ಮುಂಬಯಿ: ಕೋವಿಡ್ ದಿಂದ ಪೊಲೀಸ್ ಅಧಿಕಾರಿ ನಿಧನ : ಈ ವರೆಗೆ 101 ಪೊಲೀಸ್ ಸಿಬಂದಿ ಸಾವು
Team Udayavani, Apr 13, 2021, 11:05 AM IST
ಮುಂಬಯಿ: ಕೋವಿಡ್ ದಿಂದ ಮುಂಬಯಿ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಮೋಹನ್ ದಾಗ್ಡೆ (54) ಅವರು ವಕೋಲಾ ಪೊಲೀಸ್ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಸೇವೆಯಲ್ಲಿದ್ದರು.
ಕೋವಿಡ್ ಪರೀಕ್ಷೆಯು ಪಾಸಿಟಿವ್ ಬಂದ ಬಳಿಕ ಅವರನ್ನು ಚಿಕಿತ್ಸೆಗಾಗಿ ಬಿಕೆಸಿಯ ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಯಿತು. ಚಿಕಿತ್ಸೆ ಪಡೆಯುತ್ತಿರುವಾಗ ಅವರು ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದರು.
ವಕೋಲಾ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮೋಹನ್ ದಾಗ್ಡೆ ಅವರನ್ನು ಚಿಕಿತ್ಸೆಗಾಗಿ ಬಿಕೆಸಿಯ ಜಂಬೊ ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಯಿತು. ಆರೋಗ್ಯ ಸ್ಥಿತಿಯು ಹದಗೆಟ್ಟಿದ್ದರಿಂದ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ಆದರೆ ಸೋಮವಾರ ಮುಂಜಾನೆ 3.30ಕ್ಕೆ ಅವರು ಕೊನೆಯುಸಿರೆಳೆದರು.
ಮುಂಬಯಿ ಪೊಲೀಸರ ಪ್ರಕಾರ ಕೋವಿಡ್ ದಿಂದಾಗಿ ಈ ವರೆಗೆ ಪೊಲೀಸ್ ಪಡೆಯ 101 ಸಿಬಂದಿ ಸಾವನ್ನಪ್ಪಿದ್ದಾರೆ.
ಮಾಜಿ ಶಾಸಕ ಪಾಸ್ಕಲ್ ಧನಾರೆ ನಿಧನ :
ಡಹಾಣು ಮೂಲದ ಬಿಜೆಪಿಯ ಮಾಜಿ ಶಾಸಕ ಪಾಸ್ಕಲ್ ಧನಾರೆ (49) ಅವರು ಕೊರೊನಾದಿಂದಾಗಿ ಮುಂಬಯಿ ನಾನಾವತಿ ಆಸ್ಪತ್ರೆಯಲ್ಲಿ ಸೋಮವಾರ ಕೊನೆಯುಸಿರೆಳೆದರು. ಪಾಸ್ಕಲ್ ಧನಾರೆ 2014ರಿಂದ 2019ರ ವರೆಗೆ ಶಾಸಕರಾಗಿದ್ದರು. ಪಾಲ್ಘರ್‌ನ ಡಹಾಣು ಕ್ಷೇತ್ರದಿಂದ ಅವರು ಆಯ್ಕೆಯಾಗಿದ್ದರು. ಕೊರೊನಾಗೆ ತುತ್ತಾದ ಕಾರಣ ಪಾಸ್ಕಲ್ ಧನಾರೆ ಅವರನ್ನು ಗುಜರಾತಿನ ವಾಪಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಅವರ ಸ್ಥಿತಿ ಹದಗೆಟ್ಟ ಬಳಿಕ ಅವರನ್ನು ರವಿವಾರ ರಾತ್ರಿ ಮುಂಬಯಿಯ ಲೀಲಾವತಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಬೆಳಗ್ಗೆ ನಿಧನ ಹೊಂದಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.