ಪಟ್ಲ ಫೌಂಡೇಶನ್ ಮುಂಬಯಿ: ಗೌರವಾಧ್ಯಕ್ಷರಾಗಿ ಐಕಳ ಅಧ್ಯಕ್ಷರಾಗಿ ಕಡಂದಲೆ
Team Udayavani, May 25, 2019, 1:30 PM IST
ಮುಂಬಯಿ: ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿ ಪಡೆದಿರುವ ಯಕ್ಷಗಾನ ಕ್ಷೇತ್ರದಲ್ಲಿ ವೃತ್ತಿಪರ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಅಶಕ್ತ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಅಶಕ್ತ ಕಲಾವಿದರ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ನಿಟ್ಟಿನಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಆರಂಭಗೊಂಡಿರುವ ಯಕ್ಷಧ್ರುವ ಪಟ್ಲ ಫೌಂಡೇಷನ್ ಇದರ ಮುಂಬಯಿ ಘಟಕದ ವಿಶೇಷ ಸಭೆಯು ಮೇ 20ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಸ್ ಸಂಕೀರ್ಣದಲ್ಲಿ ಜರಗಿತು.
ಇದೇ ಸಂದರ್ಭದಲ್ಲಿ 2019-2021ನೇ ಅವಧಿಯ ನೂತನ ಪದಾಧಿಕಾರಿಗಳು ಹಾಗೂ ಗೌರವ ಸಲಹೆಗಾರರ ಆಯ್ಕೆಯು ಮುಂಬಯಿ ಘಟಕದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಇವರ ಸಮಕ್ಷಮದಲ್ಲಿ ನಡೆಯಿತು. ಗೌರವಾಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ, ಅಧ್ಯಕ್ಷರಾಗಿ ಸುರೇಶ್ ಭಂಡಾರಿ ಕಡಂದಲೆ ಇವರು ಮರು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಡಾ| ವಿರಾರ್ ಶಂಕರ್ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಗುಣಪಾಲ್ ಶೆಟ್ಟಿ ಐಕಳ, ರವೀಂದ್ರನಾಥ್ ಎಂ. ಭಂಡಾರಿ, ಬಾಬು ಎಸ್. ಶೆಟ್ಟಿ ಪೆರಾರ, ಅಶೋಕ್ ಪಕ್ಕಳ ಅವರು ಆಯ್ಕೆಯಾದರು. ಸಂಚಾಲಕರಾಗಿ ಅಶೋಕ್ ಶೆಟ್ಟಿ ಪೆರ್ಮುದೆ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಕರ್ನೂರು ಮೋಹನ್ ರೈ, ಗೌರವ ಕೋಶಾಧಿಕಾರಿಯಾಗಿ ಶಶಿಧರ ಶೆಟ್ಟಿ ಇನ್ನಂಜೆ ನಲಸೋಪರ, ಜತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಅಜೆಕಾರು, ಜತೆ ಕೋಶಾಧಿಕಾರಿಯಾಗಿ ರವೀಂದ್ರ ವೈ. ಶೆಟ್ಟಿ ಡೊಂಬಿವಲಿ ಇವರು ನೇಮಕಗೊಂಡರು.
ಗೌರವ ಸಲಹೆಗಾರರಾಗಿ ಪದ್ಮನಾಭ ಎಸ್. ಪಯ್ಯಡೆ, ಕೆ. ಡಿ. ಶೆಟ್ಟಿ ಭವಾನಿ ಗ್ರೂಪ್ಸ್, ಕರ್ನಿರೆ ವಿಶ್ವನಾಥ್ ಶೆಟ್ಟಿ, ಚಂದ್ರಶೇಖರ ಪೂಜಾರಿ, ಡಾ| ಪ್ರಭಾಕರ ಶೆಟ್ಟಿ ಬಿ., ಕೈರಬೆಟ್ಟು ವಿಶ್ವನಾಥ್ ಭಟ್, ಪ್ರವೀಣ್ ಭೋಜ ಶೆಟ್ಟಿ, ಕೆ. ಕೆ. ಶೆಟ್ಟಿ, ಕುಶಲ್ ಸಿ. ಭಂಡಾರಿ, ಅಶೋಕ್ ಅಡ್ಯಂತಾಯ, ವಸಂತ ಶೆಟ್ಟಿ ಪಲಿಮಾರು, ವೇಣುಗೋಪಾಲ್ ಶೆಟ್ಟಿ ಥಾಣೆ, ಸುರೇಶ್ ಶೆಟ್ಟಿ ಮರಾಠ, ಚಂದ್ರಹಾಸ್ ಶೆಟ್ಟಿ ಥಾಣೆ, ಸಿಎ ಸುರೇಂದ್ರ ಶೆಟ್ಟಿ, ದಿವಾಕರ ಶೆಟ್ಟಿ ಇಂದ್ರಾಳಿ, ಸುಂದರ ಶೆಟ್ಟಿ ತಾಳಿಪಾಡಿ ಡೊಂಬಿವಲಿ, ಚಂದ್ರಹಾಸ್ ರೈ ಬೊಳ್ನಾಡುಗುತ್ತು, ಕರುಣಾಕರ ಶೆಟ್ಟಿ ಕಲ್ಲಡ್ಕ, ಚಂದ್ರಶೇಖರ ಬೆಳ್ಚಡ, ಗೋಪಾಲ್ ಪುತ್ರನ್, ವಾಮಯ್ಯ ಶೆಟ್ಟಿ ಚೆಂಬೂರು, ಕರ್ನೂರು ಶಂಕರ ಆಳ್ವ, ಕಿಶೋರ್ ಶೆಟ್ಟಿ ಕುತ್ಯಾರು, ದಿವಾಕರ ಶೆಟ್ಟಿ ಕುರ್ಲಾ, ಸುರೇಂದ್ರ ಕುಮಾರ್ ಹೆಗ್ಡೆ, ವಿಜಯ್ ಭಂಡಾರಿ, ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್, ಜಯ ಎ. ಶೆಟ್ಟಿ, ನವೀನ್ ಶೆಟ್ಟಿ ಇನ್ನಬಾಳಿಕೆ, ಸತೀಶ್ ಶೆಟ್ಟಿ ಕೊಟ್ರಪಾಡಿ, ರಾಘು ಪಿ. ಶೆಟ್ಟಿ, ಸುರೇಶ್ ಶೆಟ್ಟಿ ಯೆಯ್ನಾಡಿ, ಸುರೇಂದ್ರ ಶೆಟ್ಟಿ ಪಂಚರತ್ನ, ಪ್ರೇಮನಾಥ್ ಶೆಟ್ಟಿ ಮುಂಡ್ಕೂರು, ದಿನೇಶ್ ಕುಲಾಲ್ ಅವರನ್ನು ನೇಮಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Jimmy Carter Life Journey: ಜಿಮ್ಮಿ ಕಾರ್ಟರ್- ಮಾನವೀಯತೆ, ಶಾಂತಿಯ ಶಿಲ್ಪಿ
ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ
15ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ: ಶ್ರೀ ವಿಶ್ವಕರ್ಮ ಸೇವಾ ಬಳಗ ಬಹ್ರೈನ್
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.