ಖಾಸಗಿ ಸಂಸ್ಥೆಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಆದೇಶ
Team Udayavani, May 21, 2021, 12:52 PM IST
ಮುಂಬಯಿ: ಗ್ರೇಟರ್ ಮುಂಬಯಿ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿರುವ ಖಾಸಗಿ ಸಂಸ್ಥೆಗಳಲ್ಲಿ ಸಿಸಿ ಕೆಮರಾಗಳ ಅಳ ವಡಿಕೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದ್ದು, ಈ ಆದೇಶವನ್ನು ತತ್‌ಕ್ಷಣ ಜಾರಿಗೆ ತರುವಂತೆ ಪೊಲೀಸ್ ಉಪ ಆಯುಕ್ತ ಮತ್ತು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಎಸ್. ಚೈತನ್ಯ ತಿಳಿಸಿದ್ದಾರೆ.
ಬ್ಯಾಂಕ್, ಎಟಿಎಂ, ಹಣಕಾಸು ಸಂಸ್ಥೆ, ಆಭರಣ ಮಳಿಗೆ, ಹೊಟೇಲ್, ಗೆಸ್ಟ್ ಹೌಸ್, ರೆಸ್ಟೋರೆಂಟ್, ಬಾರ್, ಪಬ್, ವೈನ್ ಮತ್ತು ಬಿಯರ್ ಶಾಪ್, ವಸತಿ ಸಂಕೀರ್ಣ, ಕಚೇರಿ ಕಟ್ಟಡ, ಹೊಸ ಮತ್ತು ನಿರ್ಮಾಣ ಹಂತದಲ್ಲಿರುವ ವಸತಿ ಸಂಕೀರ್ಣ / ಕಚೇರಿ, ಪೆಟೊ›àಲ್ ಪಂಪ್, ಶಾಪಿಂಗ್ ಮಾಲ್, ಶಾಪಿಂಗ್ ಸಂಕೀರ್ಣ, ಸೂಪರ್‌ಮಾರ್ಕೆಟ್, ಜಿಮ್, ಆಟದ ಮೈದಾನ, ಚಿತ್ರ ಮಂದಿರ ಮತ್ತು ಸಂಕೀರ್ಣಗಳು, ಶೈಕ್ಷಣಿಕ ಸಂಕೀರ್ಣಗಳು, ಧಾರ್ಮಿಕ ಸ್ಥಳಗಳು, ಔಷಧಾಲಯಗಳು, ಪ್ರತಿಮೆಗಳ ರಕ್ಷಣೆ ಮತ್ತು ನಿರ್ವಹಣೆಗಾಗಿ ನೇಮಕಗೊಂಡ ಸಂಸ್ಥೆಗಳು ಇತ್ಯಾದಿ ಗಳಲ್ಲಿ ಸಿಸಿ ಕೆಮರಾ ಕಡ್ಡಾಯವಾಗಿದೆ.
ಈ ಖಾಸಗಿ ಸಂಸ್ಥೆಗಳು 50 ಮೀ. ವ್ಯಾಪ್ತಿವರೆಗೆ ಚಿತ್ರೀಕರಿಸುವ ಕೆಮರಾಗಳನ್ನು ಸ್ಥಾಪಿಸಬೇಕು. ಉತ್ತಮ ಗುಣಮಟ್ಟದ್ದಾಗಿರಬೇಕು ಮತ್ತು ರೆಕಾರ್ಡಿಂಗ್ ಕನಿಷ್ಠ 15 ದಿನಗಳವರೆಗೆ ಇರಬೇಕು. ಪೊಲೀಸರು ಕೇಳಿದಾಗ ರೆಕಾರ್ಡಿಂಗ್ ಅನ್ನು ಪೊಲೀಸರಿಗೆ ನೀಡಬೇಕು. ಶಂಕಿತರು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.