ಪುಣೆ ಶ್ರೀ ಗುರುದೇವ  ಸೇವಾ ಬಳಗ: ಗುರು ವಂದನೆ

Team Udayavani, Nov 11, 2017, 4:43 PM IST

10-Mum04a.jpg

ಪುಣೆ: ಪುಣೆ  ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ  ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರದ 14 ನೇ ವಾರ್ಷಿಕೋತ್ಸವ ಸಂಭ್ರಮವು ನ. 6ರಂದು ಪುಣೆಯ ತಿಲಕ್‌ ಸ್ಮಾರಕ ರಂಗ ಮಂದಿರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಶ್ರೀ  ಕ್ಷೇತ್ರ ಒಡಿಯೂರಿನ ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಧಾರ್ಮಿಕ ಕಾರ್ಯಕ್ರಮವನ್ನು  ಉದ್ಘಾಟಿಸಿ  ಅಶಿರ್ವಚನ ನಿಡಿದರು. ಶ್ರೀಗಳನ್ನು ಪ್ರಾರಂಭದಲ್ಲಿ ಚೆಂಡೆ ವಾದ್ಯ ಘೋಷದೊಂದಿಗೆ ಸಮಾರಂಭದ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಪುಣೆ ಬಳಗದ  ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಅವರು ತುಳಸಿ ಹಾರವನ್ನು ಹಾಕಿ ಶ್ರೀಗಳನ್ನು ಸ್ವಾಗತಿಸಿದರು.

ಸಾಧ್ವಿ ಶ್ರೀ ಮಾತಾನಂದಮಯೀ ಅವರನ್ನು  ಮಾತೆಯನ್ನು ಕೇಂದ್ರದ ಅಧ್ಯಕ್ಷೆ ಪ್ರೇಮಾ ಎಸ್‌. ಶೆಟ್ಟಿ ಅವರು ಹೂ ಹಾರ ಹಾಕಿ ಸ್ವಾಗತಿಸಿದರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪೂಜ್ಯ  ಶ್ರೀಗಳ ಪಾದ ಪೂಜೆಯನ್ನು ಪುಣೆ ಭಕ್ತರ ಪರವಾಗಿ ಪುಣೆಯ ಉದ್ಯಮಿ ಪುಣೆ ಬಳಗದ ಮಾಜಿ ಅಧ್ಯಕ್ಷ, ಪುಣೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ  ನಾರಾಯಣ ಕೆ. ಶೆಟ್ಟಿ ಮತ್ತು ಸುಧಾ ಎನ್‌. ಶೆಟ್ಟಿ   ದಂಪತಿ ನೆರವೇರಿಸಿ ಗುರುವಂದನೆ ಸಲ್ಲಿಸಿದರು.

ಬಳಗದ ಸದಸ್ಯೆಯರು ಶ್ರೀಗಳಿಗೆ ಆರತಿ ಬೆಳಗಿಸಿ, ದೇವರ ಸ್ತುತಿ ಹಾಡಿ  ಪೂಜೆಗೈದರು. ಮಂಗಳೂರು ಸನಾತನ ನಾಟ್ಯಾಲಯದವರು  ಪೂಜ್ಯ ಸ್ವಾಮೀಜಿಯವರಿಗೆ  ಪುಷ್ಪಾಂಜಲಿಯೊಂದಿಗೆ ಭಗವದ್ಗೀತೆಯ ಸಾರವನ್ನು ಸಾರುವ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ಪುಣೆ  ಗುರುದೇವ  ಸೇವಾ ಬಳಗದ ವತಿಯಿಂದ ಸದಸ್ಯರು ಭಗವದ್ಭಕ್ತರೆಲ್ಲರೂ ಗುರು ವಂದನೆ ಸಲ್ಲಿಸಿದರು. ಶ್ರೀಗಳು ಭಕ್ತಾದಿಗಳನ್ನು  ಪ್ರಸಾದ, ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.

ಅಪಾರ ಸಂಖ್ಯೆಯ  ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಂದ ಪ್ರಸಾದ ಸ್ವಿಕರಿಸಿದರು. ಮುಂಬಯಿ, ಆಹ್ಮದ್‌ನಗರ, ನಾಸಿಕ್‌ ಬಳಗದ  ಪದಾಧಿಕಾರಿಗಳು  ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.  ಪುಣೆಯ  ವಿವಿದ ಸಂಘ ಸಂಸ್ಥೆ ಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು  ಶ್ರೀಗಳಿಗೆ ಹಾರಾರ್ಪಣೆಗೈದು ಪ್ರಸಾದ  ಸ್ವೀಕರಿಸಿದರು.

ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ. ಸಿ. ಭಂಡಾರಿ, ಮುಂಬಯಿ ಉದ್ಯಮಿ, ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾಕೂìರು ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್‌  ಭಂಡಾರಿ, ಪುಣೆಯ ಉದ್ಯಮಿ, ಲೆಕ್ಕ ಪರಿಶೋಧಕರಾದ ಎ.  ಸದಾನಂದ ಶೆಟ್ಟಿ, ಮುಂಬಯಿ ಬಳಗದ ಉಪಾದ್ಯಕ್ಷ ಚಂದ್ರಹಾಸ್‌ ರೈ  ಬೊಲಾ°ಡುಗುತ್ತು, ಪುಣೆ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ,  ಕೇಂದ್ರದ ಅಧ್ಯಕ್ಷೆ  ಪ್ರೇಮಾ  ಎಸ್‌. ಶೆಟ್ಟಿ  ಅವರು ಉಪಸ್ಥಿತರಿದ್ದರು. ಪುಣೆ ಬಳಗದ ಗೌರವ   ಕಾರ್ಯದರ್ಶಿ ಎನ್‌. ರೋಹಿತ್‌  ಶೆಟ್ಟಿ ಸ್ವಾಗತಿಸಿದರು.  ಪ್ರದೀಪ್‌  ಆಳ್ವ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಶ್ರೀ  ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಕಾರ್ಯದರ್ಶಿ ವೀಣಾ ಡಿ. ಶೆಟ್ಟಿ ವಂದಿಸಿದರು. 

ಚಿತ್ರ-ವರದಿ : ಹರೀಶ್‌ ಮೂಡಬಿದಿರೆ, ಪುಣೆ

ಟಾಪ್ ನ್ಯೂಸ್

Rajendra Babu: ನಟರಿಗೆ ಪ್ಯಾನ್‌ ಇಂಡಿಯಾ ಭೂತ ಹಿಡಿದಿದೆ: ಬಾಬು

Rajendra Babu: ನಟರಿಗೆ ಪ್ಯಾನ್‌ ಇಂಡಿಯಾ ಭೂತ ಹಿಡಿದಿದೆ: ಬಾಬು

Bengaluru: ಕೌಟುಂಬಿಕ ಕಾರಣಕ್ಕೆ ಲಾರಿ ಉದ್ಯಮಿ ಆತ್ಮಹತ್ಯೆ

Bengaluru: ಕೌಟುಂಬಿಕ ಕಾರಣಕ್ಕೆ ಲಾರಿ ಉದ್ಯಮಿ ಆತ್ಮಹತ್ಯೆ

ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್

ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!   

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!  

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Rajendra Babu: ನಟರಿಗೆ ಪ್ಯಾನ್‌ ಇಂಡಿಯಾ ಭೂತ ಹಿಡಿದಿದೆ: ಬಾಬು

Rajendra Babu: ನಟರಿಗೆ ಪ್ಯಾನ್‌ ಇಂಡಿಯಾ ಭೂತ ಹಿಡಿದಿದೆ: ಬಾಬು

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

5

New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.