ಎರಡು ಲಕ್ಷಕ್ಕೂ ಹೆಚ್ಚು ಕವಿತೆಗಳ ಕರ್ತೃವಿನ ಬದುಕು ಕತ್ತಲೆಯಲ್ಲಿ
ಗಡಿನಾಡಿನಲ್ಲಿ ಕನ್ನಡ ಕವಿಯ ರೋದನ ಕೇಳುವವರಿಲ್ಲ
Team Udayavani, Dec 20, 2020, 1:47 PM IST
ಸೊಲ್ಲಾಪುರ, ಡಿ. 19: ಎರಡು ಲಕ್ಷಕ್ಕಿಂತ ಹೆಚ್ಚು ಜಾನಪದ ಸಹಿತ ವಿವಿಧ ರೀತಿಯ ಕವನಗಳನ್ನು ರಚಿಸಿ, ಹಾಡಿರುವ ಗಡಿನಾಡ ಕನ್ನಡಿಗ ಕವಿ ಗೈಬಿಶಾ ಮಕಾನದಾರ್ ಅವರ ಪ್ರತಿಭೆಯನ್ನು ಮಹಾರಾಷ್ಟ್ರ ಮತ್ತು ಕರ್ನಾಟಕ ಸರಕಾರಗಳೆರಡೂ ನಿರ್ಲಕ್ಷಿಸಿದ ಪರಿಣಾಮ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತೀವ್ರ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವು ನೀಡಿ, ಅವರ ಸಾಹಿತ್ಯಕ್ಕೆ ಪುಸ್ತಕ ರೂಪ ನೀಡಿ ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ.
ಅಕ್ಕಲ್‌ಕೋಟೆ ತಾಲೂಕಿನ ಅಂದೇವಾಡಿ ಗ್ರಾಮದ ಗೈಬಿಶಾ ಮಕಾನದಾರ್ ಮೂರನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದರೂ ಕನ್ನಡ ಜಾನಪದ ಸಾಹಿತ್ಯದ ಭಂಡಾರವೇ ಅವರಲ್ಲಿದೆ. ಇಂಡಿಯ ಸದ್ಗುರು ಮಲ್ಲೇಶ್ವರ ಶಿರ್ಕನಳ್ಳಿ ಅವರಿಂದ 14 ವರ್ಷ ಆಯುರ್ವೇದ ಜೋತಿಷ, ಆಧ್ಯಾತ್ಮಿಕ ಮತ್ತು ಪುರಾಣವನ್ನು ಅಧ್ಯಯನ ಮಾಡಿ ಜ್ಞಾನ ಸಂಪಾದಿಸಿರುವ ಅವರು, ಲಕ್ಷಕ್ಕೂ ಹೆಚ್ಚು ಕನ್ನಡ ಮತ್ತು ಮರಾಠಿ ಜಾನಪದ ಹಾಡುಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ.
ಆಶು ಕವನಗಳಿಗೆ ಎತ್ತಿದ ಕೈ :
ಅತ್ಯುತ್ತಮ ವ್ಯಾಕರಣ ಜ್ಞಾನ, ಪದ ಸಂಯೋಜನೆಯಲ್ಲಿ ಚಮತ್ಕಾರ ಮಾಡುವ ಗೈಬಿಶಾ ಅವರು ನಿಂತ ಜಾಗದಲ್ಲಿ ಎಂಥದ್ದೇ ವಿಷಯ ಕೊಟ್ಟರೂ ಕ್ಷಣಾರ್ಧದಲ್ಲಿ ಕವನ ರಚಿಸಿ ವಾಚನ ಮಾಡುವ ಶೈಲಿ ಹುಬ್ಬೇರಿಸುವಂಥದ್ದು, ಆಧ್ಯಾತ್ಮಿಕ ಕಲಿYತುರಾ, ಹಾಡಕ್ಕಿ, ಕುರುಬರ ಹಾಡು, ಓವ್ಯಾ, ಭಜನೆ, ನಾಟಕ, ಮೊಹರಂ, ವಾಘ್ಯಾ ಮುರಳಿ ಕಾವ್ಯ, ಚೌಡಕ್ಕಿ ಕಾವ್ಯ, ಪುರಾಣ, ಪ್ರವಚನ್, ಧಾರ್ಮಿಕ, ಆಧ್ಯಾತ್ಮಿಕ ಕವಿತಾ, ಭೆಡಿಕಾ ಕವಿತಾ ಸಹಿತ ವಿವಿಧ ರೀತಿಗಳ ಕವನಗಳನ್ನು ರಚಿಸಿರುವ ಗೈಬಿಶಾ ಅವರಲ್ಲಿ ಸೂಕ್ತ ರಾಗ ಸಂಯೋಜನೆ ಮಾಡುವಂತ ಪಾಂಡಿತ್ಯವೂ ಇದೆ. ಅಲ್ಲದೆ ಪುರಾಣ, ಪ್ರವಚನ, ಶಾಸ್ತ್ರ ಹೇಳುವುದರಲ್ಲೂ ವಿಶೇಷ ಪಾಂಡಿತ್ಯವನ್ನು ಹೊಂದಿದ್ದಾರೆ.
ಸರ್ವಧರ್ಮ ಸಮಭಾವನೆಗೆ ಇನ್ನೊಂದು ಹೆಸರು : ಕನ್ನಡ, ಮರಾಠಿ, ಉರ್ದು, ಹಿಂದಿ ಭಾಷೆಗಳ ಮೇಲೆ ಹಿಡಿತ ಹೊಂದಿರುವ ಗೈಬಿಶಾ ಮಕಾನದಾರ್ ಅವರು ಸಂಸ್ಕೃತ ಭಾಷೆಯನ್ನೂ ಚೆನ್ನಾಗಿ ಬಲ್ಲವರು. ಇವರ ಭಾಷಾ ಪಾಂಡಿತ್ಯದಿಂದ 30 ಸಾವಿರ ಕುರುಬರ ಹಾಡು, 30 ಸಾವಿರ ಹಾಡಕ್ಕಿ ಪದ, 5 ಸಾವಿರ ವಚನ, 10 ಸಾವಿರ ಭಜನೆ ಗೀತೆ, 40 ಸಾವಿರ ಮೊಹರಂ ಪದ, 100 ಪದ್ಯ, 300 ವಾಘಾÂ ಮುರಳಿ ಕಾವ್ಯ, 200 ಚೌಡಕ್ಕಿ ಕಾವ್ಯ ಸಹಿತ ಸುಮಾರು 2 ಲಕ್ಷಕ್ಕೂ ಹೆಚ್ಚು ಹಾಡುಗಳು ರಚಿಸಿದ್ದಾರೆ. ಜಾತ್ರೆ, ಮಠ, ಮಂದಿರ ಸಹಿತ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಯಾ ಸ್ಥಳ, ವ್ಯಕ್ತಿ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಹಾಡುಗಳನ್ನು ರಚಿಸಿ ಹಾಡುತ್ತಾರೆ. ನಿರಂತರ ಓದು, ಬರವಣಿಗೆ, ಚಿಂತನೆಯೊಂದಿಗೆ 17 ವರ್ಷಗಳಿಂದ ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. ಮುಸ್ಲಿಂ ಸಮುದಾಯದಿಂದ ಬಂದಿದ್ದರೂ ಶಾಸ್ತ್ರ, ಪುರಾಣವನ್ನು ಹೇಳುವಾಗ ಆಶ್ಚರ್ಯವಾಗುತ್ತದೆ. ಗೈಬಿಶಾ ಅವರು ಸರ್ವಧರ್ಮ ಸಮಭಾವನೆಗೆ ಇನ್ನೊಂದು ಹೆಸರು. ಅವರಿಗೆ ಎಲ್ಲ ದೇವತೆಗಳ ಬಗ್ಗೆ ಅಪಾರ ನಂಬಿಕೆ ಮತ್ತು ಭಕ್ತಿ ಇದೆ. ಅವರು ಯಾವಾಗಲೂ ಹಿಂದೂ ಮುಸ್ಲಿಂ ನಾಮ ದುಜಾ ತೋ, ದೋನೊ ಕಾ ಮತ್ಲಬ್ ಏಕ್ ಹೈ ಎಂದು ಹೇಳುತ್ತಾರೆ.
ಗೈಬಿಶಾ ಹಾಡಿನ ಖ್ಯಾತಿ ಹೆಚ್ಚಿಸಿದವರು : ಸುರೇಶ್ ಕುಲಕರ್ಣಿ, ಸೊಮಲಿಂಗ ಬಿಜ್ಜರಗಿ, ಶ್ರೀಕಾಂತ್ ಕಾಜಿಬೆಳಗಿ, ಝಾಕಿರ ಕಾರ್ಕಲ್, ಅಭಿಮನ್ಯು ಖರಾತ್ ಚಿಕ್ಕಲೋಣಿ, ಗೋವಿಂದ್ ಉಡಚಣ ಹಟ್ಟಿ ಡೊಳ್ಳಿನ ಹಾಡು ಹಾಡಿ ಖ್ಯಾತಿ ಪಡೆದಿದ್ದಾರೆ. ಆಕಾಶ ಮನಗುಳಿ, ದೇವೇಂದ್ರ ಧಾರವಾಡ ದಿಕ್ಸಂಗಿ, ಸುನಿಲ್ ನರಸಪ್ಪ ಬಡದಾಳೆ, ಸಂತೋಷ್ ಮುರ್ಗೆಪ್ಪ, ಅಯಸಿದ್ಧ ಐವಾಡೆ, ಸಂತೋಷ್ ನಿವಾಲಖೋಡೆ ಅವರು ಗೈಬಿಶಾ ರಚಿಸಿದ ಭಜನೆ ಗೀತೆಗಳನ್ನು ಹಾಡಿದ್ದಾರೆ. ಆಳಂದದ ಕಾಶಿನಾಥ ಹತ್ತಿಕಾಳೆ, ಲಕ್ಷ್ಮಣ್ ರಾಠೊಡ ಸಬಿನಾಡ, ಸಿದ್ಧಮ್ಮ ಬಿಜಾಪುರ, ರಾಮದುರ್ಗದ ಭೌರಮ್ಮ ಕ್ವಾಟಲಗಿ, ಮಕು¤ಂ ಮಕಂದರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಭಾಗಣ್ಣ ಮದರಿ, ರೇಣುಕಾ ಗಣಿಯಾರ, ಫಕೀರಪ್ಪ ಅಯವಳೆ ಮಂದ್ರುಪ ಅವರು ಗೈಬಿಶಾರು ರಚಿಸಿದ ಹಾಡುಗಳನ್ನು ಹಾಡಿ ಪ್ರಸಿದ್ಧಿ ಪಡೆದಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬ : ಲಕ್ಷಾಂತರ ಕನ್ನಡ, ಮರಾಠಿ ಇನ್ನಿತರ ಭಾಷೆಗಳ ಜಾನಪದ ಕವನಗಳನ್ನು ರಚಿಸಿ ಗ್ರಾಮೀಣ ಭಾಗದ ಜಾತ್ರೆಗಳಲ್ಲಿ ಹಾಡುವ ಮೂಲಕ ಜಾನಪದ ಕಲೆಯನ್ನು ಉಳಿಸಿ-ಬೆಳೆಸಲು ಪ್ರಯತ್ನಿಸುತ್ತಿರುವ ಕವಿ ಗೈಬಿಶಾ ಮಕಾನದಾರ್ ಅವರ ನೋವಿನ ಕತೆಯನ್ನು ಕೇಳುವವರಿಲ್ಲದೆ, ಸಂಕಷ್ಟದಿಂದಲೇ ತನ್ನ ಬದುಕಿನ ಗಾಡಿಯನ್ನು ಎಳೆಯುತ್ತಿದ್ದು, ನೋಡುಗರ ಹೃದಯ ಕಲಕುತ್ತಿದೆ. ಪತ್ನಿ ಸುಗ್ರಾಬಾಯಿ, ಮೂವರು ಪುತ್ರರು, ಇಬ್ಬರು ಪುತ್ರಿಯರಿರುವ ಗೈಬಿಶಾ ಕುಟುಂಬ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದು, ನೆರವಿನ ಹಸ್ತದ ನಿರೀಕ್ಷೆಯಲ್ಲಿದೆ. ಗೈಬಿಶಾ ಅವರಿಂದ ಸಾಕಷ್ಟು ಆಧ್ಯಾತ್ಮದ ಜ್ಞಾನ ಗಂಗೆ ಹರಿಯುತ್ತಿದೆ. ತಮ್ಮ ಹಾಡುಗಳ ಮೂಲಕ ಸಮಾಜ ಪರಿವರ್ತನೆಯ ಕಾರ್ಯ ನಿರಂತರವಾಗಿ ಕೈಗೊಂಡಿದ್ದಾರೆ.
ಕವನ, ಹಾಡು ಬರೆಯುವುದು ನನ್ನ ಜೀವನವಾಗಿದೆ. ಜಾಗೃತ ಸಮಾಜ ನಿರ್ಮಿಸುವುದು ನನ್ನ ಕಾಯಕ. ಲಕ್ಷಾಂತರ ಕವನಗಳನ್ನು ರಚಿಸಿದ್ದೇನೆ. ನನ್ನ ಕವನಗಳನ್ನು ಹಾಡಿಯೇ ಹಲವರು ಪ್ರಸಿದ್ಧರಾಗಿದ್ದಾರೆ. ಆದರೆ ನನ್ನ ಜೀವನ ಸುಧಾರಿಸಿಲ್ಲ. ಸ್ವಂತ ಮನೆ, ಜಮೀನು ಇಲ್ಲ. ಕವಿತೆ, ಕವನ ಬರೆದ ಮೇಲೆ ನನ್ನ ಮನೆಯ ಅಡುಗೆ ಒಲೆ ಉರಿಯುತ್ತದೆ. ಗಡಿನಾಡಿನ ಪ್ರತಿಭೆಗಳ ನೆರವಿಗೆ ಸರಕಾರಗಳು ಬರಬೇಕು. -ಗೈಬಿಶಾ ಮಕಾನದಾರ್, ಪ್ರಸಿದ್ಧ ಕವಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.