ಪುಣೆ ಗುರುದೇವ ಬಳಗ: ಒಡಿಯೂರು ಶ್ರೀ ಜನ್ಮದಿನೋತ್ಸವ
Team Udayavani, Aug 10, 2018, 3:43 PM IST
ಪುಣೆ: ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ದಕ್ಷಿಣದ ಗಾಣಗಾಪುರ ಎಂದೇ ಪ್ರಸಿದ್ಧಿ ಪಡೆದ ಶ್ರೀ ದತ್ತಾಂಜನೆಯಸ್ವಾಮಿ ಕ್ಷೇತ್ರ, ಶ್ರೀ ಗುರುದೇವದತ್ತ ಸಂಸ್ಥಾನಂ, ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಯವರ ಜನ್ಮ ದಿನೋತ್ಸವ ಆಚರಣೆಯು ಆ. 8 ರಂದು ಪುಣೆ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಮಾಜಿ ಅಧ್ಯಕ್ಷೆ ಪುಷ್ಪಾ ಎಲ್. ಪೂಜಾರಿ ಅವರ ನೇತೃತ್ವದಲ್ಲಿ ದನ್ವರ್ಶ್ ಬಿಲ್ಡಿಂಗ್‌ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಶ್ರೀ ಗುರುದೇವರಿಗೆ ಪೂಜೆ, ಗುರುವಂದನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಆನಂತರ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು ಹಾಗು ಬಳಗದ ಸದಸ್ಯರಿಂದ ಬಳಗದ ಭಜನಾ ಗುರು ದಾಮೋದರ ಬಂಗೇರ ಅವರ ಮುಂದಾಳತ್ವದಲ್ಲಿ ಭಜನೆ ನಡೆಯಿತು. ಕೊನೆಯಲ್ಲಿ ಮಹಾಮಂಗಳಾರತಿ ಪ್ರಸಾದ ವಿತರಣೆ ನೆರವೇರಿತು. ಪುಣೆ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ, ಕಾರ್ಯಕ್ರಮದ ಆಯೋಜಕರಾದ ಪುಷ್ಪಾ ಪೂಜಾರಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಪ್ರೇಮಾ ಎಸ್. ಶೆಟ್ಟಿ ಹಾಗು ಬಳಗದ ಸದಸ್ಯ, ಸದಸ್ಯೆಯರು ಗುರುಗಳ ಫೋಟೋಗೆ ಆರತಿ ಎತ್ತುವುದರ ಮೂಲಕ ಗುರುವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುಣೆ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಅವರು ಮಾತನಾಡಿ, ಮಾತೃ ದೇವೋ ಭವ, ಪಿತೃ ದೇವೋ ಭವ, ಗುರುದೇವೋ ಭವ ಎಂಬ ವೇದ ವಾಕ್ಯದಂತೆ ನಮ್ಮ ತಂದೆ ತಾಯಿ ನಮಗೆ ಹೇಗೆ ದೇವರೋ ಹಾಗೆಯೇ ಗುರುಗಳು ಕೂಡಾ ದೇವರಾಗಿದ್ದಾರೆ. ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುವ, ನಮಗೆ ಜೀವನ ಶೈಲಿಯ ಪಾಠವನ್ನು ನೀಡಿ ಅಶಿರ್ವದಿಸಿ ಭಗವಂತನ ದರುಶನ ಮಾಡಿಸುವವನೇ ಗುರು ದೇವರು. ನಿತ್ಯಾನಂದ ಸ್ವಾಮೀಜಿಯವರ ಸಮಾಧಿ ದಿನದ ಪುಣ್ಯ ದಿನದಂದೆ ನಮ್ಮ ಗುರುವರ್ಯ ಒಡಿಯೂರಿನ ಒಡೆಯರಾದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವನರ ಜನ್ಮದಿನ. ಸ್ವಾಮೀಜಿಯವರ ಜನ್ಮ ದಿನೋತ್ಸವ ದಂದು ನಾವಿಂದು ಗುರುಭಕ್ತಿಯಿಂದ ಗುರು ವಂದನೆಯನ್ನು ಸಲ್ಲಿಸಿದ್ದೇವೆ. ಸ್ವಾಮೀಜಿಗಳು ಸನ್ಯಾಸಿಗಳು ಜನ್ಮದಿನವನ್ನು ಆಚರಿಸಿಕೊಳ್ಳುವುದಿಲ್ಲ. ಆದರೆ ಗುರುಭಕ್ತರ ಅಭಿಲಾಷೆಯಂತೆ ಆ ದಿನವನ್ನು ಸಮಾಜ ಉದ್ಧಾರಕ್ಕಾಗಿ ಉಪಯೋಗವಾಗುವಂತೆ ಆಚರಿಸು ತ್ತಾರೆ. ಈ ನಿಟ್ಟಿನಲ್ಲಿ ಒಡಿಯೂರು ಶ್ರೀಗಳು ತಮ್ಮ ಜನ್ಮದಿನೋತ್ಸವವನ್ನು ತಮ್ಮ ಭಕ್ತ ಜನರಿಗೆ, ಬಡ ಜನರಿಗೆ, ಜನ ಸಾಮನ್ಯರಿಗೆ ಸಹಾಯಕವಾಗುವಂತೆ ಗ್ರಾಮೋತ್ಸವವಾಗಿ ಆಚರಿಸಿ ಅ ಮೂಲಕ ಗ್ರಾಮ ಗ್ರಾಮಗಳಲ್ಲಿ ಹಲವಾರು ಜನೋಪಯೋಗಿ ಯೋಜನೆಗಳ ಮೂಲಕ ಸಮಾಜ ಸೇವಾ ಕಾರ್ಯಗಳನ್ನು ಮಾಡಿ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿ¨ªಾರೆ. ಗ್ರಾಮ ಸ್ವತ್ಛತಾ ಅಭಿಯಾನ, ತುಳುನಾಡಿನ ಸಂಸ್ಕೃತಿಗೆ ಪೂರಕವಾಗಿ ಗ್ರಾಮೀಣ ಕ್ರೀಡಾಕೂಟ, ಗ್ರಾಮವಿಕಾಸ ಯೋಜನೆಯ ಕಾರ್ಯಗಳು, ಬಡ ಕುಟುಂಬಗಳಿಗೆ ಧನ ಸಹಾಯ, ಶೈಕ್ಷಣಿಕ ನೆರವು ಅರೋಗ್ಯ ನೆರವು ಮೊದಲಾದ ಯೋಜನೆಗಳಿಂದ ಹಲವಾರು ಸಮಾಜ ಕಾರ್ಯಗಳು ಸಾಕಾರಗೊಳ್ಳುತ್ತಿವೆ. ಸ್ವಾಮೀಜಿ ಯವರ ಸನಾತನ ಸಂಸ್ಕಾರ, ಗ್ರಾಮವಿಕಾಸ, ಶಿಕ್ಷಣ, ವೈದ್ಯಕೀಯ, ಪರಿಸರ ಸಂರಕ್ಷಣೆ ಮೊದಲಾದ ಸಮಾಜಮುಖೀ ಸೇವಾ ಕಾರ್ಯಗಳ ಮುಖಾಂತರ ಇಂದು ಹಲವಾರು ಹಳ್ಳಿ, ಗ್ರಾಮಗಳು ಅಭಿವೃದ್ಧಿಯನ್ನು ಹೊಂದಿವೆ. ತಾಲೂಕು, ಜಿÇÉಾ ಮಟ್ಟದಲ್ಲೂ ಈ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸಲಾಗುತ್ತಿದೆ. ಗುರುಗಳ ಈ ಎÇÉಾ ಕಾರ್ಯಗಳಿಗೆ ನಾವು ಕೂಡ ಕೈಜೋಡಿಸುವ ಮೂಲಕ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಳಗದ ಪ್ರಮುಖರಾದ ಉಮೇಶ್ ಶೆಟ್ಟಿ, ಸುರೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಧನಂ ಜಯ್ ಪೂಜಾರಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ವೀಣಾ ಪಿ. ಶೆಟ್ಟಿ, ಶೋಭಾ ಯು. ಶೆಟ್ಟಿ, ಸರೋಜಿನಿ ಡಿ. ಬಂಗೇರ, ಸುಮನಾ ಎಸ್. ಹೆಗ್ಡೆ, ಸುಜಾತಾ ಶೆಟ್ಟಿ, ಆಶಾ ವಿ. ಶೆಟ್ಟಿ, ಶ್ವೇತಾ ಎಚ್. ಮೂಡಬಿದ್ರಿ, ಮಮತಾ ಶೆಟ್ಟಿ, ಸುಶೀಲಾ ಮೂಲ್ಯ ಹಾಗು ಹೆಚ್ಚಿನ ಸಂಖ್ಯೆಯ ಗುರು ಭಕ್ತರು ಉಪಸ್ಥಿತರಿದ್ದು ಗುರು ಕೃಪೆಗೆ ಪಾತ್ರರಾದರು. ಕೊನೆಯಲ್ಲಿ ಪ್ರಸಾದ ವಿತರಣೆ, ಲಘು ಉಪಾಹಾರ ನಡೆಯಿತು.
ಚಿತ್ರ-ವರದಿ – ಹರೀಶ್ ಮೂಡಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.