ಪುಣೆ: ಮ್ಯಾರಿಗೋಲ್ಡ್ ಬ್ಯಾಂಕ್ವೆಟ್ಸ್ ಹಾಲ್ ಸಮುಚ್ಚಯ ಆರಂಭ
Team Udayavani, May 5, 2019, 5:45 PM IST
ಪುಣೆ: ಪುಣೆ ಪೌಡ್ ರಸ್ತೆಯಲ್ಲಿ ಚಾಂದನಿ ಚೌಕ್ ಹತ್ತಿರದಲ್ಲಿ ಪುಣೆಯಲ್ಲಿಯೇ ಅತ್ಯುತ್ತಮವೆನಿಸುವ ಬ್ಯಾಂಕ್ವೆಟ್ ಹಾಲ್ ಸಮುಚ್ಚಯದ ಶುಭಾರಂಭವು ಎ. 28 ರಂದು ನಡೆಯಿತು.
ಇದರ ಮಾಲಕರಾದ ಶಂತನು ದೇಶ್‌ಪಾಂಡೆ ಅವರು ದೀಪ ಪ್ರಜ್ವಲಿಸಿ ಶುಭಾರಂಭಗೈದರು. ಈ ಸಂದರ್ಭ ಸಂಚಾಲಕರಾದ ರಾಕೇಶ್ ಡಿ. ಶೆಟ್ಟಿ ಮತ್ತಿತರ ಹಿತೈಷಿಗಳು ಉಪಸ್ಥಿತರಿದ್ದರು. ಪುಣೆಯಲ್ಲಿಯೇ ಉತ್ಕೃಷ್ಟ ದರ್ಜೆಯ ಸೂಪರ್ ಪಾರ್ಟಿ ಹಾಲ್‌ಗಳನ್ನು ನಿರ್ಮಿಸಲಾಗಿದ್ದು ಮದುವೆ, ಕಾರ್ಪೊರೇಟ್ ಈವೆಂಟ್ಸ್, ಸಾಮಾಜಿಕ ಕಾರ್ಯಕ್ರಮಗಳಿಗೆ, ಸಣ್ಣ ಕಾರ್ಯಕ್ರಮಗಳಿಂದ ಹಿಡಿದು ಬೃಹತ್ ಕಾರ್ಯಕ್ರಮಗಳನ್ನು ಏರ್ಪಡಿಸಲು ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಹಾಲ್‌ಗಳನ್ನೂ ನಿರ್ಮಿಸಲಾಗಿದೆ.
5 ಅತ್ಯಾಧುನಿಕ ಸುಸಜ್ಜಿತ ಹವಾನಿಯಂತ್ರಿತ ಹಾಲ್‌ಗಳು, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವಂತಹ ಎರಡು ದೊಡ್ಡದಾದ ಸುಂದರವಾದ ಲಾನ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲದೆ 20 ಸುಸಜ್ಜಿತ ಕೊಠಡಿಗಳನ್ನೂ ನಿರ್ಮಿಸಲಾಗಿದೆ. 30 ಜನರಿಂದ ಹಿಡಿದು 6 ಸಾವಿರದವರೆಗೆ ಪಾರ್ಟಿಗಳನ್ನು ಇಲ್ಲಿ ಮಾಡಲು ಅನುಕೂಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಭಾಭವನಗಳಲ್ಲಿ ಸುಂದರವಾದ ಕಲಾಕೃತಿಗಳ ಸೌಂದರ್ಯದೊಂದಿಗೆ ಉತ್ತಮವಾದ ಸಂಗೀತವನ್ನು ಆಸ್ವಾದಿಸುವ ವ್ಯವಸ್ಥೆ, ಬೆಳಕಿನ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
ಚಿತ್ರ -ವರದಿ: ಕಿರಣ್ ಬಿ. ರೈ ಕರ್ನೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.