ಪರ್ಯಾಯ ಉತ್ಸವವನ್ನು ಕಣ್ತುಂಬಿಕೊಳ್ಳುವ ಭಾಗ್ಯ ನಮಗೆ ಲಭಿಸಿದೆ 

Team Udayavani, Jul 30, 2017, 3:58 PM IST

28-Mum06a.jpg

ಮುಂಬಯಿ: ಕರ್ನಾಟಕದಲ್ಲಿ ಧರ್ಮ ಕಾರ್ಯಗಳು ನಡೆಯುತ್ತಿರುವ ಎರಡು ಪುಣ್ಯ ಕ್ಷೇತ್ರಗಳೆಂದರೆ ಧರ್ಮಸ್ಥಳ ಮತ್ತು ಉಡುಪಿ ಶ್ರೀ ಕೃಷ್ಣ ದೇಗುಲ. ಅನ್ನದಾನ, ವಿದ್ಯಾದಾನದಂತಹ ಶ್ರೇಷ್ಠ ಕಾರ್ಯಗಳು ಇಲ್ಲಿ ನಡೆಯುತ್ತಿವೆೆ. ಕೃಷ್ಣಮಠದ ಸ್ವಾಮೀಜಿಗಳಲ್ಲಿ ಪಲಿಮಾರು ಶ್ರೀಗಳು ಮುಂದಿನ ಪರ್ಯಾಯ ಪೀಠ ಅಲಂಕರಿಸಲಿದ್ದು, ಈ ಸೌಭಾಗ್ಯ ಕಾಣುವುದು ನಮ್ಮೆಲ್ಲರ ಪುಣ್ಯದ ಫಲವಾಗಿದೆ. ಸ್ವಾಮೀಜಿ ಅವರ ಸಂಕಲ್ಪಕ್ಕೆ ಸಹಭಾಗಿಗಳಾಗಬೇಕು. ಅವರು ಪರ್ಯಾಯದ ಅಂಗವಾಗಿ ಒಂದು ತಿಂಗಳು ಮುಂಬಯಿಯಲ್ಲಿ ಮೊಕ್ಕಾಂ ಹೂಡಲಿರುವ ಸಂದರ್ಭ ಅವರನ್ನು ಭಾರೀ ಸಂಭ್ರಮದೊಂದಿಗೆ ಬರಮಾಡಿಕೊಳ್ಳಬೇಕಾಗಿದೆ. ಈ ಸಂದರ್ಭದಲ್ಲಿ ಭಕ್ತರೆಲ್ಲರಿಗೂ ಪಾದಪೂಜೆಯ ಅವಕಾಶವನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಸ್ವಾಮೀಜಿ ಅವರ ಪರ್ಯಾಯದ ಸಂದರ್ಭದಲ್ಲಿ ದೇಣಿಗೆ ನೀಡುವ ಹಾಗೂ ಸಾಮಾನ್ಯ ಭಕ್ತರನ್ನೂ ಕೂಡಾ ಸಮಾನತೆಯಿಂದ ಕಾಣುವ ವ್ಯವಸ್ಥೆ ಮಠದ ವತಿಯಿಂದ ನಡೆಯಬೇಕು. ಅವರ ಮುಂಬಯಿ ಕಾರ್ಯಕ್ರಮದ ಸಂದರ್ಭದಲ್ಲಿ ಅವರಿಗೆ ಎಲ್ಲಾ ರೀತಿಯ ಪ್ರೋತ್ಸಾಹ, ಸಹಕಾರವನ್ನು ಮುಂಬಯಿ ಭಕ್ತಾದಿಗಳು ನೀಡಬೇಕು ಎಂದು ಪಲಿಮಾರು ಶ್ರೀಗಳ ಪರ್ಯಾಯದ ಮುಂಬಯಿ ಸಮಿತಿಯ ಅಧ್ಯಕ್ಷ ಡಾ| ಸೀತಾರಾಮ ಆಳ್ವ ಅವರು ಅಭಿಪ್ರಾಯಿಸಿದರು.

ಉಡುಪಿಯ     ಅಷ್ಟ ಮಠಗಳಲ್ಲಿ ಒಂದಾಗಿರುವ ಪಲಿಮಾರು ಮಠದ ಮಠಾಧೀಶರಾದ ಶ್ರೀ 1ವಿದ್ಯಾಧೀಶ ತೀರ್ಥ ಶ್ರೀಪಾದರು ಮುಂದಿನ ಜ. 18 ರಂದು ಪರ್ಯಾಯ ಪೀಠವನ್ನು ಅಲಂಕರಿಸಲಿದ್ದು, ಪರ್ಯಾಯ ಪೂರ್ವಭಾವಿಯಾಗಿ ಶ್ರೀಗಳು ಸೆ. 21 ರಿಂದ ಅ. 21 ರವರೆಗೆ ಮುಂಬಯಿ ಹಾಗೂ ಇತರ ಉಪನಗರಗಳಲ್ಲಿ ವಿಶೇಷ ಉಪನ್ಯಾಸ, ಪಾದಪೂಜೆ, ಇನ್ನಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಈ ಕಾರ್ಯಕ್ರಮಗಳ ಬಗ್ಗೆ ಜು. 22 ರಂದು ಸಾಂತಾಕ್ರೂಜ್‌ ಪೂರ್ವದ ಪೇಜಾವರ ಮಠದಲ್ಲಿ ಮುಂಬಯಿ ಸಮಿತಿಯು ಆಯೋಜಿಸಿದ್ದ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ಮಾತನಾಡಿ, ಉಡುಪಿಯ ಕೃಷ್ಣ ಮಠದ ಮೂಲಕ ಜಗತ್ತಿಗೆ ನಮ್ಮ ನಾಡು ಪ್ರಸಿದ್ಧವಾಗಿದೆ. ಪರ್ಯಾಯ ಉತ್ಸವದ ಮೂಲಕ ಪಲಿಮಾರು ಶ್ರೀಗಳ ಸೇವೆ ಮಾಡುವ ಅವಕಾಶ ನಮಗೆ ಲಭ್ಯವಾಗಲಿದ್ದು, ಪರ್ಯಾಯ ಉತ್ಸವಕ್ಕೆ  ಮುಂಬಯಿಯಿಂದ  ಭಕ್ತರೆಲ್ಲರೂ ಸೇರಿ ಸಹಕಾರ ನಿಡೋಣ ಎಂದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಅವರು ಮಾತನಾಡಿ, ಕೃಷ್ಣನ ಭಕ್ತರಾದ ನಮಗೆಲ್ಲರಿಗೂ ಸೇವೆ ಮಾಡುವ ಭಾಗ್ಯ ಲಭಿಸಿದ್ದು, ಪಲಿಮಾರು ಶ್ರೀಗಳ ಮುಖ ಕಾಂತಿಯಿಂದ ಕಂಗೊಳಿಸುತ್ತಿದ್ದು, ಅವರ ಪರ್ಯಾಯ ಉತ್ಸವವನ್ನು ಭಕ್ತಜನರು ಕಣ್ತುಂಬಿಕೊಳ್ಳುವ ಉತ್ಸುಕತೆಯಲ್ಲಿದ್ದಾರೆ ಎಂದು ನುಡಿದು ಎಲ್ಲರ ಸಹಕಾರ ಬಯಸಿದರು.

ವೇದಿಕೆಯಲ್ಲಿ ಮುಂಬಯಿ ಸಮಿತಿಯ ಗೌರವಾಧ್ಯಕ್ಷರುಗಳಾದ ಎಂ. ನರೇಂದ್ರ ಡಾ| ಸುರೇಶ್‌ ರಾವ್‌, ಕಾರ್ಯದರ್ಶಿ ವಿರಾರ್‌ ಶಂಕರ್‌ ಶೆಟ್ಟಿ, ಪಲಿಮಾರು ಮಠದ ಶ್ರೀಶ ಭಟ್‌, ಉದ್ಯಮಿ ಸುಧಾಕರ ಶೆಟ್ಟಿ ಪಲಿಮಾರು, ಉದ್ಯಮಿ ಮೇರ್ಕಳ ತ್ಯಾಂಪಣ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಪಲಿಮಾರು ಮಠ ಮೀರಾರೋಡ್‌ ಶಾಖೆಯ ರಾಧಾಕೃಷ್ಣ ಭಟ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಶ ಭಟ್‌ ಅವರು ವಂದಿಸಿದರು. ಸಭೆಯಲ್ಲಿ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಶೇಖರ್‌ ಶೆಟ್ಟಿ, ವಿದ್ವಾನ್‌ ಕೈರಬೆಟ್ಟು ವಿಶ್ವನಾಥ್‌ ಭಟ್‌, ಗುರುಪ್ರಸಾದ್‌ ಭಟ್‌ ಘನ್ಸೋಲಿ, ಡಾ| ಪ್ರಭಾಕರ ಶೆಟ್ಟಿ, ಗುರುರಾಜ ನಾಯಕ್‌, ದಯಾಸಾಗರ್‌ ಚೌಟ, ಅಶೋಕ್‌ ಸುವರ್ಣ, ಶ್ರೀನಿವಾಸ ಚೌಧರಿ, ಬಾಲಕೃಷ್ಣ ಭಂಡಾರಿ, ತೋನ್ಸೆ ವಿಜಯ ಕುಮಾರ್‌ ಶೆಟ್ಟಿ, ಪೇಜಾವರ ಮಠದ ಪ್ರಬಂಧಕ ಹರಿ ಎಂ. ಭಟ್‌ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿಯ ಅಷ್ಟ ಮಠಗಳು ದೇಶದಲ್ಲೇ ಪ್ರಸಿದ್ಧಿಯನ್ನು ಪಡೆದಿವೆೆ. ಇಲ್ಲಿಯ ಪರ್ಯಾಯವಂತೂ ದೊಡ್ಡ ಉತ್ಸವವೇ ಆಗಿದೆ. ಈ ಬಾರಿಯ ಪರ್ಯಾಯ ಸಂದರ್ಭದಲ್ಲಿ ಉಡುಪಿಯಲ್ಲಿ ಬಡಜನತೆಗೆ ಒಂದು ಆಸ್ಪತ್ರೆ ನಿರ್ಮಾಣವಾಗಬೇಕು. ಅದರ ಮುಖಾಂತರ ಅವಳಿ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಜನತೆಗೆ ಪ್ರಯೋಜನವಾಗಬೇಕು. ಈ ಯೋಜನೆಯ ನೇತೃತ್ವವನ್ನು ಪಲಿಮಾರು ಶ್ರೀಗಳು ವಹಿಸಬೇಕು. ಈ ಯೋಜನೆಗೆ  ಈಗಾಗಲೇ ಹಲವಾರು ಮಂದಿ ಮುಂದೆ ಬಂದಿರುವುದು ಸಂತೋಷದ ಸಂಗತಿಯಾಗಿದೆ. ಇತಿಹಾಸ ಪ್ರಸಿದ್ಧ ಉಡುಪಿ ಮಠದಲ್ಲಿ ಬಹಳಷ್ಟು ಸ್ವಾಮೀಜಿಗಳು, ಮಠಾಧೀಶರು ಶ್ರೀಕೃಷ್ಣನ ಸೇವಾನಿರತರಾಗಿದ್ದರು. ಆದರೆ ಪಲಿಮಾರು ಶ್ರೀಗಳ ಪರ್ಯಾಯ ಅವಿಸ್ಮರಣೀಯವಾಗಿರಬೇಕು. ಅದಕ್ಕಾಗಿ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ 
– ತೋನ್ಸೆ  ಜಯಕೃಷ್ಣ  ಎ. ಶೆಟ್ಟಿ  (ಗೌರವ ಪ್ರಧಾನ ಕಾರ್ಯದರ್ಶಿ : ಪರ್ಯಾಯ 
ಉತ್ಸವ ಸಮಿತಿ, ಮುಂಬಯಿ).

ಟಾಪ್ ನ್ಯೂಸ್

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಬಹ್ರೈನ್‌: ಮದಿಮೆದ ಇಲ್ಲಡ್‌…ತುಳು ನಾಟಕಕ್ಕೆ ಮುಹೂರ್ತ

ಬಹ್ರೈನ್‌: ಮದಿಮೆದ ಇಲ್ಲಡ್‌…ತುಳು ನಾಟಕಕ್ಕೆ ಮುಹೂರ್ತ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.