಯಸ್ಕರ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಈ ಮಧ್ಯೆ ವ್ಯಾಕ್ಸಿನ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ತೆಗೆದುಕೊಳ್ಳು ವಂತೆ ಸರಕಾರ ವ್ಯವಸ್ಥೆ ಮಾಡಿ ನಾಗರಿ ಕರಲ್ಲಿ ಧೈರ್ಯ ತುಂಬಿತು. ಜನ ಜೀವನ ಯಥಾ ಸ್ಥಿತಿಗೆ ಮರಳುತ್ತಿರುವಾಗ ಒಮಿಕ್ರಾನ್ ಜನರ ನೆಮ್ಮದಿಯನ್ನು ಕೆಡಿಸಿದೆ ಎಂದರು.
ಮಕ್ಕಳ ಬಗ್ಗೆ ಕಾಳಜಿ ಅಗತ್ಯ:
ಕೊರೊನಾ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಮಕ್ಕಳ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕೊರೊನಾ, ಒಮಿಕ್ರಾನ್ ಮಕ್ಕಳನ್ನು ಬಾಧಿಸುವುದಿಲ್ಲ, ಆದರೆ ಶೇ. 60ರಷ್ಟು ಮಂದಿಗೆ ಇದರ ಪರಿಣಾಮ ತಟ್ಟುತ್ತದೆ. ಅದಕ್ಕಾಗಿ ಮಕ್ಕಳ ಮೇಲೆ ಕಾಳಜಿ ಅಗತ್ಯ. ಮನೆಯಲ್ಲಿಯೇ ಇದ್ದು, ಸೂಕ್ತ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಪಡೆದರೆ ಗುಣಮುಖರಾಗುತ್ತಾರೆ. ಕೆಮ್ಮು, ಶೀತ, ಮೈ ಕೈ ನೋವು, ಗಂಟಲು ನೋವು, ಸಣ್ಣ ಮಟ್ಟದಲ್ಲಿ ಜ್ವರ ಕಾಣಿಸಿಕೊಳ್ಳಬಹುದು. ಸೂಕ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಔಷಧ ಪಡೆದರೆ ಗುಣ ಮುಖರಾಗಬಹುದು. ಯಾರು ವ್ಯಾಕ್ಸಿನ್ ಪಡೆಯಲಿಲ್ಲ ಅವರು ಆದಷ್ಟು ಬೇಗ ವ್ಯಾಕ್ಸಿನ್ ಪಡೆಯುವುದು ಒಳ್ಳೆಯದು ಎಂದು ಅವರು ತಿಳಿಸಿದರು.
ಮಾರ್ಚ್ ಅಂತ್ಯಕ್ಕೆ ಸಹಜ ಸ್ಥಿತಿಗೆ :
ಮುಂದಿನ ಐದು, ಆರು ವಾರಗಳಲ್ಲಿ ಒಮಿಕ್ರಾನ್ ತೀವ್ರತೆ ಕಡಿಮೆಯಾಗಲಿದ್ದು, ಮಾರ್ಚ್ ತಿಂಗಳೊಳಗೆ ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ ಎಂದು ತಿಳಿಸಿದ ಅವರು, ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಮೊದಲಾದ ನಿಯಮ ಪಾಲನೆ ಮಾಡಬೇಕು. 2020ರ ಮಾರ್ಚ್ ನಿಂದ ಮೊದಲ್ಗೊಂಡು ಈವರೆಗೆ ನಮ್ಮ ತಂಡವು ಪುಣೆ ಕಂಟೋನ್ಮೆಂಟ್ ಪರಿಸರದಲ್ಲಿ, ಪುಣೆ ಕಂಟೋನ್ಮೆಂಟ್ ಹಾಸ್ಪಿಟಲ್‌ಗಳಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಮಾಡುತ್ತಿದೆ ಎಂದರು.
ಸಹಾಯಕ್ಕಾಗಿ ಸಂಪರ್ಕಿಸಿ :
ತುಳು ಕನ್ನಡಿಗರು ನಮ್ಮ ಪುಣೆ ಕಂಟೋನ್ಮೆಂಟ್ ಹಾಸ್ಪಿಟಲ್‌ಗಳಲ್ಲಿ ಸಂಪ ರ್ಕಿಸಿದರೆ ಸೂಕ್ತ ಮಾಹಿತಿ ನೀಡಲು ಸಿದ್ಧರಿದ್ದೇವೆ. ಅಲ್ಲದೆ ಯಾವುದೇ ರೀತಿಯ ಮಾಹಿತಿಗಾಗಿ, ವ್ಯಾಕ್ಸಿನ್ ಪಡೆಯು ವವರು ಮತ್ತು ಅಗತ್ಯವಾಗಿ ಬೂಸ್ಟರ್ ಲಸಿಕೆ ಪಡೆಯಲು ಬಯಸುವವರು (9657616322, 7720891755) ನಮ್ಮನ್ನು ಸಂಪರ್ಕಿಸಬಹುದು. 15ರಿಂದ 18 ವರ್ಷದ ವರೆಗಿನ ಮಕ್ಕಳಿಗೆ ಲಸಿಕೆ ಲಭ್ಯವಿದ್ದು, ಈ ವಯಸ್ಸಿನವರು ಲಸಿಕೆ ಪಡೆದುಕೊಳ್ಳುವುದು ಒಳ್ಳೆಯದು. ಬೂಸ್ಟರ್ ಲಸಿಕೆ ಪಡೆಯಲಿಚ್ಛಿಸುವ 60 ವರ್ಷ ಮೇಲ್ಪಟ್ಟವರು ನಮ್ಮನ್ನು ಸಂಪರ್ಕಿಸಬಹುದು ಎಂದು ಡಾ| ಸುಧಾಕರ್ ಶೆಟ್ಟಿ ತಿಳಿಸಿದರು.
30 ವರ್ಷಗಳಿಂದ ಸೇವೆ :
ಡಾ| ಸುಧಾಕರ್ ಶೆಟ್ಟಿ ಅವರು ಪುಣೆಯಲ್ಲಿ ಹುಟ್ಟಿ ಬೆಳೆದವರು. 1983ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕೆಂಪೇಗೌಡ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ ನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ದಾವಣಗೆರೆಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಪೀಡಿಯಾಟ್ರಿಕ್‌ನಲ್ಲಿ ಎಂಡಿ ಮತ್ತು ಡಿಸಿಎಚ್‌ಜೆಜೆಎಂಸಿ ಪದವಿ ಗಳಿಸಿದ್ದಾರೆ. ಕೊಯಮತ್ತೂರಿನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಆಸ್ಪತ್ರೆ ನಿರ್ವಹಣೆಯ ಡಿಪ್ಲೋಮಾ ಪೂರ್ತಿಗೊಳಿಸಿ¨ªಾರೆ. ಪುಣೆಯ ಕ್ಯಾಂಪ್ ಎಂ.ಜಿ. ರೋಡ್‌ನಲ್ಲಿ ಖಾಸಗಿ ಪೀಡಿಯಾಟ್ರಿಕ್ ಕ್ಲಿನಿಕ್ ಬೇಬಿ ಫ್ರೆಂಡ್ ಅನ್ನು ಹೊಂದಿರುವ ಇವರು, ಸುಮಾರು 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ತಜ್ಞ ವೈದ್ಯರ ಒಡನಾಟ :
ಪ್ರತಿಷ್ಠಿತ ಮೆಗಾÕಸೆ ಪ್ರಶಸ್ತಿ ಪುರಸ್ಕೃತ ಡಾ| ಬನೂ ಕೋಯಾಜಿ ಮತ್ತು ಡಾ| ಆನಂದ್ ಪಂಡಿತ್ ಅವರ ತಂಡದಲ್ಲಿ ಪುಣೆಯ ಕೆಇಎಂ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸಿರುವ ಡಾ| ಸುಧಾಕರ್ ಶೆಟ್ಟಿ ಅವರು ಕಳೆದ 30 ವರ್ಷಗಳಿಂದ ಪುಣೆ ಕಂಟೋನ್ಮೆಂಟ್ ಆಸ್ಪತ್ರೆ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಕೂಡಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲತಃ ಕಡಂದಲೆಯವರಾದ ಅವರು ಪತ್ನಿ ಸುಪ್ರಿಯಾ ಶೆಟ್ಟಿ, ಪುತ್ರ ಡಾ| ವಿರೇನ್ ಮತ್ತು ಪುತ್ರಿ ಸಹನಾ ಅವರೊಂದಿಗೆ ಪುಣೆಯ ವಾನ್ವಾಡಿಯಲ್ಲಿ ನೆಲೆಸಿದ್ದು, ಅವರ ವೈದ್ಯಕೀಯ, ಸಮಾಜಪರ ಕಾರ್ಯಗಳಿಗೆ ಹಲವಾರು ಪುರಸ್ಕಾರಗಳು ಲಭಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.