ಪುಣೆ: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ದಶಮಾನೋತ್ಸವ


Team Udayavani, Sep 16, 2018, 5:16 PM IST

1509mum13.jpg

ಪುಣೆ: ದೇಶದ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೊಡ್ಡದಾದ ಜವಾಬ್ದಾರಿ ಪತ್ರಕರ್ತರದ್ದಾಗಿದೆ. ಅವರು ಸಮಾಜದ ಮುಖ್ಯ ವಾಹಿನಿ ಯಲ್ಲಿದ್ದುಕೊಂಡು ಸಮಾಜದ ಹಿತವನ್ನು ಕಾಯ್ದುಕೊಂಡು ಸರಿಯಾದ ರೀತಿಯಲ್ಲಿ ಮುನ್ನಡೆದರೆ ದೇಶ ಸ್ವಸ್ಥವಾಗುತ್ತದೆ. ಪತ್ರಕರ್ತರು ದಾರಿ ತಪ್ಪಿದರೆ ಸಮಾಜವೂ ತಪ್ಪು ದಾರಿ ಹಿಡಿಯುತ್ತದೆ. ಆದ್ದರಿಂದ ಉತ್ತಮ ಸಮಾಜದ ನಿರ್ಮಾಣದಲ್ಲಿ, ದೇಶದ ಪ್ರಗತಿಗೆ ಪತ್ರಕರ್ತರ ಕೊಡುಗೆ ಮಹತ್ತರವಾದುದಾಗಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಅಭಿಪ್ರಾಯಪಟ್ಟರು.

ಸೆ. 13ರಂದು ಪುಣೆಯ ಡಾ| ಕಲ್ಮಾಡಿ ಶ್ಯಾಮರಾವ್‌ ಕನ್ನಡ ಮಾಧ್ಯಮ ಹೈಸ್ಕೂಲ್‌ ಸಭಾಂಗಣದಲ್ಲಿ  ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ದಶಮಾನೋತ್ಸವದ ಅಂಗವಾಗಿ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ನಿರ್ದೇಶನದಲ್ಲಿ ಕನ್ನಡಿಗ ಪತ್ರಕರ್ತರ ಸಂಘದ ಸಕ್ರಿಯ ಸದಸ್ಯರಾದ ಕಿರಣ್‌ ಬಿ. ರೈ ಕರ್ನೂರು ಸಂಯೋಜನೆಯಲ್ಲಿ ಮತ್ತು ಹರೀಶ್‌ ಮೂಡಬಿದ್ರೆ ಅವರ ಸಂಪೂರ್ಣ ಸಹಕಾರದೊಂದಿಗೆ ಪ್ರದರ್ಶನಗೊಂಡ ಮಹಿಷಾಸುರ ಮರ್ದಿನಿ ಯಕ್ಷಗಾನ ಪ್ರದರ್ಶನಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಕರ್ತರದ್ದು ಬಹಳ ಒತ್ತಡದ ಕೆಲಸ. ಸ್ವಲ್ಪ ಎಡವಿದರೂ ಜನರಿಂದ ದೂಷಣೆಗೆ ಒಳಗಾಗುತ್ತಾರೆ. ಯಾರನ್ನೂ ಕಡೆಗಣಿಸಬೇಕು ಅಥವಾ ಅವಮಾನಿಸಬೇಕು ಎಂಬ ಉದ್ದೇಶ ಸರ್ವಥಾ ಪತ್ರಕರ್ತರಲ್ಲಿ ಇಲ್ಲ. ಸಾಮಾಜಿಕ ಜವಾಬ್ದಾರಿ ಎಂಬಂತೆ ಕರ್ತವ್ಯ ನಿಷ್ಠೆಯಿಂದ ಪತ್ರಕರ್ತರು ಕಾರ್ಯ ನಿರ್ವಹಿಸುತ್ತಾರೆ. ಒತ್ತಡದ ಸನ್ನಿವೇಶದಲ್ಲಿ ತಪ್ಪುಗಳಾಗುವುದು ಸಹಜ. ಇದನ್ನು ಸಮಚಿತ್ತದಲ್ಲಿ ಸ್ವೀಕರಿಸಿ ಮುನ್ನಡೆಯಬೇಕಾಗಿದೆ. ಸಂಘದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿರುವ ನನಗೂ ಇದರ ಅನುಭವವಿದೆ. ಸಂಘ-ಸಂಸ್ಥೆಗಳ ಯಶಸ್ಸಿನಲ್ಲಿ ಪತ್ರಿಕೆ ಹಾಗೂ ಪತ್ರಕರ್ತರ ಪಾತ್ರ ಮಹತ್ತರವಾಗಿದೆ. ಆದುದರಿಂದ ಪತ್ರಕರ್ತರನ್ನು ಗೌರವದಿಂದ ಕಾಣುವುದು ನಮ್ಮ ಕರ್ತವ್ಯವಾಗಿದೆ. 365 ದಿನಗಳೂ ಚಟುವಟಿಕೆಯಿಂದಿರುವ ಪತ್ರ ಕರ್ತರು  ಯಕ್ಷಗಾನ ಕಲೆಯನ್ನು ಕಲಿತು ಕಾಲಿಗೆ ಗೆಜ್ಜೆ ಕಟ್ಟಿ ಕಲಾಸೇವೆ ಯನ್ನು ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಪತ್ರಕರ್ತರ ಸಂಘಕ್ಕೆ ಸಮಸ್ತ ಪುಣೆ ಕನ್ನಡಿಗರ ವತಿಯಿಂದ ಶುಭವನ್ನು ಹಾರೈಸುತ್ತಾ ಪತ್ರಕರ್ತರ ಬೆಂಬಲಕ್ಕೆ ಸದಾ ನಾವಿದ್ದೇವೆ ಎಂದರು.

ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ ಅಧ್ಯಕ್ಷರಾದ ನಾರಾಯಣ ಕೆ. ಶೆಟ್ಟಿಯವರು ಮಾತನಾಡಿ, ಸಮಾಜ ನಿರ್ಮಾಣದಲ್ಲಿ ಉತ್ತಮ ಕಾರ್ಯಗೈಯ್ಯುವ ಅಥವಾ ಸಂಘ ಸಂಸ್ಥೆಗಳ ಬೆಳವಣಿಗೆಗೆ ಕಾರಣೀಭೂತರಾದ ಪತ್ರಕರ್ತರ ಬದುಕು ಮಾತ್ರ ಕಷ್ಟಕರವಾದುದು. ಬಹಳ ಜಾಗರೂಕತೆಯಿಂದ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಅವರ¨ªಾಗಿದೆ. ಪತ್ರಕರ್ತರು ಸದಾ ನಮ್ಮ ಹಿತ ಚಿಂತಕರಾಗಿ¨ªಾರೆ. ಆದುದರಿಂದ ಅವರ ಕಷ್ಟ, ಸಮಸ್ಯೆಗಳನ್ನರಿತುಕೊಂಡು ಸಹಕಾರ, ಗೌರವವನ್ನು ನೀಡಬೇಕಾಗುತ್ತದೆ. ದಶಮಾನೋತ್ಸವದಲ್ಲಿರುವ ಪತ್ರಕರ್ತರ ಸಂಘಕ್ಕೆ ಶುಭವನ್ನು ಹಾರೈಸುತ್ತೇನೆ ಎಂದರು.

ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಮಾತನಾಡಿ, ಪತ್ರಕರ್ತರನ್ನು ಬಹಳ ಹತ್ತಿರದಿಂದ ಬಲ್ಲವನಾದ ನನಗೆ ಅವರ ಒತ್ತಡದ ಬದುಕನ್ನು ಅರಿತಿದ್ದೇನೆ. ಸಂಘ ಸಂಸ್ಥೆಗಳ ಯಾವುದೇ ಕಾರ್ಯಕ್ರಮದಲ್ಲೂ ಆರಂಭದಿಂದ ಕೊನೆಯವರೆಗೂ ನಮ್ಮೊಂದಿಗಿದ್ದು ಉತ್ತಮ ರೀತಿಯಿಂದ ಸುದ್ದಿಯನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ. ಪತ್ರಕರ್ತರ ಹಾಗೂ ಯಕ್ಷಗಾನ ಕಲಾವಿದರ ಬದುಕು ಒಂದೇ ರೀತಿಯ¨ªಾಗಿದೆ ಎಂಬ ಭಾವನೆ ನನ್ನದು. ಪತ್ರಕರ್ತರು ಹಾಗೂ ಕಲಾವಿದರಿಗೆ ಸಂಪಾದನೆ ಕಡಿಮೆಯಾಗಿದ್ದು ಪ್ರಸಿದ್ಧಿ ಹಾಗೂ ಕೀರ್ತಿ, ಗೌರವಗಳು ಹೆಚ್ಚಿರುತ್ತದೆ. ಜೀವನದಲ್ಲಿ ಸಂಪಾದನೆಯೇ ಮುಖ್ಯ ವಲ್ಲ. ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಿ ಕೀರ್ತಿವಂತರಾಗಿ ಬಾಳುವುದು ಕೂಡಾ ಮುಖ್ಯವಾಗುತ್ತದೆ. ದೇಶ, ಸಮಾಜದ ಅಭ್ಯುದಯದಲ್ಲಿ ಕನ್ನಡಿಗ ಪತ್ರಕರ್ತರು ನಿರಂತರವಾಗಿ ತೊಡಗಿಸಿಕೊಳ್ಳಲಿ. ಕನ್ನಡಿಗ ಪತ್ರಕರ್ತರ ಸಂಘವು ಶತ ಸಂಭ್ರಮವನ್ನು ಕಾಣುವಂತಾಗಲಿ ಎಂದು ಶುಭ ಹಾರೈಸಿದರು.

ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಅಧ್ಯಕ್ಷರಾದ ಪಾಂಗಾಳ ವಿಶ್ವನಾಥ ಶೆಟ್ಟಿಯವರು ಮಾತನಾಡಿ, ವಿಶೇಷವಾಗಿ ಬರಹಗಳ ಮೂಲಕ ಗುರುತಿಸಿಕೊಳ್ಳುವ ಪತ್ರಕರ್ತರು ಕಲಾಸೇವೆಯಲ್ಲೂ ತೊಡಗಿಸಿಕೊಂಡು ಮನರಂಜಿಸುತ್ತಿರುವುದು ವಿಶೇಷ ವಾಗಿದೆ. ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆಗಳು ಅಡಕವಾಗಿರುತ್ತದೆ. ಅಂತಹ ಪ್ರತಿಭೆಗಳಿಗೆ ವೇದಿಕೆ ಸಿಕ್ಕಾಗ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತದೆ. ನಾವು ಕೂಡಾ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಮೂಲಕ ಆಸಕ್ತ ಕಲಾವಿದರಿಗೆ, ಮಕ್ಕಳಿಗೆ ಉಚಿತ ತರಬೇತಿ ನೀಡಿ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ನುಡಿದರು.

ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಗಣೇಶ್‌ ಪೂಂಜ ಮಾತನಾಡಿ, ಸಮಾಜದ ಹಿತಚಿಂತನೆಯಿಂದ ಕಾರ್ಯನಿರ್ವಹಿಸುವ ಪತ್ರಕರ್ತರು ಹಾಗೂ ಕಲಾವಿದರನ್ನು ಗೌರವದಿಂದ ಕಾಣುವುದು ನಮ್ಮ ಕರ್ತವ್ಯವಾಗಿದೆ. ಆ ಉದ್ದೇಶದಿಂದ ನಾವಿಲ್ಲಿ ಸೇರಿದ್ದೇವೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಕನ್ನಡಿಗ ಪತ್ರಕರ್ತರ ಸಂಘಕ್ಕೆ ಶುಭಾಶಯಗಳು ಎಂದರು.

ವೇದಿಕೆಯಲ್ಲಿ ಸ್ವರಾಜ್‌ ಕ್ರೆಡಿಟ್‌ ಸೊಸೈಟಿ ಪುಣೆ -ಮುಂಬಯಿ -ಉಡುಪಿ ಇದರ ಅಧ್ಯಕ್ಷ ಪುರಂದರ ಶೆಟ್ಟಿ ಉಪಸ್ಥಿತರಿದ್ದರು. ಅತಿಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಗಣ್ಯರನ್ನು ಸತ್ಕರಿಸಲಾಯಿತು. 

ಅತಿಥಿಗಳನ್ನು ಕಲಾವಿದರಾದ ಮದಂಗಲ್ಲು ಆನಂದ ಭಟ್‌, ವಿಕೇಶ್‌ ರೈ ಶೇಣಿ, ಸುದರ್ಶನ್‌ ಪೂಜಾರಿ, ವಿಶ್ವನಾಥ್‌ ಶೆಟ್ಟಿ ಹಾಗೂ ಸಂಯೋಜಕರು ಗೌರವಿಸಿದರು. ಪುಣೆಯ ಪತ್ರಕರ್ತರಾದ ಹರೀಶ್‌ ಮೂಡಬಿದ್ರೆ ಸ್ವಾಗತಿಸಿದರು.  ಕಿರಣ್‌ ಬಿ. ರೈ ಕರ್ನೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಆ ಬಳಿಕ ಪತ್ರಕರ್ತರ ಸಂಘದ ಸದಸ್ಯರಿಂದ ಮಹಿಷಾಸುರ ಮರ್ದಿನಿ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾವಿದರನ್ನು ಗೌರವಿಸಲಾಯಿತು.  ಪ್ರದರ್ಶನದ ಯಶಸ್ಸಿಗೆ ಘಾಟ್‌ಕೋಪರ್‌ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಕಲಾವಿದರು, ಹವ್ಯಾಸಿ ಕಲಾವೃಂದ ಪಿಂಪ್ರಿ ಚಿಂಚಾÌಡ್‌, ಕನ್ನಡ ಸಂಘ ಪುಣೆ, ಶ್ರೀಧರ ಶೆಟ್ಟಿ ಕÇÉಾಡಿ, ಮನೋಹರ ಶೆಟ್ಟಿ, ನಿತಿನ್‌ ಶೆಟ್ಟಿ ನಿಟ್ಟೆ, ಜಯ ಶೆಟ್ಟಿ ರೆಂಜಾಳ ಮೊದಲಾದವರು ಸಹಕರಿಸಿದರು.

ಕನ್ನಡವನ್ನು ಕೇವಲ ನುಡಿಯಾಗಿಸದೆ ನಡೆಯಾಗಿ ನೋಡುವ ನೆಲೆಯಲ್ಲಿ ಸಾಹಿತ್ಯ, ಸಂಸ್ಕೃತಿಯಂತೆಯೇ ಪತ್ರಿಕೋದ್ಯಮವೂ ಹೊರನಾಡಿನಲ್ಲಿ ಕನ್ನಡದ ಅಸ್ಮಿತೆಗೆ ಕಾರಣವಾಗಿದೆ. ಭಾಷೆ, ಸಂಸ್ಕೃತಿಯನ್ನು ಬೆಳೆಸುವ ಕಾಯಕವನ್ನು ಪುಣೆ ಕನ್ನಡಿಗರು ಮಾಡುತ್ತಿರುವಿರಿ. ಪತ್ರಕರ್ತರ ಸಂಘದ ಯಕ್ಷ ಸಂಭ್ರಮದ ಮೂಲಕ ರಂಗ-ಸಂಘವನ್ನು ನಿರ್ಮಿಸಿ ಈ ನಗರಕ್ಕೆ ಭಾಷೆ ಹಾಗೂ ಕಲೆಯ ರಂಗು ಹೊದಿಸಿದ್ದೀರಿ. ಅಲ್ಲದೆ ಬರವಣಿಗೆಯ ಕಾಯಕದಲ್ಲಿರುವ ಪತ್ರಕರ್ತರ ಕಲಾಸೇವೆಗೆ ಅವಕಾಶ ನೀಡಿ ಪುಣೆಯ ಕಲಾಭಿಮಾನಿಗಳಿಗೆ ಯಕ್ಷಗಾನವನ್ನು ಸವಿಯುವ ಭಾಗ್ಯವನ್ನು ಒದಗಿಸಿದ್ದೀರಿ. ನಿಮಗೆ ಕನ್ನಡಿಗ ಪತ್ರಕರ್ತರ ಸಂಘ ಋಣಿಯಾಗಿದೆ .
-ದಯಾಸಾಗರ್‌ ಚೌಟ, 
ಉಪಾಧ್ಯಕ್ಷರು : ಕನ್ನಡಿಗ ಪತ್ರಕರ್ತರ  ಸಂಘ ಮಹಾರಾಷ್ಟ್ರ

ಪತ್ರಕರ್ತರಲ್ಲಿ ಶಿಸ್ತು ಹಾಗೂ ಸಮಯಪ್ರಜ್ಞೆ ಅತ್ಯಗತ್ಯವಾಗಿದ್ದು ಬದ್ಧತೆಯೊಂದಿಗೆ ಮುನ್ನಡೆದಾಗ ಪ್ರತಿಷ್ಠೆ ಹಾಗೂ ಗೌರವಕ್ಕೆ ಪಾತ್ರರಾಗುತ್ತಾರೆ. ನಮ್ಮಲ್ಲಿನ ಅನೇಕ ಸಂಘ ಸಂಸ್ಥೆಗಳಲ್ಲಿ ಮುಖ್ಯಸ್ಥರಾಗಲಿ, ದಾನಿಗಳು, ಹಿತೈಷಿಗಳಲ್ಲಿ  ಪತ್ರಿಕೋದ್ಯಮದ ಬಗ್ಗೆ  ಅರಿವು ಇಲ್ಲದಾಗಿದೆ. ಇದರಿಂದ ಕಾರ್ಯನಿರತ ಪತ್ರಕರ್ತರು ಒತ್ತಡಕ್ಕೆ ಸಿಲುಕಿ ಸೇವಾನಿರತರಾಗಬೇಕಾಗಿರುವುದು ಪತ್ರಕರ್ತನ ದುರಂತವಾಗಿದೆ. ಪುಣೆಯ ಕಿರಣ್‌ ಬಿ. ರೈ ಹಾಗೂ ಹರೀಶ್‌ ಮೂಡಬಿದ್ರೆ ನಮ್ಮ ಸಂಘದ ಸಕ್ರಿಯ ಸದಸ್ಯರಾಗಿರುವುದು ಸಂಘಕ್ಕೆ ವರದಾನವಾಗಿದೆ. ಆದುದರಿಂದ ಪುಣೆಯ ಓದುಗರು, ಪತ್ರಿಕೆ, ಸಂಘದೊಂದಿಗೆ ಅವರನ್ನೂ ಸಹೋದರರಂತೆ ಕಂಡು ಬೆಳೆಸಿ ಪತ್ರಿಕೋದ್ಯಮಕ್ಕೆ ಪ್ರೋತ್ಸಾಹಿಸಬೇಕು .
ರೋನ್ಸ್‌ ಬಂಟ್ವಾಳ್‌, 
ಗೌರವ ಪ್ರಧಾನ ಕಾರ್ಯದರ್ಶಿ : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ

ಟಾಪ್ ನ್ಯೂಸ್

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.