ಪುಣೆ ಕೋಟಿ ಚೆನ್ನಯ ಗ್ರೂಪ್: ವೈದ್ಯಕೀಯ ನೆರವು, ಕ್ರಿಕೆಟ್ ಪಂದ್ಯಾಟ
Team Udayavani, Feb 20, 2019, 2:17 PM IST
ಪುಣೆ: ಪುಣೆಯ ಕೋಟಿ ಚೆನ್ನಯ ಗ್ರೂಪ್ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಣೆಯ ಹೊಟೇಲ್ ಕಾರ್ಮಿಕ ಸುಧೀರ್ ಧರೆಗುಡ್ಡೆ 20 ಸಾವಿರ ರೂ.ಗಳ ವೈದ್ಯಕೀಯ ನೆರವು ವಿತರಿಸಲಾಯಿತು.ಈ ಸಂದರ್ಭ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಕೋಟಿ ಚೆನ್ನಯ ಮಿತ್ರವರ್ಗವು ಮೂರು ವರ್ಷಗಳಿಂದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಿದ್ದು, ವರ್ಷದ ತಮ್ಮ ಕಾರ್ಯಕ್ರಮಗಳಲ್ಲಿ ಜಮೆಯಾದ ನಿಧಿಯಲ್ಲಿ ತುಳು ಕನ್ನಡಿಗರಿಗೆ ಸಹಾಯವಾಗುವಂತಹ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ಸಮಾಜ ಸೇವೆ, ವೈದ್ಯಕೀಯ ಸೇವೆಗೆ ನೀಡಿ ಸಹಕರಿಸಲಾಗುತ್ತಿದೆ. ಕೋಟಿ ಚೆನ್ನಯರ ಜನ್ಮ ಪಡೆದ ಪದುಮಲೆ ಗೆಜ್ಜೆಗಿರಿ ನಂದನವನ ಜೀರ್ಣೋದ್ಧಾರಕ್ಕಾಗಿ ಸುಮಾರು 35 ಸಾವಿರ ರೂ.ಗಳ ದೇಣಿಗೆಯನ್ನು ನೀಡಲಾಗಿದೆ.
ಮಾ. 7 : ಕೋಟಿ-ಚೆನ್ನಯ ಕ್ರಿಕೆಟ್ ಪಂದ್ಯಾಟ
ಕೋಟಿ ಚೆನ್ನಯ ಗ್ರೂಪ್ ವತಿಯಿಂದ ಮೂರನೇ ವರ್ಷದ ಕೋಟಿ ಚೆನ್ನಯ ಟ್ರೋಪಿ -2019 ಕ್ರಿಕೆಟ್ ಪಂದ್ಯಾಟವು ತಿಲಕ್ ರೋಡ್‌ನ ಎಸ್. ಪಿ. ಕಾಲೇಜಿನ ಮೈದಾನದಲ್ಲಿ ಮಾ. 7ರಂದು ಬೆಳಗ್ಗೆ 7.30ರಿಂದ ಜರಗಲಿದೆ.
ಪುಣೆಯಲ್ಲಿ ನೆಲೆಸಿರುವ ತುಳು ಕನ್ನಡಿಗರಿಗಾಗಿ ಪಂದ್ಯಾಟವನ್ನು ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ತಂಡಗಳು ಮಾ. 4ರೊಳಗೆ ಹೆಸರು ನೋದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೋಟಿ ಚೆನ್ನಯ ಗ್ರೂಪ್‌ನ ಸಂಘಟಕರಾದ ಪ್ರದೀಪ್ ವಾಘೋಲಿ (9623332323), ಕಿಶೋರ್ ಕೊಥ್ರೊಡ್ (7773900041), ಮತ್ತು ಸುದೀಪ್ ಪೂಜಾರಿ ಮುನಿಯಾಲ್ (7972654058) ಇವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಾ. ತುಂಬೆ ಮೊಯ್ದೀನ್ ಅವರಿಗೆ ಪ್ರತಿಷ್ಠಿತ ಗ್ಲೋಬಲ್ ವಿಷನರಿ ಎನ್‌ಆರ್‌ಐ ಪ್ರಶಸ್ತಿ
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Jimmy Carter Life Journey: ಜಿಮ್ಮಿ ಕಾರ್ಟರ್- ಮಾನವೀಯತೆ, ಶಾಂತಿಯ ಶಿಲ್ಪಿ
ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ