ಕಂಪೆನಿಗಳಿಂದ ನೇರವಾಗಿ ಲಸಿಕೆ ಪಡೆಯಲು ಖಾಸಗಿ ಆಸ್ಪತ್ರೆಗಳ ಪ್ರಯತ್ನ
Team Udayavani, May 16, 2021, 1:19 PM IST
ಮುಂಬಯಿ: ಕಂಪೆನಿ ಮತ್ತು ವಸತಿ ಕಟ್ಟಡಗಳಲ್ಲಿ ಲಸಿಕೆ ಅಭಿಯಾನ ನಡೆಸಲು ಅನುಮತಿ ನೀಡಿರುವ ಪುರಸಭೆಯ ಯೋಜನೆ ವಿಫಲವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ದೊಡ್ಡ ಕಂಪೆನಿಗಳಲ್ಲಿ ಮತ್ತು ವಸತಿ ಕಟ್ಟಡಗಳಲ್ಲಿ ಲಸಿಕ ಅಭಿಯಾನ ನಡೆಸುವ ಖಾಸಗಿ ಆಸ್ಪತ್ರೆಗಳು ನೇರವಾಗಿ ಕಂಪೆನಿಗಳಿಂದ ಲಸಿಕೆ ಪಡೆಯಬೇಕಾಗುತ್ತದೆ. ನಿಗಮಗಳು ಈ ಯೋಜನೆಗಳಿಗೆ ಲಸಿಕೆ ಪೂರೈಸುವುದಿಲ್ಲ. ಇದರ ಪರಿಣಾಮವಾಗಿ ಲಸಿಕೆಗಳ ಕೊರತೆಯಿರುವ ಸಮಯದಲ್ಲಿ ಲಸಿಕೆಗಳು ನೇರವಾಗಿ ಕಂಪೆನಿಗಳಿಂದ ಹೇಗೆ ಲಭ್ಯವಾಗುತ್ತವೆ ಎಂಬ ಪ್ರಶ್ನೆ ಎಂದ್ದಿದೆ.
ನಿಯಮ ಘೋಷಿಸಿದ ಬಿಎಂಸಿ
ಮುಂಬಯಿಯಲ್ಲಿ ಲಸಿಕಾ ಅಭಿಯಾನವನ್ನು ವೇಗಗೊಳಿಸಲು ಮುಂಬಯಿ ಮನಪಾ ಕಚೇರಿಗಳು ಮತ್ತು ವಸತಿ ಕಟ್ಟಡಗಳಲ್ಲಿ ಲಸಿಕೆ ನೀಡಲು ಅನುಮತಿ ನೀಡಿದೆ. ಇದಕ್ಕಾಗಿ ನಿಯಮಗಳನ್ನು ಸಹ ಘೋಷಿಸಿದೆ. ಈ ವ್ಯಾಕ್ಸಿನೇಷನ್ ಅಭಿಯಾನಕ್ಕಾಗಿ ಕಂಪೆನಿ ಅಥವಾ ವಸತಿ ಕಟ್ಟಡಗಳು ಖಾಸಗಿ ಆಸ್ಪತ್ರೆಗಳೊಂಗಳ ಜತೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಲಸಿಕೆ ಅಭಿಯಾನವನ್ನು ಈ ರೀತಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಪುರಸಭೆಗೆ ತಿಳಿಸಬೇಕಾಗುತ್ತದೆ. ಕೊರೊನಾ ಲಸಿಕೆಯನ್ನು ಸಿಬಂದಿ ಅಥವಾ ನಿವಾಸಿಗಳಿಗೆ ನೀಡುವ ಜವಾಬ್ದಾರಿಯನ್ನು ಹೊಂದಿರುವ ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಇದನ್ನು ಲಭ್ಯಗೊಳಿಸಬೇಕಾಗುತ್ತದೆ. ಅಂದರೆ ಆಸ್ಪತ್ರೆಗಳು ಅದನ್ನು ಲಸಿಕೆ ತಯಾರಕರಿಂದ ನೇರವಾಗಿ ಪಡೆಯಬೇಕಾಗುತ್ತದೆ ಎಂದಿದೆ.
ಅರ್ಜಿ ಸಲ್ಲಿಸಲು ಮುಂದಾದ ವಸತಿ ಕಟ್ಟಡಗಳು
ಪುರಸಭೆ ಯೋಜನೆ ಮತ್ತು ನಿಬಂಧನೆಗಳನ್ನು ಘೋಷಿಸಿದ ಬಳಿಕ ಹಲವಾರು ವಸತಿ ಕಟ್ಟಡಗಳ ನಿವಾಸಿಗಳು ನಿರಾಳವಾಗಿದ್ದರು. ಆಸ್ಪತ್ರೆಗಳು ಅಥವಾ ವಾರ್ಡ್‌ಗಳಲ್ಲಿನ ಲಸಿಕೆ ಕೇಂದ್ರಗಳು ಪ್ರಸ್ತುತ ಕಿಕ್ಕಿರಿದು ತುಂಬಿವೆ. ವಸತಿ ಕಟ್ಟಡಗಳ ಆವರಣದಲ್ಲಿ ಲಸಿಕೆ ಅಭಿಯಾನವನ್ನು ನಡೆಸಿದರೆ, ಕೇಂದ್ರಗಳಿಗೆ ಹೋಗುವ ಅಗತ್ಯವಿಲ್ಲ ಎಂದು ನಿವಾಸಿಗಳು ಅಭಿಪ್ರಾಯಪಟ್ಟರು. ವ್ಯಾಕ್ಸಿನೇಷನ್ ಅಭಿಯಾನಕ್ಕಾಗಿ ಅನೇಕ ವಸತಿ ಕಟ್ಟಡಗಳ ಖಾಸಗಿ ಆಸ್ಪತ್ರೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಿವೆ. ಲಸಿಕೆಗಳ ಲಭ್ಯತೆಯ ಬಗ್ಗೆ ಸ್ಪಷ್ಟತೆಯ ಕೊರತೆಯಿಂದಾಗಿ, ಖಾಸಗಿ ಆಸ್ಪತ್ರೆಗಳು ವಸತಿ ಸಂಘಗಳಿಂದ ಅರ್ಜಿಗಳನ್ನು ಸ್ವೀಕರಿಸುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.
ಮುಚ್ಚಲ್ಪಟ್ಟ ಖಾಸಗಿ ಆಸ್ಪತ್ರೆಗಳ ವ್ಯಾಕ್ಸಿನೇಷನ್ ಸೆಂಟರ್
ಪ್ರಸ್ತುತ ಕೊರೊನಾ ಲಸಿಕೆಯ ಕೊರತೆಯಿದೆ. ಸರಕಾರಿ ಮತ್ತು ಪುರಸಭೆ ಕೇಂದ್ರಗಳಲ್ಲಿ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿದೆ. ವ್ಯಾಕ್ಸಿನೇಷನ್ ಕೊರತೆಯಿಂದಾಗಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಷನ್ ಸ್ಥಗಿತಗೊಳಿಸಲಾಗಿದೆ. ವಾರ್ಡ್ ಮಟ್ಟದಲ್ಲಿ ಲಸಿಕೆ ಕೇಂದ್ರಗಳನ್ನು ಪ್ರಾರಂಭಿಸಲು ಪುರಸಭೆ ಈಗ ಆದ್ಯತೆ ನೀಡಿದೆ. ಈ ಕೇಂದ್ರಗಳಿಗೆ ದಿನಕ್ಕೆ 100 ಡೋಸ್‌ಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಈ ಕೇಂದ್ರಗಳಲ್ಲಿ ಪ್ರತಿದಿನ 100 ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಸ್ಥಳೀಯರು ತಮ್ಮ ಮನೆಗಳ ಬಳಿ ಲಸಿಕೆ ಪಡೆಯಲು ಇಚ್ಚಿಸುತ್ತಿದ್ದು, ಆದರೆ ಲಸಿಕೆಗಳ ಕೊರತೆಯಿಂದ ಅವರು ನಿರಾಶೆಗೊಂಡಿದ್ದಾರೆ. ವಸತಿ ಕಟ್ಟಡಗಳ ಆವರಣದಲ್ಲಿ ಚುಚ್ಚುಮದ್ದಿಗೆ ಪುರಸಭೆ ಹಸಿರು ನಿಶಾನೆ ನೀಡಿತ್ತು. ಆದರೆ ಖಾಸಗಿ ಆಸ್ಪತ್ರೆಗಳು ಲಸಿಕೆ ಹಾಕಲು ಹಿಂಜರಿಯುತ್ತಿರುವುದರಿಂದ ಯೋಜನೆ ಕುಂಠಿತಗೊಳ್ಳುವ ಲಕ್ಷಣಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.