ಬಂಟ ಸಮಾಜವನ್ನು ಒಗ್ಗೂಡಿಸುವುದು ನಮ್ಮ ಧ್ಯೇಯ:ವಿಶ್ವಸಂತೋಷ ಶ್ರೀ
Team Udayavani, Apr 4, 2017, 4:51 PM IST
ಪುಣೆ: ವಿಶ್ವಾದ್ಯಂತ ಸುಮಾರು 23 ಲಕ್ಷ ದಷ್ಟು ಜನಸಂಖ್ಯೆ ಹೊಂದಿರುವ ಬಂಟ ಸಮಾಜ ಬಾಂಧವರನ್ನು ತಮ್ಮ ಮೂಲ ಇತಿಹಾಸವನ್ನು ಪರಿಚಯಿಸಿ, ಮೂಢನಂಬಿಕೆಗಳನ್ನು ಬದಿಗಿಟ್ಟು ಮೂಲ ನಂಬಿಕೆಗಳನ್ನು ಪೋಷಿಸುವ ಬಗ್ಗೆ ಆಧ್ಯಾತ್ಮಿಕ ಜಾಗೃತಿಯನ್ನು ನೀಡಿ ಸಾಂಸ್ಕೃತಿಕವಾಗಿ ಭಾÅತೃತ್ವದೊಂದಿಗೆ ಒಗ್ಗಟ್ಟಾಗಿಸಿ ಬಲಿಷ್ಠ ಸಮಾಜ ನಿರ್ಮಾಣದ ಮೂಲ ಉದ್ದೇಶವೇ ಬಾಕೂìರು ಮಹಾಸಂಸ್ಥಾನದ ಉದ್ದೇಶ ಎಂದು ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಪರಮಪೂಜ್ಯ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರು ನುಡಿದರು.
ಪುಣೆ ಕನ್ನಡ ಸಂಘದ ಶಕುಂತಲಾ ಜಗನ್ನಾಥ ಶೆಟ್ಟಿ ಸಭಾ ಭವನದಲ್ಲಿ ನಡೆದ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಪುಣೆ -ಮುಂಬಯಿ ಗಾನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಎಷ್ಟೇ ಕಷ್ಟದ ಜೀವನ ನಡೆಸಿದರೂ ಸ್ವಾಭಿಮಾನದ ಬದುಕನ್ನು ಹೊಂದಿರುವ ಬಂಟ ಸಮುದಾಯ ಇಂದು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಕೊಂಡು ಪ್ರಗತಿ ಯನ್ನು ಕಂಡಿದ್ದರೂ ಕೂಡ ಬಹಳಷ್ಟು ಜನರು ಬಡತನದ ಬೇಗೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಅಂಥಹ ಜನರಿಗೆ ವಿದ್ಯಾಭಾರತಿ ಹಾಗೂ ಆರೋಗ್ಯ ಭಾರತಿ ಎಂಬ ಪರಿಕಲ್ಪನೆಯೊಂದಿಗೆ ಶಿಕ್ಷಣ ಹಾಗೂ ಆರೋಗ್ಯದ ಸೇವೆಯನ್ನು ದೊರಕಿಸುವಲ್ಲಿ ಬಾಕೂìರು ಮಹಾಸಂಸ್ಥಾನ ಯೋಜನೆಗಳನ್ನು ಹಾಕಿಕೊಂಡು ಕಾರ್ಯ ಪ್ರವೃತ್ತವಾಗಿದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಬಾಕೂìರು ಸಂಸ್ಥಾನ ಬಂಟರಿಗೆ ಯಾವ ರೀತಿಯಲ್ಲಿ ಮೂಲ ಎಂಬುದನ್ನು ಎಲ್ಲರೂ ಅರಿತುಕೊಳ್ಳುವ ಆವಶ್ಯಕತೆಯಿದೆ. ಮೂರು ವರ್ಷಗಳ ಕಾಲ ಬಾಕೂìರು ಮಹಾಸಂಸ್ಥಾನದ ಬಗ್ಗೆ ಸತತ ಅಧ್ಯಯನ ಮಾಡಿ ಇತಿಹಾಸದ ಸತ್ಯಾಂಶಗಳನ್ನು ಅರಿತುಕೊಂಡು ಅಳಿಯಕಟ್ಟು ಪರಂಪರೆಯನ್ನು ಹೊಂದಿದ ಬಂಟ ಕುಲದ ಉದ್ಧಾರಕ್ಕಾಗಿ ಸಂಸ್ಥಾನವನ್ನು ಪುನರ್ ನಿರ್ಮಾಣಗೊಳಿಸುವ ಕಾರ್ಯವನ್ನು ಕೈಗೆತ್ತಿ ಕೊಂಡಿದ್ದು, ಸಮುದಾಯದ ಹಿತವೇ ಹೊರತು ಇದರಲ್ಲಿ ಯಾವುದೇ ಸ್ವಾರ್ಥ ಹಿತಾಸಕ್ತಿಯಿಲ್ಲದೆ ಕೇವಲ ಮಾರ್ಗದರ್ಶಕರಾಗಿದ್ದುಕೊಂಡು ಬಂಟ ಸಮಾಜದ ಅಗ್ರಗಣ್ಯ ದಾನಿಗಳ ನೆರವಿನೊಂದಿಗೆ ಕಾರ್ಯ ಪ್ರವೃತ್ತರಾಗಿದ್ದೇವೆ. ಬರುವ ಎಪ್ರಿಲ್ 19 ರಿಂದ 21 ರ ವರೆಗೆ ಬಾಕೂìರು ಸಂಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪರಮಪವಿತ್ರ ನಾಗಮಂಡಲ ಸೇವೆ, ಅಂತೆಯೇ 36 ಮೂಲ ನಾಗದೇವರ ವಿಗ್ರಹ ಮತ್ತು ಮೂಲದೈವಗಳ ಪ್ರತಿಷ್ಠಾಪನಾ ಕಾರ್ಯ ನಡೆಯಲಿದ್ದು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪುಣೆಯ ಎಲ್ಲ ಸಮಾಜ ಬಾಂಧವರು ಭಾಗವಹಿಸಿ ಸಹಕಾರ ನೀಡಬೇಕು. ಅದೇ ರೀತಿ ಪುಣೆಯಲ್ಲಿ ಸಂತೋಷ್ ಶೆಟ್ಟಿ ಅವರ ದಕ್ಷ ನೇತೃತ್ವದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಗೊಂಡಿರುವುದು ಸಮುದಾಯಕ್ಕೆ ಹೆಮ್ಮೆ ತರುವ ವಿಚಾರವಾಗಿದೆ ಎಂದರು.
ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಇದರ ಅಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ ಅವರು ಮಾತ ನಾಡಿ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಇಂದು ಪುಣೆ, ಪಿಂಪ್ರಿ-ಚಿಂಚಾÌಡ್ ಪರಿಸರದಲ್ಲೂ ಇಲ್ಲಿನ ಬಂಟರ ಮೂಲಕ ಅಸ್ತಿತ್ವ ಪಡೆದಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಅಪಾರ ಜ್ಞಾನ ಭಂಡಾರದ ಗಣಿಯಾಗಿರುವ ಪೂಜ್ಯ ಶ್ರೀಪಾದರ ಮೂಲಕ ಜನರಿಗೆ ಆಧ್ಯಾತ್ಮಿಕ ಜ್ಞಾನದ ಬೆಳಕನ್ನು ನೀಡಿ ನಮ್ಮ ಆರಾಧನಾ ಪದ್ಧತಿ, ಮೂಲ ನಂಬಿಕೆಗಳ ತಿಳಿವಳಿಕೆಯನ್ನು ನೀಡಿ ಆರೋಗ್ಯ ಸಮಾಜದ ನಿರ್ಮಾಣವೇ ವೇದಿಕೆಯ ಉದ್ದೇಶವಾಗಿದೆ. ಪರಸ್ಪರ ಪ್ರೀತಿ, ಶಾಂತಿ, ಸ್ನೇಹದ ಭಾವವೇ ಆಧ್ಯಾತ್ಮಿಕ ಸ್ವರೂಪವಾಗಿದೆ. ಸಮು ದಾಯದ ಒಗ್ಗಟ್ಟಿಗೆ ಶ್ರಮಿಸುತ್ತಿರುವ ಪೂಜ್ಯ ಶ್ರೀಪಾದರ ಕಾರ್ಯಕ್ಕೆ ಸಹಕರಿಸಿ ಸಂಸ್ಥಾನದಲ್ಲಿ ನಡೆಯುವ ಧಾರ್ಮಿಕ ಪವಿತ್ರ ಕಾರ್ಯದಲ್ಲಿ ಸಹಭಾಗಿಗಳಾಗೋಣ ಎಂದರು.
ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ಫೆàರ್ ಅಸೋಸಿಯೇಶನ್ ಅಧ್ಯಕ್ಷ ಕಟ್ಟಿಂಗೇರಿಮನೆ ಸುಭಾಶ್ಚಂದ್ರ ಹೆಗ್ಡೆ ಮಾತನಾಡಿ, ನಾವು ಬಂಟರ ಏಕತೆಗಾಗಿ, ಸಂಸ್ಕೃತಿಯ ಉಳಿವಿಗಾಗಿ, ಸಮಾಜಕ್ಕೆ ಆರೋಗ್ಯ, ಶಿಕ್ಷಣದ ಸೇವೆಯನ್ನು ನೀಡುವ ಸಲುವಾಗಿ, ನಮ್ಮ ನಂಬಿಕೆಗಳ ಪೋಷಣೆಗಾಗಿ ಪಾರದರ್ಶಕವಾಗಿ ಬಾಕೂìರು ಮಹಾಸಂಸ್ಥಾನ ಕಾರ್ಯನಿರ್ವಹಿಸಲಿದೆ. ಈ ಕಾರ್ಯಕ್ಕೆ ನಾವೆಲ್ಲ ಸಹಕಾರ ನೀಡಬೇಕಾಗಿದೆ ಎಂದರು.
ವೇದಿಕೆಯಲ್ಲಿ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿಯ ಗೌರವಾಧ್ಯಕ್ಷ ಸಿಎ ಶಂಕರ ಶೆಟ್ಟಿ, ಪಿಂಪ್ರಿ ಚಿಂಚಾÌಡ್ ಬಂಟರ ಸಂಘದ ಮಾಜಿ ಅಧ್ಯಕ್ಷ ಎರ್ಮಾಳ್ ಸೀತಾರಾಮ ಶೆಟ್ಟಿ, ಪುಣೆ ಬಂಟರ ಸಂಘದ ಗೌರವ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಕರುಣಾಕರ ಶೆಟ್ಟಿ, ಪಿಂಪ್ರಿ-ಚಿಂಚಾÌಡ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ಬಂಟ್ಸ್ ಅಸೋಸಿಯೇಶನ್ ಪುಣೆ ಮಾಜಿ ಅಧ್ಯಕ್ಷ ಜಯ ಶೆಟ್ಟಿ ಮಿಯ್ನಾರು, ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ರೈ ಮೇಗಿನಗುತ್ತು ಉಪಸ್ಥಿತರಿದ್ದರು.
ವಿಕೇಶ್ ರೈ ಶೇಣಿ, ಮದಂಗಲ್ಲು ಆನಂದ ಭಟ್, ಸುಕೇಶ್ ಶೆಟ್ಟಿ ಎಣ್ಣೆಹೊಳೆ ಯಕ್ಷಗಾನದ ಗಣಪತಿ ಸ್ತುತಿಯನ್ನು ಮಾಡಿದರು. ಡಾ| ಸಂತೋಷ ಭಾರತಿ ಶ್ರೀಪಾದರನ್ನು ಹಾರಾರ್ಪಣೆಯ ಮೂಲಕ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಅತಿಥಿಗಳನ್ನು ಪುಷ್ಪಗುತ್ಛ ನೀಡಿ ಗೌರವಿಸಲಾಯಿತು. ಸಂಗೀತ ಕಾರ್ಯಕ್ರಮ ನೀಡಿದ ನಂದಿನಿ ರಾವ್ ಗುಜರ್ ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರನ್ನು ಸತ್ಕರಿಸಲಾಯಿತು.
ಪುಣೆ ಬಂಟರ ಸಂಘದ ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ ಸ್ವಾಗತಿಸಿದರು. ಸಂತೋಷ್ ಶೆಟ್ಟಿ ವಂದಿಸಿದರು. ಚಂದ್ರಶೇಖರ ಶೆಟ್ಟಿ ನಿಟ್ಟೆ, ವಿವೇಕಾನಂದ ಶೆಟ್ಟಿ ಆವರ್ಸೆ, ಗಣೇಶ್ ಪೂಂಜಾ, ಶ್ರೀಧರ ಶೆಟ್ಟಿ ಕಲ್ಲಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅರುಂಧತಿ ಪಟವರ್ಧನ್ ಬಳಗದಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತ ವಿದುಷಿ ಶ್ರೀಮತಿ ನಂದಿನಿ ರಾವ್ ಗುಜರ್ ಅವರಿಂದ ಸುಶ್ರಾವ್ಯ ಪುರಂದರದಾಸರ ಕೀರ್ತನೆಗಳ ಗಾಯನ ಹಾಗೂ ಬಾಕೂìರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ್ ಭಾರತಿ ಶ್ರೀಪಾದರಿಂದ ದಾಸಕೀರ್ತನೆಗಳ ವೈಚಾರಿಕ ವಿಶ್ಲೇಷಣೆ ನಡೆಯಿತು.
ಜ್ಞಾನಭಾರತಿ ವೇದಿಕೆಯ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದ್ದು ಪೂಜ್ಯ ಸಂತೋಷ ಭಾರತಿ ಶ್ರೀಪಾದರು ಪುಣೆ ಬಂಟರ ಭವನದ ಹಿಂದಿರುವ ಪ್ರೇರಕ ಶಕ್ತಿಯಾಗಿದ್ದಾರೆ. ಯಾವುದೇ ಸ್ವಾರ್ಥವಿರಿಸದೆ ಸಮಾಜದ ಅಭ್ಯು ದಯದ ಚಿಂತನೆ ನಡೆಸಿ ಬಾರ್ಕೂರು ಸಂಸ್ಥಾನ ಕಟ್ಟುವ ಅವರ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡಬೇಕಾಗಿದೆ
– ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು (ಅಧ್ಯಕ್ಷರು : ಪುಣೆ ಬಂಟರ ಸಂಘ).
ನಾವೆಲ್ಲರೂ ನಮ್ಮಲ್ಲಿನ ಅಹಂ ಬದಿಗಿಟ್ಟು ಪೂಜ್ಯ ಶ್ರೀಪಾದರ ಸಮಾಜ ಕಲ್ಯಾಣದ ಸಂಕಲ್ಪಕ್ಕೆ ಕೈಜೋಡಿಸಬೇಕಾಗಿದೆ. ಎಪ್ರಿಲನಲ್ಲಿ ನಡೆಯಲಿರುವ ಸಮಾರಂಭಕ್ಕೆ ಪ್ರತಿಯೋರ್ವ ಬಂಟರೂ ಉಪಸ್ಥಿತರಿರಬೇಕು
– ವಿಟಲ್ ಹೆಗ್ಡೆ (ವಿಶ್ವಸ್ತರು : ಬಾರ್ಕೂರು ಮಹಾಸಂಸ್ಥಾನ).
ನಾವು ಸದ್ಗುಣವಂತ, ಮುಂದುವರಿದ ಸಮಾಜವಾದರೂ ಗುರುವಿಲ್ಲದ ಸಮಾಜ ವಾಗಿದ್ದು ಇದೀಗ ಗುರುಗಳ ಭಾಗ್ಯ ಒದಗಿರು ವುದು ನಮ್ಮ ಪುಣ್ಯ. ಮಾತ್ರವಲ್ಲ ನಮ್ಮದೇ ಬಾಕೂìರು ಸಂಸ್ಥಾನದ ಏಳಿಗೆಗೆ ಸಹಕಾರ ನೀಡಬೇಕಾಗಿದೆ
– ಕುಶಲ್ ಹೆಗ್ಡೆ
(ಅಧ್ಯಕ್ಷರು : ಪುಣೆ ಕನ್ನಡ ಸಂಘ).
ಬಾಕೂìರು ಸಂಸ್ಥಾನ ಪೂಜ್ಯ ಶ್ರೀಪಾದರ ನೇತೃತ್ವದಲ್ಲಿ ಬಂಟ ಸಮಾಜದ ಪ್ರಗತಿಗೆ, ಒಗ್ಗಟ್ಟಿಗೆ ವೇದಿಕೆಯಾಗಿದ್ದು ಬಲಿಷ್ಠ ಸಮುದಾಯದ ಮೂಲಕ ಭವಿಷ್ಯದ ಪೀಳಿಗೆಗೆ ಕೊಡುಗೆ ನೀಡುವ ಕಾರ್ಯವಾಗಿದೆ
– ಕರುಣಾಕರ ಶೆಟ್ಟಿ (ಮಹಾಪೋಷಕರು : ಬಾರ್ಕೂರು ಮಹಾಸಂಸ್ಥಾನ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.