ನೊಂದವರ ನೆರವಿಗೆ ತತ್‌ಕ್ಷಣ ಸ್ಪಂದಿಸಿದ ಒಕ್ಕಲಿಗರ ಸಂಘ


Team Udayavani, Oct 13, 2020, 7:04 PM IST

ನೊಂದವರ ನೆರವಿಗೆ ತತ್‌ಕ್ಷಣ ಸ್ಪಂದಿಸಿದ ಒಕ್ಕಲಿಗರ ಸಂಘ

ಮುಂಬಯಿ, ಅ. 12: ಮುಂಬಯಿ ನಗರಿಗೆ ಬಂದ ಗೌಡ ಸಮಾಜದ ಪ್ರಯತ್ನಶೀಲ ಮಹನೀಯರು ಸಂಘಟನೆಯ ಕನಸೊಂದನ್ನು ಕಂಡರು. ಇದರ ಪರಿಣಾಮ 1998ರಲ್ಲಿ ಸಂಘಟನೆಯನ್ನು ಸ್ಥಾಪಿಸಿದರು. 2000ದ ಸಾಲಿನಲ್ಲಿ ಒಕ್ಕಲಿಗರ ಸಂಘ ಮಹಾರಾಷ್ಟ್ರ ಎಂಬ ಹೆಸರಲ್ಲಿ ಪೂರ್ಣ ಪ್ರಮಾಣದಲ್ಲಿ ಈ ಸಂಘಟನೆಯು ಸಮಾಜ ಸೇವೆಯಲ್ಲಿ ತೊಡಗಿಕೊಂಡಿತು.

ಹಲವಾರು ವರ್ಷಗಳಿಂದ ಸಮಾಜ ಬಾಂಧವರ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಸಂಘವು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಇನ್ನಿತರ ಕ್ಷೇತ್ರಗಳಲ್ಲಿ ಮಾಡುತ್ತಿರುವ ಸಾಧನೆ ಅಪಾರ. ಅದರಲ್ಲೂ ಆರೇಳು ತಿಂಗಳ ಹಿಂದೆ ಬಂದೆರಗಿದ ಕೋವಿಡ್ ಸೋಂಕು ಮತ್ತು ಲಾಕ್‌ಡೌನ್‌ನಿಂದಾಗಿ ಕಂಗಾಲಾಗಿದ್ದ ಸಮಾಜ ಬಾಂಧವರು ಮಾತ್ರವಲ್ಲದೆ ಮಹಾನಗರದಲ್ಲಿ ನೆಲೆಸಿರುವ ಅನೇಕ ಕನ್ನಡಿಗರು, ಅನ್ಯಭಾಷಿಗರಿಗೂ ನೆರವಿನ ಹಸ್ತವನ್ನು ಚಾಚಿದ ಒಕ್ಕಲಿಗರ ಸಂಘವು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಒಗ್ಗಟ್ಟಿನ ಸೇವೆ :

ಒಕ್ಕಲಿಗ ಸಮಾಜ ಬಾಂಧವರಲ್ಲಿ ಹೆಚ್ಚಿನವರು ವ್ಯಾಪಾರ ಸಹಿತ ಇನ್ನಿತರ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಸಮಾಜ ಬಾಂಧವರ ಸಂಕಷ್ಟವನ್ನು ಅರಿತ ಸಂಘವು, ಅಧ್ಯಕ್ಷ ಜಿತೇಂದ್ರ ಗೌಡ ಅವರ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ಒಗ್ಗಟ್ಟಿ ನಿಂದ ಕಾರ್ಯನಿರ್ವಹಿಸಿ ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರಿಗೆ ಲಕ್ಷಾಂತರ ರೂ.ಗಳ  ನೆರವು ಒದಗಿಸಿತು.

ಆಹಾರದ ಕಿಟ್‌ ವಿತರಣೆ :  ಸಮಾಜ ಬಾಂಧವರೂ ಸಹಿತ 610ಕ್ಕೂ ಹೆಚ್ಚು ತುಳು-ಕನ್ನಡಿಗ ಕುಟುಂಬಗಳಿಗೆ ಲಕ್ಷಾಂತರ ರೂ. ಗಳ ಆಹಾರ ಕಿಟ್‌ ವಿತರಿಸಿದ ಹೆಗ್ಗಳಿಕೆ ಸಂಘದ್ದು. ಮುಂಬಯಿ, ಥಾಣೆ, ನವಿಮುಂಬಯಿ, ಪನ್ವೇಲ್‌ ಇನ್ನಿತರ ಪ್ರದೇಶಗಳಲ್ಲಿ ನೆಲೆಸಿರುವ ಸಮಾಜ ಬಾಂಧವರ ಮನೆ ಬಾಗಿಲಿಗೆ ಕಿಟ್‌ಗಳನ್ನು ತಲುಪಿಸಲಾಯಿತು.

ಊರಿಗೆ ತೆರಳುವವರಿಗೆ ನೆರವು :  ಈ ಮಧ್ಯೆ ಕೆಲವರು ಅತೀ ಅಗತ್ಯವಾಗಿ ಊರಿಗೆ ತೆರಳಲು ಬಯಸಿದ್ದನ್ನು ಗಮನಿಸಿದ ಸಂಘದ ಪದಾಧಿಕಾರಿಗಳು, ಸ್ಥಳೀಯ ಎಂಎಸ್‌ಆರ್‌ಟಿಸಿ ಅಧಿ ಕಾರಿಗಳನ್ನು ಸಂಪರ್ಕಿಸಿ ಸಹಕರಿಸಿದರು. ಅಲ್ಲದೆ ಹುಬ್ಬಳ್ಳಿಯಿಂದ ಮುಂಬಯಿಗೆ ಬಸ್‌ಗಳನ್ನು ತರಿಸಿ ಅಗತ್ಯವಿದ್ದವರಿಗೆ ಊರಿಗೆ ಪ್ರಯಾಣಿಸುವ ಅವಕಾಶವನ್ನು  ಕಲ್ಪಿಸಿದರು. ಸರಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಪಾಡುವಲ್ಲಿ ಮರೆಯಲಿಲ್ಲ.

ಕೊಲ್ಲಾಪುರದಲ್ಲಿ  ಸಿಕ್ಕಿಬಿದ್ದ  34 ಮಂದಿಗೆ ಸಹಾಯ :   ಲಾಕ್‌ಡೌನ್‌ ಸಂದರ್ಭದಲ್ಲಿ ಮಕ್ಕಳು ಸಹಿತ ಸುಮಾರು 34 ಮಂದಿ ಕನ್ನಡಿಗರು ಕೊಲ್ಲಾಪುರದಲ್ಲಿ ಸಿಕ್ಕಿಕೊಂಡಿದ್ದು, ಅತ್ತ ಊರಿಗೂ ಹೋಗಲಾ ರದೆ, ಇತ್ತ ಮುಂಬಯಿಗೂ ಆಗಮಿಸಲಾರದೆ ಇಕ್ಕಟ್ಟಿಗೆ ಸಿಲುಕ್ಕಿದ್ದರು. ಈ ಸಂದರ್ಭದಲ್ಲಿ ಅವರ ನೆರವಿಗೆ ಧಾವಿಸಿದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಅಲ್ಲಿನ ಕೆಲವು ಗಣ್ಯರನ್ನು ಸಂಪರ್ಕಿಸಿ ಅವರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾದರು.

ಶಾಸಕ-ಸಚಿವರೊಂದಿಗೆ ನಿರಂತರ ಸಂಪರ್ಕ :

ಈ ಎಲ್ಲ ಕಾರ್ಯಗಳಿಗಾಗಿ ಮಂಡ್ಯ, ಹಾಸನ ಹಾಗೂ ಮೈಸೂರು ಜಿಲ್ಲೆಯ ನಾಲ್ವರು ಶಾಸಕರು ಹಾಗೂ ಸಚಿವರಾದ ಡಾ| ಕೆ. ಸಿ. ನಾರಾಯಣ ಗೌಡ, ಶಾಸಕರಾದ ಬಾಲಕೃಷ್ಣ ಗೌಡ, ಸಿ. ಎಸ್‌. ಪುಟ್ಟರಾಜು ಇವರೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಸಂಘವು ಕಾರ್ಯನಿರ್ವಹಿಸಿದೆ. ಅಗತ್ಯ ಸಂದರ್ಭದಲ್ಲಿ ಸಚಿವ ಡಾ| ಕೆ. ಸಿ. ನಾರಾಯಣ ಗೌಡ ಅವರು ಸಮಾಜ ಬಾಂಧವರಿಗೆ ನೆರವನ್ನು ನೀಡಿದ್ದಾರೆ.

ಕಾರ್ಯಕಾರಿ ಸಮಿತಿಯ ಸಮಯೋಚಿತ ಸೇವೆ :  

ಸಂಘದ ಕೋಶಾಧಿ ಕಾರಿ ದೀಪಕ್‌ ಆರ್‌. ಗೌಡ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಕುಮಾರ್‌ ಆರ್‌. ಗೌಡ, ಚೌಡಪ್ಪ ಗೌಡ, ಸುನಿಲ್‌ ಬಿ. ಗೌಡ, ಯೋಗೇಶ್ವರ್‌ ಗೌಡ, ಮಂಜ ಗೌಡ, ರಮೇಶ್‌ ಗೌಡ, ನಟೇಶ್‌ ಗೌಡ, ಮುತ್ತಣ್ಣ ಗೌಡ ಅಲ್ಲದೆ ಆಹಾರ ಸಾಮಗ್ರಿಗಳ ವಿತರಣೆಯಲ್ಲಿ ಸಂದೀಪ್‌ ಗೌಡ, ಸಂದೀಪ್‌ ಪಸಿ, ರಮೇಶ್‌ ಗೌಡ, ಚೇತು ಗೌಡ, ಸತೀಶ್‌ ಗೌಡ, ಮಂಜು ಗೌಡ, ಭಾರತಿ ಗೌಡ, ಮಂಜಣ್ಣ ಗೌಡ, ಕೃಷ್ಣ ಗೌಡ ಮತ್ತು ಇತರ ಅನೇಕ ಸದಸ್ಯರು ಸಹಕರಿಸಿದ್ದಾರೆ.

ತಡರಾತ್ರಿಯವರೆಗೂ  ಜನಸೇವೆಗೈದ ಕಾರ್ಯಕರ್ತರು  :

ಸಂಘದ ಕಾರ್ಯಕರ್ತರು ಸಮಾಜ ಬಾಂಧವರು, ತುಳು – ಕನ್ನಡಿಗರು ಯಾವ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ಕಲೆ ಹಾಕಿ, ನೆರವು ಒದಗಿಸಲಾಯಿತು. ಸಮಿತಿಯ ಎಲ್ಲ ಸದಸ್ಯರು ಕೊರೊನಾ ಭಯದ ಮಧ್ಯೆ ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಿ, ಬಿಡುವಿಲ್ಲದೆ ತಡರಾತ್ರಿ ತನಕ ಈ ಸೇವೆಯಲ್ಲಿ ನಿರತರಾಗಿದ್ದರು.

ನಮ್ಮ ಸಮಾಜದಲ್ಲಿ ಅನೇಕರು ಹೊಟೇಲ್‌ ಕಾರ್ಮಿಕರು, ಸಣ್ಣ ವ್ಯಾಪಾರಿಗಳಿದ್ದು, ದೈನಂದಿನ ಖರ್ಚಿಗೆ ಬೇಕಾದಷ್ಟು ಮಾತ್ರ ಸಂಪಾದಿಸುತ್ತಿದ್ದು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಇದರಲ್ಲೂ ಹೆಚ್ಚಿನವರು ಮುಂಬಯಿ, ನವಿಮುಂಬಯಿ, ಥಾಣೆ ಹಾಗೂ ಪಾಲ^ರ್‌ ಜಿಲ್ಲೆಯಲ್ಲಿದ್ದು, ಅವರವರ ಪರಿಸರದಲ್ಲಿರುವ ನಮ್ಮ ಸಂಘದ ಪ್ರಮುಖರು ಇವರನ್ನು ಸಂಪರ್ಕಿಸಿ ಕಿಟ್‌ ಅನ್ನು ವಿತರಿಸಿದರು. ಈಗಾಗಲೇ ಸಂಘದ ವತಿಯಿಂದ ಇದಕ್ಕೆ ಲಕ್ಷಾಂತರ ರೂ. ಗಳನ್ನು ಖರ್ಚು ಮಾಡಲಾಗಿದ್ದು, ಈ ತನಕ ಯಾರಿಂದಲೂ ದೇಣಿಗೆ ಪಡೆಯಲಿಲ್ಲ. ಸಂಘದ ವತಿಯಿಂದ ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಬೀದಿ ಬದಿಯ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಇದರಲ್ಲಿ ಅನೇಕರು ಕನ್ನಡಿಗರಾಗಿದ್ದು, ಸಣ್ಣ ಪುಟ್ಟ ವ್ಯಾಪಾರಗಳಾದ ದೋಸೆ, ಇಡ್ಲಿ ಮುಂತಾದವುಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕುತ್ತಿದ್ದಾರೆ. ಈ ಎಲ್ಲ ಕೆಲಸಗಳನ್ನು ಯಶಸ್ವಿಗೊಳಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞನಾಗಿದ್ದೇನೆ. -ಜಿತೇಂದ್ರ ಗೌಡ  ಅಧ್ಯಕ್ಷರು, ಒಕ್ಕಲಿಗರ ಸಂಘ ಮಹಾರಾಷ್ಟ್ರ

ಟಾಪ್ ನ್ಯೂಸ್

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.