ಪಡುಬಿದ್ರೆ ನಡಿಪಟ್ಣ ಮೊಗವೀರ ಸಭಾ: 132ನೇ ವಾರ್ಷಿಕ ಮಹಾಸಭೆ
Team Udayavani, Feb 15, 2020, 6:15 PM IST
ಮುಂಬಯಿ, ಫೆ. 14: ಪಡುಬಿದ್ರೆ ನಡಿಪಟ್ಣ ಮೊಗವೀರ ಸಭಾ ಮುಂಬಯಿ ಇದರ 132ನೇ ವಾರ್ಷಿಕ ಮಹಾಸಭೆ ಮತ್ತು ವಿಹಾರಕೂಟವು ಫೆ. 9 ರಂದು ಪೂರ್ವಾಹ್ನ 9.30 ರಿಂದ ಮಡ್ ಐಲ್ಯಾಂಡ್‌ನ ರಾವತ್‌ಪಿಕ್‌ನಿಕ್ ಕಾಟೇಜ್ ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಮುಂಬಯಿ ಸಭಾದ ಅಧ್ಯಕ್ಷ ಮಾಧವ ಟಿ. ಪುತ್ರನ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಹಿರಿಯ ಸದಸ್ಯರಾದ ಸದಾ ನಂದ ಮೆಂಡನ್, ನ್ಯಾಯವಾದಿ ಕೃಷ್ಣರಾಜ್ ಕೋಟ್ಯಾನ್ಕರ್, ಲಲಿತಾ ಮೆಂಡನ್, ಮಾ| ಕ್ಷಿತಿಜ್ ಪುತ್ರನ್ ಅವರು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಕೆ. ಎನ್. ಚಂದ್ರಶೇಖರ್ ವಿರಾರ್ ಅವರು ಪ್ರಾರ್ಥನೆಗೈದರು. ಗತ ಸಾಲಿನಲ್ಲಿ ನಿಧನರಾದ ಸದಸ್ಯರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಹಿರಿಯ ಸದಸ್ಯರನ್ನು, ಸೇವಾ ನಿವೃತ್ತರಾದವರನ್ನು ಗೌರವಿಸಲಾಯಿತು. ವಾರ್ಷಿಕ ವರದಿಯನ್ನು ಗೌರವ ಕಾರ್ಯದರ್ಶಿ ನಾಗೇಶ್ ಪುತ್ರನ್, ಆಯವ್ಯಯ ಪಟ್ಟಿಯನ್ನು ಜತೆ ಕಾರ್ಯದರ್ಶಿ ದೇವಪ್ಪ ಸಾಲ್ಯಾನ್ ಮಂಡಿಸಿ, ಸರ್ವಾನುಮತದಿಂದ ಮಂಜೂರು ಮಾಡಿಕೊಂಡರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು, ಶೈಕ್ಷಣಿಕ ಸಾಧಕ ಮಕ್ಕಳನ್ನು ಹಾಗೂ ಒಂದನೇ ತರಗತಿಯಿಂದ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಗೌರವಿಸಲಾಯಿತು. ದಕ್ಷಿಣ ಕನ್ನಡ ಮಹಾಜನ ಸಂಘ ಮತ್ತು ಕಾಡಿಪಟ್ಣ, ನಡಿಪಟ್ಣ ವಿದ್ಯಾಪ್ರಚಾರಕ ಸಂಘ ಮುಂಬಯಿ ಸಮಿತಿಯನ್ನು ಮುಂದಿನ ಕಾರ್ಯಕಾರಿ ಸಮಿತಿಯಲ್ಲಿ ರಚಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಗತ ಸಾಲಿನಲ್ಲಿ ಉತ್ತಮ ಸೇವೆಗೈದ ಉತ್ತಮ ಸೇವಕ ಶೇಖರ್ ಕೋಟ್ಯಾನ್ ಆಯ್ಕೆಯಾಗಿ ದಿ| ಕುಶಲ್‌ದಾಸ್ ಕೋಟ್ಯಾನ್ಕರ್ ಪ್ರಶಸ್ತಿಯನ್ನು ನೀಡಲಾಯಿತು.
ಹಿರಿಯ ಮತ್ತು ಕಿರಿಯ ಸದಸ್ಯರು ಸಭೆಯ ಬೆಳವಣಿಗೆಯ, ಊರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತಿಯ ಬಗ್ಗೆ, ಶ್ರೀ ವಿಷ್ಣು ಮಂದಿರದ ಬೆಳವಣಿಗೆಯ ಬಗ್ಗೆ ಸಲಹೆ ಸೂಚನೆಗಳನ್ನಿತ್ತು ಸಹಕರಿಸಿದರು. ಮುಂಬಯಿ ಶಾಖೆಯ ಹಿರಿಯ ಸದಸ್ಯರಾದ ಕೆ. ಎನ್. ಚಂದ್ರ ಶೇಖರ್ ವಿರಾರ್ ಉಪಸ್ಥಿತರಿದ್ದು ಊರಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ನಾಗೇಶ್ ಕೆ. ಪುತ್ರನ್ ವಂದಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ಚೆಂಡೆಸೆತ ಸ್ಪರ್ಧೆಯಲ್ಲಿ ಕ್ಷಿತಿಜ್ ಪುತ್ರನ್ ಪ್ರಥಮ, ಆರವ್ ಶ್ರೀಯಾನ್ ದ್ವಿತೀಯ, ರನ್ನಿಂಗ್ ರೇಸ್‌ನಲ್ಲಿ ವಿಜಯಲಕ್ಷ್ಮೀ ಸಾಲ್ಯಾನ್ ಪ್ರಥಮ, ಹೀರಾ ಶ್ರೀಯಾನ್ ದ್ವಿತೀಯ, ಕಾಲಿಗೆ ಹಗ್ಗಕಟ್ಟಿ ಓಡುವ ಸ್ಪರ್ಧೆಯಲ್ಲಿ ಪುನೀತ್ ಶ್ರೀಯಾನ್ ಪ್ರಥಮ, ಶ್ರೇಯಾ ಕುಂದರ್ ದ್ವಿತೀಯ, ಪಾಸಿಂಗ್ ಪಾರ್ಸೆಲ್ ಸ್ಪರ್ಧೆಯಲ್ಲಿ ಅಮಿತ್ ಸುವರ್ಣ ಪ್ರಥಮ, ಶಾಂಭವಿ ಪುತ್ರನ್ ದ್ವಿತೀಯ, ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಅರ್ಶಿತ್ ಕುಂದರ್ ಪ್ರಥಮ, ಗುಲಾಬಿ ಜಿ. ಕುಂದರ್ ದ್ವಿತೀಯ
ಬಹುಮಾನ ಪಡೆದರು. ಪುರುಷರ ವಿಭಾಗದಲ್ಲಿ ಭರತ್ ಮೆಂಡನ್ ಪ್ರಥಮ, ಅನೀಶ್ ಪುತ್ರನ್ ಅವರು ದ್ವಿತೀಯ ಬಹುಮಾನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.