Gulf ಕುಂದಗನ್ನಡ ಉತ್ಸವಕ್ಕೆ ಮೆರುಗು ತಂದ “ಪಾಪಣ್ಣ ವಿಜಯ ಗುಣ ಸುಂದರಿ’
ಸಾಗರದಾಚೆ ಮಂದಾರ್ತಿ ಮೇಳದ ಮೊದಲ ಹೆಜ್ಜೆ
Team Udayavani, Nov 26, 2023, 8:05 AM IST
ಯುಎಇ: ಸಂಯುಕ್ತ ಅರಬ್ ದೇಶದ ಅಜ್ಮಾನ್‌ನ ಹ್ಯಾಬಿಟ್ಯಾಟ್ ಶಾಲೆಯ ತುಂಬಿ ತುಳುಕಿದ ಸಭಾಂಗಣವು ಇತ್ತೀಚೆಗೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಕರಾವಳಿಯ ಸುಪ್ರಸಿದ್ಧ ಕಾರ್ಣಿಕದ ದೇವಳವಾದ ಶ್ರೀ ಕ್ಷೇತ್ರ ಮಂದಾರ್ತಿ ದುರ್ಗಾ ಪರಮೇಶ್ವರಿ ಅಮ್ಮನವರ ದಶಾವತಾರ ಯಕ್ಷಗಾನ ಮೇಳವು ಇದೇ ಮೊಟ್ಟ ಮೊದಲ ಬಾರಿಗೆ ಸಾಗರೋಲ್ಲಂಘನ ಮಾಡಿ ಯುಎಇಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿದರು.
ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ನವರು ಪ್ರಸ್ತುತ ಪಡಿಸಿದ ಕುಂದಗನ್ನಡ ಉತ್ಸವ -2023ರಲ್ಲಿ ಮಂದಾರ್ತಿ ಮೇಳದ ಕಲಾವಿದರು ಸ್ಥಳೀಯ ಕಲಾವಿದರನ್ನು ಕೂಡಿಕೊಂಡು 5 ಗಂಟೆಗಳ ಕಾಲ “ಪಾಪಣ್ಣ ವಿಜಯ ಗುಣ ಸುಂದರಿ’ ಎಂಬ ಪ್ರಸಂಗವನ್ನು ಆಡಿ ತೋರಿಸಿ, ಅಕ್ಷರ ಸಹ ಈ ಮರುಭೂಮಿ ದೇಶದಲ್ಲಿ ಗಂಧರ್ವ ಲೋಕವನ್ನು ಸೃಷ್ಟಿಸಿದರು.
ಹಿಮ್ಮೇಳದಲ್ಲಿ ಭಾಗವತರಾದ ನಾಗೇಶ್ ಕುಲಾಲ್, ಚೆಂಡೆಯಲ್ಲಿ ಶ್ರೀಕಾಂತ್ ಶೆಟ್ಟಿ , ಮದ್ದಳೆಯಲ್ಲಿ ಶ್ರೀಧರ ಭಂಡಾರಿ ಮುಮ್ಮೇಳದಲ್ಲಿ ಅಜ್ರಿ ಗೋಪಾಲ ಗಾಣಿಗ , ಅಕ್ಷಯ ಕುಮಾರ್, ಗೋವಿಂದ ವಂಡಾರು, ಪೂವಪ್ಪ ಕಡಬ ತಂಬ್ರಿ ಭಾಸ್ಕರ ಬಿಲ್ಲವ, ಗುಂಡಿಬೈಲ್ ಗಣಪತಿ ಭಟ್, ಕಿರಾಡಿ ಪ್ರಕಾಶ್, ಇವರ ಜತೆ ಯುಎಇ ಸ್ಥಳೀಯ ಯಕ್ಷ ಕಲಾವಿದರಾದ ವಿಶ್ವೇಶ್ವರ ಅಡಿಗ , ಕಿಶೋರ್ ಗಟ್ಟಿ ಹಾಗೂ ವಿನಾಯಕ ಹೆಗ್ಡೆ ಭಾಗವಹಿಸಿದ್ದರು. ಸಾಧನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಪದ್ಮರಾಜ್ ಎಕ್ಕಾರ್ ಅವರ ಸಹಕಾರದೊಂದಿಗೆ ಮತ್ತು ಮಂದಾರ್ತಿ ದುರ್ಗಾ ಪರಮೇಶ್ವರಿಯಮ್ಮನವರ ಆಶೀರ್ವಾದದೊಂದಿಗೆ ಗಲ್ಫ್ ರಾಷ್ಟ್ರ ದ ಯಕ್ಷ ರಂಗಕ್ಕೊಂದು ಅಜರಾಮರ ಗರಿಯೊಂದು ಮೂಡಿಸುವಲ್ಲಿ ಕಲಾವಿದರು ಯಶಸ್ವಿಯಾದರು.
ವರದಿ: ಆರತಿ ಅಡಿಗ, ದುಬೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.