ಓಂ ಮಿತ್ರ ಮಂಡಳ ಮೀರಾರೋಡ್ ಗಣೇಶೋತ್ಸವ ಸಂಭ್ರಮ
Team Udayavani, Sep 6, 2017, 1:47 PM IST
ಮುಂಬಯಿ: ಮೀರಾರೋಡ್ ಪೂರ್ವದ ಶಾಂತಿ ನಗರದ ಸೆಕ್ಟರ್ ನಾಲ್ಕರಲ್ಲಿರುವ ಓಂ ಮಿತ್ರ ಮಂಡಳದ ವಾರ್ಷಿಕ ಗಣೇಶೋತ್ಸವವು ಆ. 25ರಂದು ಪ್ರಾರಂಭಗೊಂಡಿದ್ದು, ಸೆ. 5ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಗಣೇಶೋತ್ಸವದ ನಿಮಿತ್ತ ಸೆ. 2ರಂದು ಶ್ರೀ ಸತ್ಯನಾರಾಯಣ ಮಹಾಪೂಜೆ, ಅರಸಿನ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಂಡಳದ ಮಾರ್ಗದರ್ಶಕ ಪ್ರಶಾಂತ್ ದಳ್ವಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಜೆ 6ರಿಂದ ರಾಯರ ಬಳಗ ಭಜನ ತಂಡದವರಿಂದ ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಫೋರ್ಟ್ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಕಿಶೋರ್ ಕರ್ಕೇರ ಅವರು ಹಾರ್ಮೋನಿಯಂನಲ್ಲಿ, ಬಾಲ್‌ರಾಜ್ ಕೋಟ್ಯಾನ್ ಮತ್ತು ಕಿರಣ್ ಕರ್ಕೇರ ಅವರು ತಬಲಾದಲ್ಲಿ ಸಹಕರಿಸಿದರು. ಮಾಧವ ಮೊಗವೀರ, ಗಿರೀಶ್ ಕರ್ಕೇರ, ಪುರಂದರ ಶ್ರೀಯಾನ್, ಪುರುಷೋತ್ತಮ ಮಂಚಿ, ವಿನೋದ್ ಸಾಲ್ಯಾನ್, ದೇವದಾಸ್ ಕರ್ಕೇರ, ಚೇತನ್ ಸಾಲ್ಯಾನ್, ಸುರೇಶ್, ಸರೋಜಿನಿ ಪೂಜಾರಿ ಅವರು ಭಜನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಭಜನ ಸಂಕೀರ್ತನ ನಡೆಸಿದ ಭಜನ ತಂಡವನ್ನು ಓಂ ಮಿತ್ರ ಮಂಡಳದ ಮಾರ್ಗದರ್ಶಕ ಪ್ರಶಾಂತ್ ದಳ್ವಿ ಅವರು ಶಾಲು ಹೊದೆಸಿ, ಮಹಾಪ್ರಸಾದವನ್ನಿತ್ತು ಗೌರವಿಸಿದರು.
ಇದೇ ಸಂದರ್ಭದಲ್ಲಿ ರಾಯರ ಬಳಗದ ಭಜನ ತಂಡದವರು ಮೀರಾ-ಭಾಯಂದರ್ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಾರ್ಡ್ ಕ್ರಮಾಂಕ 17ರಿಂದ ಸ್ಪರ್ಧಿಸಿ ವಿಜಯಿಯಾದ ಪ್ರಶಾಂತ್ ದಳ್ವಿ ಮತ್ತು ಭಜನ ತಂಡಕ್ಕೆ ಸಂಪೂರ್ಣವಾಗಿ ಸಹಕರಿಸುತ್ತಿರುವ ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್ ಮುಂಬಯಿ ಭಜನ ತಂಡದ ರೂವಾರಿಗಳಾದ ಕಿಶೋರ್ ಕರ್ಕೇರ, ಮಾಧವ ಮೊಗವೀರ ಅವರನ್ನು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಲಾಯಿತು. ದಿವ್ಯರಾಜ್ ಪುತ್ರನ್, ಧನರಾಜ್ ಕೋಟ್ಯಾನ್, ಸಂಜಯ್ ದಳ್ವಿ, ಜಯೇಶ್ ದಳ್ವಿ, ಯಶ್ಪಾಲ್, ಪೂಜಾ ಪುತ್ರನ್, ನಯನಾ ವಸ್ವಾಣಿ ಉಪಸ್ಥಿತರಿದ್ದರು. ಮಾರ್ಗದರ್ಶಕ ಪ್ರಶಾಂತ್ ದಳ್ವಿ ಅವರು ವಂದಿಸಿದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಾ. ತುಂಬೆ ಮೊಯ್ದೀನ್ ಅವರಿಗೆ ಪ್ರತಿಷ್ಠಿತ ಗ್ಲೋಬಲ್ ವಿಷನರಿ ಎನ್‌ಆರ್‌ಐ ಪ್ರಶಸ್ತಿ
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Jimmy Carter Life Journey: ಜಿಮ್ಮಿ ಕಾರ್ಟರ್- ಮಾನವೀಯತೆ, ಶಾಂತಿಯ ಶಿಲ್ಪಿ
ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ