“ಬಂದರು ಯೋಜನೆ 2022 ರಲ್ಲಿ ಪೂರ್ಣ’

Team Udayavani, Dec 7, 2020, 8:45 PM IST

“ಬಂದರು ಯೋಜನೆ 2022 ರಲಿ ಪೂರ್ಣ’

ಮುಂಬಯಿ, ಡಿ. 6: ದಕ್ಷಿಣ ಮುಂಬಯಿ ಮತ್ತು ನವಿ ಮುಂಬ ಯಿ ಯನ್ನು ಸಂಪರ್ಕಿಸುವ ಮಹತ್ವಾ ಕಾಂಕ್ಷೆಯ ಬಂದರು ಯೋಜನೆಯಾದ ಮುಂಬಯಿ ಟ್ರಾನ್ಸ್ ಹಾರ್ಬರ್‌ ಲಿಂಕ್‌ ರಸ್ತೆ (ಎಂಟಿಎಚ್‌ಎಲ್) ಯೋಜ ನೆಯ ಕಾಮಗಾರಿ ಶೇ. 35ರಷ್ಟು ಪೂರ್ಣ ಗೊಂಡಿದ್ದು, ಈ ಯೋಜ ನೆಯು 2022ರ ಸೆಪ್ಟಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಮತ್ತು ಮುಂಬಯಿ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಏಕನಾಥ್‌ ಶಿಂಧೆ ಹೇಳಿದ್ದಾರೆ.

ಶುಕ್ರವಾರ ಈ ಯೋಜನೆಯನ್ನು ಪರಿಶೀಲಿ ಸಿದ್ದು, ಸಮಯಕ್ಕೆ ಸರಿಯಾಗಿ ಯೋಜನೆ ಪೂರ್ಣಗೊಳ್ಳಲಿದೆ. ಹಲವು ವರ್ಷ ಗಳಿಂದ ಪ್ರಸ್ತಾವಿಸಲಾಗಿರುವ 22 ಕಿ.ಮೀ. ಯೋಜನೆಯನ್ನು ಮಾರ್ಚ್‌ 2018ರಲ್ಲಿ ಪ್ರಾರಂಭಿಸಲಾಯಿತು. ಪ್ರಸ್ತುತ ಎಂಜಿನಿ ಯರ್‌ಗಳು, ನುರಿತ ಕೌಶ ಲ ರಹಿತ ಕಾರ್ಮಿಕರು ಸೇರಿ ದಂತೆ ಸುಮಾರು ಆರು ಸಾವಿರ ಮಾನವ ಶಕ್ತಿ ಈ ಯೋಜನೆ ಯಲ್ಲಿ ಕಾರ್ಯ ನಿರ್ವ ಹಿ ಸು ತ್ತಿದೆ ಎಂದು ಶಿಂಧೆ ಹೇಳಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಕೆಲಸದ ಮೇಲೆ ಪರಿಣಾಮ ಬೀರಿದ್ದರಿಂದಾಗಿ ಯೋಜನೆ ವಿಳಂಬವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಕೆಲಸದ ಅವಧಿ ಹೆಚ್ಚುವುದರೊಂದಿಗೆ ಕಾಮಗಾರಿಯನ್ನು ಚುರುಗೊಳಿಸಲಾಗಿದ್ದು, ಹೆಚ್ಚು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಆದ್ದರಿಂದ ಯೋಜನೆ ಯನ್ನು ಸಮಯಕ್ಕೆ ಪೂರ್ಣಗೊಳಿ ಸಬ ಹುದು ಎಂದು ಎಂಎಂಆರ್‌ಡಿಎ ಮೆಟ್ರೋಪಾಲಿಟನ್‌ ಆಯುಕ್ತ ಆರ್‌. ಎ. ರಾಜೀವ್‌ ಹೇಳಿದ್ದಾರೆ.

ಸೇತುವೆಯ ಕೆಳಗೆ ದೋಣಿಗಳ ಸಂಚಾ ರಕ್ಕೆ ಅನುಕೂಲವಾಗುವಂತೆ ಮತ್ತು ಸಮುದ್ರದಲ್ಲಿನ ತೈಲ ರಿಂಗ್‌ಗಳನ್ನು ಹೊಡೆಯದಂತೆ ಧ್ರುವಗಳ ನಡುವೆ ಹೆಚ್ಚಿನ ಅಂತರವನ್ನು ಇಡು ವುದು ಆವಶ್ಯಕ. ಅತ್ಯಾಧುನಿಕ ಆಥೊì ಟ್ರೊಪಿಕ್‌ ಸ್ಟೀಲ್‌ ಡೆಕ್‌ಗಳನ್ನು (ಒಎಸ್‌ಡಿ) ಅಲ್ಲಿ ಬಳಸಲಾಗುತ್ತಿದೆ. ಒಟ್ಟು 22 ಕಿ.ಮೀ ಸೇತುವೆಗಳಲ್ಲಿ 4.1 ಕಿ.ಮೀ ಸ್ಟೀಲ್‌ ಬಾಕ್ಸ್ ಗಿರ್ಡರ್‌ಗಳಾಗಿರುತ್ತವೆ. 90ರಿಂದ 180 ಮೀಟರ್‌ ಉದ್ದದ 29 ಒಎಸ್‌ಡಿಗಳನ್ನು ಬಳಸಲಾಗುತ್ತದೆ. ಈ ಉಕ್ಕಿನ ನಿರ್ಮಾಣದ ವೆಚ್ಚ ಸುಮಾರು 4,300 ಕೋಟಿ ರೂ.ಗಳಷ್ಟಾಗಿದೆ.

ಎಂಟಿಎಚ್‌ಎಲ್‌ ಅನ್ನು ನೇರವಾಗಿ ವಿರಾರ್‌-ಅಲಿಬಾಗ್‌ ಮಲ್ಟಿಮೋಡಲ್‌ ಕಾರಿಡಾರ್‌ಗೆ ವರ್ಲಿ-ಶಿವಿx ಎಲಿವೇಟೆಡ್‌ ರಸ್ತೆ, ಶಿವಿx ಯಿಂದ ಪೂರ್ವ ಫ್ರೀ ವೇ ಮತ್ತು ನವಿ ಮುಂಬಯಿಯಲ್ಲಿ ಸಂಪರ್ಕಿಸಲಾಗುವುದು. ಜೆಎನ್‌ಪಿಟಿ, ರಾಜ್ಯ ಹೆದ್ದಾರಿ 54, ಮುಂಬಯಿ-ಪುಣೆ ಹಳೆಯ ರಾಷ್ಟ್ರೀಯ ಹೆದ್ದಾರಿ, ನವಿ ಮುಂಬಯಿ ವಿಮಾನ ನಿಲ್ದಾಣದತ್ತ ಪ್ರಯಾಣ ಸುಲಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಮುಂಬಯಿ-ಪುಣೆ ಎಕ್ಸ್‌ಪ್ರೆಸ್‌ ವೇ ಚಿರ್ಲೆ ನಿಂದ 8 ಕಿ.ಮೀ ದೂರದಲ್ಲಿದೆ.

ಪ್ರಯಾಣ ಅವಧಿ ಇಳಿಕೆ :  ಈ ಯೋಜನೆ ಪೂರ್ಣಗೊಂಡ ಅನಂತರ, ದಕ್ಷಿಣ ಮುಂಬಯಿ ಯಿಂದ ನವಿ ಮುಂಬಯಿಗೆ ತಲುಪಲು ವ್ಯಯಿಸುವ ಅವಧಿಯಲ್ಲಿ ಸುಮಾರು 40 ನಿಮಿಷಗಳಷ್ಟು ಉಳಿಕೆ ಯಾಗುತ್ತದೆ. ಆದರೆ ಈ ಮಾರ್ಗದಲ್ಲಿ ರಸ್ತೆ ತೆರಿಗೆ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂದಾಜಿನ ಪ್ರಕಾರ ಸುಮಾರು 200 ರೂ.ಗಳ ರಸ್ತೆ ತೆರಿಗೆ ವಿಧಿಸಬಹುದು.

ಟಾಪ್ ನ್ಯೂಸ್

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

15-

Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.