ಪುಣೆ ಕಾತ್ರಜ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಂಘದಿಂದ ಜನತಾ ಸೇವೆ
Team Udayavani, Oct 14, 2020, 6:16 PM IST
ಪುಣೆ, ಅ. 13: ಹೊರನಾಡ ಕನ್ನಡಿಗರು ಭಾಷೆಯ ಮಟ್ಟಿಗೆ ಸ್ವಾತಂತ್ರ್ಯವುಳ್ಳವರು. ಈ ಕಾರಣದಿಂದಲೇ ಸ್ವಭಾಷೆ, ಸಂಸ್ಕೃತಿ-ಸಂಸ್ಕಾರ, ಆಚಾರ-ವಿಚಾರಗಳ ಅಭಿಮಾನಿಗಳಾಗಿ ತಾವು ನೆಲೆ ನಿಂತ ನಾಡಿನಲ್ಲಿ ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ತಮ್ಮತನವನ್ನು ಕಾಯ್ದುಕೊಂಡು ಬಂದಿದ್ದಾರೆ. ಅದರಲ್ಲೂ ಧಾರ್ಮಿಕ ಕ್ಷೇತ್ರದಲ್ಲಿ ಮುಂಬಯಿ ತುಳು-ಕನ್ನಡಿಗರು ಮಾಡು ತ್ತಿರುವ ಸಾಧನೆ ಅಪಾರವಾಗಿದೆ. ಮುಂಬಯಿ ಮಾತ್ರವಲ್ಲದೆ ಪುಣೆಯಲ್ಲೂ ತುಳು, ಕನ್ನಡಿಗರ ನೂರಾರು ಧಾರ್ಮಿಕ ಕೇಂದ್ರಗಳು ಸ್ಥಾಪನೆಗೊಂಡು ಯುವ ಪೀಳಿಗೆಯಲ್ಲಿ ಧಾರ್ಮಿಕ ಚಿಂತನೆಯನ್ನು ಮೂಡಿಸುತ್ತಿವೆ.
ಮರಾಠಿ ಮಣ್ಣಿನಲ್ಲಿರುವ ಊರಿನವರ ಧಾರ್ಮಿಕ ಕೇಂದ್ರಗಳು ಬಹಳಷ್ಟು ವೈಶಿಷ್ಟéದಿಂದ ಕೂಡಿವೆ. ಇಲ್ಲಿ ಊರಿನಂತೆ ಜಾತ್ರೆ, ಆಯನಗಳು, ಧಾರ್ಮಿಕ ಉತ್ಸವಗಳು ವರ್ಷಪೂರ್ತಿ ನಡೆಯುತ್ತಿರುತ್ತವೆ. ವಿಶೇಷವೆಂದರೆ ಧಾರ್ಮಿಕ ಕಾರ್ಯಕ್ರಮಗಳಲ್ಲದೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಇನ್ನಿತರ ಕ್ಷೇತ್ರಗಳಲ್ಲಿ ಇಲ್ಲಿನ ಮಠ- ಮಂದಿರಗಳು ಮಾಡುತ್ತಿರುವ ಸೇವೆ ಅಪಾರವಾಗಿದೆ. ಇಂತಹ ಕ್ಷೇತ್ರಗಳಲ್ಲಿ ಪುಣೆಯ ಕಾತ್ರಜ್‌ನಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರವೂ ಒಂದಾಗಿದೆ. ಅದರಲ್ಲೂ ಲಾಕ್‌ಡೌನ್ ಸಂದರ್ಭದಲ್ಲಿ ಪರಿಸರದ ತುಳುವರು, ಕನ್ನಡಿಗರು ಮತ್ತು ಅನ್ಯಭಾಷಿಗರ ಸಂಕಷ್ಟಕ್ಕೆ ನೆರವಾಗುವ ಮೂಲಕ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘವು ಎಲ್ಲರ ಪ್ರೀತಿಗೆ ಪಾತ್ರವಾಗಿದೆ.
ಧಾರ್ಮಿಕ ಸಂಸ್ಥೆಯಿಂದ ಜನಸೇವೆ :
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ತುಳು, ಕನ್ನಡಿಗ ಬಡ ಕುಟುಂಬಗಳು ಸಂಕಷ್ಟದಲ್ಲಿವೆ ಎಂಬ ಮಾಹಿತಿಯನ್ನು ತಿಳಿದ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವಿಶ್ವಸ್ತ ಮಂಡಳಿಯ ಅಧ್ಯಕ್ಷರಾದ ಸುಭಾಷ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ವಿಶ್ವಸ್ಥ ಸಮಿತಿಯ ಸದಸ್ಯರು, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಭಕ್ತರ ಸಹಕಾರದೊಂದಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಜಾತಿ, ಮತ ಭೇದವಿಲ್ಲದೆ ದಿನೋಪಯೋಗಿ ವಸ್ತುಗಳಾದ ದವಸ ಧಾನ್ಯಗಳನ್ನು ಹಂಚಿದರು.
ಆಹಾರ ವಸ್ತುಗಳ ಕಿಟ್ ವಿತರಣೆ :
ಲಾಕ್‌ಡೌನ್‌ನಿಂದಾಗಿ ಹಲವಾರು ಕುಟುಂಬ ಗಳು ಜೀವನ ನಿರ್ವಹಣೆಗೆ ಮತ್ತು ದಿನನಿತ್ಯದ ಆಹಾರ ಸಾಮಗ್ರಿಗಳಿಗಾಗಿ ಪರದಾಡುವ ಪರಿಸ್ಥಿತಿ ಯಲ್ಲಿರುವಾಗ ಸಂಘದ ವತಿಯಿಂದ ಕಿಟ್ ವಿತರಿಸಲಾಯಿತು. 400ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿರುವ ಸಂಸ್ಥೆಯ ಕಾರ್ಯಕರ್ತರು ವೈಯಕ್ತಿಕವಾಗಿ ಯೋಗಕ್ಷೇಮವನ್ನು ವಿಚಾರಿಸುವುದರೊಂದಿಗೆ ಬಡ ಕುಟುಂಬಗಳೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು ಅಗತ್ಯ ವಸ್ತುಗಳ ಪೂರೈಕೆಗೂ ಮುಂದಾದರು.
ಸ್ಥಳೀಯ ಪೊಲೀಸರ ಸಹಕಾರ :
ಪುಣೆಯ ವಿವಿಧೆಡೆಗಳಲ್ಲಿ ಸಂಕಷ್ಟಕ್ಕೀಡಾದವರಿಗೆ ಸಹಾಯವನ್ನು ಮಾಡಲು ಸಂಘದ ಸದಸ್ಯರು ಪೊಲೀಸ್ ಸಿಬಂದಿಯ ಸಹಕಾರವನ್ನು ಪಡೆದರು. ಕಿಟ್‌ಗಳನ್ನು ವಿತರಿಸುವಲ್ಲಿ ಪೊಲೀಸ್ ಸಿಬಂದಿ ಪಾಲ್ಗೊಂಡಿರುವುದು ವಿಶೇಷವಾಗಿದೆ. ಸಂಘದ ಕಾರ್ಯಕರ್ತರು ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜನತೆಗೆ ಕೊರೊನಾದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮತ್ತು ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಮನವರಿಕೆ ಮಾಡಿಕೊಟ್ಟು ಪೊಲೀಸರ ಪ್ರಶಂಸೆಗೂ ಪಾತ್ರರಾಗಿದ್ದಾರೆ.
ಕೋವಿಡ್ ವಾರಿಯರ್ಸ್ ಗೆ ಊಟದ ವ್ಯವಸ್ಥೆ :
ಕೋವಿಡ್ ದಿಂದ ಲಾಕ್‌ಡೌನ್ ಆಗಿ ಎಲ್ಲ ರೀತಿಯ ಹೊಟೇಲ್, ಸ್ಟಾಲ್‌ಗಳು ಮುಚ್ಚಲ್ಪಟ್ಟಿದ್ದರಿಂದ ಕೊರೊನಾ ಅಗತ್ಯ ಸಿಬಂದಿಗೂ ನೀರು ಮತ್ತು ಆಹಾರಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿತ್ತು. ಈ ಸಂದರ್ಭ ಪುಣೆ ಮಹಾನಗರ ಪಾಲಿಕೆಯ ಸ್ವತ್ಛತ ಕರ್ಮಚಾರಿಗಳು, ಪೊಲೀಸರು, ಹಗಲು-ರಾತ್ರಿ ಎನ್ನದೆ ರೋಗಿಗಳ ಉಪಚಾರ ಮಾಡುತ್ತಿದ್ದ ವೈದ್ಯರು, ಆರೋಗ್ಯ ಕಾರ್ಯಕರ್ತೆಯರು, ಕಾರ್ಮಿಕರಿಗೆ ಶ್ರೀ ಅಯ್ಯಪ್ಪ ಸೇವಾ ಸಂಘದ ವತಿಯಿಂದ ಊಟೋ ಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಅರ್‌ಎಸ್‌ಎಸ್ ಜತೆಗೂಡಿ ಸಮಾಜ ಸೇವೆ :
ಅಯ್ಯಪ್ಪ ಸ್ವಾಮಿ ಸೇವಾ ಸಂಘವು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪುಣೆ ಇದರ ಜತೆಗೂಡಿ ನಗರದ ವಿವಿಧೆಡೆ ಅತೀ ಬಡ ಕುಟುಂಬಗಳಿಗೆ ದಿನೋಪಯೋಗಿ ವಸ್ತುಗಳನ್ನು ವಿತರಿಸಿದೆ. ಸ್ವಯಂಸೇವಕ ಸಂಘದ ಕಾರ್ಯಕರ್ತರು ಮತ್ತು ಅಯ್ಯಪ್ಪ ಸೇವಾ ಸಂಘದ ಪದಾಧಿಕಾರಿಗಳು ಹಗಲು-ರಾತ್ರಿ ಎನ್ನದೆ ಕೋವಿಡ್ ವಾರಿಯರ್ ಗಳಂತೆ ಸೇವೆ ಸಲ್ಲಿಸಿದ್ದಾರೆ. ಹಲವರಿಗೆ ವೈದ್ಯಕೀಯವಾಗಿ ಸಹಕರಿಸಿದ ಕಾರ್ಯಕರ್ತರು ಅಗತ್ಯವಿದ್ದವರಿಗೆ ಔಷಧಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದರು.
ವಿಶೇಷ ಪೂಜೆ, ಆಚರಣೆಗಳು :
ಲಾಕ್‌ಡೌನ್‌ನಿಂದ ಧಾರ್ಮಿಕ ಕ್ಷೇತ್ರಗಳು ಕೂಡ ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಿದ್ದರಿಂದ ದೇವಸ್ಥಾನಗಳು ಮುಚ್ಚಿದ್ದವು. ಅರ್ಚಕರಿಗೆ ಮಾತ್ರ ಮೂರು ಹೊತ್ತಿನ ಪೂಜೆಗೆ ಅವಕಾಶ ನೀಡಲಾಗಿತ್ತು. ಕಾತ್ರಾಜ್ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಕಳೆದ ಆರು ತಿಂಗಳುಗಳಿಂದ ತಿಂಗಳ ಸಂಕ್ರಮಣದ ವಿಶೇಷ ಪೂಜೆ, ನಾಗರ ಪಂಚಮಿ, ಶ್ರಾವಣ ಮಾಸದ ಸಾರ್ವಜನಿಕ ಸತ್ಯನಾರಾಯಣ ಮಹಾಪೂಜೆ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವವನ್ನು ಅರ್ಚಕ ವೃಂದ ಮತ್ತು ಸಮಿತಿಯ ಬೆರಳೆಣಿಕೆಯ ಸದಸ್ಯರ ಸಮ್ಮುಖದಲ್ಲಿ ಆಚರಿಸಲಾಯಿತು.
ಕೋವಿಡ್-19 ಲಾಕ್‌ಡೌನ್‌ನಿಂದ ಪುಣೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕೂಡ ಬಂದ್ ಆಗಿತ್ತು. ಬಡವ-ಬಲ್ಲಿದ ಎನ್ನದೆ ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರು ಅನಿರೀಕ್ಷಿತವಾಗಿ ಬಂದೊದಗಿದ ಈ ವಿಪತ್ತಿನಿಂದ ಸಂಕಷ್ಟಗೊಳಗಾದರು. ಈ ಸಮಯದಲ್ಲಿ ಬಡ ಪರಿವಾರಗಳಿಗೆ ನೆರವು ನೀಡುವುದು ನಮ್ಮ ಕರ್ತವ್ಯ ಎಂಬುದನ್ನು ಅರಿತು ಬಡ ಜನರಿಗೆ ಮತ್ತು ಕೋವಿಡ್ ವಿರುದ್ಧ ಹೋರಾಡುವ ಕರ್ಮಚಾರಿಗಳಿಗೆ ಸಂಘವು ತನ್ನಿಂದಾದ ಸಹಾಯವನ್ನು ಮಾಡಿದೆ. ಸಂಘದ ಸರ್ವ ಬಾಂಧವರು ಇದಕ್ಕೆ ಸಹಕರಿಸಿ¨ªಾರೆ. ಕೋವಿಡ್ ಎಂಬ ಮಹಾಮಾರಿ ಆದಷ್ಟು ಬೇಗ ಸಂಪೂರ್ಣವಾಗಿ ನಿರ್ನಾಮವಾಗಿ ಜನರು ತಮ್ಮ ಉದ್ಯೋಗ-ವ್ಯವಹಾರ ಮಾಡಿಕೊಂಡು ನಿರ್ಭೀತಿಯಿಂದ ಇರುವಂತಾಬೇಕು. ಅಯ್ಯಪ್ಪ ಸ್ವಾಮಿ ಈ ಕಂಟಕದಿಂದ ನಮ್ಮೆಲ್ಲರನ್ನು ಪಾರು ಮಾಡಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ. -ಸುಭಾಷ್ ಶೆಟ್ಟಿ ಅಧ್ಯಕ್ಷರು, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘ ಕಾತ್ರಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.