ಐತಿಹಾಸಿಕ ದಿನಕ್ಕೆ ಕಾರಣಕರ್ತರಾದ ದಾನಿಗಳಿಗೆ ಋಣಿ: ಸಂತೋಷ್ ಶೆಟ್ಟಿ
Team Udayavani, Apr 10, 2018, 4:25 PM IST
ಪುಣೆ: ಪುಣೆಯಲ್ಲಿ ಬಂಟ ಸಮಾಜದ ಭವ್ಯವಾದ ಭವನವನ್ನು ಧರ್ಮಸ್ಥಳದ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಲೋಕಾ ರ್ಪಣೆಗೊಳಿಸಿರುವುದು ಪುಣೆ ಬಂಟರಿಗೆ ಹೆಮ್ಮೆಯ ದಿನವಾಗಿದೆ. ಭವನದ ಕಾರ್ಯದ ಜವಾಬ್ದಾರಿ ವಹಿಸಿಕೊಂಡ ದಿನದಿಂದ ಇಂದಿನವರೆಗೆ ವಿವಿಧ ರೀತಿಯ ಅಡೆತಡೆಗಳನ್ನು ನಿವಾರಿಸಿಕೊಂಡು ಸರ್ವ ರನ್ನೂ ಒಂದುಗೂಡಿಸಿಕೊಂಡು, ಸೌಜನ್ಯದ ನಡೆಯೊಂದಿಗೆ ವ್ಯವಹರಿಸಿ ಸುಂದರವಾದ ಈ ಸಮಾಜದ ದೇಗುಲವನ್ನು ರೂಪುಗೊಳಿಸಲಾಗಿದೆ. ಇಂದಿನ ಈ ದಿನ ಐತಿಹಾಸಿಕವಾಗಿದ್ದು, ಇದಕ್ಕೆ ಕಾರಣಕರ್ತರಾದ ಮುಂಬಯಿ, ಪುಣೆ ಸೇರಿದಂತೆ ಸಮಾಜದ ದಾನಿಗಳು, ಸಂಘದ ಮಾಜಿ ಅಧ್ಯಕ್ಷರು, ಸಂಘದ ಪದಾಧಿಕಾರಿಗಳು, ಎರಡು ಪ್ರಾದೇಶಿಕ ಸಮಿತಿಗಳೂ ಸೇರಿದಂತೆ ಪ್ರತಿಯೊಬ್ಬ ಸಮಾಜ ಬಾಂಧವರೂ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿ ಬೆಂಬಲಿಸಿದ್ದು ಅವರೆಲ್ಲರ ಹೃದಯ ವೈಶಾಲ್ಯತೆಗೆ ಚಿರಋಣಿಯಾಗಿದ್ದೇನೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್ ಬೆಟ್ಟು ಸಂತೋಷ್ ಶೆಟ್ಟಿ ಅವರು ನುಡಿದರು.
ಅವರು ಎ. 7ರಂದು ಪುಣೆ ಬಂಟರ ಭವನದ ಶ್ರೀಮತಿ ಲತಾ ಸುಧೀರ್ ಶೆಟ್ಟಿ ಸಭಾಗೃಹದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಭವನ ನಿರ್ಮಾಣಗೊಳ್ಳಬೇಕೆಂಬ ಏಕೈಕ ಉದ್ದೇಶ ಇತ್ತೇ ಹೊರತು ಇನ್ನಾವುದೇ ಸ್ವಾರ್ಥ ನನ್ನಲ್ಲಿರಲಿಲ್ಲ. ಸಮಾಜದ ಅಭಿವೃದ್ಧಿಗೆ ನಿಮ್ಮೆಲ್ಲರ ಪ್ರೀತಿ ಹೀಗೆಯೆ ಇರಲಿ ಎಂದು ನುಡಿದರು.
ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ತುಳುವಿನಲ್ಲಿ ಮಾತನಾಡಿ ಗಮನ ಸೆಳೆದರು.
ಜಾಗತಿಕ ಬಂಟರ ಸಂಘದ ಒಕ್ಕೂಟಗಳ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಇವರು ಮಾತನಾಡಿ, ಪುಣೆಯಲ್ಲಿ ನಮ್ಮವರ ಬಹುದಿನಗಳ ಕನಸಾದ ಈ ಭವ್ಯವಾದ ಭವನವನ್ನು ನಿರ್ಮಿಸಿ ಇತಿಹಾಸ ದಾಖಲುಗೊಳಿಸಿದ ಕೀರ್ತಿ ಸಂತೋಷ್ ಶೆಟ್ಟಿಯವರಿಗೆ ಸಲ್ಲುತ್ತದೆ. ಅದೇ ರೀತಿ ಹಿರಿಯರಾದ ಜಗನ್ನಾಥ ಶೆಟ್ಟಿ ಅವರ ಕೊಡುಗೆಯೂ ಕಾರಣವಾಗಿದೆ. ಬಹಳಷ್ಟು ವರ್ಷಗಳಿಂದ ಕಂಡುಬರುತ್ತಿರುವ ಅವರ ಕಾರ್ಯ ವೈಖರಿ, ಸಂಘದೊಂದಿಗಿನ ಅವರ ಬದ್ಧತೆ, ಸಮಾಜದ ಮೇಲಿನ ಆಸ್ಥೆ. ಸಾಧಿಸುವ ಛಲ ಅನನ್ಯವಾದುದು. ನಾಲ್ಕು ವರ್ಷಗಳಿಂದ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು ದೇಣಿಗೆ ಸಂಗ್ರಹಿಸುವ ಕೆಲಸ ಸುಲಭ ಸಾಧ್ಯವಲ್ಲ. ಇದು ಸಮಸ್ತ ಬಂಟ ಸಮಾಜಕ್ಕೆ ಹೆಮ್ಮೆಯ ಕ್ಷಣವಾಗಿದೆ. ಅವರ ಹೆಸರು ಚಿರಕಾಲ ಉಳಿಯುವಂತಾಗಲಿ ಎಂದರು.
ಚರಿಶ್ಮಾ ಬಿಲ್ಡರ್ಸ್‌ನ ಸಿಎಂಡಿ ಸುಧೀರ್ ಶೆಟ್ಟಿ ಇವರು ಮಾತನಾಡಿ, ಬಹಳ ಉತ್ತಮವಾದ ಭವನವನ್ನು ಇಷ್ಟು ಬೇಗ ನಿರ್ಮಿಸಬಹುದೆಂದು ಅನಿಸಿರಲಿಲ್ಲ. ಸಂತೋಷ್ ಶೆಟ್ಟಿಯವರ ಅದ್ಭುತ ಕಾರ್ಯಶೈಲಿಯಿಂದ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಸಮಾಜದ ಭವನವನ್ನು ಯೋಗ್ಯ ರೀತಿಯಿಂದ ಮುನ್ನಡೆಸುವ ಜವಾಬ್ದಾರಿ ಇರಲಿ ಎಂದರು.
ಎಂಆರ್‌ಜಿ ಗ್ರೂಪ್ ಆಫ್ ಹೊಟೇಲ್ಸ್ ಇದರ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಪುಣೆಯಲ್ಲಿ ಬಹಳ ಹಿಂದೆಯೇ ಸಮಾಜದ ಭವನ ನಿರ್ಮಾಣ ಆಗಬೇಕಿತ್ತು. ಆದರೆ ಎಲ್ಲದಕ್ಕೂ ಯೋಗಭಾಗ್ಯ ಬೇಕೆನ್ನುವ ಹಾಗೆ ಸಂತೋಷ್ ಶೆಟ್ಟಿ ಅವರ ನೇತೃತ್ವದಲ್ಲಿ ಸಮಾಜದ ಒಗ್ಗಟ್ಟಿನಿಂದ ಅಂದವಾದ ಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿರು ವುದು ಹೆಮ್ಮೆಯೆನಿಸುತ್ತದೆ. ದೇಶದಲ್ಲಿಯೇ ಎಲ್ಲ ಬಂಟರಿಗೆ ಮಾದರಿಯಾಗುವಂತೆ ಈ ಭವನವನ್ನು ನಿರ್ಮಿಸಿದ ಹೆಗ್ಗಳಿಕೆ ಈ ಭವನಕ್ಕಿದೆ.ಇಲ್ಲಿ ಬಂಟ ಸಮಾಜದ ಅಭ್ಯುದಯದ ಹರಿಕಾರ ಮೂಲ್ಕಿ ಸುಂದರರಾಮ ಶೆಟ್ಟಿಯವರ ಪುತ್ಥಳಿ ಅನಾವರಣಗೊಳಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ಸಂಘದ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿ ಓಣಿಮಜಲು, ಲತಾ ಸುಧೀರ್ ಶೆಟ್ಟಿ, ಐಶ್ವರ್ಯಾ ರೈಯವರ ತಾಯಿ ವೃಂದಾ ರೈ, ಪುಣೆಯ ಉಸ್ತುವಾರಿ ಸಚಿವ ಗಿರೀಶ್ ಬಾಪಟ್, ಸಚ್ಚಿದಾನಂದ ಶೆಟ್ಟಿ, ಪುಣೆ ಮಹಾ ನಗರಪಾಲಿಕೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸದಾನಂದ ಕೃಷ್ಣ ಶೆಟ್ಟಿ, ಶಾಸಕಿ ಮೇಧಾ ಕುಲಕರ್ಣಿ, ಚಿಂಚಾÌಡ್‌ನ ಶಾಸಕ ಲಕ್ಷ್ಮಣ್ ಪಿ. ಜಗತಾಪ್, ಸ್ಥಳೀಯ ನಗರಸೇವಕರಾದ ಸ್ವಪ್ನಾಲಿ ಪಿ. ಸಾಯ್ಕರ್, ಜ್ಯೋತಿ ಕಲಮ್ಕರ್, ಅಮೋಲ್ ಬಲವಾಡ್ಕರ್, ಬಾಬುರಾವ್ ಚೆಂಡೇರೆ, ನಗರ ಸೇವಕಿ ಸುಜಾತಾ ಎಸ್. ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ, ಮಾಧವ ಆರ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಗೌರವ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ ಶೆಟ್ಟಿ ಕಳತ್ತೂರು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವೀರೇಂದ್ರ ಹೆಗ್ಗಡೆಯವರು ಶಿವಾಜಿ ಮಹಾರಾಜರ ಪ್ರತಿಮೆ, ಸುಂದರರಾಮ್ ಶೆಟ್ಟಿ ಹಾಗೂ ಜಸ್ಟಿಸ್ ಕೆ. ಎಸ್ . ಹೆಗ್ಡೆ ಯವರ ಪ್ರತಿಮೆಗಳನ್ನು ಅನಾವರ ಣಗೊಳಿಸಿದರು. ಭವನದ ವಿವಿಧ ವಿಭಾಗಗಳ ಉದ್ಘಾಟನೆಗೈದ ದಾನಿಗಳನ್ನು, ಪ್ರಾಯೋಜಕರನ್ನು ಗೌರವಿಸಲಾಯಿತು. ಈ ಸಂದರ್ಭ ಭವನದ ನಿರ್ಮಾಣಕ್ಕೆ ವಿಶೇಷ ಕೊಡುಗೆ ನೀಡಿದ ಯಶೋದಾ ಜಿ. ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ, ಕುಶಲ್ ಹೆಗ್ಡೆ, ಜಯಂತ್ ಕೆ. ಶೆಟ್ಟಿ, ಸಿಎ ಸದಾನಂದ ಶೆಟ್ಟಿ, ಸೀತಾರಾಮ್ ಶೆಟ್ಟಿ, ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ , ವಿಂಡ್ಸರ್ ರಿಫ್ರಾಕ್ಟರೀಸ್ ಇದರ ಆಡಳಿತ ನಿರ್ದೇಶಕರಾದ ದಯಾಶಂಕರ್ ಶೆಟ್ಟಿ, ಪುಣೆ ಉದ್ಯಮಿ ಕರುಣಾಕರ ಎನ್. ಶೆಟ್ಟಿ, ಹೊಟೇಲ್ ಪಂಚರತ್ನ ಪುಣೆ ಇದರ ಸಿಎಂಡಿ ಶ್ರೀಧರ್ ಶೆಟ್ಟಿ, ರಾಮಕೃಷ್ಣ ಗ್ರೂಪ್ ಆಫ್ ಹೊಟೇಲ್ಸ್‌ನ ಸುಬ್ಬಯ್ಯ ಶೆಟ್ಟಿ ಹಾಗೂ ಮುಂಬಯಿಯ ಕಟ್ಟಡ ವಿನ್ಯಾಸಗಾರ ಭರತ್ ಶೆಟ್ಟಿ ಇವರುಗಳನ್ನು ಸಂಘದ ವತಿಯಿಂದ ವಿಶೇಷವಾಗಿ ಸಮ್ಮಾನಿಸಲಾಯಿತು.
ಸಂತೋಷ್ ಶೆಟ್ಟಿ ಅವರ ಪರಿಕಲ್ಪನೆಯಲ್ಲಿ ಸಮಾಜೋದ್ಧಾರದ ಕನಸಿನೊಂದಿಗೆ ಸಂಘದ ಜಗನ್ನಾಥ ಶೆಟ್ಟಿ ಕಲ್ಪವೃಕ್ಷ ಯೋಜನೆಯನ್ನು ಉದ್ಘಾಟಿಸಲಾಯಿತು. ಡಾ| ಬಾಲಾಜಿತ್ ಶೆಟ್ಟಿ ಅವರು ಕಲ್ಪವೃಕ್ಷ ಯೋಜನೆಯ ಪೂರ್ಣ ಮಾಹಿತಿಯನ್ನು, ರೂಪರೇಷೆಗಳನ್ನು ತಿಳಿಸಿದರು. ಸಂಘದ ಭವನ ನಿರ್ಮಾಣಕ್ಕೆ ವಿಶೇಷ ದೇಣಿಗೆ ಹಾಗೂ ಪ್ರೋತ್ಸಾಹ ನೀಡಿದ ಸಂಘದ ಗೌರವಾಧ್ಯಕ್ಷ ಜಗನ್ನಾಥ ಬಿ. ಶೆಟ್ಟಿ ಓಣಿಮಜಲು ಇವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಭವನದ ರೂವಾರಿ ಸಮಾಜಕ್ಕೆ ಭವನವನ್ನು ನಿರ್ಮಿಸಿ ವಿಶೇಷ ಸೇವೆ ಸಲ್ಲಿಸಿದ್ದ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಮತ್ತು ದಿವ್ಯಾ ಎಸ್. ಶೆಟ್ಟಿ ದಂಪತಿಯನ್ನು ಮಾಜಿ ಅಧ್ಯಕ್ಷರುಗಳು ಸಮ್ಮಾನಿಸಿದರು. ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಸ್ವಾಗತಿಸಿದರು. ಅಶೋಕ್ ಪಕ್ಕಳ ಮತ್ತು ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ವಂದಿಸಿದರು.
ಶುಚಿ ರುಚಿಯಾದ ತುಳುನಾಡ ಖಾದ್ಯ
ದೊಡ್ಡದಾಗಿ ನಿರ್ಮಿಸಿದ ಅನ್ನಛತ್ರದಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ನಿರಂತರವಾಗಿ ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಬಾಯಲ್ಲಿ ನೀರೂರಿಸುವ ಖಾದ್ಯಗಳೊಂದಿಗೆ ಮುಂಬಯಿಯ ರಾಘು ಶೆಟ್ಟಿಯವರ ಸಂತೋಷ್ ಕ್ಯಾಟರರ್ಸ್‌ನಿಂದ ಬಗೆಬಗೆಯ ವ್ಯಂಜನಗಳು ಸೇರಿದ್ದ ಸಾವಿರಾರು ಜನರನ್ನು ಮನತಣಿಸಿತು. ಬೆಳಗ್ಗಿನ ಉಪಾಹಾರಕ್ಕಾಗಿ ಆವಲಕ್ಕಿ, ಉಪ್ಪಿಟ್ಟು, ಅನಾನಾಸು ಶೀರ, ಕಡ್ಲೆ ಉಪ್ಪುಕರಿ, ಚಹಾ, ಕಾಫಿ, ಭೋಜನಕ್ಕೆ ತಟ್ಟೆ ಇಡ್ಲಿ, ಕುಚ್ಚಲಕ್ಕಿ ಅನ್ನ, ಸಾರು, ಸಾಂಬಾರು, ಪಾಯಸ, ಕಡ್ಲೆ -ಮನೋಳಿ ಸುಕ್ಕ, ಹುರುಳಿ ಚಟ್ನಿ, ಸಂಜೆ ಮರುವಾಯಿ ಸುಕ್ಕ, ಬಸಳೆ, ಕೋಳಿ ರೊಟ್ಟಿ, ಮಟನ್ ಗಸಿ, ಬಂಗುಡೆ ಗಸಿ ಇತ್ಯಾದಿ ಬಗೆಬಗೆಯ ತಿನಿಸುಗಳು ಗಮನಸೆಳೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ
ಬಂಟರ ಸಂಘ ಮುಂಬಯಿ ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಂಟರ ಸಂಘ ಪುಣೆ, ಬಂಟರ ಸಂಘ ಪಿಂಪ್ರಿ-ಚಿಂಚಾÌಡ್, ಬಂಟ್ಸ್ ಅಸೋಸಿಯೇಶನ್ ಪುಣೆ ಸಾಂಸ್ಕೃತಿಕ ಸಮಿತಿಗಳ ನೇತೃತ್ವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ಸೇರಿದ್ದ ಸಾವಿರಾರು ಜನರಿಗೆ ಅದ್ಭುತ ಮನೋರಂಜನೆಯನ್ನು ನೀಡಿತು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತುಳುನಾಡ ಖ್ಯಾತ ನಿರೂಪಕ ಸಾಹಿಲ್ ರೈ ಅಚ್ಚುಕಟ್ಟಾಗಿ ನಡೆಸಿಕೊಟ್ಟು ಕಲಾರಸಿಕರ ಮನಗೆದ್ದರು.
ಪುಣೆಯಲ್ಲಿ ಬಂಟರ ಭವನ ನಿರ್ಮಿಸಿ ಸಾಧನೆ ಮಾಡಿದ ಪುಣೆ ಬಂಟರಿಗೆ ಮತ್ತು ಅಧ್ಯಕ್ಷ ಸಂತೋಷ್ ಶೆಟ್ಟಿಯವರಿಗೆ ಅಭಿನಂದನೆಗಳು. ಸಂಘದ ಬೆಳವಣಿಗೆಯಲ್ಲಿ ಜಗನ್ನಾಥ ಶೆಟ್ಟಿ ಹಾಗೂ ದಿ| ಶಕುಂತಳಾ ಜೆ. ಶೆಟ್ಟಿಯವರ ಕೊಡುಗೆ ಸ್ಮರಣೀಯವಾಗಿದೆ
ಡಾ| ವಿನಯ್ ಹೆಗ್ಡೆ (ಕುಲಪತಿಗಳು : ನಿಟ್ಟೆ ವಿಶ್ವವಿದ್ಯಾಲಯ ಕಾರ್ಕಳ).
ಪೂರ್ವಜನ್ಮದ ಪುಣ್ಯದ ಫಲದಿಂದ ನಾವು ಬಂಟ ಸಮಾಜದಲ್ಲಿ ಜನಿಸಿದ್ದೇವೆ. ನಮ್ಮೊಳಗಿನ ಧಾರ್ಮಿಕ ಪ್ರಜ್ಞೆ, ಸಾಮರಸ್ಯದ ಬದುಕು, ಸಂಘಟನಾತ್ಮಕ ಗುಣ ಮಾದರಿಯಾಗಿದೆ. ಅದೇ ರೀತಿಯಲ್ಲಿ ದೇವರು ಮೆಚ್ಚುವ ಕಾರ್ಯವನ್ನು ಪುಣೆಯಲ್ಲಿ ಸಮಾಜದ ಭವನವನ್ನು ನಿರ್ಮಿಸಿ ಸಂತೋಷ್ ಶೆಟ್ಟಿಯವರು ಮಾಡಿ¨ªಾರೆ. ಅವರ ಕಾರ್ಯಕ್ಕೆ ಅಭಿನಂದನೆಗಳು
ಡಾ| ಎಂ. ಮೋಹನ್ ಆಳ್ವ (ಕಾರ್ಯಾಧ್ಯಕ್ಷರು : ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಮೂಡಬಿದಿರೆ).
ಪುಣೆಯಲ್ಲಿ ಬಂಟ ಸಮಾಜದ ಭವನ ಉದ್ಘಾಟನೆಗೊಂಡ ಈ ದಿನ ಸ್ಮರಣೀಯವಾಗಿದೆ. ಈ ಭವನಕ್ಕಾಗಿ ಶ್ರಮಿಸಿದ ಸಂಘದ ಪದಾಧಿಕಾರಿಗಳು ಅಭಿನಂದನಾರ್ಹರು. ಮುಂದೆ ಸಂಘದ ಮೂಲಕ ಉತ್ತಮ ಸಮಾಜಸೇವೆ ನಡೆಯಲಿ
ಕೆ. ಎಂ. ಶೆಟ್ಟಿ (ಸಿಎಂಡಿ : ವಿಕೆ ಗ್ರೂಪ್ ಆಫ್ ಕಂಪೆನೀಸ್).
ಪುಣೆಯಲ್ಲಿ ಸಂತೋಷ್ ಶೆಟ್ಟಿ ಅವರ ನೇತೃತ್ವದಲ್ಲಿ ಶ್ಲಾಘನೀಯ ಕಾರ್ಯವನ್ನು ಮಾಡಿದ್ದೀರಿ. ಭವಿಷ್ಯದಲ್ಲಿ ಸಂಘದ ಮೂಲಕ ಸಮಾಜಸೇವೆ ನಿರಂತರವಾಗಿ ನಡೆಯುತ್ತಿರಲಿ
ಉದಯ ಶೆಟ್ಟಿ ಮುನಿಯಾಲ್
(ಅಧ್ಯಕ್ಷರು : ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಮುನಿಯಾಲ್).
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.