ಪುಣೆ ಬಂಟರ ಸಂಘ: ಆಟಿಡೊಂಜಿ ದಿನ ಕಾರ್ಯಕ್ರಮ
Team Udayavani, Jul 25, 2018, 4:52 PM IST
ಪುಣೆ: ಹಿಂದಿನ ಕಾಲದಲ್ಲಿ, ನಮ್ಮ ಬಾಲ್ಯದ ದಿನಗಳಲ್ಲಿ ತುಳುನಾಡಿನಾದ್ಯಂತ ಆಟಿತಿಂಗಳು ಕಷ್ಟದ ದಿನಗಳು. ಉಣ್ಣಲು ಅನ್ನವಿಲ್ಲದೆ ಪ್ರಕೃತಿಸಹಜವಾಗಿ ಸಿಗುತ್ತಿದ್ದ ಸೊಪ್ಪು-ತರಕಾರಿಗಳನ್ನು ಸೇವಿಸಿ ಜೀವಿಸಲಾಗು ತ್ತಿತ್ತು. ಅಂತಹ ಕಷ್ಟಕಾಲದಲ್ಲಿಯೂ ನಮ್ಮ ಹಿರಿಯರು ಕೃಷಿಕಾರ್ಯದಲ್ಲಿ ತೊಡಗಿಕೊಂಡು ದೈವ ದೇವರುಗಳನ್ನು ಆರಾಧಿಸಿಕೊಂಡು, ಮಾತಾಪಿತರಿಗೆ, ಗುರುಹಿರಿಯರಿಗೆ ಗೌರವ ಗಳನ್ನು ನೀಡುತ್ತಾ, ಪ್ರಾಕೃತಿಕವಾಗಿ ಸಿಗುತ್ತಿದ್ದ ಸಂಪತ್ತುಗಳನ್ನು ಉಪಯೋಗಿಸಿಕೊಂಡು ಕೂಡುಕುಟುಂಬದೊಂದಿಗೆ ಶ್ರೇಷ್ಠ ಸಂಸ್ಕಾರದೊಂದಿಗೆ ಆದರ್ಶವಾಗಿ ಬಾಳಿ ಕಿರಿಯರಿಗೆಲ್ಲ ಜೀವನದ ದಾರಿಯನ್ನು ತೋರಿಸಿ¨ªಾರೆ. ಅಂತಹ ಜೀವನಾದರ್ಶಗಳನ್ನು ಹಾಕಿಕೊಟ್ಟ ನಮ್ಮ ಹಿರಿಯರು ನಮಗೆ ಪ್ರಾತಃಸ್ಮರಣೀಯರಾಗಿ¨ªಾರೆ. ಅವರಿಂದಾಗಿಯೇ ನಾವು ಹೊರನಾಡಿನಲ್ಲಿದ್ದರೂ ಯಶಸ್ಸನ್ನು ಗಳಿಸಿಕೊಂಡು ಸುಸಂಸ್ಕೃತರಾಗಿ ಗುರುತಿಸಿ ಕೊಂಡಿದ್ದೇವೆ. ಅವರನ್ನು ನೆನಪಿಸುವ ಕಾರ್ಯ ನಮ್ಮ ಕರ್ತವ್ಯ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ ಶೆಟ್ಟಿ ಅಭಿಪ್ರಾಯಪಟ್ಟರು.
ಜು. 23ರಂದು ಕಾತ್ರಜ್ ಸೃಷ್ಟಿ ಹೊಟೇಲ್ ಸಭಾಂಗಣದಲ್ಲಿ ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿ ವತಿಯಿಂದ ನಡೆದ ಆಟಿಡೊಂಜಿ ದಿನ ಆಚರಣೆಯ ಕಾರ್ಯ ಕ್ರಮವನ್ನು ದೀಪ ಪ್ರಜ್ವಲಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಆಟಿ ತಿಂಗಳ ಆಚರಣೆಯ ಬಗ್ಗೆ ಪರ ವಿರೋಧ ಜಿಜ್ಞಾಸೆಗಳಿದ್ದರೂ ನಮ್ಮ ಹಿರಿಯರ ಆಚಾರವಿಚಾರಗಳನ್ನು ನೆನಪಿಸಿಕೊಂಡು, ತುಳುನಾಡಿನ ಆಹಾರ ಪದ್ಧತಿಗಳನ್ನು ಅನುಸರಿಸಿಕೊಂಡು ನಮ್ಮ ಮಕ್ಕಳಿಗೂ ಅದರ ಅರಿವನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಪ್ರಾದೇಶಿಕ ಸಮಿತಿಯ ಊರಿನ ಜಾನಪದ ಸಂಸ್ಕೃತಿಯನ್ನು ನೆನಪಿಸುವ ಸಂಗೀತ ಕಾರ್ಯಕ್ರಮವನ್ನೂ ಹಮ್ಮಿಕೊಂಡು ಆಚರಿಸುತ್ತಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಪುಣೆ ಬಂಟರ ಸಂಘದ ಈ ಪ್ರಾದೇಶಿಕ ಸಮಿತಿಯು ಸಂಘಟನಾ ಶಕ್ತಿಯೊಂದಿಗೆ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಘದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದು ಬಂಟರ ಭವನ ನಿರ್ಮಾಣದಲ್ಲಿಯೂ ಉತ್ತಮ ಕೊಡುಗೆಯನ್ನು ಸಲ್ಲಿಸಿದೆ. ಸಂಘದ ಅಭ್ಯುದಯದಲ್ಲಿ ನಿಮ್ಮೆಲ್ಲರ ಸಹಕಾರ ನಿರಂತರ ವಾಗಿರಲಿ ಎಂದರು.
ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಮಾತನಾಡಿ. ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ಆಟಿ ತಿಂಗಳೆಂದರೆ ಬವಣೆ ಪಡುವ ಕಾಲವಾಗಿತ್ತು ಅಂದಿನ ದಿನಗಳಲ್ಲಿ ಸಿಗುತ್ತಿದ್ದ ಔಷಧೀಯ ಗುಣಗಳುಳ್ಳ ಸಸ್ಯಗಳು ಜನರ ಆರೋಗ್ಯದೊಂದಿಗೆ ಆಹಾರದ ಅಗತ್ಯತೆ ಯನ್ನೂ ಪೂರೈಸುತ್ತಿದ್ದವು. ಆಟಿ ತಿಂಗಳಲ್ಲಿ ದೈವಗಳು ಘಟ್ಟದ ಕಡೆಗೆ ಹೋಗುತ್ತವೆ ಎಂಬ ನಂಬಿಕೆಗಳು ಇದ್ದುದರಿಂದ ಆ ತಿಂಗಳಲ್ಲಿ ದೈವ ದೇವರುಗಳ ಆಚರಣೆಗಳು ನಡೆಯುತ್ತಿರಲಿಲ್ಲ. ನಮ್ಮ ಹಿರಿಯರ ಆಚಾರ ವಿಚಾರಗಳು, ಸಂಪ್ರದಾಯಗಳ ಆಚರಣೆಗಳ ಹಿಂದೆ ಉತ್ತಮ ಆಶಯಗಳಿದ್ದವು. ಆದುದರಿಂದ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಪಾಲಿಸುವುದರೊಂದಿಗೆ ನಮ್ಮ ಮಕ್ಕಳಿಗೂ ಅರುಹುವ ಕಾರ್ಯವನ್ನು ಮಾಡುತ್ತಿರುವ ದಕ್ಷಿಣ ಪ್ರಾದೇಶಿಕ ಸಮಿತಿಯ ಇಂಥ ಕಾರ್ಯಕ್ರಮ ಅಭಿನಂದನೀಯ ಎಂದರು.
ವೇದಿಕೆಯಲ್ಲಿ ದಕ್ಷಿಣ ಪ್ರಾದೇಶಿಕ ಸಮಿತಿಯ ಸಮನ್ವಯಕರಾದ ತಾರಾನಾಥ ರೈ ಮೇಗಿನಗುತ್ತು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ ಬೈಲೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಶೆಟ್ಟಿ ಉಪಸ್ಥಿತರಿದ್ದರು. ಅತಿಥಿಗಳನ್ನು ಹೂವಿನ ಗಿಡವನ್ನಿತ್ತು ಸತ್ಕರಿಸಲಾಯಿತು.
ಗೀತಾ ಬಿ. ಶೆಟ್ಟಿ, ಲೀಲಾ ಬಿ. ಶೆಟ್ಟಿ, ಮಲ್ಲಿಕಾ ಶೆಟ್ಟಿ, ರೋಹಿಣಿ ಶೆಟ್ಟಿ, ಅಂಬಿಕಾ ಶೆಟ್ಟಿ, ವಾರಿಜಾ ಶೆಟ್ಟಿ, ಸಂಪಾ ಶೆಟ್ಟಿ, ಶೋಭಾ ಪಿ. ಶೆಟ್ಟಿ, ಸುಮಂಗಲಾ ಶೆಟ್ಟಿ, ಗೀತಾ ಶೆಟ್ಟಿ, ವಿಜಯಾ ಶೆಟ್ಟಿ, ಶಾಂತಾ ಶೆಟ್ಟಿ, ಉಷಾ ಶೆಟ್ಟಿ, ಪ್ರಫುÇÉಾ ಶೆಟ್ಟಿ, ಸಂಜೀವಿನಿ ಶೆಟ್ಟಿ, ಸುಮಾ ಶೆಟ್ಟಿ, ಕುಸುಮಾ ಶೆಟ್ಟಿ, ಹರ್ಷಿಣಿ ಶೆಟ್ಟಿ, ಲಲಿತಾ ಶೆಟ್ಟಿ, ಸುಜಾತಾ ಎಸ್. ಶೆಟ್ಟಿ, ಶೋಭಾ ಶೆಟ್ಟಿ, ವಿನೋದಾ ಶೆಟ್ಟಿ, ಶಾರದಾ ಶೆಟ್ಟಿ, ಶಾಂತಾ ಆರ್. ಶೆಟ್ಟಿ, ಆಶಾ ಎಸ್. ಶೆಟ್ಟಿ ಅವರು ವಿವಿಧ ಖಾದ್ಯಗಳನ್ನು ತಯಾರಿಸಿ ಕಾರ್ಯಕ್ರಮಕ್ಕೆ ವಿಶೇಷವಾಗಿ ಸಹಕರಿಸಿದರು.
ಪ್ರವೀಣ್ ಆಳ್ವ ಕಾರ್ಯಕ್ರಮಕ್ಕೆ ಸ್ಥಳದಾನ ಒದಗಿಸಿ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಪದಾಧಿಕಾರಿಗಳಾದ ಚಂದ್ರಶೇಖರ ಶೆಟ್ಟಿ ನಿಟ್ಟೆ, ಶ್ರೀನಿವಾಸ ಶೆಟ್ಟಿ, ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಮಿಯಾರು ರಾಜ್ ಕುಮಾರ್ ಎಂ. ಶೆಟ್ಟಿ, ಮಹಿಳಾ ವಿಭಾಗದ ಪದಾಧಿಕಾರಿಗಳಾದ ಸುಲತಾ ಎಸ್. ಶೆಟ್ಟಿ, ಸುಚಿತ್ರಾ ಎಸ್. ಶೆಟ್ಟಿ, ಶಮ್ಮಿ ಅಜಿತ್ ಹೆಗ್ಡೆ, ಗೀತಾ ಜೆ. ಶೆಟ್ಟಿ, ಸಂಧ್ಯಾ ಆರ್. ಶೆಟ್ಟಿ, ಸಮಿತಿಯ ಪದಾಧಿಕಾರಿಗಳಾದ ಸುಭಾಷ್ ಶೆಟ್ಟಿ, ಸಂಜೀವ ಶೆಟ್ಟಿ, ಸಚ್ಚಿದಾನಂದ ಶೆಟ್ಟಿ, ಸುರೇಶ ಕಯ್ನಾ, ರವಿ ಶೆಟ್ಟಿ , ಮಹಿಳಾ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು. ಮನೋರಂಜನೆಯ ಅಂಗ ವಾಗಿ ಮಂಗಳೂರಿನ ಮೈಮ್ ರಮಾದಾಸ ಅವರು ತುಳು ಜಾನಪದ ಗೀತೆಗಳನ್ನು ಹಾಡಿ ದರು. ನಿತೇಶ್ ಶೆಟ್ಟಿ ಮಾರ್ನಾಡ್ ತುಳು ಸಂಸ್ಕೃತಿ ಹಾಗೂ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು. ಕವಿ ಪಾಂಗಾಳ ವಿಶ್ವನಾಥ ಶೆಟ್ಟಿ ಸ್ವರಚಿತ ತುಳು ಕವನಗಳನ್ನು ವಾಚಿಸಿದರು. ಅಂಬಿಕಾ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.