ಪುಣೆ: ಕಾರ್ಕಳದ ಜನರ ಸ್ನೇಹ ಸಮ್ಮಿಲನ ಪೂರ್ವಭಾವಿ ಸಭೆ


Team Udayavani, Feb 16, 2017, 4:14 PM IST

15-Mum03a.jpg

ಪುಣೆ: ನಾನು ಕಾರ್ಕಳದ ಶಾಸಕನಾಗಿ 7 ವರ್ಷ ಊರಿನ ಅಭಿವೃದ್ಧಿ ಮಾಡುವ ಸುಯೋಗ ಒದಗಿಬಂದಿದ್ದು,  ಈ ಅವಧಿಯಲ್ಲಿ ಒಬ್ಬ ಶಾಸಕನಾಗಿ ಕ್ಷೇತ್ರವನ್ನು ಯಾವ ರೀತಿ ಅಭಿವೃದ್ಧಿಪಡಿಸಬಹುದು ಎಂಬುದನ್ನು ಪ್ರಾಮಾಣಿಕವಾಗಿ ಮನಗಂಡು ಪ್ರಯತ್ನಶೀಲನಾಗಿದ್ದೇನೆ ಎಂಬ ಸಂತಸ  ನನಗಿದೆ.

ಈ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಹೊರನಾಡಿನಲ್ಲಿ ನೆಲೆಸಿರುವ ಕಾರ್ಕಳದ ಜನರಿಗೆ ತಿಳಿಯಪಡಿಸಲು  ಹಾಗೂ ಮುಂದೆ ಕಾರ್ಕಳದಲ್ಲಿ ಯಾವ ರೀತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ ಎಂಬ ಸಲಹೆ ಸೂಚನೆಗಳನ್ನು ಪಡೆದುಕೊಂಡು ಅವರಲ್ಲಿ ಹುಟ್ಟೂರಿನ ಬಗ್ಗೆ ಅಭಿಮಾನ, ಪ್ರೀತಿಯನ್ನು ಮೂಡಿಸುವ ಉದ್ದೇಶದಿಂದ ಪುಣೆಯಲ್ಲಿ ಮಾ. 5ರಂದು ನಗರದ ಕೃಷ್ಣ ಸುಂದರ್‌ ಗಾರ್ಡನ್‌ ಲಾನ್ಸ್‌ನಲ್ಲಿ ಸಂಜೆ 5ರಿಂದ ಪುಣೆಯ ತುಳುಕನ್ನಡಿಗರ ಸಹಯೋಗದೊಂದಿಗೆ ಸ್ನೇಹ ಸಮ್ಮಿಲನವನ್ನು ಆಯೋಜಿಸಲಾಗಿದೆ . ಈ ಹಿಂದೆ  ಬೆಂಗಳೂರು ಹಾಗೂ ಮುಂಬಯಿಗಳಲ್ಲಿ ಸ್ನೇಹ ಸಮ್ಮಿಲನವನ್ನು ಏರ್ಪಡಿಸಿದ್ದು ನಿರೀಕ್ಷೆಗೂ ಮೀರಿ ಕಾರ್ಕಳದ ಜನರು  ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಇದೇ ರೀತಿ ಪುಣೆಯಲ್ಲಿರುವ ಪ್ರತಿಯೋರ್ವರನ್ನೂ ಸಂಪ
ರ್ಕಿಸಿ ಮಾಹಿತಿ ತಿಳಿಸಿ ಸ್ನೇಹ ಸಮ್ಮಿಲನದಲ್ಲಿ ಭಾಗವಹಿಸುವಂತೆ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿ ಕಾರ್ಕಳದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ  ಎಂದು ಕಾರ್ಕಳದ ಶಾಸಕ ಸುನಿಲ್‌ ಕುಮಾರ್‌ ನುಡಿದರು.

ಫೆ. 14ರಂದು ಪುಣೆಯ ಕೊರೋನೆಟ್‌ ಹೊಟೇಲ್‌ ಸಭಾಂಗಣದಲ್ಲಿ ನಡೆದ ಕಾರ್ಕಳದ ಜನರ ಸ್ನೇಹಸಮ್ಮಿಲನ -2017 ಇದರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಕಳ ತಾಲೂಕು ರಚನೆಯಾಗಿ 100 ವರ್ಷ ತುಂಬುತ್ತಿರುವ ಈ ವರ್ಷ ನೂರರ ಸಂಭ್ರಮವನ್ನು ವರ್ಷವಿಡೀ ಆಚರಿಸುತ್ತಿದ್ದು ಹೊರನಾಡಿನ ಊರ ಜನರೊಂದಿಗೆ ಬೆರೆಯುವ ಪರಿಕಲ್ಪನೆಯೂ ಅದಕ್ಕೆ ಪೂರಕವಾಗಿದೆ. ಊರಿನ ಪವಿತ್ರ ಕಾರ್ಯಗಳಲ್ಲಿ ಮುಂಬಯಿಯಲ್ಲಿರುವ ಜನರ ಭೂಮಿಕೆಯೇ ಮುಖ್ಯವಾಗಿದ್ದು, ಕಾರ್ಕಳ ಕ್ಷೇತ್ರದ ಅಭಿವೃದ್ಧಿಯ ಪುಣ್ಯ ಕಾರ್ಯದಲ್ಲಿಯೂ ಎಲ್ಲರ ಸಹಕಾರ ಅಗತ್ಯವಾಗಿದೆ. ಕಳೆದ ಕಳೆದ 5 ವರ್ಷಗಳಿಂದ ಕಾರ್ಕಳ ತಾಲೂಕನ್ನು ಗಮನಿಸಿದರೆ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿರುವುದನ್ನು ಗಮನಿಸಬಹುದಾಗಿದೆ. ಇತಿಹಾಸದಲ್ಲಿ  ಪ್ರಥಮ ಬಾರಿಗೆ ಕೇಂದ್ರದ ಸರಕಾರದಿಂದ 160 ಕೋ. ರೂ. ಹಣವನ್ನು ಮಂಜೂರು ಮಾಡಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವ  ಹಿನ್ನಲೆಯಲ್ಲಿ ವರ್ಷವೊಂದರಲ್ಲೇ ಸುಮಾರು 50 ಕಿಂಡಿ ಅಣೆಕಟ್ಟುಗಳನ್ನು ಕಟ್ಟಿ ಅಂತರ್ಜಲ ಹೆಚ್ಚಿಸುವ  ಕೈಗೊಳ್ಳಲಾಗಿದೆ. ಒಂದು  ಕೋಟಿ ರೂ. ಗಳ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ, ಸುಮಾರು 35 ಕಾರ್ಖಾನೆಗಳ ನಿರ್ಮಾಣ, ಪ್ರವಾಸೋದ್ಯಮಕ್ಕೆ ಉತ್ತೇಜನ, ಶಾಲೆಗಳಲ್ಲಿ ಶೌಚಾಲಯ, ಹೆಚ್ಚುವರಿ ಕೊಠಡಿಗಳು, ಶ‌¾ಶಾನ ನಿರ್ಮಾಣ ಮುಂತಾಗಿ  ಹಲವು ಯೋಜನೆಗಳನ್ನು ಜಾರಿಗೊಳಿಸಿ ವಿರೋಧ ಪಕ್ಷದ ಶಾಸಕನಾಗಿ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಆದರೂ ಜನರ ನಿರೀಕ್ಷೆಗಳು ಇನ್ನಷ್ಟು ಇದೆ. ಇದಕ್ಕಾಗಿಯೇ ಊರಿನ ಹಾಗೂ ಪರವೂರಿನಲ್ಲಿರುವ ಊರಿನ ಜನರನ್ನು ಭೇಟಿಯಾಗಿ ಪರಸ್ಪರ ವಿಚಾರವಿನಿಮಯ ಮಾಡಿಕೊಂಡು ಕಾರ್ಕಳವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆನೀಡಿದರು.

ಈ ಸಂದರ್ಭ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಮಾತನಾಡಿ, ಒಬ್ಬ ಶಾಸಕನಾಗಿ ಪûಾ ತೀತವಾಗಿ ನಡೆದುಕೊಂಡು, ಜಾತಿ ಮತ ಧರ್ಮಗಳನ್ನು ಮೀರಿ ಊರಿನ ಜನರ ಸಮಸ್ಯೆ ಗಳಿಗೆ ತ್ವರಿತವಾಗಿ ಸ್ಪಂದಿಸಿ, ಸಮಾಜಹಿತ ಚಿಂತನೆ ಯೊಂದಿಗೆ ಊರಿನ ಪ್ರಗತಿಗೆ ಕಾರಣರಾದ ಶಾಸಕ ಸುನಿಲ್‌ ಕುಮಾರ್‌ ಅಭಿನಂದನೀಯರು.  ಇಂದು ಊರಿನ ರಸ್ತೆಗಳು ಉತ್ತಮಗೊಂಡಿದ್ದರೆ ಅದಕ್ಕೆ ಅವರ ಶ್ರಮವೇ ಕಾರಣವಾಗಿದೆ. ಒಬ್ಬ ಜನಸೇವಕ ನಡೆನುಡಿಯಲ್ಲಿ ಹಾಗೂ ಕಾರ್ಯಗಳಲ್ಲಿ ಹೇಗಿರಬೇಕೆಂದು ಮಾದರಿಯಾಗಿ ಕಂಡುಬರುವ ಅವರಿಗೆ  ನಾವೆಲ್ಲರೂ ಬೆಂಬಲ ನೀಡೋಣ ಎಂದರು.

ಪುಣೆ ರೆಸ್ಟೋರೆಂಟ್‌ ಹೊಟೇಲಿಯರ್ಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ ಪ್ರಾಸ್ತಾವಿಕವಾಗಿ ಮಾತನಾಡಿ,  ನಮ್ಮ ಉಡುಪಿ ಮತ್ತು  ಕನ್ನಡ ಜಿಲ್ಲೆಗಳಲ್ಲಿರುವ ಯಾವೊಬ್ಬ ಶಾಸಕರೂ ತನ್ನೂರಿನ ಬಗ್ಗೆ ಇಷ್ಟೊಂದು ಕಾಳಜಿವಹಿಸಿ ಅಭಿವೃದ್ಧಿಗಾಗಿ  ಹೊರನಾಡಿನಲ್ಲಿರುವ ತನ್ನ ಕ್ಷೇತ್ರದ ಜನರೊಂದಿಗೆ ವಿಚಾರವಿನಿಮಯ ಮಾಡಿ ಚರ್ಚಿಸಿದ  ಉದಾಹರಣೆಗಳಿಲ್ಲ. ಅಲ್ಲದೆ ರಾಜ್ಯದಲ್ಲಿ ತಾನು ಶಾಸಕನಾಗಿದ್ದಾಗ ತನ್ನ ಸರಕಾರವಿಲ್ಲದಿದ್ದರೂ ಕೇಂದ್ರದ ಸಂಪರ್ಕದಿಂದ ಹಣವನ್ನು ಮಂಜೂರು ಗೊಳಿಸಿ ಅಭಿವೃದ್ಧಿಗಾಗಿ ಪಣತೊಟ್ಟ ಇವರು ಮುಂದೆ ಅಧಿಕಾರಕ್ಕೆ  ಬಂದರೆ ಈ ರಾಜ್ಯದ ಮಂತ್ರಿಯಾಗಿ ಆಯ್ಕೆ ಯಾದರೆ ಏನೆಲ್ಲ  ಮಾಡಬಹುದು ಎಂಬುದನ್ನು ನಾವು ನಿರೀಕ್ಷಿ
ಸಬಹುದಾಗಿದೆ. ಅವರ ಈ ಸ್ನೇಹ ಸಮ್ಮಿಲನ ವನ್ನು ಯಶಸ್ವಿಗೊಳಿಸುವುದು ನಮ್ಮಲ್ಲರ ಕರ್ತವ್ಯವಾಗಿದೆ ಎಂದರು.

ಪುಣೆ ತುಳುಕೂಟದ ಗೌರವಾಧ್ಯಕ್ಷ ಮಿಯ್ನಾರು ರಾಜ್‌ಕುಮಾರ್‌ ಎಂ. ಶೆಟ್ಟಿ, ಪುಣೆ
ರೆಸ್ಟೋರೆಂಟ್‌  ಹೊಟೇಲಿಯರ್ಸ್‌ ಅಸೋಸಿ ಯೇಶನ್‌ ಅಧ್ಯಕ್ಷ  ಗಣೇಶ್‌ ಶೆಟ್ಟಿ, ಪಿಂಪ್ರಿ- ಚಿಂಚಾÌಡ್‌ ಹೊಟೇಲ್‌ ಅಸೋಸಿಯೇಶನ್‌ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪುಣೆ ತುಳುಕೂಟದ ಪಿಂಪ್ರಿ-ಚಿಂಚಾÌಡ್‌ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ್‌ ಸುವರ್ಣ, ಪುಣೆ ಬಿಲ್ಲವ ಸಮಾಜ  ಸೇವಾ ಸಂಘದ ಅಧ್ಯಕ್ಷ ಶೇಖರ ಟಿ. ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭ ಸುನೀಲ್‌ ಕುಮಾರ್‌ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವಿನ್ನಿತ್ತು ಸಮ್ಮಾನಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ  ಸದಾನಂದ ನಾಯಕ್‌, ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು, ಕುಲಾಲ ಸಂಘದ ಅಧ್ಯಕ್ಷ ಹರೀಶ್‌ ಕುಲಾಲ…, ಪುರಂದರ ಪೂಜಾರಿ, ನೂತನ್‌ ಸುವರ್ಣ, ಸದಾಶಿವ ಸಾಲ್ಯಾನ್‌, ಸಂತೋಷ್‌ ಶೆಟ್ಟಿ ಎಣ್ಣೆಹೊಳೆ ಇವರು ಕಾರ್ಯಕ್ರಮದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಪುಣೆ ದೇವಾಡಿಗ ಸಂಘದ ಅಧ್ಯಕ್ಷ ಸಚಿನ್‌ ದೇವಾಡಿಗ, ಅಯ್ಯಪ್ಪ ಸ್ವಾಮೀ ಸೇವಾ ಸಂಘದ ಅಧ್ಯಕ್ಷ ಸುಭಾಷ್‌ ಶೆಟ್ಟಿ, ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್‌ ಶೆಟ್ಟಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಅಜಿತ್‌ ಹೆಗ್ಡೆ, ಮಾಧವ ಆರ್‌. ಶೆಟ್ಟಿ, ಮೋಹನ್‌ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ವಿಶ್ವನಾಥ ಶೆಟ್ಟಿ ಶೀತಲ…, ದಿನೇಶ್‌ ಶೆಟ್ಟಿ ಬಜಗೋಳಿ, ಮೋಹನ್‌ ಶೆಟ್ಟಿ ಎಣ್ಣೆಹೊಳೆ, ಮಹಾಬಲ ದೇವಾಡಿಗ, ಸುಧಾಕರ ಸಿ. ಶೆಟ್ಟಿ, ರವಿ ಕೆ. ಶೆಟ್ಟಿ, ಸುಧಾಕರ ಪೂಜಾರಿ, ಸುದೀಪ್‌ ಪೂಜಾರಿ, ಶಿವರಾಮ ಸುವರ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ವಿಶ್ವನಾಥ ಪೂಜಾರಿ ಸ್ವಾಗತಿಸಿ ಸ್ನೇಹ ಸಮ್ಮಿಲನದ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ಸಂತೋಷ್‌ ಶೆಟ್ಟಿ ವಂದಿಸಿದರು. 

  ಚಿತ್ರ -ವರದಿ: ಕಿರಣ್‌ ಬಿ.  ರೈ ಕರ್ನೂರು

ಟಾಪ್ ನ್ಯೂಸ್

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

5-uv-fusion

UV Fusion: ಕರ್ನಾಟಕ: ನಮ್ಮೆಲ್ಲರ ಉಸಿರಾಗಲಿ ಕನ್ನಡ

Pani movie: ಕನ್ನಡದಲ್ಲಿ ಜೋಜು ಜಾರ್ಜ್‌ ಪಣಿ

Pani movie: ಕನ್ನಡದಲ್ಲಿ ಜೋಜು ಜಾರ್ಜ್‌ ಪಣಿ

Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ

Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ

4-sagara

Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.