ಸಂಶೋಧನೆಯಲ್ಲಿ ಪರಿಶ್ರಮ ಮುಖ್ಯ: ಡಾ| ವಿಶ್ವನಾಥ್ ಕಾರ್ನಾಡ್
Team Udayavani, Apr 1, 2021, 11:25 AM IST
ಮುಂಬಯಿ: ಸಂಶೋಧನೆ ಕಠಿನ ಕಾರ್ಯವಾಗಿದ್ದು, ಇಲ್ಲಿ ಯಶಸ್ಸು ಸುಲಭದಲ್ಲಿ ದಕ್ಕದು. ಸಂಶೋಧನೆಯಲ್ಲಿ ನಿರತರಾದವರು ಸದಾ ಕುತೂಹಲಿಗಳಾಗಿರಬೇಕು. ಯಾರು ಹೆಚ್ಚು ಪರಿಶ್ರಮ ಪಡುತ್ತಾರೋ ಅವರು ಒಳ್ಳೆಯ ಶೋಧ ಗ್ರಂಥಗಳನ್ನು ರಚಿಸಬಲ್ಲರು ಎಂದು ಹಿರಿಯ ಸಾಹಿತಿ, ಸಂಶೋಧಕ ಡಾ| ವಿಶ್ವನಾಥ್ ಕಾರ್ನಾಡ್ ಅಭಿಪ್ರಾಯಪಟ್ಟರು.
ಮಾ. 30ರಂದು ಕನ್ನಡ ವಿಭಾಗ ಆಯೋಜಿಸಿದ್ದ ಸಂಶೋಧನ ಮಂಡಳಿ ಸಭೆಯಲ್ಲಿ ವಿಶೇಷ ತಜ್ಞರಾಗಿ ಪಾಲ್ಗೊಂಡು ಮಾತನಾಡಿ, ಕುತೂಹಲ, ಆಸಕ್ತಿಯಿಂದ ಮುಂದುವರಿದರೆ ಗುರಿ ಮುಟ್ಟಲು ಸಾಧ್ಯ. ಕನ್ನಡ ವಿಭಾಗದಲ್ಲಿ ಈಗ ಸಂಶೋಧನೆಯಲ್ಲಿ ತೊಡಗಿ ಕೊಳ್ಳುವವರ ಸಂಖ್ಯೆ ಹೆಚ್ಚಿದೆ. ವಿಭಾಗದ ವಿದ್ಯಾರ್ಥಿಗಳಿಂದ ಒಳ್ಳೆಯ ಶೋಧ ಕೃತಿಗಳು ಬರುತ್ತಿರುವುದು ಸಂತೋಷದ ಸಂಗತಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭ ಜಯ ಸಾಲ್ಯಾನ್ ಅವರು “ಮುಂಬಯಿಯಲ್ಲಿ ಬೆಳಗಿದ ಕರ್ನಾಟಕ ಮೂಲದ ಕಲಾವಿದರು’ ಎಂಬ ತಮ್ಮ ಸಂಶೋಧನ ಯೋಜನೆಯ ಉದ್ದೇಶಗಳನ್ನು ವಿವರಿಸಿದರು. ಸುರೇಖಾ ದೇವಾಡಿಗ ಅವರು ತಮ್ಮ ಸಂಶೋಧನೆಯ ರೂಪುರೇಷೆಯನ್ನು ಸಭೆಯ ಮುಂದೆ ಪ್ರಸ್ತುತಪಡಿಸಿದರು.
ಮಾರ್ಗದರ್ಶಕ ಹಾಗೂ ಕನ್ನಡ ಸಂಶೋಧನ ಮಂಡಳಿಯ ಅಧ್ಯಕ್ಷ ಡಾ| ಜಿ. ಎನ್. ಉಪಾಧ್ಯ ಮಾತನಾಡಿ, ವಿಭಾಗದ ವಿದ್ಯಾರ್ಥಿ ಗಳು ಬಹುಶಿಸ್ತೀಯ, ಅಂತರ ಶಿಸ್ತೀಯ ಸಂಶೋಧನೆಯಲ್ಲಿ ತೊಡ ಗಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಸಾಹಿತ್ಯದ ಜತೆಗೆ ಚಿತ್ರಕಲೆ, ಸಂಗೀತ ಮೊದಲಾದ ವಿಷಯ ಗಳತ್ತಲೂ ವಿದ್ಯಾರ್ಥಿಗಳ ಒಲವು ಹೆಚ್ಚುತ್ತಿರುವುದು ಆಶಾದಾಯಕ ಸಂಗತಿ. ಜಯ ಸಾಲ್ಯಾನ್ ಅವರ ಅಧ್ಯಯನ ನಮ್ಮ ನಿರೀಕ್ಷೆ ಯನ್ನು ಹೆಚ್ಚಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭ ದುರ್ಗಪ್ಪ ಕೋಟಿಯವರ್ ಮಂಡಿಸಿದ ಮುಂಬಯಿ ಕನ್ನಡ ಗದ್ಯ ಸಾಹಿತ್ಯ ಮಹಾಪ್ರಬಂಧದ ಕುರಿತು ಸಭೆ ವಿಚಾರ ವಿಮರ್ಶೆ ನಡೆಸಿತು. ಈ ಬಾರಿಯ ಸಂಶೋಧನ ಅರ್ಹತ ಪರೀಕ್ಷೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿರುವುದಕ್ಕೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.