ಪುಣೆ ಬಿಲ್ಲವಸಂಘದ ಬೆಳ್ಳಿಹಬ್ಬ ಪೂರ್ವಭಾವಿ ಸಭೆ


Team Udayavani, Nov 14, 2017, 5:03 PM IST

Nagumogam-1.jpg

ಪುಣೆ: ಪುಣೆ ಬಿಲ್ಲವ ಸಂಘವು ನಮ್ಮ ಹಿರಿಯರ ಸಮಾಜ ಸೇವಾ ಮನೋಭಾವದಿಂದ ಸಂಘಟನೆ ಅಗತ್ಯ ಇದೆ ಎಂಬ ಕಾರಣದಿಂದ 25ವರ್ಷಗಳ ಹಿಂದೆ ಸ್ಥಾಪನೆ ಮಾಡಿದ್ದಾರೆ. ಈ ಮೂಲಕ ಸಮಾಜಬಾಂಧ‌ವರ ಕಷ್ಟ ಸುಖಗಳಲ್ಲಿ ಭಾಗಿಗಳಾಗಿ, ಶಿಕ್ಷಣ, ಅರೋಗ್ಯ,ಕಲಾ ಸೇವಾ ಕಾರ್ಯಗಳ ಮುಖಾಂತರ ಸೇವೆಗೈಯುತ್ತ ಬರುತ್ತಿದೆ. ಸಂಘ ವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಹಲವಾರು ಬಿಲ್ಲವ ಸಮಾಜದ ಗಣ್ಯರು, ಮಾಜಿ ಅಧ್ಯಕ್ಷರು, ಸಮಾಜದ ಪ್ರಮುಖರು  ಶ್ರಮಿಸಿದ್ದಾರೆ. ಇದೀಗ ಸಂಘವು ಬೆಳ್ಳಿ ಮಹೋತ್ಸವದ ಹೊಸ್ತಿಲಲ್ಲಿದೆ. ಈ ಪರ್ವವನ್ನು ಬಹಳ ಅದ್ದೂರಿಯಾಗಿ ನಡೆಸುವ ಸದವಕಾಶ ನಮಗೆ ಒದಗಿ ಬಂದಿದೆ. ಪುಣೆಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಎಲ್ಲಾ ಸಮಾಜ ಬಾಂಧವರನ್ನು ಒಗ್ಗೂಡಿಸಿ ಸರ್ವರ ಸಹಕಾರದಿಂದ ಈ ಉತ್ಸವವನ್ನು ಸ್ಮರಣಿಯವಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಬೆಳ್ಳಿ ಮಹೋತ್ಸವದ ಯಶಸ್ವಿಗೆ ಸರ್ವ ಬಿಲ್ಲವ ಸಮಾಜ ಬಾಂಧವರು ಕೈ ಜೋಡಿಸಿ ಸಹಕಾರ ನೀಡುವ ಅಗತ್ಯವಿದೆ ಎಂದು ಪುಣೆ ಬಿಲ್ಲವ ಸಂಘದ  ಅಧ್ಯಕ್ಷರಾದ ಶೇಖರ್‌ ಪೂಜಾರಿ ತಿಳಿಸಿದರು.

ನ. 9ರಂದು ಪುಣೆ ಬಿಲ್ಲವ ಸಂಘದ 25ನೇ ವಾರ್ಷಿಕ ಬೆಳ್ಳಿ ಮಹೋತ್ಸವ  ಆಚರಣೆಯ ಅಂಗವಾಗಿ ಕಾತ್ರಜ್‌ನ ಕಿನಾರ ಹೊಟೇಲ್‌ ಸಭಾಗೃಹದಲ್ಲಿ ನಡೆದ  ಪೂರ್ವಭಾವಿ ಸಮಾಲೋಚನ ಸಭೆಯಲ್ಲಿ ಮಾತನಾಡಿದ ಅವರು,  ನಮ್ಮ  ಸಂಘದ ಬೆಳ್ಳಿಹಬ್ಬದ ಯಶಸ್ಸಿಗೆ  ಸಮಾಜದ ಯುವ ವಿಭಾಗವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು. ಅಲ್ಲದೆ ಈ ಕಾರ್ಯಕ್ರಮದಲ್ಲಿ   ಪ್ರತಿಯೊಂದು  ಮನೆಯವರುಪಾಲ್ಗೊಳ್ಳುವಂತಾಗಬೇಕು. ಮುಂದಿನನಮ್ಮ ಸಂಘದ ಅಭಿವೃದ್ಧಿಗೆಸಹಕಾರ ನೀಡುವ ಜತೆಗೆ ಸಮಾಜದ ಬೆಳವಣಿಗೆಗೆ ಸಹಕರಿಸಬೇಕು ಎಂದರು.

ಈ ಪೂರ್ವಭಾವಿ ಸಭೆಯು ಪುಣೆ ಬಿಲ್ಲವ ಸಂಘದ ಅಧ್ಯಕ್ಷ  ಶೇಖರ್‌ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ  ವಿಶ್ವನಾಥ್‌ ಪೂಜಾರಿ ಕಡ್ತಲ, ಜಯ ರಾಮ ಪೂಜಾರಿ, ಮಾಜಿ ಅಧ್ಯಕ್ಷರಾದ ಸದಾಶಿವ ಎಸ್‌. ಸಾಲ್ಯಾನ್‌, ಸದಾನಂದ ಪೂಜಾರಿ, ಶ್ಯಾಮ ಸುವರ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ಸರೋಜಿನಿ ಡಿ. ಬಂಗೇರ ಅವರು ಉಪಸ್ಥಿತರಿದ್ದರು. ಶಂಕರ್‌  ಪೂಜಾರಿ ಬಂಟಕಲ್ಲು  ಅವರು ಪ್ರಾರ್ಥನೆಗೈದರು. ಈ ಸಂದರ್ಭದಲ್ಲಿ  ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಆಯೋಜನ ಸಮಿತಿಯನ್ನು ರಚಿಸಲಾಯಿತು. ಸಂಘದ
ಉಪಾಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ ಇವರನ್ನು ಸಮಿತಿ ಅಧ್ಯಕ್ಷ
ರನ್ನಾಗಿ ಮತ್ತು ಮಹಿಳಾ ವಿಭಾಗದಲ್ಲಿ ರೇವತಿ ಪೂಜಾರಿ ಅವರನ್ನು ಕಾರ್ಯಾಧ್ಯಕ್ಷೆಯನ್ನಾಗಿ ಅಯ್ಕೆ ಮಾಡಲಾಯಿತು.

ವಿಶ್ವನಾಥ್‌ ಪೂಜಾರಿ ಕಡ್ತಲ ಅವರು ಸಮಾರಂಭದ ತಯಾರಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಣೆ ತುಳುಕೂಟದ ಪಿಂಪ್ರಿ-ಚಿಂಚಾÌಡ್‌ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಶ್ಯಾಮ… ಸುವರ್ಣ, ಪುಣೆ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ  ಸದಾಶಿವ ಸಾಲ್ಯಾನ್‌, ಮಹಿಳಾ ವಿಭಾಗದ ಅಧ್ಯಕ್ಷೆ ಸರೋಜಿನಿ ಬಂಗೇರ ಮತ್ತು ಸಮಿತಿ ಸದಸ್ಯರು ಸಮಾಜ ಬಾಂಧವರು ಕೆಲವು ಸಲಹೆ ಸೂಚನೆ ಅನಿಸಿಕೆಗಳನ್ನೂ ಸಭೆಯಲ್ಲಿ ವ್ಯಕ್ತಪಡಿಸಿದರು. ಬೆಳ್ಳಿ ಮಹೋತ್ಸವವನ್ನು 2018ರ ಫೆಬ್ರವರಿ ತಿಂಗಳಲ್ಲಿ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಂದಿನ ಸಭೆಯಲ್ಲಿ ದಿನಾಂಕ ನಿಗದಿಪಡಿಸಿ ತಿಳಿಸಲಾಗುವುದೆಂದು ಹೇಳಿದರು.

ಈ ಸಭೆಯಲ್ಲಿ ಬಿಲ್ಲವ ಸಂಘದ ಕಾರ್ಯದರ್ಶಿ ಲೋಹಿತ್‌  ಕೆ. ಪೂಜಾರಿ ಅವರು ಸಮಾಜದ ಪ್ರಮುಖರಾದ  ಶಂಕರ್‌ ಪೂಜಾರಿ ದುರ್ಗಾ, ಸುದರ್ಶನ್‌ ಸುವರ್ಣ, ರವಿಂದ್ರ ಪೂಜಾರಿ,  ಶಂಕರ್‌ ಪೂಜಾರಿ ಬಂಟಕಲ್ಲು, ಶಿವರಾಮ ಪೂಜಾರಿ, ಪ್ರಭಾಕರ ಗುರುಸ್ವಾಮಿ, ಜಯ ಟಿ. ಪೂಜಾರಿ, ವಿಶ್ವನಾಥ್‌ ಟಿ. ಪೂಜಾರಿ, ವಿಶ್ವನಾಥ್‌ ಪೂಜಾರಿ ಕಪಿಲ, ಹರೀಶ್‌ ಪೂಜಾರಿ, ಹರೀಶ್‌ ಟಿ. ಪೂಜಾರಿ, ಗಿರೀಶ್‌  ಪೂಜಾರಿ, ವಸಂತ್‌ ಪೂಜಾರಿ ಪಾಷಣ್‌, ಶಿವಪ್ರಸಾದ್‌ ಪೂಜಾರಿ, ಕಿಶೋರ್‌ ಪೂಜಾರಿ, ಉಮಾ ಪೂಜಾರಿ, ರೇವತಿ ಪೂಜಾರಿ, ನೂತನ್‌ ಸುವರ್ಣ, ಲೀಲಾ ಪೂಜಾರಿ, ಶಾಲಿನಿ ಪೂಜಾರಿ, ಕಾರ್ಯದರ್ಶಿ ಸುನೀತಾ ಪೂಜಾರಿ, ವನಿತಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು. ಸಂಘದ ಜೊತೆ ಕಾರ್ಯದರ್ಶಿ ಸುಂದರ್‌  ಕರ್ಕೇರ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಟಾಪ್ ನ್ಯೂಸ್

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Bhopal: ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ… ಹೈ ಅಲರ್ಟ್

Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ

18ನೇ ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೆ ಚಾಲನೆ

Odisha: ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

6

Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

5(1

Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ

4

Network Problem: ಇಲ್ಲಿ ಟವರ್‌ ಇದೆ, ಆದರೆ ನೆಟ್ವರ್ಕ್‌ ಸಿಗಲ್ಲ!

ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.