ಅಂಚೆ ಇಲಾಖೆ: ಪತ್ರ ಬರೆಯುವ ಸ್ಪರ್ಧೆಯಲ್ಲಿ ರಾಜ್ಯಪಾಲರಿಗೆ ಪ್ರಥಮ ಬಹುಮಾನ
Team Udayavani, Jun 18, 2020, 9:39 AM IST
ಮುಂಬಯಿ: ಅಂಚೆ ಇಲಾಖೆ ಮಹಾರಾಷ್ಟ್ರ ಮತ್ತು ಗೋವಾ ವಲಯವು ಆಯೋಜಿಸಿದ್ದ ರಾಜ್ಯ ಮಟ್ಟದ ಪತ್ರ ಬರೆಯುವ ಧಾç ಅಖಾರ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಪ್ರಿಯ ಬಾಪು, ನೀವು ಅಮರರು ಶೀರ್ಷಿಕೆಯಲ್ಲಿ ಬರೆದ ಪತ್ರಕ್ಕೆ ಪ್ರಥಮ ಬಹುಮಾನವನ್ನು ಗೆದ್ದಿದ್ದಾರೆ.
ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪತ್ರ ಬರೆಯುವ ಸ್ಪರ್ಧೆಯನ್ನು ಅಂಚೆ ಇಲಾಖೆ ಆಯೋಜಿಸಿತ್ತು. ಮುಂಬಯಿ ಪಶ್ಚಿಮ ವಿಭಾಗದ ಹಿರಿಯ ಅಧೀಕ್ಷಕ ಪಿ. ಸಿ. ಜಗ್ತಾಪ್ ಮತ್ತು ಸಹಾಯಕ ಅಧೀಕ್ಷಕ ಎಸ್. ಖರತ್ ಅವರು ಮಂಗಳವಾರ ರಾಜ್ಯಪಾಲ ಕೋಶ್ಯಾರಿ ಅವರನ್ನು ರಾಜ್ ಭವನದಲ್ಲಿ ಭೇಟಿಯಾಗಿ 25 ಸಾವಿರ ರೂ.ಗಳ ಪ್ರಥಮ ಬಹುಮಾನದ ಚೆಕ್ ಅನ್ನು ನೀಡಿ ಅಭಿನಂದಿಸಿದರು.
18 ವರ್ಷ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ‘ಒಳನಾಡು ಪತ್ರ ಕಾರ್ಡ್’ ಮತ್ತು ‘ಹೊದಿಕೆ’ ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ರಾಜ್ಯಪಾಲರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಒಳನಾಡಿನ ಪತ್ರದ ಕುರಿತ ತಮ್ಮ ಪ್ರಬಂಧವನ್ನು ಹಿಂದಿಯಲ್ಲಿ ಸಂಘಟಕರಿಗೆ ಕಳುಹಿಸಿದ್ದರು.
ಕಳೆದ ವರ್ಷ ನವೆಂಬರ್ 6ರಂದು ಮುಂಬಯಿಯಲ್ಲಿ “ಮುಂಬೈಪೆಕ್ಸ್ – 2+019′ ಜಿಲ್ಲಾ ಮಟ್ಟದ ಫಿಲೇಟ್ಲಿ ಪ್ರದರ್ಶನವನ್ನು ಉದ್ಘಾಟಿಸಿದರು. ಮಹಾತ್ಮಾ ಗಾಂಧಿಯವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅಂಚೆ ಇಲಾಖೆ ಈ ಪ್ರದರ್ಶನವನ್ನು ಆಯೋಜಿಸಿತ್ತು. ಆಗ ಪತ್ರ ಬರೆಯುವ ಸ್ಪರ್ಧೆಯನ್ನು ಆಯೋಜಿಸಿದ್ದಕ್ಕಾಗಿ ಅಂಚೆ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತಿರುವಾಗ, ರಾಜ್ಯಪಾಲರು ಸ್ವತಃ ಸ್ಪರ್ಧೆಯಲ್ಲಿ ಭಾಗವ ಹಿಸುವುದಾಗಿ ಘೋಷಿಸಿದ್ದರು. ಪತ್ರ ಬರೆಯುವ ಸ್ಪರ್ಧೆಯಲ್ಲಿ 80,000ಕ್ಕೂ ಹೆಚ್ಚು ಮಂದಿ ಭಾಗವ ಹಿಸಿದ್ದರು ಎಂದು ಅಂಚೆ ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.