ಪಂಡಿತ್‌ ಶೇಷಗಿರಿದಾಸರ ದಾಸವಾಣಿ

Team Udayavani, May 4, 2017, 4:30 PM IST

01-Mum02.jpg

ಸಮಸ್ತ ಮನುಕುಲವನ್ನು ಸನ್ಮಾರ್ಗಕ್ಕೆ ಒಯ್ಯುವುದರೊಂದಿಗೆ ಜೀವನದ ಸಾರ್ಥಕತೆಯನ್ನು ಸಾರಿ ಹೇಳುವ ಕಾರ್ಯವನ್ನು ನಮ್ಮ ಸಂತರು, ದಾಸರು ಮಾಡಿದ್ದಾರೆ. ದಾಸರು ರಚಿಸಿದ ಸಾಹಿತ್ಯಕ್ಕೆ ಸಂಗೀತ ಸಂಯೋಜನೆಗೈದು ತಮ್ಮ ಅದ್ಭುತ ಹಾಡುಗಾರಿಕೆಯ ಮುಖಾಂತರ ಜನ ಸಾಮಾನ್ಯರಿಗೆ ಪರಿಚಯಿಸುವ ಕಾರ್ಯವನ್ನು ಅನೇಕ ಮಂದಿ ಮಾಡುತ್ತಿದ್ದು, ಅಂತವರಲ್ಲಿ ಪಂಡಿತ್‌ ಶೇಷಗಿರಿ ದಾಸರು ಒಬ್ಬರಾಗಿದ್ದಾರೆ. ಈ ಅಪ್ರತಿಮ ಗಾಯಕರ ಗಾಯನ ಮಾಧುರ್ಯವನ್ನು ಸವಿಯುವ ಅವಕಾಶವು ಇತ್ತೀಚೆಗೆ ಡೊಂಬಿವಲಿಯ ಸಂಗೀತಾಭಿಮಾನಿಗಳಿಗೆ ಸ್ಥಳೀಯ ಮಹಾನಗರ ಕನ್ನಡ ಸಂಸ್ಥೆಯು ಒದಗಿಸಿಕೊಟ್ಟಿತು.

ಡೊಂಬಿವಲಿ ಪಶ್ಚಿಮದ ಜನಗಣಮನ ಶಾಲೆಯ ಆವರಣದಲ್ಲಿ ನಡೆದ ವೈವಿಧ್ಯಮಯ ಸ್ವರ ಸಂಧ್ಯಾ ಕಾರ್ಯಕ್ರಮವು ಗಣೇಶ ಆರಾಧನೆಯೊಂದಿಗೆ ಪ್ರಾರಂಭಗೊಂಡಿತು. ಆನಂತರ ಜಗನ್ನಾಥ ದಾಸರ “ರಾಮ ಬಾರೋ ತಂದೆ ತಾಯಿ ಬಾರೋ’ ಎಂದು ಗುರು ರಾಘವೇಂದ್ರರನ್ನು ತಮ್ಮ ಸುಮಧುರ ಕಂಠ ಮಾಧುರ್ಯದಿಂದ ಆಹ್ವಾನಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. “ಪಂಢಾರಾಪುರದಲ್ಲಿ ವಿಠೊಬನೆಂಬ ಓರ್ವ ಸಾವುಕಾರ’ ಎಂಬ ಜನಪ್ರಿಯ ದಾಸರ ಪದವನ್ನು ಪ್ರಸ್ತುತಪಡಿಸಿದ ಪಂಡಿತ್‌ ಶೇಷಗಿರಿದಾಸರು, ಪುರಂದರದಾಸರ ಭಾಗ್ಯದ ಲಕ್ಷ್ಮೀ ಭಾರಮ್ಮಾ, ಹೇಳವನಕಟ್ಟೆ ಗಿರಿಯಮ್ಮ ರಚಿಸಿದ “ಹನುಮಂತ ಹನುಮಂತ’ ರಚನೆಯು ಕೇಳುಗರನ್ನು ಮಂತ್ರಮುಗ್ಧಗೊಳಿಸಿತು.

ಇತ್ತೀಚೆಗಿನ ದಾಸರುಗಳಲ್ಲಿ ಜನಪ್ರಿಯರಾದ ಮುರುಗೋಡ ಕೃಷ್ಣ ದಾಸರು ರಚಿಸಿ, ರಾಗ ಸಂಯೋಜಿಸಿದ “ಗೋಪಿಕೆ ನಿನ್ನ ಮಗಜಾರ’ ಎಂಬ ಗೀತೆಯನ್ನು ಪ್ರಸ್ತುತಪಡಿಸಿ ಇತ್ತೀಚೆಗೆ ಅಗಲಿದ ಮುರುಗೋಡ ಕೃಷ್ಣದಾಸರಿಗೆ ಶ್ರದ್ಧಾಂಜಲಿ ಅರ್ಪಿಸಿದರು. “ಪಾಂಡುರಂಗಾ ಮಾಯಾಬಾಪಾ, ಪತಂಗ ತುಝಾ ಹಾಚಿಧಾಗಾ’ ಎಂಬ ಮರಾಠಿ ದಾಸರ ಪದವನ್ನು ಪಂಡಿತ್‌ ಶೇಷಗಿರಿದಾಸರು ಸುಶ್ರಾವ್ಯವಾಗಿ ಹಾಡಿದರೆ, ಅಲ್ಲಿ ಸೇರಿದ ಮರಾಠಿ ಕನ್ನಡ ಮನಸ್ಸುಗಳು ಪುಳಕಿತಗೊಂಡಿರುವುದು ವಿಶೇಷತೆಯಾಗಿತ್ತು. ಎರಡು ಗಂಟೆಗಳಿಗಿಂತಲೂ 
ಅಧಿಕ ಕಾಲ ತಮ್ಮ ಗಾನಸುಧೆಯನ್ನು ಹರಿಸಿದ ಪಂಡಿತ್‌ ಶೇಷಗಿರಿದಾಸರು ಕಾರ್ಯಕ್ರಮದ ಕೊನೆಯಲ್ಲಿ ಪುರಂದರದಾಸರ “ತೋಳ ತೋಳ ರಂಗಾ’ ಎಂಬ ಹಾಡನ್ನು ಹಾಡಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದಾಗ ಇಡೀ ಸಭಾಗೃಹವೇ ಎದ್ದು ನಿಂತು ಕರತಾಡನದ ಮೂಲಕ ಗೌರವ ಸೂಚಿಸಿತು. ಈ ಅವಿಸ್ಮರಣೀಯ ಸ್ವರ ಸಂಧ್ಯಾ ಕಾರ್ಯಕ್ರಮಕ್ಕೆ ಹಾರ್ಮೋನಿಯಂದಲ್ಲಿ ಶ್ರೀಪಾದದಾಸ, ತಬಲಾದಲ್ಲಿ ಗೋಪಾಲ ಗುಡಬಡ್ಡಿ, ತಾಳದಲ್ಲಿ ಸ್ಥಳೀಯ ಕಲಾವಿದ ವಿಜಯ ಕುಲಕರ್ಣಿ ಅವರು ಸಹಕರಿಸಿದರು. ದಿನವಿಡೀ ಬಿಸಿಲಿನ ಬೇಗೆಯಲ್ಲಿ ಬೆಂದ ಮುಂಬಯಿಯ ಸಂಗೀತಾಭಿಮಾನಿಗಳ ಮನಸ್ಸಿಗೆ ಪಂಡಿತ್‌ ಶೇಷಗಿರಿದಾಸರ ಅದ್ಭುತ ಗಾಯನ ಮುದನೀಡಿತು.

 ಗುರುರಾಜ ಪೋತನೀಸ

ಟಾಪ್ ನ್ಯೂಸ್

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

k

Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗದ್ಗೀತೆಯ ಪ್ರಸ್ತುತತೆ ವಿಶೇಷ ಸಂವಾದ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.