ವಡಾಲದ ಶ್ರೀ ರಾಮ ಮಂದಿರದಲ್ಲಿ ಪಲ್ಲಕಿ ಉತ್ಸವ
Team Udayavani, Apr 30, 2019, 11:01 AM IST
ಮುಂಬಯಿ: ವಡಾಲದ ಶ್ರೀ ರಾಮ ಮಂದಿರದಲ್ಲಿ ಪಲ್ಲಕಿ ಉತ್ಸವವು ಎ. 27ರಂದು ಬೆಳಗ್ಗೆಯಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಪೂಜಾ ಕೈಂಕರ್ಯಗಳೊಂದಿಗೆ ಜರಗಿತು. ವಸಂತೋತ್ಸವದ ಅಂಗವಾಗಿ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವಡಾಲ ಇದರ ಮಾಜಿ ಕಾರ್ಯಾಧ್ಯಕ್ಷ, ಟ್ರಸ್ಟಿ ಎನ್. ಎನ್. ಪಾಲ್, ಮಾಜಿ ಕಾರ್ಯಾಧ್ಯಕ್ಷ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಗೋವಿಂದ ಎಸ್. ಭಟ್, ಜಿಎಸ್‌ಬಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಡಾಲ ಇದರ ಟ್ರಸ್ಟಿಗಳಾದ ಉಮೇಶ್ ಪೈ ಮತ್ತು ಶಾಂತಾರಾಮ ಭಟ್, ವಡಾಲದ ಮಠದ ಮಾಜಿ ಕಾರ್ಯಾಧ್ಯಕ್ಷ ನಾಗೇಶ್ ಫಾವ್ಕರ್, ವಡಾಲ ಮಠದ ವಕ್ತಾರ ಕಮಲಾಕ್ಷ ಸರಾಫ್ ಅವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆಯಿಂದ ವಿವಿಧ ಪೂಜೆಗಳು, ವಿಶೇಷ ಸೇವಾ ಪೂಜೆಗಳು ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ವಡಾಲ ಮಠ ಮತ್ತು ಶ್ರೀರಾಮ ಸೇವಕ ಮಂಡಳದ ಕಾರ್ಯಕರ್ತರಾದ ಚಂದ್ರಕಾಂತ್ ಹಾಗೂ ಮೊದಲಾದವರ ಸೇವಾರ್ಥವಾಗಿ ಪಲ್ಲಕ್ಕಿ ಉತ್ಸವ ಜರಗಿತು. ಭಕ್ತಾದಿಗಳು, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಪ್ರಧಾನ ಅರ್ಚಕ ವೇದಮೂರ್ತಿ ಗೋವಿಂದ ಭಟ್ ಅವರಿಂದ ರಾಮ ಮತ್ತು ಲಕ್ಷ್ಮಣ, ಸೀತಾ ದೇವಿಗೆ ಮಹಾಮಂಗಳಾರತಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.