ಪುಣೆ ಬಂಟರ ಭವನ ಉದ್ಘಾಟನಾ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮ
Team Udayavani, Apr 3, 2018, 4:04 PM IST
ಪುಣೆ: ಸಾಂಸ್ಕೃತಿಕ ನಗರಿಯಾದ ಪುಣೆ ಬಂಟರ ಭವನದ ಉದ್ಘಾಟನಾ ಸಮಾರಂಭವು ಎ. 7 ಮತ್ತು ಎ. 8 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಧಾರ್ಮಿಕ ಕಾರ್ಯಕ್ರಮಗಳು ಮಾ. 31 ಹಾಗೂ ಎ. 1 ರಂದು ವಿವಿಧ ಪೂಜಾಕೈಂಕರ್ಯಗಳೊಂದಿಗೆ ವಿಧಿವತ್ತಾಗಿ ನಡೆಸಲಾಯಿತು.
ವೇದಮೂರ್ತಿ ಓಂಕಾರ ಭಟ್ ಮತ್ತು ಅರ್ಚಕ ವೃಂದದಿಂದ ಪುಣೆಯ ಬಂಟರ ಭವನದಲ್ಲಿ ವಾಸ್ತು ಹೋಮ, ಮಹಾಗಣಪತಿ ಹೋಮ, ನವಗ್ರಹ ಪೂಜೆ, ಸುದರ್ಶನ ಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆಗಳನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ನಿತ್ಯಾನಂದ ಸ್ವಾಮಿ ಹಾಗೂ ಶ್ರೀ ಸಾಯಿಬಾಬಾ ದೇವರ ಮೂರ್ತಿಗಳಿಗೆ ಪ್ರಾಣಪ್ರತಿಷ್ಠೆ ಮಾಡಿ ವಿಶೇಷ ಪೂಜೆ, ಅಭಿಷೇಕಗಳನ್ನು ಮಾಡಲಾಯಿತು.
ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಮತ್ತು ದಿವ್ಯಾ ಎಸ್. ದಂಪತಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ವಿಶ್ವನಾಥ ಶೆಟ್ಟಿ ದಂಪತಿ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಭಾಗವಹಿಸಿದರು. ಮುಂಬಯಿಯ ಉದ್ಯಮಿ ರಾಮಕೃಷ್ಣ ಗ್ರೂಪ್ ಆಪ್ ಹೊಟೇಲ್ಸ್‌ನ ಸುಬ್ಬಯ್ಯ ಶೆಟ್ಟಿ ದಂಪತಿ ಶ್ರೀ ಸಾಯಿಬಾಬಾ ಹಾಗೂ ಶ್ರೀ ನಿತ್ಯಾನಂದ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಮ್ಮಾನ
ಓಂಕಾರ್ ಭಟ್ ಇವರು ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಪ್ರಾರ್ಥನೆಗೈದು ಮಹಾಪೂಜೆಯ ಪ್ರಸಾದವನ್ನು ಸಂತೋಷ್ ಶೆಟ್ಟಿ ದಂಪತಿಗೆ ನೀಡಿ ಹರಸಿದರು. ಈ ಸಂದರ್ಭ ಸುಬ್ಬಯ್ಯ ಶೆಟ್ಟಿ ದಂಪತಿಯನ್ನು ಸಂಘದ ವತಿಯಿಂದ ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಸಂಘದ ಪದಾಧಿಕಾರಿಗಳು ಹಾಗೂ ಪುರೋಹಿತರು ಗೌರವಿಸಿ ಶುಭಹಾರೈಸಿದರು.
ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಕುಶಲ್ ಹೆಗ್ಡೆ, ಜಯಂತ್ ಕುಮಾರ್ ಶೆಟ್ಟಿ, ಸದಾನಂದ ಕೆ. ಶೆಟ್ಟಿ, ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ, ಸಿಎ ಸದಾನಂದ ಶೆಟ್ಟಿ, ಪಿಂಪ್ರಿ-ಚಿಂಚಾÌಡ್ ಬಂಟರ ಸಂಘದ ಅಧ್ಯಕ್ಷ ಮಹೇಶ್ ಹೆಗ್ಡೆ, ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ. ಶೆಟ್ಟಿ, ಪದ್ಮನಾಭ ಕೆ. ಶೆಟ್ಟಿ, ಎರ್ಮಾಳ್ ಸೀತಾರಾಮ ಶೆಟ್ಟಿ, ಬಂಟ್ಸ… ಅಸೋಸಿಯೇಶನ್ ಪುಣೆ ಅಧ್ಯಕ್ಷರಾದ ನಾರಾಯಣ ಕೆ. ಶೆಟ್ಟಿ, ಮಾಜಿ ಅಧ್ಯಕ್ಷ ಜಯ ಶೆಟ್ಟಿ ಮಿಯ್ನಾರು, ನಿವೃತ್ತ ಐಜಿ ಜಯಾನಂದ ಶೆಟ್ಟಿ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘ ಕಾತ್ರಜ್ ಅಧ್ಯಕ್ಷ ಸುಭಾಷ್ ಶೆಟ್ಟಿ, ಪುಣೆ ಬಂಟರ ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಗೌರವ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.
ಅಲ್ಲದೆ ಇತರ ಪದಾಧಿಕಾರಿಗಳಾದ ಸತೀಶ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ಶಶೀಂದ್ರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸುಧಾಕರ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ತಾರಾನಾಥ ಕೆ. ರೈ ಮೇಗಿನಗುತ್ತು, ಗಣೇಶ್ ಶೆಟ್ಟಿ, ಮೋಹನ್ ಶೆಟ್ಟಿ, ರಂಜಿತ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಪ್ರಶಾಂತ್ ಶೆಟ್ಟಿ, ಗಣೇಶ್ ಹೆಗ್ಡೆ, ವಿವೇಕಾನಂದ ಶೆಟ್ಟಿ ಆವರ್ಸೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಸುಲತಾ ಎಸ್. ಶೆಟ್ಟಿ, ಸುಚಿತ್ರಾ ಎಸ್. ಶೆಟ್ಟಿ, ಶಮ್ಮಿ ಎ. ಹೆಗ್ಡೆ, ಸಾರಿಕಾ ಸಿ. ಶೆಟ್ಟಿ, ಸಂಧ್ಯಾ ಆರ್. ಶೆಟ್ಟಿ, ಸುಮಾ ಎನ್. ಶೆಟ್ಟಿ, ನೀನಾ ಬಿ. ಶೆಟ್ಟಿ, ಗೀತಾ ಜೆ. ಶೆಟ್ಟಿ, ವಿನಯಾ ಯು. ಶೆಟ್ಟಿ, ದಿವ್ಯಾ ಎಸ್. ಶೆಟ್ಟಿ, ನಯನಾ ಜೆ. ಶೆಟ್ಟಿ, ನಿವೇದಿತಾ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರೋನಕ್ ಜೆ. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಂಪಾ ಎಸ್. ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ ಬೈಲೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಬಿ. ಶೆಟ್ಟಿ ಹಾಗೂ ಸರ್ವ ಪದಾಧಿಕಾರಿಗಳು, ಉದ್ಘಾಟನಾ ಸಮಾರಂಭದ ವಿವಿಧ ಸಮಿತಿಗಳ ಕಾರ್ಯಾಧ್ಯಕ್ಷರು, ಸಂಯೋಜಕರು ಉಪಸ್ಥಿತರಿದ್ದರು. ಮಧ್ಯಾಹ್ನ ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.