ಪುಣೆ: ಬಿಜೆಪಿ ಅಭಿಮಾನಿಗಳಿಂದ ಸ್ನೇಹ ಮಿಲನ
Team Udayavani, May 6, 2018, 11:58 AM IST
ಪುಣೆ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ತಮ್ಮ ಉದ್ಯೋಗ ವ್ಯಾಪಾರದಲ್ಲಿ ತವರೂರಿನಲ್ಲಿರುವಂತೆಯೇ ಬೇರೆ ಬೇರೆ ರಾಜ್ಯಗಳಲ್ಲೂ ವ್ಯಾಪಾರ, ಉದ್ಯೋಗದಲ್ಲಿ ಮುಂಚೂಣಿಯಲ್ಲಿದ್ದು, ಮುಖ್ಯವಾಗಿ ನಮ್ಮ ದೇಶದ ಅರ್ಥಿಕ ನಗರ ಮುಂಬಯಿ ಮತ್ತು ಮಹಾರಾಷ್ಟ್ರದ ಸಾಂಸ್ಕೃತಿಕ ನಗರ ಪುಣೆಯಲ್ಲಿ ತಮ್ಮ ಅಸ್ತಿತ್ವವನ್ನು ಬಲಪಡಿಸಿಕೊಂಡಿ¨ªಾರೆ. ದೇಶದ ಬೇರೆ ಬೇರೆ ನಗರಗಳಲ್ಲಿ ಕೂಡಾ ವ್ಯಾಪಾರ ಉದ್ಯೋಗದೊಂದಿಗೆ ತಮ್ಮ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಬೆಳೆದು ನಿಂತಿ¨ªಾರೆ. ಮುಖ್ಯವಾಗಿ ಇಂತಹ ನಗರಗಳಲ್ಲಿ ಇರುವ ತುಳು ಕನ್ನಡಿಗರು ಯಾವುದೇ ರೀತಿಯಲ್ಲಿ ದೊಡ್ಡ ವ್ಯಾಪಾರ, ಹೊಟೇಲ್ ಉದ್ಯಮ, ಕೈಗಾರಿಕೆ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕೈ ತುಂಬಾ ಸಂಪಾದನೆ ಮಾಡಿದವರು. ಇದರ ಹೊರತಾಗಿ ತಮ್ಮ ತವರೂರಿನಲ್ಲಿರುವ ಮನೆ, ಪರಿವಾರದ ಅಭಿವೃದ್ಧಿಯ ಜತೆಗೆ ಊರಿನ ಅಭಿವೃದ್ಧಿಗೆ ಮತ್ತು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಕೈಜೋಡಿಸಿಕೊಂಡಿ¨ªಾರೆ. ಇದು ನಮ್ಮ ಅವಳಿ ಜಿಲ್ಲೆಗಳ ಜನರ ದೊಡ್ಡ ಗುಣ. ಇಂತಹ ಜನರ ಜೊತೆಯಲ್ಲಿ ನಮ್ಮೂರಿನ ಜನ ಪ್ರತಿನಿಧಿಗಳು ನಿರಂತರ ಸಂಪರ್ಕವನ್ನು ಇಟ್ಟುಕೊಂಡಿ¨ªಾರೆ. ತಮ್ಮ ಭಾವನೆಗಳನ್ನು ಹಂಚಿ ಕೊಳ್ಳಲು ಹಾಗೂ ಹೊರ ಊರಿನಲ್ಲಿರುವ ಜನರನ್ನು ಆಯಾಯ ಕ್ಷೇತ್ರಗಳ ಜನಪ್ರತಿನಿಧಿಗಳೊಂದಿಗೆ ಒಂದೆಡೆ ಸೇರಿಸಿ ವಿಚಾರ ವಿನಿಮಯ ಮಾಡಿಕೊಳ್ಳಲು, ಹಳೆಯ ಗೆಳೆತನ ಗಟ್ಟಿಗೊಳಿಸಲು, ಹೊಸ ಗೆಳೆತನ ಸೃಷ್ಟಿಸಲು ಕ್ಷೇತ್ರಗಳ ಅಭಿವೃದ್ಧಿಗೆ ಹೊಸ ದಿಕ್ಕು, ಹೊಸ ಅಭಿವೃದ್ಧಿªಗೆ ನಾಂದಿ ಹಾಡಲು ಹೊರ ಊರಿನವರೊಂದಿಗೆ ಸ್ನೇಹ ಮಿಲನದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಾಗಿದೆ ಎಂದು ಉಡುಪಿ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಹೇಳಿದರು.
ಪುಣೆಯಲ್ಲಿ ನೆಲೆಸಿರುವ ಉಡುಪಿ ಜಿಲ್ಲೆಯ ಜನರೊಂದಿಗೆ ಮೇ 3 ರಂದು ಶಿವಾಜಿ ನಗರದ ಕೃಷ್ಣ ರೆಸಿಡೆನ್ಸಿ ಹೊಟೇಲ್‌ನ ಹಾಲ್‌ನಲ್ಲಿ ನಡೆದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಆವರು ಮಾತನಾಡಿದರು.
ಈ ಸ್ನೇಹ ಮಿಲನ ಕಾರ್ಯಕ್ರಮದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಪುಣೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗೇಶ್ ಗೊಗೊವಾಲೆ, ಪುಣೆ ನಗರ ಸಂಸದ ಅನಿಲ್ ಶಿರೋಲೆ, ಪಿಂಪ್ರಿ ಚಿಂಚಾÌಡ್ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಬಾಬು ನಾಯರ್, ಪುಣೆ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ದೀಪಕ್ ಪೋಟೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರತ್ನಾಕರ ಹೆಗ್ಡೆ ಮಾತನಾಡಿ, ಉಡುಪಿಯ ಅಭಿವೃದ್ಧಿಯ ಹರಿಕಾರ ಡಾ| ವಿ. ಎಸ್. ಆಚಾರ್ಯ ಅವರ ಚಿಂತನೆಯಂತೆ ರಘುಪತಿ ಭಟ್ ಅವರು ತಮ್ಮ ಎರಡು ಅವಧಿಗೆ ಶಾಸಕರಾಗಿ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸಿ ಸುಂದರ ಉಡುಪಿ ನಗರವನ್ನು ನಿರ್ಮಿಸುವಲ್ಲಿ ಶ್ರಮಪಟ್ಟಿ¨ªಾರೆ. ಇದೀಗ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತ ಆಗಿದೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಭಟ್ ಅವರನ್ನು ಗೆಲ್ಲಿಸುವ ಮೂಲಕ ಉಡುಪಿ ಜಿÇÉೆಯ ಅಭಿವೃದ್ಧಿಪಡಿಸುವ ಜನನಾಯಕನನ್ನು ಅರಿಸಬೇಕಾಗಿದೆ. ಈ ಚುನಾವಣೆಯ ಸಂದರ್ಭದಲ್ಲಿ ಉಡುಪಿ ಜಿÇÉೆ ಯನ್ನು ಐದು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳನ್ನೂ ಗೆಲ್ಲಿಸುವಂತಹ ಕೆಲಸ ಪರ ಊರಿನಲ್ಲಿರುವ ತಮ್ಮೆಲ್ಲರ ಸಹಕಾರದಿಂದ ಆಗಬೇಕು ಎಂದರು.
ಉಡುಪಿ ಜಿಲ್ಲಾ ಬಿಜೆಪಿ ಪ್ರಮುಖ ವಸಂತ್ ಶೆಟ್ಟಿ ಬೆಳ್ವೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಈ ಸ್ನೇಹ ಮಿಲನ ಕಾರ್ಯಕ್ರಮವನ್ನು ರಂಜಿತ್ ಶೆಟ್ಟಿ, ದೇವಿಚರಣ ಕಾವ ಮತ್ತು ದಿಲೀಪ್ ರಾಜು ಹೆಗ್ಡೆ ಅವರು ಸಂಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಕೃಷ್ಣ ರೆಸಿಡೆನ್ಸಿ ಮಾಲಕ ವಿನಯ್ ಶೆಟ್ಟಿ , ಪಿಂಪ್ರಿ ಚಿಂಚಾÌಡ್ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ, ಬಿಜೆಪಿ ಮುಖಂಡ ಪದ್ಮನಾಭ ಶೆಟ್ಟಿ, ಪುಣೆ ಬಂಟರ ಸಂಘದ ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ, ಪಿಂಪ್ರಿ ಚಿಂಚಾÌಡ್ ಬಂಟರ ಸಂಘದ ಅಧ್ಯಕ್ಷ ಮಹೇಶ್ ಹೆಗ್ಡೆ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಬಂಟ್ಸ್ ಅಸೋಸಿಯೇಶನ್ ಪುಣೆ ಕಾರ್ಯದರ್ಶಿ ರೋಹಿತ್ ಶೆಟ್ಟಿ, ಬಿಲ್ಲವ ಸಂಘ ಪುಣೆ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ, ಉದ್ಯಮಿ ಕರುಣಾಕರ ಶೆಟ್ಟಿ, ಪುಣೆ ಬಂಟರ ಸಂಘ ದಕ್ಷಿಣ ಪ್ರಾದೇಶಿಕ ಸಮಿತಿ ಅಧ್ಯಕ್ಷ ವಸಂತ್ ಶೆಟ್ಟಿ, ಕನ್ನಡ ಸಂಘದ ರಾಮದಾಸ್ ಅಚಾರ್ಯ, ಪುಣೆಯ ದಕ್ಷಿಣ ಭಾರತ ಸೆಲ್‌ನ ಬಿಜಿಪಿ ಮುಖಂಡ ಪ್ರಕಾಶ ಹೆಗ್ಡೆ ಮಟ್ಟಾರ್, ಪುಣೆಯ ಉದ್ಯಮಿಗಳಾದ ಗಣೇಶ್ ಹೆಗ್ಡೆ, ಶಿವರಾಮ ಶೆಟಿ,r ವಿವೇಕಾನಂದ ಶೆಟ್ಟಿ, ನಿಕಿಲ್ ಶೋರೂಫ್ ಹಾಗೂ ಉಡುಪಿ ನಗರದ ಕಾರ್ಪೊರೇಟರ್‌ಗಳಾದ ಮಹೇಶ್ ಠಾಕೂರ್, ದಿನಕರ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಉಡುಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಅಂಚನ್ ಅವರು ಉಪಸ್ಥಿತರಿದ್ದರು. ಬಾಲಜಿತ್ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಐದು ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ನೆಲಕಚ್ಚಿದ್ದಲ್ಲದೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದ್ದು, ಹಿಂದೂ ಸಮಾಜದ ಮೆಲಾಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು, ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿಯ ಸರಕಾರ ರಚಿಸುವಂತೆ ಆಗಲು ಊರಿನ ಜನತೆಯೊಂದಿಗೆ ತಾವು ಕೈಜೋಡಿಸುವ ಅಗತ್ಯವಿದೆ. ಇಲ್ಲಿಯ ಒಬ್ಬರ ಹಿಂದೆ ಊರಿನ ನೂರು ಜನರು ಒಟ್ಟಾಗುತ್ತಾರೆ, ಅಂತಹ ನೂರಾರು ಜನರು ಒಟ್ಟು ಸೇರಿದರೆ ಅದರ ಪ್ರಭಾವ ಊರಿನಲ್ಲಿ ತುಂಬಾ ಉಂಟಾಗುತ್ತದೆ. ಇಂತಹ ಕೆಲಸ ಇಲ್ಲಿಯ ನಿಮ್ಮಿಂದ ಆಗಬೇಕಿದೆ. ಈ ಬಾರಿಯ ಕರ್ನಾಟಕದ ಚುನಾವಣೆ ನಮ್ಮ ಭಾರತ ದೇಶದ ಅಭಿವೃದ್ಧಿಗೆ ಮೋದೀಜಿ ಅವರ ಕೈ ಬಲಪಡಿಸುವಂತಹ ಚುನಾವಣೆಯಾಗಿದೆ. ಉಡುಪಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿ ಪಕ್ಷವನ್ನು ಆಡಳಿತಕ್ಕೆ ತರುವಂತೆ ರಘುಪತಿ ಭಟ್ ಕೇಳಿಕೊಂಡರು.
ವರದಿ: ಹರೀಶ್ ಮೂಡಬಿದ್ರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.