ಯುವಶಕ್ತಿ ಹುಮ್ಮಸ್ಸು ವೃದ್ಧಿಯಾದಾಗ ಸಮಿತಿ ಬಲಿಷ್ಠ : ಅಮೀನ್
Team Udayavani, Dec 31, 2019, 6:13 PM IST
ಮುಂಬಯಿ. ಡಿ 30: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇವರು ಆಯೋಜಿಸಿದ ಕೋಟಿ-ಚೆನ್ನಯ ಕ್ರೀಡಾ ಕೂಟದಲ್ಲಿ ಈ ಬಾರಿಯ ಚಾಂಪಿಯನ್ ಶಿಪ್ ಟ್ರೋಯನ್ನು ಬಿಲ್ಲವರ ಅಸೋಶಿಯೇಶನ್ ಬೊರಿವಲಿ-ದಹಿಸರ್ ಇದರ ಕ್ರೀಡಾ ಸದಸ್ಯರು ಗೆದ್ದುಕೊಂಡಿದ್ದು, ಆ ಪ್ರಯುಕ್ತ ಡಿ. 26ರಂದು ಸ್ಥಳೀಯ ಕಚೇರಿ ಗುರು ಸನ್ನಿಧಿ ಗೊರಾಯಿ 1, ಶಿಂಪೋಲಿ ಗೊರಾಯಿರೋಡ್ ಇಲ್ಲಿ ಸ್ಥಳೀಯ ಸಮಿತಿಯ ವತಿಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸದಸ್ಯರನ್ನು ಅಭಿನಂದಿಸಿ ಸತ್ಕರಿಸಲಾಯಿತು.
ಕಚೇರಿಯಲ್ಲಿ ವಿಶೇಷ ಗುರುಪೂಜೆ ಜರಗಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಸಮಾಜದ ಉತ್ಸಾಹಿ ಯುವ ಹಾಗೂ ಮಹಿಳಾ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್ ಬಿ. ಅಮೀನ್ ಅವರು, ಯುವ ಸದಸ್ಯರ ಹುರುಪು, ಉತ್ಸಾಹ ನಮ್ಮ ಬೊರಿವಲಿ-ದಹಿಸರ್ ಸಮಿತಿಯು ಕೆಲವು ವರ್ಷ ಗಳ ಅನಂತರ ಮತ್ತೆ ಚಾಂಪಿಯನ್ ಟ್ರೋಫಿ ಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಯುವ ಸದಸ್ಯರ ಈ ಕೊಡುಗೆ ಮುಂದೆಯೂ ಎಲ್ಲಾ ಕಾರ್ಯಕ್ರಮದಲ್ಲಿ ದೊರೆಯವಂತಾಗಬೇಕು. ಆ ಮೂಲಕ ಯುವ ಸದಸ್ಯರು ಸಮಿತಿಯ ಎಲ್ಲಾ ಕಾರ್ಯ ಕಲಾಪ ಗಳಲ್ಲಿ ಭಾಗವಹಿಸಿ ಈ ಸಮಿತಿಯನ್ನು ಇನ್ನಷ್ಟು ಉತ್ತುಂಗಕ್ಕೆರಿಸುವಲ್ಲಿ ಸಹಕರಿಸಬೇಕು. ಯುವ ಶಕ್ತಿ ಹುಮ್ಮಸ್ಸು ವೃದ್ಧಿಯಾದಾಗ ಪ್ರತಿಯೊಂದು ಕಾರ್ಯಕ್ರಮವು ಯಾವುದೇ ಅಡೆತಡೆಗಳಿಲ್ಲದೆ ಸುಲಲಿತವಾಗಿ ಜರಗುವುದು. ದಿನಪೂರ್ತಿ ಜರಗಿದ ಕ್ರೀಡಾ ಕೂಟದಲ್ಲಿ ಮಹಿಳೆಯರ ಹುರುಪು ಉತ್ಸಾಹವು ಕ್ರೀಡಾಕೂಟದ ಯಶಸ್ವಿಗೆ ವಿಶೇಷ ಮೆರಗು ನೀಡಿದೆ ಎಂದು ಹೇಳಿ ಅಭಿನಂದಿಸಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬಯಿ ಇದರ ನಿರ್ದೇಶಕರಾದ ಪ್ರೇಮ್‌ನಾಥ್ ಪಿ. ಕೋಟ್ಯಾನ್ ಕ್ರೀಡಾಳುಗಳನ್ನು ಹಾಗೂ ಮಹಿಳಾ ಸದಸ್ಯರನ್ನು ಅಭಿನಂದಿಸಿ ಮಾತನಾಡಿ, ಯುವ ಸದಸ್ಯರು ಕ್ರೀಡೆಯ ಜತೆಗೆ ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸಿ ಶಿಕ್ಷಣದ ಅಡಿಪಾಯವನ್ನು ಗಟ್ಟಿಗೊಳಿಸಿ ಕ್ರೀಡೆ ಹಾಗೂ ಶಿಕ್ಷಣದ ಸಮಾನ ಯಶಸ್ವಿಯತ್ತ ಗಮನ ಹರಿಸಬೇಕು. ಶಿಸ್ತು ಸಂಮಯವನ್ನು ಬೆಳೆಸಿಕೊಂಡು ಉನ್ನತ ವ್ಯಾಸಂಗ ಪಡೆದು ಸಮಾಜದಲ್ಲಿ ಸುಶಿಕ್ಷಿತರಾಗಿ ಉತ್ತಮ ಉದ್ಯೋಗವನ್ನು ಪಡೆದು ಸುಸಂಸ್ಕೃತ ಜೀವನ ತನ್ನದಾಗಿಸಿಕೊಳ್ಳಿ, ಜೀವನದಲ್ಲಿ ಶಿಸ್ತನ್ನು ಗೌರವಿಸಿ ಎಂದು ಕರೆ ನೀಡಿದರು.
ಗುರುಪೂಜೆಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಸಮಿತಿಯ ಕಾರ್ಯದರ್ಶಿ ಶೇಖರ್ ಅಮೀನ್ ಅವರು ಕೋಟಿ-ಚೆನ್ನಯ ಕ್ರೀಡಾ ಕೂಟದಲ್ಲಿ ಸ್ಥಳೀಯ ಸಮಿತಿಯ ಚಾಂಪಿಯನ್ ಟ್ರೋ ಗೆಲುವಿಗೆ ಕಾರಣೀ ಭೂತರಾದ ಅರ್ಹ ಯುವ ಕ್ರೀಡಾಳುಗಳನ್ನು ಅಭಿನಂದಿಸಿದರು. ಅಭಿನಂದನಾ ಕಾರ್ಯ ಕ್ರಮದಲ್ಲಿ ಗೌರವ ಕಾರ್ಯಾಧ್ಯಕ್ಷ ಸುಂದರ ಎಂ. ಪೂಜಾರಿ, ಉಪಕಾರ್ಯಾಧ್ಯಕ್ಷ ರಜಿತ್ ಎಲ್. ಸುವರ್ಣ, ಜತೆ ಕಾರ್ಯದರ್ಶಿ ವತ್ಸಲಾ ಪೂಜಾರಿ, ಜತೆ ಕೋಶಾಧಿಕಾರಿ ಎ. ವಿ. ಸುವರ್ಣ, ಆರ್. ಎಸ್. ಕೋಟ್ಯಾನ್, ರಾಘು ಜಿ. ಪೂಜಾರಿ, ಕೇಶರಂಜನ್ ಮುಲ್ಕಿ, ಜಯರಾಮ ಪೂಜಾರಿ, ದಿನೇಶ್ ಸುವರ್ಣ, ಚಂದ್ರಶೇಖರ ಎ. ಪೂಜಾರಿ ಉಪಸ್ಥಿತರಿದ್ದು ಸಹಕರಿಸಿದರು. ಅನಂತರ ವಿಶೇಷ ಗುರುಪೂಜೆಯಲ್ಲಿ ಭಾಗವಹಿಸಿದ ಸಮಾಜ ಬಾಂಧವರಿಗೆಲ್ಲಾ ಪ್ರಸಾದ ವಿತರಿಸಲಾಯಿತು.
ಚಿತ್ರ-ವರದಿ: ರಮೇಶ್ ಉದ್ಯಾವರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.