ಪಿಂಪ್ರಿ ಬಿಲ್ಲವ ಸಂಘ: ವ್ಯಕ್ತಿತ್ವ ವಿಕಸನ ಕಾರ್ಯಾಗಾರ “ಜೀವನೋತ್ಸವ
Team Udayavani, Jun 10, 2018, 3:38 PM IST
ಪುಣೆ: ಮನುಷ್ಯನಾಗಿ ಹುಟ್ಟಿದವನು ತನ್ನ ಜೀವಿತದ ಅವಧಿಯಲ್ಲಿ ತನ್ನ ಸ್ವಂತ ಬಲದಿಂದ, ಸ್ವ ಸಾಮರ್ಥ್ಯದಿಂದ ಯಶಸ್ವಿಯಾಗಬೇಕೆಂದು ಹಂಬಲಿಸುವುದು ಸಹಜ. ಸ್ವಂತ ವ್ಯಾಪಾರ ಅಥವಾ ಉದ್ಯೋಗ ನಮ್ಮದಿರಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದ್ದರಿಂದ ತಾನು ನಡೆದು ಬಂದಂತಹ ಹಾದಿಯಲ್ಲಿ ನಮಗೆ ಎದುರಾಗುವ ಅಡೆತಡೆಗಳನ್ನು ಸವಾಲಾಗಿ ಸ್ವೀಕರಿಸಿ, ಅದನ್ನು ನಮಗೆ ಸಿಕ್ಕ ಅವಕಾಶ ಎಂಬಂತೆ ಪರಿಗಣಿಸಿ ಬದಲಾಯಿಸಿಕೊಳ್ಳಬೇಕು ಎಂದು ಪುಣೆ ಬಿಲ್ಲವ ಸಂಘದ ಬೆಳ್ಳಿ ಮಹೋತ್ಸವ ಸಮಿತಿಯ ಅಧ್ಯಕ್ಷ, ಪುಣೆ ರೆಸ್ಟೋರೆಂಟ್ ಆ್ಯಂಡ್ ಹೊಟೇಲಿಯರ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ಅವರು ಹೇಳಿದರು.
ಪಿಂಪ್ರಿಯ ಅಂಬೇಡ್ಕರ್ ಚೌಕ್‌ನಲ್ಲಿರುವ ಹೊಟೇಲ್ ಕ್ರಿಸ್ಟಲ್ ಕೋರ್ಟ್‌ನ ಸಭಾಗೃಹದಲ್ಲಿ ಪಿಂಪ್ರಿ ಬಿಲ್ಲವ ಸಂಘದ ವತಿಯಿಂದ ಯುವಕ ಯುವತಿಯರಿಗಾಗಿ ನಡೆದ ಒಂದು ದಿನದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಜೀವನೋತ್ಸವ-2018 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೂರದೃಷ್ಟಿತ್ವದ ಆಲೋಚನೆಗಳು, ಸಾಧಿಸಬೇಕು ಎಂಬ ಛಲ, ಪರಿಶ್ರಮವನ್ನು ಹೊಂದಿರುವ ಪ್ರತಿಭೆಗಳಿಗೆ ಅನುಗುಣವಾಗಿ ಕಾರ್ಯಸಾಧನೆಯಿಂದ ಪ್ರತಿಯೊಬ್ಬರೂ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಅಲಂಕರಿಸಬಹುದು. ಬೇರೊಬ್ಬರನ್ನು ಹೊಂದಿಕೊಂಡು ಬಾಳುವುದಕ್ಕಿಂತ ಸ್ವ ಉದ್ಯಮಿಗಳಾಬೇಕು ಎಂಬ ಚಿಂತನೆ ಯುವ ಪ್ರತಿಭೆಗಳಲ್ಲಿ ಮೂಡಿ ಬರಬೇಕು ಎಂದರು.
ಕಾರ್ಯಾಗಾರವು ಬೆಳಗ್ಗೆ 9ರಿಂದ ಮೊದಲ್ಗೊಂಡು ಸಂಜೆ 4ರ ವರೆಗೆ ನಡೆಯಿತು. ಬೆಳಗ್ಗೆ ಪಿಂಪ್ರಿ ಬಿಲ್ಲವ ಸಂಘದ ಅಧ್ಯಕ್ಷ ಸೋಮಪ್ಪ ಸಾಲ್ಯಾನ್, ಕಾರ್ಯದರ್ಶಿ ಶ್ಯಾಮ್ ಸುವರ್ಣ ಜೀವನೋತ್ಸವ ವ್ಯಕ್ತಿತ್ವ ವಿಕಸನದ ತರಬೇತುದಾರ ಸುಧಾಕರ ಕಾರ್ಕಳ ಮತ್ತು ಸಂಘದ ಪದಾಧಿಕಾರಿಗಳು ದೀಪ ಬೆಳಗಿಸಿ ಚಾಲನೆ ನೀಡಿದರು.
ಅನಂತರ ಸುಧಾಕರ ಕಾರ್ಕಳ ಅವರು ಮಾತನಾಡಿ, ಪುಣೆ, ಪಿಂಪ್ರಿ, ಲೋನವಾಲ ಮೊದಲಾದ ಕಡೆಗಳಿಂದ ಆಗಮಿಸಿದ ಯುವಕ-ಯುವತಿಯರಿಗೆ ವ್ಯಕ್ತಿತ್ವದ ಹಲವು ಅಯಾಮಗಳ ಪರಿಚಯ ಮತ್ತು ಅವರಲ್ಲಿ ಧನಾತ್ಮಕ ಚಿಂತನೆಗಳನ್ನು ವೃದ್ಧಿಸಿ ಜೀವನ ಮೌಲ್ಯಗಳನ್ನು, ತತ್ವ ಬದ್ಧತೆಯನ್ನು ರೂಢಿಸಿಕೊಳ್ಳಲು ಉಪಯೋಗ ವಾಗುವಂತಹ, ಜೀವನದ ಧ್ಯೇಯ, ಅತ್ಮವಿಶ್ವಾಸ, ನಾಯ ಕತ್ವ ಗುಣ ಸಂಭಾಷಣೆ ಕಲೆಯಲ್ಲಿ ಪರಿಣತಿ, ಜೀವನ ಮೌಲ್ಯಗಳ ಅಳವಡಿಕೆ, ಜೀವನಕ್ಕೆ ಬೇಕು ಬೇಡಗಳ ಪರಿಚಯಗಳ ಬಗ್ಗೆ ಉಪನ್ಯಾಸ ನೀಡಿದರು. ಇದಕ್ಕೆ ಪೂರಕ ವಾಗಿ ಅನುವುಗೊಳಿಸುವಂತೆ ಪ್ರಯತ್ನ ನಡೆಸುವ ಬಗ್ಗೆ ಸ್ವ ಪ್ರಯತ್ನ ಮಾಡುವಂತೆ ಅವರು ತಿಳಿಸಿದರು.
ಸಮಾರೋಪ ಸಮಾರಂಭವು ಪಿಂಪ್ರಿ ಬಿಲ್ಲವ ಸಂಘದ ಅಧ್ಯಕ್ಷ ಸೋಮಪ್ಪ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅಥಿತಿಗಳಾಗಿ ಪಂಚಮಿ ಚಾರಿಟೆಬಲ್ ಟ್ರಸ್ಟ್ ಪುಣೆ -ಕಾರ್ಕಳ ಇದರ ಸಂಸ್ಥಾಪಕ ಉದ್ಯಮಿ ಪುರಂದರ ಪೂಜಾರಿ ಮತ್ತು ಪುಣೆ ಬಿಲ್ಲವ ಸಂಘದ ಉಪಾಧ್ಯಕ್ಷ, ಬೆಳ್ಳಿ ಮಹೋತ್ಸವ ಸಮಿತಿಯ ಅಧ್ಯಕ್ಷ, ಉದ್ಯಮಿ ವಿಶ್ವನಾಥ್ ಪೂಜಾರಿ ಕಡ್ತಲ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಶ್ಯಾಮ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಶ್ರಮಪಟ್ಟ ಸಂಘದ ಯುವ ಪ್ರತಿಭೆ ಶೇಖರ್ ಚಿತ್ರಾಪು ಅವರ ಕಾರ್ಯ ಶ್ಲಾಘಿಸಿ, ಸ್ವಾಗತಿಸಿದರು. ಪಿಂಪ್ರಿ ಬಿಲ್ಲವ ಸಂಘದ ವತಿಯಿಂದ ಸುಧಾಕರ ಕಾರ್ಕಳ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ರವಿ ಜತ್ತನ್, ಸಂತೋಷ್ ಪೂಜಾರಿ, ಶ್ರೀಧರ ಪೂಜಾರಿ, ಕಿರಣ್ ಸುವರ್ಣ, ರಾಘು ಪೂಜಾರಿ, ಸತೀಶ್ ಸಾಲ್ಯಾನ್, ಪಿಂಪ್ರಿ ಬಿಲ್ಲವ ಮಹಿಳಾ ಮಂಡಲದ ಅಧ್ಯಕ್ಷೆ ಸಂಗೀತಾ ಸುವರ್ಣ, ಮೀನಾಕ್ಷಿ ಪೂಜಾರಿ, ಪುಣೆ ಬಿಲ್ಲವ ಸಂಘದ ಪ್ರಮುಖರಾದ ಉತ್ತಮ ಪಣಿಯಾಡಿ, ಪ್ರಿಯಾ ಯು. ಪಣಿಯಾಡಿ, ಪ್ರಶಾಂತ್ ಸುವರ್ಣ, ಶಿವು ಪೂಜಾರಿ, ಪುಣೆ ತುಳು ಕೂಟದ ಗೀತಾ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಲೋನವಾಲದ ಗಣೇಶ್ ಪೂಜಾರಿ ಅವರು ಉಪಸ್ಥಿತರಿದ್ದರು. ನೂತನ್ ಸುವರ್ಣ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಾವು ಮಾಡುವ ವ್ಯಾಪಾರದಲ್ಲಿ ನಷ್ಟಗೊಂಡಾಗ ಕುಗ್ಗದೆ, ಯಶಸ್ಸಿಗೆ ಹಿಗ್ಗದೆ ನಮ್ಮ ಕಾರ್ಯ ಸಾಧನೆಯೊಂದಿಗೆ ಮುನ್ನಡೆದರೆ ಪ್ರತಿಯೊಬ್ಬನಿಗೂ ಯಶಸ್ಸು ಸಾಧ್ಯ. ಕಠಿನ ಪರಿಶ್ರಮ, ಶ್ರದ್ಧೆ, ಕಾರ್ಯಶೀಲತೆ ನಮ್ಮಲ್ಲಿರಬೇಕು. ಯಾವುದೇ ಉದ್ಯಮದಲ್ಲೂ ಕೀಳರಿಮೆ ಇರಬಾರದು. ಮುಂದೆ ಏನೆಂಬುದು ಎಂಬ ಕುತೂಹಲವನ್ನು ಯಶಸ್ವಿಯಾಗಿ ಕೊಂಡೊಯ್ಯಬಲ್ಲದು. ತನ್ನ ಯಶಸ್ಸಿನೊಂದಿಗೆ ಇತರರಿಗೂ ಉದ್ಯೋಗ ನೀಡಿ ಮಾದರಿಯಾಗಬೇಕು. ತಮ್ಮ ಜೀವನದ ಯಶಸ್ಸು ಯುವಜನತೆಗೆ ತಿಳಿಯ ಬೇಕು. ಅವರಲ್ಲೂ ಉತ್ಸಾಹ ಮೂಡಿ ಬರಬೇಕು
ಪುರಂದರ ಪೂಜಾರಿ
(ಸಂಸ್ಥಾಪಕರು: ಪಂಚಮಿ ಚಾರಿಟೆಬಲ್ ಟ್ರಸ್ಟ್ ಪುಣೆ)
ಯುವಕರಿಗೆ ಕೇವಲ ಕ್ರೀಡೆ, ಮನೋ ರಂಜನೆ, ಕಾರ್ಯಕ್ರಮಗಳನ್ನು ಅಷ್ಟೇ ಆಯೋಜಿಸುವುದಲ್ಲ, ಇಂತಹ ವ್ಯಕ್ತಿತ್ವ ವಿಕಸನದಂತಹ ವಿನೂತನ ಕಾರ್ಯಾಗಾರದಂತೆ ಯುವ ಜನತೆಗೆ, ಸಮಾಜದ ಬಂಧುಗಳಿಗೆ ಉಪಯೋಗ ವಾಗುವಂತಹ ಕಾರ್ಯಕ್ರಮಗಳನ್ನು ಇನ್ನು ಮುಂದೆಯೂ ಆಯೋಜಿಸುವ ಕಾರ್ಯವನ್ನು ಸಂಘವು ಮಾಡಲಿದೆ. ಈ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರೋತ್ಸಾಹ ಸಿಕ್ಕಿದೆ. ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು
ಸೋಮಪ್ಪ ಸಾಲ್ಯಾನ್
(ಅಧ್ಯಕ್ಷರು: ಪಿಂಪ್ರಿ ಬಿಲ್ಲವ ಸಂಘ ಪುಣೆ)
ವರದಿ : ಹರೀಶ್ ಮೂಡಬಿದ್ರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.