ಶ್ರೀ ಜಗದಂಬಾ ಮಂದಿರ: ಪಲಿಮಾರು ಶ್ರೀಗಳ ಆಶೀರ್ವಚನ
Team Udayavani, Oct 4, 2017, 12:27 PM IST
ಡೊಂಬಿವಲಿ: ಮರಾಠಿ ಮಣ್ಣಿನಲ್ಲಿ ತಮ್ಮ ತಾಯ್ನಾಡಿನ ಧರ್ಮ, ಸಂಸ್ಕೃತಿ ಹಾಗೂ ಕಲೆಯ ಕಂಪನ್ನು ಬೀರುತ್ತಿರುವ ತುಳು-ಕನ್ನಡಿಗರ ಮಾತೃ ಭಕ್ತಿ ಅನನ್ಯವಾಗಿದೆ. ಇದಕ್ಕೆ ಡೊಂಬಿವಲಿ ಯಕ್ಷಕಲಾ ಸಂಸ್ಥೆಯ ಕಾರ್ಯವೇ ಸಾಕ್ಷಿಯಾಗಿದೆ. ಸಂಘದ ಕಾರ್ಯಾಲಯಕ್ಕಾಗಿ ಪಡೆದ ನಿವೇಶನದಲ್ಲಿ ಜಗನ್ಮಾತೆ ಜಗದಂಬೆಯ ಮಂದಿರ ನಿರ್ಮಿಸುವ ಮೂಲಕ ಮಾತೆಗೆ ಮನೆ ನಿರ್ಮಿಸಿಕೊಟ್ಟ ಹೆಗ್ಗಳಿಕೆ ಯಕ್ಷಕಲಾ ಸಂಸ್ಥೆಯದ್ದಾಗಿದೆ ಎಂದು ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನುಡಿದರು.
ಸೆ. 28ರಂದು ಸಂಜೆ ಡೊಂಬಿವಲಿ ಪಶ್ಚಿಮದ ಯಕ್ಷಕಲಾ ಸಂಸ್ಥೆಯ ಆಯೋಜಿಸಿದ ಶ್ರೀ ಜಗದಂಬಾ ಮಂದಿರದ 3ನೇ ನವರಾತ್ರಿ ಉತ್ಸವದ ಸಂದರ್ಭ ಮಂದಿರಕ್ಕೆ ಆಗಮಿಸಿ ಆಶೀರ್ವಚನ ನೀಡಿದ ಶ್ರೀಗಳು, ಹೆಚ್ಚುತ್ತಿರುವ ಮೊಬೈಲ್ ಹಾವಳಿಯಿಂದ ಇಂದು ಜೀವನವೇ ದುಸ್ತರವಾಗುತ್ತಿದೆ. ಮಂದಿರಕ್ಕೆ ಬರುವಾಗ ಭಕ್ತಾದಿಗಳು ಮೊಬೈಲ್‌ನಿಂದ ದೂರವಿದ್ದರೆ ಪರಮಾತ್ಮ ನಮ್ಮ ಹತ್ತಿರಕ್ಕೆ ಬರುತ್ತಾನೆ. ಮುಂಬರುವ ದಿನಗಳಲ್ಲಿ 3 ವರ್ಷಗಳ ಹಿಂದೆ ನಿರ್ಮಿತವಾದ ಜಗದಂಬೆಯ ಈಮಂದಿರ ಭಕ್ತರ ಶ್ರದ್ಧಾಕೇಂದ್ರವಾಗಿ, ಕಾರಣಿಕಕ್ಷೇತ್ರವಾಗಿ ಕಂಗೊಳಿಸುವುದಲ್ಲಿ ಯಾವುದೇ ಸಂಶಯವಿಲ್ಲ. ತನ್ನ ಎರಡನೇ ಪರ್ಯಾಯ ಉತ್ಸವವು ಜ. 18ರಂದು ಪ್ರಾರಂಭವಾಗಲಿದ್ದು, 2 ವರ್ಷಗಳ ಈ ಅವಧಿಯಲ್ಲಿ ಶ್ರೀಕೃಷ್ಣನ ದ್ವಾರಕೆಯು ಅಂದಿನ ಗತ ವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಉಡುಪಿಯ ಶ್ರೀಕೃಷ್ಣನ ಗೋಪುರಕ್ಕೆ ಬಂಗಾರದ ಕವಚ ತೊಡಿಸುವುದು, ರಾಷ್ಟ್ರದ ವಿವಿಧೆಡೆಗಳಿಂದ ಭಜನ ಮಂಡಳಿಗಳನ್ನು ಉಡುಪಿಗೆ ಆಹ್ವಾನಿಸಿ ನಿತ್ಯನಿರಂತರ ಶ್ರೀಕೃಷ್ಣ ಸಂಕೀರ್ತನೆ ನಡೆಸುವುದು ಮೊದಲಾದ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸದ್ಭಕ್ತರು ಸಹಕರಿಸಿ ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬೇಕು ಎಂದು ವಿನಂತಿಸಿದರು.
ಮಂದಿರದ ಅಧ್ಯಕ್ಷ ದಿವಾಕರ ರೈ ದಂಪತಿ ಹಾಗೂ ನೂರಾರು ಭಕ್ತಾದಿಗಳು ಶ್ರೀಗಳನ್ನು ಸ್ವಾಗತಿಸಿದರು. ಮಹಿಳೆಯರು ಕಲಶದೊಂದಿಗೆ, ಪುಷ್ಪವೃಷ್ಟಿಗೈದು ಶ್ರೀಗಳನ್ನು ಸ್ವಾಗತಿಸಿದರು. ವಿವಿಧ ವಾದ್ಯಘೋಷದೊಂದಿಗೆ ಶ್ರೀಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಸಂಸ್ಥೆಯ ಅಧ್ಯಕ್ಷ ದಿವಾಕರ ರೈ ಹಾಗೂ ಶರ್ಮಿಳಾ ರೈ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಿವಾಕರ ರೈ, ಪಲಿಮಾರು ಮಠಾಧೀಶರ ಆಗಮನ ನಮಗೆ ಒಂದು ರೀತಿಯ ಭಾಗ್ಯ ಎಂದೇ ಹೇಳಬಹುದು. ಗುರುಗಳ ಆಗಮನದಿಂದ ಆನಂದವಾಗುತ್ತಿದ್ದು, ಶ್ರೀಗಳ ಸಂಕಲ್ಪ ಸಿದ್ಧಿಗಾಗಿ ಸಕಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ ವಂದಿಸಿದರು. ವೇದಿಕೆಯಲ್ಲಿ ಶ್ರೀ ಜಗದಂಬಾ ಮಂದಿರದ ಪದಾಧಿಕಾರಿಗಳಾದ ಹರೀಶ್ ಶೆಟ್ಟಿ, ದಿವಾಕರ ರೈ, ರಾಜೇಶ್ ಕೋಟ್ಯಾನ್, ನಾಗರಾಜ ಮೊಗವೀರ, ಸುರೇಶ್ ಶೆಟ್ಟಿ ಶೃಂಗೇರಿ, ಮಾಧವ ಪೂಜಾರಿ, ರವೀಂದ್ರ ವೈ. ಶೆಟ್ಟಿ, ವೇ.ಮೂ. ಗುರುಪ್ರಸಾದ್ ಭಟ್, ರಾಜಗೋಪಾಲಾಚಾರ್ಯ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು. ಭಕ್ತಾದಿ ಗಳನ್ನು ಶ್ರೀಗಳು ಫಲಪುಷ್ಪ, ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.