ಪೇಜಾವರ ಮಠ: 25ನೇ ಪುರಂದರದಾಸರ ಆರಾಧನೆ
Team Udayavani, Jan 19, 2018, 2:07 PM IST
ಮುಂಬಯಿ: ಸಾಂತಾಕ್ರೂಜ್ ಪೂರ್ವ ಶ್ರೀ ಪೇಜಾವರ ಮಠ ಮುಂಬಯಿ ವತಿಯಿಂದ ಭಜನೆ ಕೀರ್ತನೆಯೊಂದಿಗೆ 25ನೇ ವಾರ್ಷಿಕ ಪುರಂದರದಾಸರ ಆರಾಧನೆ ನಡೆಯಿತು. ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನದ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರ ನಿರ್ದೇಶನದಲ್ಲಿ ವಿವಿಧ ಪೂಜೆಗಳು ನಡೆದವು.
ಇದೇ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಕೈರಬೆಟ್ಟು ವಿಶ್ವನಾಥ್ ಭಟ್ ಅವರು, ಅಪನಂಬಿಕೆಗಳ ನಿರ್ಮೂಲನಕ್ಕೆ ಭಕ್ತಿ ಮತ್ತು ಭಕ್ತಿಯ ಶ್ರದ್ಧೆಗೆ ಭಜನೆ ಆವಶ್ಯಕವಾಗಿದ್ದು. ಭಜನೆಗಳು ಮನುಷ್ಯನನ್ನು ಭಗವಂತನತ್ತ ಸಮೀಪಿಕರಿಸುತ್ತವೆೆ. ಭಜನೆಯಿಂದ ಸಂಸ್ಕೃತಿಯ ಅರಿವು ಸಾಧ್ಯವಾಗಿ ಸಂಸ್ಕಾರದ ಬಾಳಿಗೆ ಪೂರಕವಾಗುತ್ತದೆ. ಭಜನೆ ಮನೆಮನಗಳನ್ನು ಪ್ರಫುಲ್ಲಗೊಳಿಸುತ್ತದೆ. ಇವುಗಳಿಗೆಲ್ಲಾ ಗುರುವರ್ಯರ ಆಶೀರ್ವಾದದ ಅಗತ್ಯವಿದೆ. ಗುರುಗಳ ಶಿಷ್ಯನಾಗುವವನೇ ಪರಮ ಭಕ್ತನಾಗುತ್ತಾನೆ. ರತ್ನಾ ಆಚಾರ್ಯ, ಸಾಬಕ್ಕ ಖೇಡೆಕರ್ ಪ್ರಸಿದ್ಧಿಯ ಸುನಂದಾ ಉಪಾಧ್ಯಾಯ ಇವರೆಲ್ಲರ ಭಜನನಿಷ್ಠೆ ಇಂತಹ ಕಾರ್ಯಕ್ರಮಕ್ಕೆ ಪ್ರೇರಕವಾಗಿದೆ. ಸದ್ಯ ಸ್ವರ್ಗಸ್ಥ ರತ್ನಾ ಆಚಾರ್ಯ ಅವರ ಸ್ಮರಣೆಯೊಂದಿಗೆ ಅವರಿಗೆ ವೈಕುಂಠವನ್ನು ಭಗವಂತ ಕರುಣಿಸಲಿ. ಭಜನಾ ಮಂಡಳಿಗಳ ಸೇವೆ, ಪ್ರೋತ್ಸಾಹ ಎಲ್ಲರಿಗೂ ಅನುಕರಣೀಯ. ಮುಂದೆಯೂ ಪರಿಪೂರ್ಣ ಮನಸ್ಸಿನಿಂದ ಭಜನೆಯನ್ನಾಡಿ ಶ್ರೀದೇವರನ್ನು ಸ್ತುತಿಸಿ ಜೀವನ ಪಾವನಗೊಳಿಸಿರಿ ಎಂದು ಹಾರೈಸಿದರು.
ಮಠದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಆಡಳಿತ ಸಮಿತಿ ಗೌರವ ಅಧ್ಯಕ್ಷ ಡಾ| ಎ. ಎಸ್. ರಾವ್, ಭಜನ ಕಾರ್ಯಕ್ರಮ ಸ್ಪರ್ಧೆಯ ಸಂಘಟಕಿ ಸುನಂದಾ ಸದಾನಂದ ಉಪಾಧ್ಯಾಯ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ ವೇದಿಕೆಯಲ್ಲಿ ಆಸೀನರಾಗಿದ್ದು, ವಿಜೇತ ಭಜನ ತಂಡಗಳಿಗೆ ಬಹುಮಾನ, ಫಲಕ ಪ್ರದಾನಿಸಿ ಅಭಿನಂದಿಸಿದರು.
ಎ. ಎಸ್. ರಾವ್ ಮಾತನಾಡಿ, ಭಜನೆ ಮಹಾನ್ ಕಾಯಕವಾಗಿದೆ. ಭಜನೆ ಎಂದಿಗೂ ಸ್ಪರ್ಧೆ
ಆಗಲಾರದು. ಆದರೂ ತಂಡಗಳ ಪ್ರೋತ್ಸಾಹಕ್ಕಾಗಿ ಹೆಸರಿ ಗಷ್ಟೇ ಸ್ಪರ್ಧೆ. ಭಜನೆಯಲ್ಲಿ ಭಕ್ತಿ ಇಮ್ಮಡಿಗೊಳ್ಳುತ್ತಿದ್ದು, ಇದರಿಂದ ಎಲ್ಲರೂ ಭಜನೆಯಲ್ಲಿ ಚಿಂತೆನೆ ಮೂಡಿಸಿ ಅನುಸರಿಸುವಿಕೆ ಅವಶ್ಯವಾಗಿದೆ ಎಂದು ಎ. ಎಸ್. ರಾವ್ ಅವರು ತಿಳಿಸಿದರು.
ರಾಮದಾಸ ಉಪಾಧ್ಯಾಯ ಅವರು ಸ್ವಾಗತಿಸಿ ಮಾತನಾಡಿ, ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪಂಚಮ ಪರ್ಯಾಯದ ಕೊನೆಯ ದಿನವಾದ ಇಂದು ಪರ್ಯಾಯೋತ್ಸವ ಸಮಾಪ್ತಿ ಸಂಭ್ರಮ ಎಲ್ಲರಲ್ಲೂ ಹರ್ಷ ಮೂಡಿಸಿದೆ ಎಂದರು.
ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕಾರ್ಯದರ್ಶಿಗಳಾದ ಬಿ. ಆರ್. ಗುರುಮೂರ್ತಿ, ಪೇಜಾವರ ಮಠದ ವ್ಯವಸ್ಥಾಪಕ ಹರಿ ಭಟ್, ಶ್ರೀನಿವಾಸ ಭಟ್ ಪರೇಲ್, ವಿಜಯಲಕ್ಷ್ಮೀ ಸುರೇಶ್ ರಾವ್, ಸುಶೀಲಾ ಎಸ್. ದೇವಾಡಿಗ, ಸುಮತಿ ಆರ್. ಶೆಟ್ಟಿ, ಪಿ. ವಿ. ಐತಾಳ್, ಶೇಖರ್ ಸಸಿಹಿತ್ಲು, ಎಂ. ಎಸ್. ರಾವ್ ಚಾರ್ಕೋಪ್, ಶೇಖರ್ ಸಾಲ್ಯಾನ್, ಪದ್ಮಜಾ ಮಣ್ಣೂರು, ಶ್ಯಾಮಲಾ ಅವಿನಾಶ್ ಶಾಸ್ತ್ರಿ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದು ಮಹಾ ನಗರಾದ್ಯಂತದ ಸುಮಾರು 15 ಕ್ಕೂ ಮಿಕ್ಕಿದ ಭಜನ ಮಂಡಳಿಗಳು ಶಾಸ್ತ್ರೋಕ್ತವಾಗಿ ಭಜನೆ ನೆರವೇರಿಸಿದವು. ಸುನಂದಾ ಉಪಾಧ್ಯಾಯ ವಂದಿಸಿದರು.
ಚಿತ್ರ- ವರದಿ:ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.