ಪೇಜಾವರ ಶ್ರೀಗಳ ರಜತ ತುಲಾಭಾರ ಸಪ್ತಾಹ ಸಮಾರೋಪ
Team Udayavani, Jul 2, 2019, 4:53 PM IST
ಮುಂಬಯಿ: ಉಡುಪಿ ಶ್ರೀ ಕೃಷ್ಣನಿಗೆ ಸಪ್ತೋತ್ಸವ ನಡೆಯುವಂತೆ ಮರಾಠಿ ಮಣ್ಣಿನಲ್ಲಿ ಆತನಿಗೆ ತುಲಾಭಾರ ಸಪ್ತೋತ್ಸವ ನಡೆದಿದೆ. ಇಲ್ಲಿ ನಮಗೆ ಯಾವ ತೊಂದರೆಗಳೂ ಆಗಲಿಲ್ಲ. ದೇವರ ಸೇವೆಗೆ ಪಡುವ ಕಷ್ಟ ಅದು ತಪಸ್ಸು ಇದ್ದ ಹಾಗೆ. ಅದು ಶ್ರೀಕೃಷ್ಣನ ಸೇವೆಗೆ ಆತ ನೀಡಿದ ಅವಕಾಶ. ಕಾಳಿಯನಿಂದಾಗಿ ಯಮುನಾ ನದಿಯಲ್ಲಿ ತುಂಬಿದ ವಿಷವನ್ನು ಶ್ರೀ ಕೃಷ್ಣ ¡ ಕಾಳಿಯ ಮರ್ದನನಾಗಿ ಹೇಗೆ ಶುದ್ಧಿಗೊಳಿಸಿದನೋ, ಅಂತೆಯೇ ಇಂದು ಪರಿಸರದಲ್ಲಿ ಯಂತ್ರ, ತಂತ್ರಗಳಿಂದ ಕಲುಷಿತವಾದ ವಾತಾವರಣವನ್ನು ಹಾಗೂ ನಮ್ಮ ಅಂತರಂಗ-ಬಹಿರಂಗದಲ್ಲಿ ತುಂಬಿಕೊಂಡ ಕೆಟ್ಟ ಕಾಮನೆಗಳನ್ನು, ಮಂತ್ರದಿಂದ ಶುದ್ಧಿ ಗೊಳಿಸಬೇಕು. ಅದಕ್ಕೆ ಮಂದಿರಗಳ ನಿರ್ಮಾಣ ಅತ್ಯಂತ ಅವಶ್ಯವಾಗಿದೆ. ಗೋಕುಲದ ಶ್ರೀ ಕೃಷ್ಣ ಮಂದಿರ ನಿರ್ಮಾಣಕ್ಕೆ ಸರ್ವ ಭಕ್ತಾದಿಗಳು ತುಂಬು ಹೃದಯದಿಂದ ಸಹಕರಿಸಬೇಕು ಎಂದು ಜಗದ್ಗುರು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀàಜಿಯವರು ನುಡಿದರು.
ಜೂ. 30ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಜಿಪಿಟಿ), ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ ಹಾಗೂ ಶ್ರೀ ಕೃಷ್ಣ ಭಕ್ತಾದಿಗಳು ಮತ್ತು ಶ್ರೀ ಪೇಜಾವರ ಮಠಾಧೀಶರ ಅಭಿಮಾನಿಗಳು ಪ್ರಪ್ರಥಮ ಬಾರಿಗೆ ಮುಂಬಯಿ ಹಾಗೂ ಉಪನಗರಗಳ ಭಕ್ತವೃಂದವು ಬೃಹನ್ಮುಂಬಯಿಯಲ್ಲಿ ಹಮ್ಮಿ ಕೊಂಡಿದ್ದ ಪೇಜಾವರ ಶ್ರೀಗಳ ರಜತ ತುಲಾಭಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮ ಸೇವೆಯು ನಿಸ್ವಾರ್ಥವಾಗಿದಾಗ ಅದು ದೇವರಿಗೆ ಅರ್ಪಣೆಯಾಗುತ್ತದೆ. ಅಂತಹ ಉತ್ತಮ ಭಾವನೆಯಿಂದ, ಭಕ್ತಿಯಿಂದ ತನುಶುದ್ಧ, ಮನಶುದ್ಧದಿಂದ ಆಯೋಜಿಸಿರುವ ಈ ರಜತ ಸಪ್ತಾಹ ಧಾರ್ಮಿಕ ಉತ್ಸವವು ಅರ್ಥಪೂರ್ಣವಾಗಿ ನಡೆದು ಶ್ರೀಕೃಷ್ಣನಿಗೆ ಅರ್ಪಣೆಯಾಗಿದೆ ಎಂದು ನುಡಿದು ಎಲ್ಲರಿಗೂ ಭಗವಂತನ ಅನುಗ್ರಹ ಸದಾಯಿರಲಿ ಎಂದು ಹಾರೈಸಿದರು.
ಶ್ರೀ ಕ್ಷೇತ್ರ ಕಟೀಲು ಇದರ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ ಇವರ ದಿವ್ಯ ಉಪಸ್ಥಿತಿಯಲ್ಲಿ ಜರಗಿದ ತುಲಾಭಾರ ಸಪ್ತಾಹದ ಸಮಾರೋಪದಲ್ಲಿ ಸಮಾರಂಭದಲ್ಲಿ ಬೃಹನ್ಮುಂಬಯಿ ಮುನ್ಸಿಪಾಲ್ ಕಾರ್ಪೋರೇಶನ್ ಇದರ ಮಹಾಪೌರ ಪ್ರೊ| ವಿಶ್ವನಾಥ್ ಮಹಾದೇಶ್ವರ್ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಪೇಜಾವರ ಸ್ವಾಮೀಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ| ಸುರೇಶ್ ಎಸ್.ರಾವ್ ಅವರು ಮಾತನಾಡಿ, ನಾವು ಹಮ್ಮಿಕೊಂಡ ರಜತ ತುಲಾಭಾರ ಸೇವೆಯು ಶ್ರೀ ಗುರುಗಳ ಹಾಗೂ ಶ್ರೀ ಕೃಷ್ಣನ ಅನುಗ್ರಹದಿಂದ ಅತ್ಯುತ್ತಮವಾಗಿ ಜರಗಿ ಇತಿಹಾಸವನ್ನು ನಿರ್ಮಿಸಿದ ತೃಪ್ತಿ ನೀಡಿದೆ. ಆದರೆ ಒಂದೆರಡು ದಿನ ಮಳೆಯ ಕಾರಣ ಶ್ರೀಗಳಿಗೆ ಪ್ರಯಾಣದಲ್ಲಿ ತುಂಬಾ ತೊಂದರೆಯಾದುದು ನಮಗೆ ಬೇಸರವಾಗಿದೆ. ಅವರಿಗೆ ಆದ ಕಷ್ಟಗಳಿಗೆ ನಮಗೆ ತುಂಬಾ ನೋವಾಗಿದೆ. ಆದರೆ ಅವರು ತಮ್ಮ ಎಂದಿನಂತೆ ಉತ್ಸಾಹದಿಂದ ಶ್ರೀ ದೇವರ ಮಂದಿರ ನಿರ್ಮಾಣಕ್ಕೆ ನಮ್ಮೊಂದಿಗೆ ಸಹಕರಿಸಿ ನಮಗೆ ಅನುಗ್ರಹಿಸಿದ್ದಾರೆ. ಶ್ರೀಕೃಷ್ಣ ಹಾಗೂ ಶ್ರೀಗಳ ಅನುಗ್ರಹ, ಆಶೀರ್ವಾದದಿಂದ ಗೋಕುಲದ ಮಂದಿರವು ಶೀಘ್ರದಲ್ಲೇ ನಿರ್ಮಾಣಗೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂದು ಅಭಿಪ್ರಾಯಿಸಿದರು.
ವೇದಮೂರ್ತಿ ಪೆರ್ಣಂಕಿಲ ಹರಿದಾಸ್ ಭಟ್ ಅವರು ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ಯತಿಕುಲ ತಿಲಕರು, ವಾಮನ ಮೂರ್ತಿಯಾದರೂ ಅದ್ಭುತ ಗಾತ್ರದ ವ್ಯಕ್ತಿತ್ವವುಳ್ಳ ಶ್ರೀಪಾದರು, ಕಾಮಿತಾರ್ಥ ಪ್ರದಾಯಕರಾಗಿದ್ದಾರೆ. ಅವರು ನಮ್ಮ ಅಭಿಲಾಷೆಯನ್ನು ಈಡೇರಿಸುವವರು, ಪೂರ್ವಾಶ್ರಮದಲ್ಲಿ ವೆಂಕಟರಮಣನೆಂದು ನಾಮಾಂಕಿತರಾದ ಪೂಜ್ಯ ಶ್ರೀಪಾದರು ಶ್ರೀನಿವಾಸರಾಗಿ ನಮಗೆಲ್ಲಾ ಅನುಗ್ರಹಿಸಿದ್ದಾರೆ. ಅವರ ಆಶೀರ್ವಾದದಿಂದ ಶ್ರೀ ಕೃಷ್ಣ ಮಂದಿರ ನಿರ್ಮಾಣದ ಕನಸು ಶೀಘ್ರದಲ್ಲಿ ಸಾಕಾರ ವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಗೋಪಾಲಕೃಷ್ಣ ಮತ್ತು ಬಿಎಸ್‌ಕೆಬಿಎ ಸಂಸ್ಥೆಗಳ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು ಹಾಗೂ ಪದಾಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಭಕ್ತರನ್ನು ಸೇರಿಸಿಕೊಂಡು ಪೇಜಾವರ ಶ್ರೀಗಳ ಸಪ್ತಾಹದ ಕೊನೆಯ ರಜತ ತುಲಾಭಾರ ನೆರವೇರಿಸಿದರು. ಡಾ| ಸುರೇಶ್ ಎಸ್. ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಸುರೇಶ್ ರಾವ್ ದಂಪತಿ ಆರತಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶೇಖರ್ ಸಾಲ್ಯಾನ್, ಡಾ| ಮನೋಜ್ ಹುನ್ನೂರು, ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಬಿಎಸ್‌ಕೆಬಿಎ ಇದರ ಗೌರವ ಪ್ರಧಾನ ಕಾರ್ಯದರ್ಶಿ ಎ. ಪಿ. ಕೆ ಪೋತಿ, ಗೌರವ ಕೋಶಾಧಿಕಾರಿ ಸಿಎ ಹರಿದಾಸ್ ಭಟ್, ಜತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಮಹಿಳಾ ವಿಭಾಗದ ಅಧ್ಯಕ್ಷೆ ಐ. ಕೆ. ಪ್ರೇಮಾ ಎಸ್. ರಾವ್, ಜಿಪಿಟಿ ವಿಶ್ವಸ್ತ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ಎ. ಎಸ್. ರಾವ್, ವಿಶ್ವಸ್ತ ಸದಸ್ಯರಾದ ಬಿ. ರಮಾನಂದ ರಾವ್ ಬಡನಿಡಿಯೂರು, ಕೃಷ್ಣ ಆಚಾರ್ಯ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಕೈರಬೆಟ್ಟು ವಿಶ್ವನಾಥ್ ಭಟ್, ಪೇಜಾವರ ಮಠದ ಆಡಳಿತಾಧಿಕಾರಿಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೆr ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಶುಭಾ ವಸರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಎಸ್. ಕೆ. ಉರ್ವಾಳ್ ಮತ್ತು ಪ್ರಫುಲ್ಲಾ ಎಸ್.ಉರ್ವಾಳ್ ಪರಿವಾರದ ಪ್ರಾಯೋಜಕತ್ವದಲ್ಲಿ ಗುರು ಶ್ರೀಮತಿ ಮಂಜುಳಾ ಜಿ. ಭಟ್ ಬಳಗದಿಂದ ಭಜನಾ ಸಂಗೀತ ಕಾರ್ಯಕ್ರಮ ನಡೆಯಿತು. ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಚಿತ್ರ-ವರದಿ: ರೊನಿಡಾ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಕ್ಕರೆ ನಾಡಿನಲ್ಲಿ ಸಿಹಿ ಕ್ಷಣ : ಮಂಡ್ಯದಲ್ಲಿ ಕನ್ನಡತಿಯ ಇಟಲಿ ಕೃತಿ ಬಿಡುಗಡೆ
ಮನಮುಟ್ಟಿದ ನೃತ್ಯ; ಇಂದಿನ ಜಗತ್ತಿನಲ್ಲಿ ಅರ್ಧನಾರೀಶ್ವರನ ಪ್ರಸ್ತುತಿ
Desi Swara: ಜರ್ಮನಿಯಲ್ಲಿ ಮಕ್ಕಳಿಂದ ಪುಣ್ಯಕೋಟಿ ನೆರಳಿನಾಟ ವಿಭಿನ್ನ ಪ್ರದರ್ಶನ
Makar Sankranti: ರೇಷ್ಮೆ ಜರಿಯ ಸಂಕ್ರಮಣ ಸಂಭ್ರಮ: ಮಗಳು ನೆನಪಿಸಿದ ಅಮ್ಮನ ಬಾಲ್ಯದ ನೆನಪು
ಬ್ರಿಟನ್‌ನ “ಅನಿವಾಸಿ.ಕಾಂ’ ಸಾಹಿತ್ಯ ಜಾಲಜಗುಲಿಗೆ ದಶಮಾನೋತ್ಸವ
MUST WATCH
ಹೊಸ ಸೇರ್ಪಡೆ
Bangla crisis: ಜವಳಿ ಕ್ಷೇತ್ರಕ್ಕೆ ತೆರಿಗೆ ವಿನಾಯ್ತಿ?
Daily Horoscope;ಹಿತಶತ್ರುಗಳ ಹುನ್ನಾರದ ಕುರಿತು ಎಚ್ಚರ,ರಾತ್ರಿ ಪ್ರಯಾಣದಿಂದ ದೂರವಿರಿ…
Los Angeles wildfires: ಒಲಿಂಪಿಕ್ಸ್ ಆಯೋಜನೆಗೆ ಭೀತಿ?
CongressVsAAP: ದಿಲ್ಲಿ ಪ್ಯಾರಿಸ್ ಆಗುತ್ತದೆ ಎಂದಿದ್ದ ಕೇಜ್ರಿ, ಏನೂ ಮಾಡಲಿಲ್ಲ: ರಾಹುಲ್
ICC: ಬುಮ್ರಾ “ಐಸಿಸಿ ತಿಂಗಳ ಕ್ರಿಕೆಟಿಗ’; ಅನ್ನಾಬೆಲ್‌ಗೆ ವನಿತಾ ವಿಭಾಗದ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.