ಪುಣೆ: ಕೋವಿಡ್ ಕರ್ತವ್ಯದಲ್ಲಿದ್ದ ಶಿಕ್ಷಕ ಸೋಂಕಿಗೆ ಬಲಿ
Team Udayavani, Aug 6, 2020, 1:08 PM IST
ಸಾಂದರ್ಭಿಕ ಚಿತ್ರ
ಪುಣೆ: ನಗರದ ಸಂಗೀತ ಶಿಕ್ಷಕ ರೊಬ್ಬರು ರವಿವಾರ ಸೋಂಕಿನಿಂದ ಸಾವನ್ನಪ್ಪಿದ ಬಳಿಕ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರ ಮತ್ತು ಪಕ್ಕದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 2,700 ಶಿಕ್ಷಕರು ಕೋವಿಡ್ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ, ಮುಖಗವಸುಗಳು ಮತ್ತು ಕೈಗವಸುಗಳಂತಹ ಸುರಕ್ಷತೆಯೊಂದಿಗೆ ಮನೆ ಮನೆಗೆ ಸಮೀಕ್ಷೆ ನಡೆಸುತ್ತಿದ್ದಾರೆ.
ಕಳೆದ 3 ತಿಂಗಳುಗಳಿಂದ ಶಿಕ್ಷಕ ಗೋವಿಂದ್ ಭಿಲಾರೆ ಅವರು ಪಿಎಂಸಿ ವ್ಯಾಪ್ತಿಯಲ್ಲಿ ಮನೆ-ಮನೆಗೆ ಸಮೀಕ್ಷೆ ಮತ್ತು ಸಂಪರ್ಕ ಪತ್ತೆಹಚ್ಚುವ ಕೆಲಸ ಮಾಡಿದರು. ಪಿಎಮ್‌ಸಿ ನೇಮಿಸಿಕೊಂಡ ಶಿಕ್ಷಕನ ಮೊದಲ ಸಾವು ಇದಾಗಿದೆ ಎಂದು ನಾಗರಿಕ ಅ ಧಿಕಾರಿಗಳು ತಿಳಿಸಿದ್ದಾರೆ. ಭಿಲಾರೆ ಅವರ ಮರಣದ ಬಳಿಕ, ಮಹಾರಾಷ್ಟ್ರ ರಾಜ್ಯ ಶಿಕ್ಷಕರ ಸಂಘವು ಪಿಎಂಸಿ ಶಿಕ್ಷಕರಿಗೆ ಕೋವಿಡ್ ಕರ್ತವ್ಯಗಳನ್ನು ನೀಡಬಾರದು ಎಂದು ಒತ್ತಾಯಿಸಿದ್ದು, ಈಗಾಗಲೇ ಅವರು ಕೆಲಸದ ಹೊರೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿವೆ.
ಪಿಎಮ್‌ಸಿ ಶಿಕ್ಷಕರಲ್ಲಿ ಅನೇಕರು ಕೋವಿಡ್ ತಂಡಗಳಲ್ಲಿ ಕೆಲಸ ಮಾಡುತ್ತಿರುವುದಲ್ಲದೆ, ಆನ್‌ಲೈನ್ ತರಗತಿಗಳು ಮತ್ತು ಹೆಚ್ಚುವರಿ ಶಾಲಾ ಕೆಲಸಗಳನ್ನು ಸಹ ಮಾಡುತ್ತಿದ್ದಾರೆ ಎಂದು ಶಿಕ್ಷಕರ ಸಂಸ್ಥೆ ತಿಳಿಸಿದೆ. ಇಲ್ಲಿಯವರೆಗೆ ಕೋವಿಡ್ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಸುಮಾರು 18 ಶಿಕ್ಷಕರು ಸೋಂಕಿಗೆ ಒಳಗಾಗಿದ್ದು, ಪಿಎಂಸಿ ಶಿಕ್ಷಕರಲ್ಲಿ ಭಿಲಾರೆ ಸಾವಿನಿಂದ ಆತಂಕ ಉಂಟಾಗಿದೆ ಎಂದು ಪುಣೆ ವಿಭಾಗದ ಸಂಘದ ಮುಖ್ಯಸ್ಥ ಸಚಿನ್ ಡಿಂಬಲ್ ಹೇಳಿದ್ದಾರೆ.
ಪುಣೆ ವಿಭಾಗದ ಪ್ರಾಥಮಿಕ ಶಿಕ್ಷಕರ ಸಂಘದ ನಾಲ್ಕು ಸದಸ್ಯರ ಸಮಿತಿಯು ಪಿಎಂಸಿ ಆಯುಕ್ತ ವಿಕ್ರಮ್ ಕುಮಾರ್ ಅವರೊಂದಿಗೆ ಕರ್ತವ್ಯ ವಿಷಯದ ಬಗ್ಗೆ ಸಭೆ ನಡೆಸಿತು. 3ರಿಂದ 4 ತಿಂಗಳುಗಳಿಂದ 2,700 ಪಿಎಂಸಿ ಶಿಕ್ಷಕರಿಗೆ ಕೋವಿಡ್ ಸಂಬಂ ಧಿತ ಕೆಲಸದ ಕರ್ತವ್ಯಗಳನ್ನು ನೀಡಲಾಗಿದೆ. ಇದು ಜನರ ಸ್ವಾಬ್ ಪರೀಕ್ಷೆ, ಸಂಪರ್ಕ ಪತ್ತೆಹಚ್ಚುವಿಕೆ, ಪ್ರದೇಶ ಸಮೀಕ್ಷೆ, ವಿಪತ್ತು ನಿರ್ವಹಣಾ ಕಾರ್ಯಗಳನ್ನು ಒಳಗೊಂಡಿದೆ. ನಮಗೆ ನಿರಾಶಾದಾಯಕವಾದ ಮುಖ್ಯ ವಿಷಯವೆಂದರೆ ಯಾವುದೇ ಆವರ್ತಕ ವಿಧಾನವಿಲ್ಲದೆ ಮೂರು ತಿಂಗಳುಗಳಲ್ಲಿ ಕರ್ತವ್ಯಗಳನ್ನು ನೀಡಲಾಯಿತು.
ಶಿಕ್ಷಕರು ದಣಿದಿದ್ದಾರೆ
ಪುಣೆ ವಿಭಾಗದ ಸಂಘದ ಮುಖ್ಯಸ್ಥ ಸಚಿನ್ ಡಿಂಬಲ್ ಮಾತನಾಡಿ, ಇಂದು ನಾವು ಪಿಎಂಸಿ ಆಯುಕ್ತರನ್ನು ಭೇಟಿ ಮಾಡಿದ್ದೇವೆ ಮತ್ತು ನಮ್ಮ ಎಲ್ಲ ಶಿಕ್ಷಕರಿಗೆ ರಾಜ್ಯ ಸರಕಾರದ ಮಾರ್ಗಸೂಚಿಗಳ ಪ್ರಕಾರ 14 ದಿನಗಳ ಆವರ್ತಕ ಕರ್ತವ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದ್ದೇವೆ. ನಾವು ಕೋವಿಡ್ ಕರ್ತವ್ಯಗಳಿಗಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ. ದೈಹಿಕವಾಗಿ, ನಮ್ಮ ಶಿಕ್ಷಕರು ಈಗ ದಣಿದಿದ್ದಾರೆ ಆದರೆ ಕೆಲಸ ಕಳೆದುಕೊಳ್ಳುವ ಭಯದಿಂದಾಗಿ ಅವರು ಕೋವಿಡ್ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.