ರಿಬರ್ಥ್ ಫೌಂಡೇಶನ್: ಗ್ರೀನ್ ಕಾರಿಡಾರ್ ಶಾರ್ಟ್ ಫಿಲ್ಮ್ ಸ್ಪರ್ಧೆ
Team Udayavani, Apr 13, 2017, 4:57 PM IST
ಪುಣೆ: ಅವಯವ ದಾನದ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಪುಣೆಯ ಸ್ವಯಂಸೇವಾ ಸಂಸ್ಥೆ ರಿಬರ್ಥ್ ಫೌಂಡೇಶನ್ ವತಿಯಿಂದ ಗ್ರೀನ್ ಕಾರಿಡಾರ್ ಶಾರ್ಟ್ ಫಿಲ್ಮ್ ಸ್ಪರ್ಧೆಯನ್ನು ಆಯೋಜಿಸಲಾಗುವುದು. ಅಲ್ಲದೆ ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ಮೊತ್ತದ ಬಹುಮಾನವನ್ನು ಅತ್ಯುತ್ತಮ ಫಿಲ್ಮ್ಗಳಿಗೆ ನೀಡಲಾಗುವುದು. 5 ನಿಮಿಷಗಳ ಕಿರು ಚಿತ್ರವನ್ನು ತಯಾರಿಸಲು ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು 500 ರೂ. ಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪ್ರಸಿದ್ಧ ಚಲನಚಿತ್ರ ನಟ, ನಿರ್ದೇಶಕ ಸುಬೋಧ್ ಭಾವೆ, ರಾಷ್ಟ್ರೀಯ ವಿಜೇತ ನಿರ್ದೇಶಕ ಉಮೇಶ್ ಕುಲಕರ್ಣಿ ಇವರು ಕಿರು ಚಿತ್ರದ ಪರಿವೀಕ್ಷಣೆ ನಡೆಸಿ ಆಯ್ಕೆಯನ್ನು ಮಾಡಲಿದ್ದಾರೆ. ಯಾವುದೇ ತಂತ್ರಜ್ಞಾನವನ್ನು ಉಪಯೋಗಿಸಿ ಕಿರು ಚಿತ್ರ ತಯಾರಿಸಬಹುದಾಗಿದೆ. ಜೂ. 30ರೊಳಗೆ ರೀಬರ್ಥ್ ಸಂಸ್ಥೆಗೆ ಚಿತ್ರವನ್ನು ತಯಾರಿಸಿ ಸ್ಪರ್ಧೆಗೆ ನೀಡಬೇಕಾಗಿದೆ. ಜುಲೈ ಕೊನೆಗೆ ವಿಜೇತರನ್ನು ಆಯ್ಕೆ ಮಾಡಲಾಗುವುದು. ಅಂಗಾಂಗ ದಾನದ ಮಹತ್ವದ ಬಗ್ಗೆ ಸಾಮಾಜಿಕ ಜನಜಾಗೃತಿ ಮೂಡಿಸುವಲ್ಲಿ ಈ ಹೆಜ್ಜೆ ಹೆಚ್ಚು ಪರಿಣಾಮಕಾರಿಯಾಗಬಲ್ಲುದೆಂಬ ವಿಶ್ವಾಸ ನಮ್ಮದಾಗಿದ್ದು ಮುಖ್ಯವಾಗಿ ಮಾಧ್ಯಮ ರಂಗ, ಸಾಮಾಜಿಕ ಸಂಸ್ಥೆಗಳು ಇದಕ್ಕೆ ಹೆಚ್ಚು ಮಹತ್ವ ನೀಡಿ ಪ್ರೋತ್ಸಾಹಿಸುವಂತೆ ರೀಬರ್ಥ್ ಫೌಂಡೇಶನ್ ಪುಣೆಯ ಅಧ್ಯಕ್ಷ ರಾಜೇಶ್ ಆರ್. ಶೆಟ್ಟಿ ನುಡಿದರು.
ಎ. 11ರಂದು ನಗರದ ಸಿಂಹಘಡ್‌ರೋಡ್‌ನಲ್ಲಿರುವ ನೈವೇದ್ಯಂ ಹೊಟೇಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪುಣೆಯ ವಿವಿಧ ಆಸ್ಪತ್ರೆಗಳು, ನುರಿತ ತಜ್ಞ ವೈದ್ಯರು, ಪೊಲೀಸ್ ವಿಭಾಗ, ಇವುಗಳು ಈಗಾಗಲೇ ಅಂಗಾಂಗ ದಾನಕ್ಕೆ ಸಂಬಂಧಿಸಿದ ಗ್ರೀನ್ ಕಾರಿಡಾರ್ ವ್ಯವಸ್ಥೆಗೆ ಕೇವಲ ಒಂದು ಕರೆಯನ್ನು ಸ್ವೀಕರಿಸಿ ತ್ವರಿತಗತಿಯಲ್ಲಿ ಕಾರ್ಯವನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಮಹಾರಾಷ್ಟ್ರದಲ್ಲಿಯೇ ಅತೀ ಹೆಚ್ಚು ಅಂಗಾಂಗದಾನ ಪುಣೆಯಲ್ಲಿ ನಡೆದಿದ್ದು ಇನ್ನೂ ಹೆಚ್ಚಿನ ಪ್ರಯತ್ನವನ್ನು ನಾವು ಮಾಡಬೇಕಾಗಿದೆ ಎಂದರು.
ಉಪಸ್ಥಿತರಿದ್ದ ರಾಜ್ಯದ ಸಾಂಸ್ಕೃತಿಕ ಖಾತೆಯ ಸಲಹೆಗಾರರಾದ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮಿಲಿಂದ್ ಲೇಲೆ ಮಾತನಾಡಿ, ಮುಖ್ಯವಾಗಿ ಯುವ ಪೀಳಿಗೆ, ವಿದ್ಯಾರ್ಥಿ ವರ್ಗಗಳಿಗೆ ಹೆಚ್ಚಿನ ಜಾಗೃತಿ ರವಾನಿಸಬೇಕಾಗಿದೆ. ಕಿರು ಚಿತ್ರದ ಮೂಲಕ ಯುವ ವರ್ಗದಿಂದ ಹೆಚ್ಚಿನ ಪ್ರೋತ್ಸಾಹವನ್ನು ನಿರೀಕ್ಷಿಸುತ್ತೇವೆ. ಮಾಧ್ಯಮ ರಂಗವೂ ನಮ್ಮ ಈ ಅಭಿಯಾನಕ್ಕೆ ಕೈಜೋಡಿಸಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರಕಾರದ ಅವಯವದಾನ ಕಕ್ಷೆಯ ಸಮನ್ವಯಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಆರತಿ ಗೋಖಲೆ ಉಪಸ್ಥಿತರಿದ್ದು ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಿದರು. ಫೌಂಡೇಶನ್ ಪ್ರಾಜೆಕ್ಟ್ ಹೆಡ್ ಗಣೇಶ್ ಬಾಕಳೆ, ರಾಷ್ಟ್ರೀಯ ಪ್ರಶಸ್ತಿ ವಿಜೇತ ದಿಗªರ್ಶಕ ಉಮೇಶ್ ಕುಲಕರ್ಣಿ ಉಪಸ್ಥಿತರಿದ್ದರು. ಈ ಸಂದರ್ಭ ಶಾರ್ಟ್ ಫಿಲ್ಮ್ ಸ್ಪರ್ಧೆಯ ಲೋಗೋ ಬಿಡುಗಡೆಗೊಳಿಸಲಾಯಿತು.
ಪುಣೆಯಲ್ಲಿರುವ ವಿವಿಧ ಕ್ಷೇತ್ರದ ಉದ್ಯಮಿಗಳ ಬಳಗವೊಂದು ಸಾಮಾಜಿಕ ಕಾಳಜಿಯೊಂದಿಗೆ ಎರಡು ವರ್ಷಗಳ ಹಿಂದೆ ರೀಬರ್ಥ್ ಫೌಂಡೇಶನ್ ಅನ್ನು ಸ್ಥಾಪಿಸಿತು. ಪುಣೆಯ ವಿವಿಧ ಕ್ಷೇತ್ರದಲ್ಲಿರುವ ವ್ಯಕ್ತಿಗಳು ಈ ಫೌಂಡೇಶನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ವರ್ಷಗಳಿಂದ ನಿರಂತರವಾಗಿ ಪುಣೆ ನಗರದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯವನ್ನು ನಿಸ್ವಾರ್ಥ ಭಾವದಿಂದ ಮಾಡುತ್ತಾ ಬಂದಿದೆ. ಪುಣೆ ರೀಬರ್ಥ್ ಫೌಂಡೇಶನ್ ಆರಂಭಿಸಿದ ಟೋಲ್ ಫ್ರೀ ನಂಬರ್ 18002747444 ನ್ನು ರಾಜ್ಯ ಸರಕಾರವು ಅಧಿಕೃತ ಅಂಗಾಂಗ ದಾನದ ಟೋಲ… ಫ್ರೀ ನಂಬರ್ ಆಗಿ ನೋಂದಣಿಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.