Passage to India: ಮಾರ್ಚ್ 7ರಿಂದ ಭಾರತೀಯ ಸಮುದಾಯದ ಉತ್ಸವ ‘ಪ್ಯಾಸೆಜ್ ಟು ಇಂಡಿಯಾ’ 2024


Team Udayavani, Mar 5, 2024, 6:59 PM IST

Passage to India 2024: ಭಾರತೀಯ ಸಮುದಾಯದ ಉತ್ಸವ ‘ಪ್ಯಾಸೆಜ್ ಟು ಇಂಡಿಯಾ’ 2024

ಮುಂಬಯಿ: ಕತಾರ್ನಲ್ಲಿರುವ ಭಾರತೀಯ ದೂತಾವಾಸವು ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗದಿಂದ ಮತ್ತೊಂದು ಮಹೋನ್ನತ ಕಾರ್ಯಕ್ರಮವನ್ನು ನೆರವೇರಿಸಲು ಸಜ್ಜಾಗಿದೆ.

ಭಾರತೀಯ ಸಮುದಾಯದ ಉತ್ಸವವಾದ “ಪ್ಯಾಸೆಜ್ ಟು ಇಂಡಿಯಾ 2024 (ಭಾರತದ ಪಥ 2024). ಕಾರ್ಯಕ್ರಮ ಮಾರ್ಚ್ 7 ರಿಂದ 9 ರವರೆಗೆ ಅಂದರೆ ಗುರುವಾರದಿಂದ ಶನಿವಾರದವರೆಗೆ ಇಸ್ಲಾಮಿಕ್ ಕಲೆಯ ವಸ್ತುಸಂಗ್ರಹಾಲಯದ ಉದ್ಯಾನವನದಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮವು ಕಥಾರು ವಸ್ತು ಸಂಗ್ರಹಾಲಯಗಳ ಸಹಯೋಗದಿಂದ ನೆರವೇರಲಿದೆ.

ಪ್ಯಾಸೇಜು ಟು ಇಂಡಿಯಾ 2024 ವಿಶೇಷವಾಗಿರುವ ಮತ್ತೊಂದು ಕಾರಣ ಭಾರತ ಹಾಗೂ ಕತಾರ್ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸುವರ್ಣ ಸಂವತ್ಸರವು ಇದಾಗಿದೆ. ಸತತವಾಗಿ 50ನೇ ವರ್ಷದ ರಾಜತಾಂತ್ರಿಕ ಸಂಬಂಧವನ್ನು ಈ ಕಾರ್ಯಕ್ರಮವು ಆಚರಿಸುತ್ತಿದೆ. ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಮತ್ತು ನೂತನ ಪರ್ವದ ಸಾಧನೆಗಳನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮವು ಭಾರತ ಹಾಗೂ ಕತರಿನ ಸ್ನೇಹವನ್ನು ಶತಗುಣ ಗೊಳಿಸಲಿದೆ.

ಕತಾರಿನ ಪ್ರಖ್ಯಾತ ಹಾಗೂ ಐತಿಹಾಳ ವಾಸ್ತು ಸಂಗ್ರಹಾಲಯವಾದ ಇಸ್ಲಾಮಿಕ್ ಕಲೆ, ಉದ್ಯಾನವನದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಸ್ವರ್ಣಗರಿ ಇಟ್ಟಂತಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತದ ವಿವಿಧ ನೃತ್ಯ, ಗಾಯನ ಮತ್ತು ಕಲೆಗಳ ಪ್ರದರ್ಶನವು ನಡೆಯಲಿದೆ.

ಕರಕುಶಲ ವಸ್ತುಗಳ, ಉಡುಗೆ, ಉಡುಪು, ತೊಡುಗೆ, ಆಭರಣ ಮುಂತಾದ ವಸ್ತುಗಳ ಮಳಿಗೆಗಳು ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸಲಿವೆ ಅಧಿಕೃತ ಭೋಜನ ಶಾಲೆಗಳ ಶಾಖೆಗಳು ಈ ಪ್ರಾಂಗಣದಲ್ಲಿ ತೆರೆಯಲಿದ್ದು, ಭಾರತದ ವಿವಿಧ ಶೈಲಿಯ ಸವಿರುಚಿಯನ್ನು ಓಟೊಪಚಾರಗಳ ಪಾಕದಿಂದ ಸ್ವಾದವನ್ನು ಪಡೆಯಬಹುದು.

ಕತಾರಿನಲ್ಲಿನ ನೂರು ಛಾಯಾಗ್ರಹಕರ ಅದ್ಭುತ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದ್ದು ಇದು ಇನ್ನೊಂದು ಆಕರ್ಷಣೆಯಾಗಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಐಸಿಸಿಐ ಪ್ರಾಯೋಜಕರಾದ ಭಾರತ ಮೂಲದ ಕವಾಲಿ ತಂಡದ ಪ್ರದರ್ಶನ, ಕೇರಳ ಮೂಲದ ತಿರುವಿತರ ತಂಡದ ಪ್ರದರ್ಶನ, ರಾಸ್ ದಾಂಡಿಯ ಪ್ರದರ್ಶನ, ಕತಾರಿನ ಆಂತರಿಕ ಮಂತ್ರಾಲಯದ ಶ್ವಾನಗಳ ಪ್ರದರ್ಶನ, ಸಂಗೀತ ನೇರ ಕಾರ್ಯಕ್ರಮ ಹಾಗೂ ಚಂಡ ಮೇಳಗಳು ಮೊಳಗಲಿವೆ.

ಭಾರತೀಯರಿಗೆ ಪ್ರತಿಭೆ ಇದೆ ಇಂಡಿಯಾ ಹ್ಯಾಸ್ ಗಾಟ್ ಟ್ಯಾಲೆಂಟ್ ಮೂರನೇ ಆವೃತ್ತಿಯ ಅಂತಿಮ ಸುತ್ತಿನ ವಿಜೇತರು ಪಾಲ್ಗೊಳ್ಳಲಿದ್ದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಸುಪ್ರಸಿದ್ಧ ಆಶು ಚಿತ್ರಕಾರರಾದ ಶ್ರೀ ವಿಲಾಸ್ ನಾಯಕ್ ಸ್ಥಳದಲ್ಲೇ ಚಿತ್ರವನ್ನು ಬಿಡಿಸಲಿದ್ದಾರೆ.

ಕಾರ್ಯಕ್ರಮದ ಪ್ರಯುಕ್ತ 40 ಹೆಚ್ಚು ಕಾಲಾವಧಿ ಅನಿವಾಸಿ ಭಾರತೀಯರನ್ನು ಸನ್ಮಾನಿಸಲಾಗುತ್ತಿದೆ ಕೆಳಗಿನ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.
1. 1983ರ ಹಿಂದಿನಿಂದ ಕತಾರಿನಲ್ಲಿ ವಾಸಿಸುತ್ತಿರುವವರು.
2. 1993ರ ಹಿಂದಿನಿಂದ ಕತಾರಿನಲ್ಲಿ ವಾಸಿಸುತ್ತಿರುವ ದಾದಿಯರು.
3. 1993ರ ಹಿಂದಿನಿಂದ ಕತಾರಿನಲ್ಲಿ ವಾಸಿಸುತ್ತಿರುವ ಸಹಾಯಕ ವರ್ಗದವರು.
ಅತಿ ಹೆಚ್ಚು ವರ್ಷಗಳಿಂದ ಕತ್ತರಿನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ಆಯ್ಕೆ ಮಾಡಿ ಸನ್ಮಾನಿಸಲಾಗುವುದು.

ಮೂರು ದಿನಗಳ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಮಾಡಲಾಗಿದೆ, ಸರ್ವರಿಗೂ ಸುಸ್ವಾಗತವನ್ನು ನೀಡಲಾಗಿದೆ. ಉಚಿತ ಸಾರಿಗೆ ವ್ಯವಸ್ಥೆಯನ್ನು ನಿಗದಿತ ಸ್ಥಳದಿಂದ ಹಾಗೂ ಸಮಯಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸ್ಥಳ ಹಾಗೂ ಸಮಯದ ವಿವರಗಳನ್ನು ಮಾಧ್ಯಮಗಳ ಮೂಲಕ ಕಾಲಕ್ರಮೇಣ ತಿಳಿಸಲಾಗುತ್ತದೆ.

ಈ ಮಹೋನ್ನತ ಗಾತ್ರದ ಕಾರ್ಯಕ್ರಮವನ್ನು ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಗಳ ನೆರವೆನಿಂದ ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರವು ಪ್ರತಿನಿಧಿಸುತ್ತಿರುವ 8 ಲಕ್ಷ ಸದಸ್ಯರು ಇರುವ ಭಾರತ ಮೂಲದ ಸಮುದಾಯದ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ. ಭಾರತೀಯ ಸಾಂಸ್ಕೃತಿಕ ಕೇಂದ್ರವು ಈ ಕಾರ್ಯಕ್ರಮವನ್ನು ಹೆಚ್ಚಿನ ರೀತಿಯಲ್ಲಿ ಯಶಸ್ವಿಗೊಳಿಸಲು ಹಾಗೂ ಸವಿ ನೆನಪಿನ ಅಂಗಳದಲ್ಲಿ ಇರಿಸಲು ಸತತ ಪ್ರಯತ್ನದಲ್ಲಿದ್ದು ಭಾರತ ಹಾಗೂ ಕತಾರಿನ ನಡೋಣ ಸ್ನೇಹ ಹಾಗೂ ಬಾಂಧವ್ಯವನ್ನುಸುಭದ್ರ ಗುಡಿಸಲು ಸಮಸ್ತ ಕೊಡುಗೆಯನ್ನು ಅರ್ಪಿಸುತ್ತಿದೆ.

2012ರಲ್ಲಿ ಪ್ರಾರಂಭವಾದ ಪ್ಯಾಸೇಜ ಟು ಇಂಡಿಯಾ ಕಾರ್ಯಕ್ರಮವು ಪ್ರತಿ ವರ್ಷವೂ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಸಂವತ್ಸರವು ಒಂದು ಹಬ್ಬದಂತೆ ಕತಾರಿನಲ್ಲಿನ ಭಾರತೀಯ ಸಮುದಾಯವೂ ಈ ಕಾರ್ಯಕ್ರಮವನ್ನು ಆಚರಿಸುತ್ತಿದ್ದು ಭಾರತದ ಪರಂಪರೆ ಹಾಗೂ ಕತಾರಿನ ಸಾಮರಸ್ಯವನ್ನು ಪ್ರತಿಬಿಂಬಿಸುತ್ತಿದೆ.

ಸಭೆಯಲ್ಲಿ ಉಪಸ್ಥಿತರು: ಕತಾರ್ ದೇಶಕ್ಕೆ ಭಾರತದ ರಾಯಭಾರಿಗಳಾದ ಘನವೆತ್ತ ಶ್ರೀ ವಿಪುಲ್ ಅವರು, ಕತಾರಿನ ಭಾರತೀಯ ದೂತಾವಾಸದ ಪ್ರಥಮ ಕಾರ್ಯದರ್ಶಿಗಳಾದ ಶ್ರೀ ಸಚಿನ್ ದಿನಕರ್ ಶಂಕಪಾಲ್ ಅವರು, ಭಾರತೀಯ ದೂತಾವಾಸದ ದ್ವಿತೀಯ ಕಾರ್ಯದರ್ಶಿಯಾದ ಶ್ರೀಮತಿ ಬಿಂದು ನಾಯರ್ ಅವರು, ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಶ್ರೀ ಪಿ ಮಣಿಕಂಠನ್ ಅವರು, ಪ್ಯಾಸೇಜ್ ಟು ಇಂಡಿಯಾ 2024 ಆಯೋಜನ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ ಎನ್ ಬಾಬು ರಾಜನ್ ಅವರು ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಕರ್ನಾಟಕ ಮೂಲದವರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Udupi: ಮಳೆಯ ನೆರೆಯಲ್ಲೇ ಕಷ್ಟದಿಂದ ಶಾಲೆಗೆ ತೆರಳಿದ ಮಕ್ಕಳು

Udupi: ಮಳೆಯ ನೆರೆಯಲ್ಲೇ ಕಷ್ಟದಿಂದ ಶಾಲೆಗೆ ತೆರಳಿದ ಮಕ್ಕಳು

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

1

Heavy Rain: ನಿರಂತರ ಮಳೆಯ ಹಿನ್ನೆಲೆ; ಬೈಂದೂರು ತಾಲೂಕಿನ 19 ಶಾಲೆಗಳಿಗೆ ರಜೆ ಘೋಷಣೆ

Bar

Government; ಡಿಜಿಟಲೀಕರಣದತ್ತ ಅಬಕಾರಿ ಇಲಾಖೆ: ಭ್ರಷ್ಟಾಚಾರಕ್ಕೆ ಬೀಳಲಿದೆ ಕಡಿವಾಣ!

Udupi ಆನೆಕಾಲು ಮುಕ್ತ ಅನುಮೋದನೆಯಷ್ಟೇ ಬಾಕಿ

Udupi ಆನೆಕಾಲು ಮುಕ್ತ ಅನುಮೋದನೆಯಷ್ಟೇ ಬಾಕಿ

Darshan-case

Renukaswamy Case: ದರ್ಶನ್‌, ಪವಿತ್ರಾ ಗೌಡ ಸೇರಿ 10 ಮಂದಿ ಬೆರಳಚ್ಚು ಹೊಂದಾಣಿಕೆ

Mangaluruವಿವಿ ಶೈಕ್ಷಣಿಕ ಕ್ಯಾಲೆಂಡರ್‌ ವಿಳಂಬ: ಪದವಿ ಕೋರ್ಸ್‌ಗಳಿಂದ ವಿದ್ಯಾರ್ಥಿಗಳು ವಿಮುಖ

Mangaluruವಿವಿ ಶೈಕ್ಷಣಿಕ ಕ್ಯಾಲೆಂಡರ್‌ ವಿಳಂಬ: ಪದವಿ ಕೋರ್ಸ್‌ಗಳಿಂದ ವಿದ್ಯಾರ್ಥಿಗಳು ವಿಮುಖ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Udupi: ಮಳೆಯ ನೆರೆಯಲ್ಲೇ ಕಷ್ಟದಿಂದ ಶಾಲೆಗೆ ತೆರಳಿದ ಮಕ್ಕಳು

Udupi: ಮಳೆಯ ನೆರೆಯಲ್ಲೇ ಕಷ್ಟದಿಂದ ಶಾಲೆಗೆ ತೆರಳಿದ ಮಕ್ಕಳು

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

1

Heavy Rain: ನಿರಂತರ ಮಳೆಯ ಹಿನ್ನೆಲೆ; ಬೈಂದೂರು ತಾಲೂಕಿನ 19 ಶಾಲೆಗಳಿಗೆ ರಜೆ ಘೋಷಣೆ

Bar

Government; ಡಿಜಿಟಲೀಕರಣದತ್ತ ಅಬಕಾರಿ ಇಲಾಖೆ: ಭ್ರಷ್ಟಾಚಾರಕ್ಕೆ ಬೀಳಲಿದೆ ಕಡಿವಾಣ!

Udupi ಆನೆಕಾಲು ಮುಕ್ತ ಅನುಮೋದನೆಯಷ್ಟೇ ಬಾಕಿ

Udupi ಆನೆಕಾಲು ಮುಕ್ತ ಅನುಮೋದನೆಯಷ್ಟೇ ಬಾಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.