ಪರ್ಸೀನ್ ನೆಟ್‌ ಅಪಾಯಕಾರಿ: ಮೀನುಗಾರಿಕೆ ಸಂಘಟನೆಗಳಿಂದ ಅಸಮಾಧಾನ


Team Udayavani, Dec 15, 2020, 6:40 PM IST

ಪರ್ಸೀನ್ ನೆಟ್‌ ಅಪಾಯಕಾರಿ: ಮೀನುಗಾರಿಕೆ ಸಂಘಟನೆಗಳಿಂದ ಅಸಮಾಧಾನ

ಮುಂಬಯಿ, ಡಿ. 14: ಸಮರ್ಥನೀಯವಲ್ಲದ ಮೀನುಗಾರಿಕೆ ಪದ್ಧತಿಗಳ ವ್ಯಾಪ್ತಿಯನ್ನು ನಿರ್ಣಯಿ ಸಲು, ಅತಿಯಾದ ಮೀನುಗಾರಿಕೆಯನ್ನು ನಿಯಂತ್ರಿ ಸಲು ಮತ್ತು ಜಲವಾಸಿ ವೈವಿಧ್ಯದ ಮೇಲೆ ಸಮುದ್ರ ಮಾಲಿನ್ಯದ ಪ್ರಭಾವವನ್ನು ತಿಳಿದುಕೊಳ್ಳಲು ಮಹಾರಾಷ್ಟ್ರ ಸರಕಾರ 12 ಮಂದಿ ಸದಸ್ಯರ ಸಮಿತಿಯನ್ನು ರಚಿಸಿದೆ. ಅತಿಯಾದ ಮೀನುಗಾರಿಕೆ, ತೈಲ ಪರಿಶೋಧನೆ ಮತ್ತು ಇತರ ಅಂಶಗಳಿಂದಾಗಿ ಸಮುದ್ರ ಪರಿಸರದಲ್ಲಿ ಮಾಲಿನ್ಯದ ಮಟ್ಟ ಮತ್ತು ಸುಸ್ಥಿರ ಮೀನುಗಾರಿಕೆ ಬಗ್ಗೆ ವಿವರವಾದ ಮಾರ್ಗ ಸೂಚಿಗಳ ಬಗ್ಗೆಯೂ ಸಮಿತಿ ಸಮೀಕ್ಷೆ ನಡೆಸಲಿದ್ದು, ಈ ನಿರ್ಧಾರಗಳು ಮೀನು ಹಿಡಿಯುವುದನ್ನು ಹೆಚ್ಚಿಸುವುದರೊಂದಿಗೆ ಮೀನುಗಳ ಸಂಖ್ಯೆಯನ್ನು ರಕ್ಷಿಸುತ್ತದೆ ಎನ್ನಲಾಗಿದೆ.

ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆ ಇಲಾಖೆ ಪ್ರಕಟಿಸಿದ ಸರಕಾರದ ಆದೇಶದಲ್ಲಿ ವಿಶೇಷ ತಜ್ಞರ ಸಮಿತಿಯ ಸದಸ್ಯರ ಹೆಸರನ್ನು ಪ್ರಕಟಿಸಲಾಗಿದೆ. ಮಹಾರಾಷ್ಟ್ರದ ಕರಾವಳಿ ಪ್ರದೇಶದ 720 ಕಿ. ಮೀ. ಉದ್ದಕ್ಕೂ 12 ನಾಟಿಕಲ್‌ ಮೈಲುಗಳಷ್ಟು ದೂರದಲ್ಲಿ ಪರ್ಸೀನ್  ನೆಟ್ ‌ಗಳಿಂದ ಮೀನುಗಳನ್ನು ದೊಡ್ಡ ಪ್ರಮಾಣದಲ್ಲಿ ಹಿಡಿಯಲಾಗುತ್ತಿದೆ. ದೊಡ್ಡ ವೃತ್ತಾಕಾರದ ಬಲೆಗಳನ್ನು ಬಳಸಿಕೊಂಡು ಮೀನುಗಾರಿಕೆಯಿಂದ ಮೀನಿನ ಪ್ರಭೇದಗಳನ್ನು ಕಾಪಾಡಲು ಮತ್ತು ಪರಿಣಾಮಗಳ ಮೇಲಿನ ಸಂಶೋಧನೆಗಳ ಆಧಾರದ ಮೇಲೆ ಮಾರ್ಗಸೂಚಿಗಳನ್ನು ರೂಪಿಸಲು ಸಮಿತಿಗೆ ನಿರ್ದೇಶನ ನೀಡಲಾಗಿದೆ.

ಮೀನುಗಳ ಸಂತತಿ ನಾಶ :

ಮೀನುಗಾರಿಕೆಯಲ್ಲಿ ಬಳಸುವ ಪರ್ಸೀನ್ ನೆಟ್‌ಗಳು ಅಪಾಯಕಾರಿಯಾಗಿದ್ದು, ಇದು 500 ಮೀ. ನಿಂದ 1 ಕಿ. ಮೀ. ವರೆಗೆ ವಿಸ್ತರಿಸಬಹುದು. ಅಲ್ಲದೆ ಎರಡು ಅಥವಾ ಮೂರು ನೆಟ್‌ಗಳನ್ನು ಪರಸ್ಪರ ಜೋಡಿಸಿದರೆ 3 ಕಿ. ಮೀ.ನ ಈ ಬಲೆಗಳು 25 ಮಿ. ಮೀ.ನಿಂದ 35 ಮಿ. ಮೀ. ವರೆಗೆ ವ್ಯಾಪಿಸಿರುವ ಜಾಲರಿಯನ್ನು ಹೊಂದಿರುವುದರಿಂದ ಅವು ಸಣ್ಣ ಮೀನು ಮತ್ತು ಮೀನಿನ ಮೊಟ್ಟೆಗಳನ್ನು ಸಾಗರಕ್ಕೆ ಬೀಳದಂತೆ ತಡೆಯುತ್ತವೆ. ಇದರಿಂದ ಮೀನುಗಳ ಸಂತತಿ ನಾಶವಾಗುತ್ತದೆ ಎನ್ನಲಾಗಿದೆ.

ಹೊಸ ಪರವಾನಿಗೆಗಳಿಗೆ ತಡೆ :

ಫೆಬ್ರವರಿ 2016ರಲ್ಲಿ ರಾಜ್ಯ ಸರಕಾರವು ಕರಾವಳಿ ಉದ್ದಕ್ಕೂ ಪ್ರಾದೇಶಿಕ ನೀರಿನಲ್ಲಿ ಪರ್ಸೀನ್  ನೆಟ್‌ಗಳ ಬಳಕೆಯನ್ನು ನಿಷೇಧಿಸುವ ಕ್ರಮವನ್ನು ಜಾರಿಗೆ ತಂದಿತು. ಅಲ್ಲದೆ ಒಟ್ಟು ಪರವಾನಿಗೆಗಳನ್ನು 494ರಿಂದ 182ಗಳಿಗೆ ಇಳಿಸಿ ಹೊಸ ಪರವಾನಿಗೆ ನೀಡುವುದನ್ನು ನಿಲ್ಲಿಸಿತು. ಕೆಲವು ಪ್ರದೇಶಗಳಲ್ಲಿ ಸೆಪ್ಟಂಬರ್‌ ಮತ್ತು ಡಿಸೆಂಬರ್‌ ನಡುವೆ ಮಾತ್ರ ಅಂತಹ ಬಲೆಗಳನ್ನು ಬಳಸಲು ಅನುಮತಿ ನೀಡಿತು.

ಅಸಮಾಧಾನ :

ಸಮಿತಿಯು ಸರಕಾರಿ ಸಂಸ್ಥೆಯಾಗಿದ್ದು, ಇದರಲ್ಲಿ ಮೀನುಗಾರರ ಸಂಘಗಳಿಂದ ಯಾರನ್ನೂ ಪರಿಗಣಿಸ ಲಾಗಿಲ್ಲ ಎಂದು ಮೀನು ಗಾರರ ಸಂಘಟನೆಗಳು ಅಸಾ ಮಾ ಧಾನ ವ್ಯಕ್ತಪಡಿಸಿವೆ. ಮೀನುಗಾರಿಕೆ ಸಮು ದಾಯವನ್ನು ಸಂಪರ್ಕಿಸದೆ ಅಂತಿಮ ನಿರ್ಧಾರಗಳನ್ನು ತೆಗೆದು ಕೊಳ್ಳಲಾಗುವುದಿಲ್ಲ ಎಂದು ಅವು ಪ್ರತಿಪಾದಿಸಿವೆ. ಸಮಿತಿಯು ಆನ್‌ -ಫೀಲ್ಡ್ ಡೇಟಾವನ್ನು ಸಂಗ್ರಹಿಸಿದಾಗ ಜಿಲ್ಲಾ ಮಟ್ಟದಲ್ಲಿ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಮೀನುಗಾರಿಕೆ ವಿಭಾಗದ ಜಂಟಿ ಆಯುಕ್ತ ರಾಜೇಂದ್ರ ಜಾಧವ್‌ ಹೇಳಿದ್ದಾರೆ.

ಮುಂಬಯಿ ನಗರ, ಉಪನಗರ, ಥಾಣೆ, ಪಾಲ್ಘರ್‌, ರಾಯಗಡ್‌, ರತ್ನಾಗಿರಿ ಮತ್ತು ಸಿಂಧುದುರ್ಗ್‌ ಏಳು ಜಿಲ್ಲೆಗಳಲ್ಲಿ 456 ಮೀನುಗಾರಿಕೆ ಗ್ರಾಮಗಳಿವೆ. ಮಹಾರಾಷ್ಟ್ರದಲ್ಲಿ  45 ವರ್ಷಗಳಲ್ಲಿ 2.01 ಲಕ್ಷ ಟನ್‌ಗಳಷ್ಟು ವಾರ್ಷಿಕ ಮೀನು ಹಿಡಿಯಲಾಗಿದ್ದು, ಇವುಗಳಲ್ಲಿ ಎಲ್ಲ ಪ್ರಮುಖ ಪ್ರಭೇದಗಳಿವೆ ಎಂದು ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನ ಸಂಸ್ಥೆ (ಸಿಎಂಎಫ್‌ಆರ್‌ಐ) ತಿಳಿಸಿದೆ.  ವಿಪರೀತ ಹವಾಮಾನ ಘಟನೆಗಳ (ಭಾರೀ ಮಳೆ ಮತ್ತು ಐದು ಉಷ್ಣವಲಯದ ಚಂಡಮಾರುತಗಳು) ಜತೆಗೆ ಸಣ್ಣ ಮೀನುಗಳ ಮಿತಿಮೀರಿದ ಮೀನುಗಾರಿಕೆಯಿಂದ 2019ರಲ್ಲಿ ಮೀನುಗಾರಿಕೆ ದಿನಗಳ ಸಂಖ್ಯೆಯಲ್ಲಿ ಶೇ. 36ರಷ್ಟು ಇಳಿಕೆಗೆ ಕಾರಣವಾಗಿದೆ ಎಂದು ಸಿಎಂಎಫ್‌ಆರ್‌ಐ ಹೇಳಿದೆ.

ಪರ್ಸೀನ್‌ ಮೀನುಗಾರಿಕೆ :

1954 ಮತ್ತು 1958ರ ನಡುವೆ ಕೇರಳ ಮತ್ತು ಗೋವಾ ದ್ಯಂತ ಪ್ರಾಯೋಗಿಕ ಆಧಾರದ ಮೇಲೆ ಪರ್ಸೀನ್‌ ಮೀನುಗಾರಿಕೆಯನ್ನು ಪರಿಚಯಿಸಲಾಯಿತು. ವಾಣಿಜ್ಯ ಪರ್ಸೀನಿಂಗ್‌ ಅನ್ನು ಕರ್ನಾಟಕ ಮೀನುಗಾರರು 1975ರ ಸುಮಾರಿಗೆ ಪರಿಚಯಿಸಿದ್ದಾರೆ. ಬಳಿಕ ಕೇರಳ ಮತ್ತು ಗೋವಾದಲ್ಲಿ ಚಾಲ್ತಿಗೆ ಬಂದಿದೆ. 1980ರ ದಶಕದ ಉತ್ತರಾ ರ್ಧ ದವರೆಗೆ ಮಹಾರಾಷ್ಟ್ರದಲ್ಲಿ ರತ್ನಾಗಿರಿ ಮತ್ತು ಸಿಂಧು ದುರ್ಗ ಜಿಲ್ಲೆಗಳಲ್ಲಿ ಇದನ್ನು ಪರಿಚಯಿಸಲಾಯಿತು, ಹೆಚ್ಚಾಗಿ ತೈಲ ಸಾರ್ಡೀನ್ ಮತ್ತು ಮ್ಯಾಕೆರೆಲ್‌ ಅನ್ನು ಹಿಡಿಯಲು ಇದನ್ನು ಬಳಸಲಾಗುತ್ತಿದೆ. 1998ರಿಂದ ಹೆಚ್ಚಿನ ಟ್ರಾಲ್‌ ಮೀನುಗಾರರು ಹೆಚ್ಚಿನ ಲಾಭಕ್ಕಾಗಿ ಪರ್ಸೀನ್ ನಿಂಗ್‌ ಮೀನುಗಾರಿಕೆಗೆ ಬದಲಾಗುತ್ತಿದ್ದಾರೆ.

ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ ದೋಣಿಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸುತ್ತಾರೆ ಎಂಬುವುದನ್ನು ತಿಳಿಯಲು ಐದು ವರ್ಷಗಳ ಬಳಿಕ ಮತ್ತೂಂದು ತಜ್ಞರ ಸಮಿತಿಯನ್ನು ರಚಿಸಿದ್ದೇವೆ. ಅದು ಈಗ ಪರ್ಸೀನ್  ನೆಟ್‌ಗಳನ್ನು ಬಳಸುವುದಕ್ಕಾಗಿ ಈಗಾಗಲೇ ನೀಡಲಾಗಿರುವ ಪರವಾನಿಗೆಗಳ ಸಂಖ್ಯೆಯನ್ನು ಹೇಗೆ ಕಡಿಮೆಗೊಳಿಸುವುದು ಎಂಬುದನ್ನು ತಿಳಿಸುತ್ತದೆ. ಹೊಸ ಪರವಾನಿಗೆಗಳನ್ನು ನೀಡದಿರುವುದನ್ನು ಮುಂದುವರಿಸಲಾಗುವುದು. ಕೋವಿಡ್‌ ಸಾಂಕ್ರಾಮಿಕ ರೋಗದಿಂದಾಗಿ ಈ ಸಮಿತಿಯನ್ನು ರಚಿಸುವಲ್ಲಿ ವಿಳಂಬವಾಗಿದೆ. ಆದರೆ ಮೀನುಗಾರಿಕೆ ಅಭ್ಯಾಸಗಳನ್ನು ಸುಧಾರಿಸುವಲ್ಲಿ ಅದರ ವರದಿಗಳು ಪ್ರಯೋಜನಕಾರಿಯಾಗಲಿದೆ. -ರಾಜೇಂದ್ರ ಜಾಧವ್‌  ಜಂಟಿ ಆಯುಕ್ತರು, ಮೀನುಗಾರಿಕೆ ವಿಭಾಗ

ಮೀನುಗಾರಿಕೆ ಸಮುದಾಯದ ಒಬ್ಬ ಸದಸ್ಯ ಅಥವಾ ಮಹಾರಾಷ್ಟ್ರದ ಮೀನುಗಾರ ಮುಖಂಡರನ್ನು ತಜ್ಞರ ಸಮಿತಿಯಲ್ಲಿ ಸೇರಿಸಿ ಕೊಳ್ಳದಿರುವುದು ಆಘಾತಕಾರಿ. ಮಹಾರಾಷ್ಟ್ರ ಸರಕಾರವು ಪರ್ಸೀನ್  ಮೀನುಗಾರಿಕೆ ಮೇಲೆ ಮಾತ್ರ ಗಮನ ಹರಿಸುತ್ತಲೇ ಇದೆ. ಆದರೆ ಪರಿಸರಕ್ಕೆ ಹಾನಿಕಾರಕವಾದ ಇತರ ವಿಧಾನಗಳಿವೆ. ಸಮಿತಿಯ ನಿರ್ಧಾರಗಳು ಮೀನುಗಾರಿಕೆ ಸಮುದಾಯದ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತವೆ. ಅಂತಹ ಸಮಸ್ಯೆಗಳನ್ನು ವ್ಯಕ್ತಪಡಿಸಲು ಯಾವುದೇ ಪ್ರತಿನಿಧಿಯನ್ನು (ಮೀನುಗಾರರಿಂದ) ಸರಕಾರಿ ಅಧಿಕಾರಿಗಳು ಆಯ್ಕೆ ಮಾಡಿಲ್ಲ. -ಗಣೇಶ್‌ ನಖಾವಾ, ಅಧ್ಯಕ್ಷರು, ನ್ಯಾಶನಲ್‌ ಪರ್ಸೀನ್  ಮೀನುಗಾರರ ಕಲ್ಯಾಣ ಸಂಘ

ಟಾಪ್ ನ್ಯೂಸ್

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.