ಪುಣೆ ಕನ್ನಡ ಸಂಘ: ಪರ್ವತಾರೋಹಿ ಹರ್ಷದ್ ರಾವ್ ಜೊತೆಗೆ ಸಂವಾದ
Team Udayavani, Aug 26, 2018, 2:48 PM IST
ಪುಣೆ: ಪುಣೆಯ ಕನ್ನಡಿಗ ಹರ್ಷದ್ ರಾವ್ ಅವರು ಜಗತ್ತಿನ ಮೂರನೆಯ ಅತ್ಯಂತ ಎತ್ತರದ ಪರ್ವತ ಕಾಂಚನ್ ಜುಂಗ 28,169 ಫೀಟ್ ಪರ್ವತಾರೋಹಣ ಮಾಡಿದ ಮಹಾರಾಷ್ಟ್ರದ ಪ್ರಥಮ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ಅವರ ಪರ್ವತಾರೋಹಣದ ಬಗ್ಗೆ ಸಂವಾದ ಕಾರ್ಯಕ್ರಮವೊಂದನ್ನು ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹರ್ಷದ್ ರಾವ್ ಅವರು ತನ್ನ ಪರ್ವತ ಭ್ರಮಣದ ರೋಮಾಂಚಕಾರಿ ಅನುಭವವನ್ನು ಚಿತ್ರ, ಧ್ವನಿ-ಸುರುಳಿ ಮತ್ತು ಧ್ವನಿಚಿತ್ರಗಳ ಸಹಾಯದಿಂದ ಪ್ರಸ್ತುತಪಡಿಸಿ ನೆರೆದ ಪರ್ವತ ಪ್ರೇಮಿ ವಿದ್ಯಾರ್ಥಿ, ಪಾಲಕರು ಸದಸ್ಯರುಗಳನ್ನು ತನ್ಮಯಗೊಳಿಸಿದರು. ಸೇನಾ ಪದಕ ವಿಜೇತ ಕ್ಯಾಪ್ಟನ್ ನಂದಕುಮಾರ್ ಜಗತಾಪ್ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ರೋಟರಿಕ್ಲಬ್ ಅಧ್ಯಕ್ಷ ಡಾ| ಕಿರಣ್ ಪುರೋಹಿತ್ ದಿನದಿಂದ ದಿನಕ್ಕೆ ಗುಡ್ಡ ಬೆಟ್ಟ ಪರ್ವತಗಳನ್ನು ಹೊಂದಿರುವ ಭಾರತದಲ್ಲಿ ಪರ್ವತಾರೋಹಣ ಜನಪ್ರಿಯವಾಗುತ್ತಿರುವುದು ಸಂತಸದ ವಿಷಯವೆಂದು ತಿಳಿಸಿ ಮುಖ್ಯವಾಗಿ ವಿದ್ಯಾರ್ಥಿಗಳು, ಯುವಕರು ಮನೆಯೊಳಗೇ ಕುಳಿತು ಮೊಬೈಲ್ ನೋಡುವ ಬದಲು ಬಾಹ್ಯ ಸಾಹಸಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ವಿಶೇಷ ಅಥಿತಿಗಳಾಗಿ ಆಗಮಿಸಿದ ಮಾಜಿ ಸಂಸದ ಮತ್ತು ನಿರ್ದೇಶಕ, ನ್ಯಾಷನಲ್ ಶಿಪ್ಪಿಂಗ್ ಕಾರ್ಪೋರೇಶನ್ ಪ್ರದೀಪ್ ರಾವತ್ ಅವರು ಹರ್ಷದ್ ರಾವ್ ಅವರಿಗೆ ಶುಭ ಕೋರಿದರು. ಕನ್ನಡ ಸಂಘದ ಪರವಾಗಿ ಜನ ಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯ ಹರ್ಷದ್ ರಾವ್ ಮತ್ತು ಗಣ್ಯ ಅತಿಥಿ ಗಳನ್ನು ಪುಷ್ಪಗುತ್ಛ ನೀಡಿ ಸತ್ಕರಿಸಿ ಹರ್ಷದ್ ಕರ್ನಾಟಕ, ಮಹಾರಾಷ್ಟ್ರ ಹಾಗೂ ದೇಶಕ್ಕೆ ಕೀರ್ತಿ ತಂದಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಪ್ರಶಂಸಿಸಿದರು. ಹರ್ಷದ್ ರಾವ್ ಅವರನ್ನು ಪುಷ್ಪಗುತ್ಛ ನೀಡಿ ಸತ್ಕರಿಸಲಾಯಿತು. ಹರ್ಷದ್ ರಾವ್ ಮೂಲತ: ಕರ್ನಾಟಕದವರಾಗಿದ್ದು ಪುಣೆಯಲ್ಲಿ ಸ್ಥಾಯಿಕರಾಗಿ ಸದ್ಯ ಮಾಹಿತಿ ತಂತ್ರಜ್ಞಾನದ ಕಂಪನಿಯಲ್ಲಿ ಉದ್ಯೋಗಸ್ಥರಾಗಿರುತ್ತಾರೆ.
ಚಿಕ್ಕಂದಿನಿಂದಲೇ ತಾಯಿಯ ಜೊತೆಗೆ ಹಲವಾರು ಪರ್ವತ ಪ್ರವಾಸ ಮಾಡಿ ಪರ್ವತಾರೋಹಣದಲ್ಲಿ ವಿಶೇಷ ಅನುಭವ ಮತ್ತು ಶಿಕ್ಷಣ ಪಡೆದು ಹಲವಾರು ಪರ್ವತ ತಜ್ಞರ ಸಲಹೆ ಪಡೆದು 2016ರಲ್ಲಿ ಮೌಂಟ್ ಎವರೆಸ್ಟ್‌ನಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಿ ಯುವ ಪರ್ವತಾರೋಹಿ ಎಂಬ ಕೀರ್ತಿ ಪಡೆದು ನಿರಂತರ ತಯಾರಿ ಮತ್ತು ಅಭ್ಯಾಸ ಮಾಡಿ ಮೇ 2018ರಲ್ಲಿ ಹಲವಾರು ಅಡೆ-ತಡೆಗಳನ್ನು ಧೈರ್ಯದಿಂದ ಎದುರಿಸಿ ಕಾಂಚನ ಜುಂಗದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಹೆಮ್ಮೆ ತಂದು ಕೊಟ್ಟರು ಸಭಾಗೃಹದಲ್ಲಿ ಸದಸ್ಯರು, ವಿದ್ಯಾರ್ಥಿಗಳು, ಪರ್ವತಪ್ರೇಮಿ, ಸಾಹಸಪ್ರಿಯ ಪ್ರೇಕ್ಷಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.
ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.