ಪದ್ಮಕಲಾ ಭವನ, ಮಂಜುನಾಥ ಸಭಾಗೃಹ ಲೋಕಾರ್ಪಣೆ
ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ
Team Udayavani, Mar 26, 2019, 9:07 PM IST
ಮುಂಬಯಿ: ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಇದರ ಪದ್ಮಕಲಾ ಭವನ ಮತ್ತು ಮಂಜುನಾಥ ಸಭಾಗೃಹದ ಉದ್ಘಾಟನಾ ಸಮಾರಂಭವು ಮಾ. 24ರಂದು ಅಪರಾಹ್ನ ಥಾಣೆ ಪಶ್ಚಿಮದ ಗೋಡ್‌ಬಂದರ್, ವಾಗಿºಲ್ ರೋಡ್, ಕಾಸ್‌ಮೋಸ್ ರಿಜೆನ್ಸಿಯಲ್ಲಿ ನಡೆಯಿತು.
ಪದ್ಮಕಲಾ ಭವನವನ್ನು ವಿದ್ಯಾವಿಹಾರ್ ಶ್ರೀ ಅಂಬಿಕಾ ಮಂದಿರದ ವೇದಮೂರ್ತಿ ಪೆರ್ಣಂಕಿಲ ಹರಿದಾಸ ಭಟ್ ಅವರು ರಿಬ್ಬನ್ ಬಿಡಿಸಿ ಲೋಕಾರ್ಪ ಣೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಹರ್ಷ ಫೌಂಡೇಶನ್ ಟ್ರಸ್ಟಿನ ಕೃಷ್ಣಾನಂದ ಎಂ. ಶೆಟ್ಟಿಗಾರ್ ಅವರು ವಹಿಸಿ ಮಂಜುನಾಥ ಸಭಾಗೃಹವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ದೇವಾಡಿಗ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಹಾಗೂ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭಾಗೃಹದ ದೇವರ ಕೋಣೆಯನ್ನು, ಬಿ. ರಾಮಚಂದ್ರ ಶೆಟ್ಟಿಗಾರ್, ಪದ್ಮನಾಭ ಅನ್ನಛತ್ರವನ್ನು ಸುಂದರಿ ಶೆಟ್ಟಿಗಾರ್, ಶಿವಾನಂದ ಆರ್. ಶೆಟ್ಟಿಗಾರ್, ವರಕಕ್ಷವನ್ನು ಘನ್‌ಶ್ಯಾಮ್ ಕೆ. ಶೆಟ್ಟಿಗಾರ್, ವಧು ಕಕ್ಷವನ್ನು ಮೋಹಿನಿ ಶೆಟ್ಟಿಗಾರ್, ಭರತೇಶ್ ಶೆಟ್ಟಿಗಾರ್, ಕಾರ್ಯಾಲಯವನ್ನು ಯೋಗಿನಿ ಬಿ. ಶೆಟ್ಟಿಗಾರ್, ಪಾಕಶಾಲೆಯನ್ನು ಪ್ರಾಣ್ ಡಿ. ಕೊಂಚಾಡಿ ಮೊದಲಾದವರು ಪದ್ಮಶಾಲಿ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ಉತ್ತಮ್ ಶೆಟ್ಟಿಗಾರ್ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.
ಬೆಳಗ್ಗೆ 8ರಿಂದ ಪುರೋಹಿತ ವಾಸುದೇವ ಮೈಲಾಯ ಅವರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು. ಕೃಷ್ಣಾನಂದ ಶೆಟ್ಟಿಗಾರ್ ಮತ್ತು ಕಾಂತಿ ಶೆಟ್ಟಿಗಾರ್ ದಂಪತಿ ಪೂಜಾವ್ರತಕೈಗೊಂಡಿದ್ದರು. ಮಹಾಪೂಜೆಯ ಬಳಿಕ ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 1 ರಿಂದ ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು.
ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉದ್ಘಾಟನಾ ಸಮಾರಂ ಭದಲ್ಲಿ ಪಾಲ್ಗೊಂಡಿದ್ದರು. ಪದ್ಮಶಾಲಿ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ಉತ್ತಮ್ ಶೆಟ್ಟಿಗಾರ್, ಉಪಾಧ್ಯಕ್ಷ ಕಿಶೋರ್ ಎಸ್. ಶೆಟ್ಟಿಗಾರ್, ಗೌರವ ಕಾರ್ಯದರ್ಶಿ ಲೀಲಾಧರ ಬಿ. ಶೆಟ್ಟಿಗಾರ್, ಗೌರವ ಕೋಶಾಧಿಕಾರಿ ನವೀನ್ ಎಂ. ಶೆಟ್ಟಿಗಾರ್, ಜತೆ ಕಾರ್ಯದರ್ಶಿ ನರೇಂದ್ರ ಕುಮಾರ್ ಕಬ್ಬಿನಾಲೆ, ಜತೆ ಕೋಶಾಧಿಕಾರಿ ಗಿರಿಧರ ಎಸ್. ಶೆಟ್ಟಿಗಾರ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ವೈ. ಚಂದ್ರಶೇಖರ ಜಿ. ಶೆಟ್ಟಿಗಾರ್, ದಯಾನಂದ ಡಿ. ಶೆಟ್ಟಿಗಾರ್, ಕೃಷ್ಣಾನಂದ ಎಂ. ಶೆಟ್ಟಿಗಾರ್, ಕೇಶವ ವಿ. ಶೆಟ್ಟಿಗಾರ್, ಭೋಜ ಸಿ. ಶೆಟ್ಟಿಗಾರ್, ಮಾಧವ ಐ. ಶೆಟ್ಟಿಗಾರ್, ಸುಧಾಕರ ವಿ. ಪದ್ಮಶಾಲಿ, ಜಗನ್ನಾಥ ಟಿ. ಶೆಟ್ಟಿಗಾರ್, ಎಸ್. ಚಂದ್ರಕಾಂತ್ ಶೆಟ್ಟಿಗಾರ್, ಉಮಾ ಜಿ. ಶೆಟ್ಟಿಗಾರ್, ಮಧುಮತಿ ಬಿ. ಶೆಟ್ಟಿಗಾರ್, ಮದುಸೂಧನ್ ಡಿ. ಶೆಟ್ಟಿಗಾರ್, ಮನೋಜ್ ಎಂ. ಶೆಟ್ಟಿಗಾರ್, ಮೋಹಿನಿ ಪಿ. ಶೆಟ್ಟಿಗಾರ್, ಸಲಹೆಗಾರರಾದ ಕೆ. ಪದ್ಮಶಾಲಿ, ಗಂಗಾಧರ ವಿ. ಶೆಟ್ಟಿಗಾರ್, ಬಾಲಕೃಷ್ಣ ಎಂ. ಶೆಟ್ಟಿಗಾರ್ ಅವರು ಉಪಸ್ಥಿತರಿದ್ದರು.
ಪದ್ಮಶಾಲಿ ಎಜುಕೇಶನ್ ಸೊಸೈಟಿಯ ಕಾರ್ಯಾಧ್ಯಕ್ಷ ಪಿ. ರಾಮಚಂದ್ರ ಶೆಟ್ಟಿಗಾರ್, ಕಾರ್ಯದರ್ಶಿ ರಮೇಶ್ ಪಿ. ಶೆಟ್ಟಿಗಾರ್, ಗೌರವ ಕೋಶಾಧಿಕಾರಿ ಲಕ್ಷ್ಮೀನಾರಾಯಣ ಎಸ್. ಶೆಟ್ಟಿಗಾರ್, ಸದಸ್ಯರುಗಳಾದ ಎಸ್. ವಿ. ಗೋಪಾಲಕೃಷ್ಣ, ಸಲಹೆಗಾ ರರಾದ ಶಿವಾನಂದ ಆರ್. ಶೆಟ್ಟಿಗಾರ್, ಪದ್ಮಶಾಲಿ ಮಹಿಳಾ ವಿಭಾಗದ ಪ್ರಮುಖರಾದ ಸರೋಜಿನಿ ಎಚ್. ಶೆಟ್ಟಿಗಾರ್, ಕಾರ್ಯದರ್ಶಿ ಉಷಾ ಎನ್. ಶೆಟ್ಟಿಗಾರ್, ಜತೆ ಕಾರ್ಯದರ್ಶಿ ದಮಯಂತಿ ಡಿ. ಪದ್ಮಶಾಲಿ, ಸದಸ್ಯರುಗಳಾದ ಮಧುಮತಿ ಬಿ. ಶೆಟ್ಟಿಗಾರ್, ಉಮಾ ಜಿ. ಶೆಟ್ಟಿಗಾರ್, ಯಶೋಧಾ ಎಚ್. ಶೆಟ್ಟಿಗಾರ್, ಮೋಹಿನಿ ಪಿ. ಶೆಟ್ಟಿಗಾರ್, ಜಯಶ್ರೀ ಕೆ. ಪದ್ಮಶಾಲಿ, ತಾರಾ ಯು. ಶೆಟ್ಟಿಗಾರ್, ರಾಧಾ ಬಿ. ಶೆಟ್ಟಿಗಾರ್, ಗೀತಾ ಸಿ. ಶೆಟ್ಟಿಗಾರ್, ಇಂದಿರಾ ವಿ. ಶೆಟ್ಟಿಗಾರ್, ತಾರಾ ಆರ್. ಶೆಟ್ಟಿಗಾರ್, ಚಂದ್ರಾವತಿ ಕೆ. ಶೆಟ್ಟಿಗಾರ್, ಚಿತ್ರಾಕ್ಷೀ ಎಸ್. ಶೆಟ್ಟಿಗಾರ್, ಲಲಿತಾ ಎನ್. ಪದ್ಮಶಾಲಿ ಅವರು ಉಪಸ್ಥಿತರಿದ್ದರು.
ನೂತನ ಪದ್ಮಕಲಾ ಭವನ ಹಾಗೂ ಮಂಜುನಾಥ ಸಭಾಗೃಹದ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣಾನಂದ ಎಂ. ಶೆಟ್ಟಿಗಾರ್, ಸಮಿತಿಯ ಸದಸ್ಯರುಗಳಾದ ಉತ್ತಮ್ ಎ. ಶೆಟ್ಟಿಗಾರ್, ದಯಾನಂದ ಡಿ. ಶೆಟ್ಟಿಗಾರ್, ಲೀಲಾಧರ ಬಿ. ಶೆಟ್ಟಿಗಾರ್, ರಮೇಶ್ ಪಿ. ಶೆಟ್ಟಿಗಾರ್, ಕಿಶೋರ್ ಎಸ್. ಶೆಟ್ಟಿಗಾರ್, ಕೇಶವ ವಿ. ಶೆಟ್ಟಿಗಾರ್, ಮಾಧವ ಐ. ಶೆಟ್ಟಿಗಾರ್, ಬಿ. ರಾಮಚಂದ್ರ ಶೆಟ್ಟಿಗಾರ್, ವೈ. ಚಂದ್ರಶೇಖರ್ ಜಿ. ಶೆಟ್ಟಿಗಾರ್, ಎಸ್. ಚಂದ್ರಕಾಂತ್ ಶೆಟ್ಟಿಗಾರ್, ಎಸ್. ವಿ. ಗೋಪಾಲ್‌ಕೃಷ್ಣ ಶೆಟ್ಟಿಗಾರ್, ಸರೋಜಿನಿ ಎಚ್. ಶೆಟ್ಟಿಗಾರ್, ಕಾಳಿಂಗ ಬಿ. ಶೆಟ್ಟಿಗಾರ್ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಕೆ. ಹರಿಶ್ಚಂದ್ರ ಶೆಟ್ಟಿಗಾರ್, ಅಚ್ಯುತಾ ಎಂ. ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು. ಸಂಜೆ ಗಣ್ಯಾಥಿ-ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮಾ. 23ರಂದು ಸಂಜೆ ಧಾರ್ಮಿಕ ಕಾರ್ಯಕ್ರಮವಾಗಿ ವಾಸ್ತುಪೂಜೆ, ವಾಸ್ತುಬಲಿ ಹಾಗೂ ಮಹಾ ಸುದರ್ಶನ ಹೋಮ ಇನ್ನಿತರ ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿತ್ತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.