ಕುಟುಂಬ ಪಕ್ಷಗಳಾಗಿ ಪರಿವರ್ತನೆ: ಪ್ರಕಾಶ್
ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಎನ್‌ಸಿಪಿ
Team Udayavani, Jul 29, 2019, 12:47 PM IST
ಮುಂಬಯಿ, ಜು. 28: ಕಾಂಗ್ರೆಸ್, ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ಕುಟುಂಬ ಪಕ್ಷಗಳಾಗಿ ಮಾರ್ಪಟ್ಟಿವೆ ಮತ್ತು ತಮ್ಮ ನಡುವೆ ಅಧಿಕಾರವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿವೆ ಎಂದು ಶುಕ್ರವಾರ ವಂಚಿತ ಬಹುಜನ ಆಘಾಡಿ (ವಿಬಿಎ) ನಾಯಕ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬೇಡ್ಕರ್ ಅವರು ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಥವಾ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ತಮ್ಮ ಪಕ್ಷ ಏಕೆ ಆಸಕ್ತಿ ಹೊಂದಿಲ್ಲ ಎಂಬ ಬಗ್ಗೆಯೂ ಕಾರಣಗಳನ್ನೂ ನೀಡಿದರು.
ಕಾಂಗ್ರೆಸ್ ಒಂದು ಕುಟುಂಬ ಪಕ್ಷವಾಗಿ ಮಾರ್ಪಟ್ಟಿದೆ ಮತ್ತು ಅವರು ಕುಟುಂಬದೊಳಗೆ ಅಧಿಕಾರವನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಬಿಜೆಪಿ ಮತ್ತು ಶಿವಸೇನೆಗೆ ಹೋದ ಕಾಂಗ್ರೆಸ್ ನಾಯಕರು ಇದೀಗ ಆ ಎರಡೂ ಪಕ್ಷಗಳನ್ನೂ ಕುಟುಂಬ ಪಕ್ಷಗಳನ್ನಾಗಿ ಮಾಡಿದ್ದಾರೆ. ಈ ಕುಟುಂಬಗಳು ನಾಲ್ಕು ಪಕ್ಷಗಳಲ್ಲಿ ತಮ್ಮ ಬಲೆಯನ್ನು ಹರಡಿವೆ ಎಂದವರು ಹೇಳಿದ್ದಾರೆ. ವಿಬಿಎ ರಾಜ್ಯದ ಎಲ್ಲಾ 288 ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸಲು ಯೋಚಿಸುತ್ತಿದೆ ಎಂದು ಅಂಬೇಡ್ಕರ್ ತಿಳಿಸಿದ್ದಾರೆ. ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಕುರಿತು ಮಾತನಾಡಿದ ಅವರು, ಕೆಲವು ಕಾಂಗ್ರೆಸ್ ನಾಯಕರು ಪಕ್ಷದ ಸಭೆಯಲ್ಲಿ ಅದು ಎನ್‌ಸಿಪಿಯ ಮತಗಳನ್ನು ಪಡೆಯುತ್ತಿಲ್ಲ ಎಂದು ಹೇಳಿದ್ದಾರೆ ಎಂದರು. ಎನ್‌ಸಿಪಿಯ ಜತೆಗೆ ವಿಬಿಎಯ ಮೈತ್ರಿ ಸಾಧ್ಯತೆ ಕುರಿತು ಮಾತನಾಡಿದ ಅಂಬೇಡ್ಕರ್ ಅವರು, ಎನ್‌ಸಿಪಿ ಜತೆಗಿನ ಮೈತ್ರಿ ಒಪ್ಪಂದವು ಕಾಂಗ್ರೆಸ್‌ಗೆ ಪ್ರಯೋಜನಕಾರಿಯಲ್ಲದಿದ್ದಾಗ, ಎನ್‌ಸಿಪಿಯ ಮೈತ್ರಿ ನಮಗೆ ಹೇಗೆ ಪ್ರಯೋಜನಕಾರಿಯಾಗಬಲ್ಲದು? ಹಾಗಾಗಿ, ಎನ್‌ಸಿಪಿ ಜತೆಗೆ ಮೈತ್ರಿ ಮಾಡಿಕೊಳ್ಳದಿರಲು ನಾವು ಈಗಾಗಲೇ ನಿಲುವನ್ನು ತೆಗೆದುಕೊಂಡಿದ್ದೇವೆ ಎಂದರು. ಕಾಂಗ್ರೆಸ್ ಬಗ್ಗೆ ಹೇಳುವುದಾದರೆ, ಎಪ್ರಿಲ್-ಮೇ ಲೋಕಸಭಾ ಚುನಾವಣೆಗೆ ವಿಬಿಎ ಅದರ ಜತೆಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿತ್ತು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದವರು ಹೇಳಿದ್ದಾರೆ.
ಇದಲ್ಲದೆ, ಕಾಂಗ್ರೆಸ್ ಈಗ ರಾಜಕೀಯ ನೈತಿಕತೆಯನ್ನು ಹೊಂದಿಲ್ಲ. ಅವರು ನಮ್ಮನ್ನು ಬಿಜೆಪಿಯ ಬಿ ತಂಡ ಎಂದು ಆರೋಪಿಸಿದ್ದರು ಮತ್ತು ಈಗ ಅವರು (ಕಾಂಗ್ರೆಸ್ ನಾಯಕರು) ಮಾಧ್ಯಮ ಮತ್ತು ದೂರದರ್ಶನದ ಮೂಲಕ ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೆಂದು ಹೇಳಿಕೊಳ್ಳುತ್ತಿದ್ದಾರೆ. ಮೊದಲು ನೀವು ( ಕಾಂಗ್ರೆಸ್) ವಿಬಿಎಯ ಸ್ಥಾನಮಾನ ಏನು ಎಂಬುದನ್ನು ಸ್ಪಷ್ಟಪಡಿಸಿ ಎಂದು ದಲಿತ ನಾಯಕ ಅಂಬೇಡ್ಕರ್ ನುಡಿದಿದ್ದಾರೆ. ನಾವು ಬಿಜೆಪಿಯ ಬಿ ತಂಡ ಎಂದು ನೀವು (ಕಾಂಗ್ರೆಸ್) ಭಾವಿಸಿದರೆ, ನಾವು ನಿಮ್ಮನ್ನು ಮೈತ್ರಿಗಾಗಿ ನೇರವಾಗಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮಾತನಾಡುವಂತೆ ಮಾಡುತ್ತಿದ್ದೆವು. ವಿಬಿಎಯನ್ನು ಏಕೆ ಮಾಧ್ಯಮವನ್ನಾಗಿ ಮಾಡಬೇಕು ಎಂದವರು ಕಾಂಗ್ರೆಸ್‌ಗೆ ಪ್ರತ್ಯುತ್ತರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.